newsfirstkannada.com

EXCLUSIVE: ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಲು ಕಾರಣ ಯಾರು? ಸೈಲೆಂಟ್‌ ಆಪರೇಷನ್ ನಡೆದಿದ್ದು ಹೇಗೆ?

Share :

Published January 25, 2024 at 2:30pm

    ಶೆಟ್ಟರ್ ದೆಹಲಿಗೆ ಬರುವಿಕೆಗಾಗಿ ಕಾದು‌ ಕುಳಿತಿದ್ದ ಬಿಎಸ್‌ವೈ, BYV

    ಎರಡು ದಿನದ ಹಿಂದೆ ಶೆಟ್ಟರ್‌ ಅವರ ಜೊತೆ ರಹಸ್ಯ ಮಾತುಕತೆ

    ಶೆಟ್ಟರ್ ದಿಢೀರ್ ನಿರ್ಧಾರದಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಮರಳಿ ಬಿಜೆಪಿ ಸೇರಿದ್ದಾರೆ. ಜಗದೀಶ್ ಶೆಟ್ಟರ್ ಅವರ ಈ ದಿಢೀರ್ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಜಗದೀಶ್ ಶೆಟ್ಟರ್ ಅವರ ಬಿಜೆಪಿ ಪಕ್ಷ ಸೇರ್ಪಡೆ ಕೇವಲ ಅರ್ಧ ದಿನದಲ್ಲಿ ನಡೆದಿರೋ ಬೆಳವಣಿಗೆಯಲ್ಲ. ಕಳೆದ ಹಲವು ದಿನಗಳಿಂದಲೂ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆ ಆಗುವ ಕುರಿತಂತೆ ಜಗದೀಶ್ ಶೆಟ್ಟರ್ ಆಪ್ತ ವಲಯ ಹಾಗೂ ಬಿಜೆಪಿಯಲ್ಲಿ ಮಹತ್ವದ ಚರ್ಚೆ ನಡೆದಿದೆ. ನ್ಯೂಸ್‌ಫಸ್ಟ್‌‌ನಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಆಗಿದ್ದು ಹೇಗೆ ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಲಭ್ಯವಾಗಿದೆ.

ಹೆಚ್‌.ಡಿ ಕುಮಾರಸ್ವಾಮಿ ಜೊತೆ ರಹಸ್ಯ ಚರ್ಚೆ!
ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ವಾಪಸ್ ಕರೆತರುವಲ್ಲಿ ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ ಅವರು ಮಹತ್ವದ ಪಾತ್ರವಹಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹೆಚ್‌.ಡಿ ಕುಮಾರಸ್ವಾಮಿ ಅವರು ರಹಸ್ಯ ಸ್ಥಳದಲ್ಲಿ ಜಗದೀಶ್ ಶೆಟ್ಟರ್‌ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಹೆಚ್.ಡಿ ಕುಮಾರಸ್ವಾಮಿ ಅವರ ಜೊತೆಗೆ ಶೆಟ್ಟರ್ ಗೌಪ್ಯ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: BREAKING: ಆಪರೇಷನ್ ಜಗದೀಶ್ ಶೆಟ್ಟರ್ ಸಕ್ಸಸ್; ಕಾಂಗ್ರೆಸ್‌ನ ಮೊದಲ ವಿಕೆಟ್ ಪತನ

ಜಗದೀಶ್ ಶೆಟ್ಟರ್ ಜೊತೆ ರಹಸ್ಯ ಭೇಟಿಯ ಬಳಿಕ ಕುಮಾರಸ್ವಾಮಿ ಅವರು ಸದ್ದಿಲ್ಲದೇ ದೆಹಲಿಗೆ ತೆರಳಿದ್ದಾರೆ. ಕುಮಾರಸ್ವಾಮಿ ದೆಹಲಿಗೆ ಹಾರಿದ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ದೆಹಲಿಗೆ ದೌಡಾಯಿಸಿದ್ದಾರೆ. ದೆಹಲಿಯಲ್ಲಿದ್ದ ಬಿಎಸ್‌ವೈ ಹಾಗೂ ವಿಜಯೇಂದ್ರ ಕಳೆದೆರಡು‌ ದಿನಗಳಿಂದ ಜಗದೀಶ್ ಶೆಟ್ಟರ್ ದೆಹಲಿಗೆ ಬರುವಿಕೆಗಾಗಿ ಕಾದು‌ ಕುಳಿತಿದ್ದರು.

ಜಗದೀಶ್ ಶೆಟ್ಟರ್ ದೆಹಲಿ ತೆರಳಿ ಚರ್ಚೆ ನಡೆಸುವಾಗ ಇರುವುದು ಬೇಡ ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇದಾದ ಮೇಲೆ ಜಗದೀಶ್ ಶೆಟ್ಟರ್ ಅವರು ನೇರವಾಗಿ ಕೇಂದ್ರ ಗೃಹ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

EXCLUSIVE: ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಲು ಕಾರಣ ಯಾರು? ಸೈಲೆಂಟ್‌ ಆಪರೇಷನ್ ನಡೆದಿದ್ದು ಹೇಗೆ?

https://newsfirstlive.com/wp-content/uploads/2024/01/Jagadish-Shettar-Bjp.jpg

Load More