ಜೈಲಿನಲ್ಲಿರೋ ದರ್ಶನ್​ಗೆ ಬಟ್ಟೆ, ಊಟ, ಸಿಗರೇಟು ಸಪ್ಲೈ ಮಾಡೋದ್ಯಾರು? ಮಟನ್, ಚಿಕನ್ ಎಲ್ಲಿಂದ ಬರುತ್ತೆ ಗೊತ್ತಾ?

author-image
Veena Gangani
Updated On
BREAKING: ‘ನಾನು ಬಳ್ಳಾರಿ ಜೈಲಿಗೆ ಹೋಗಲ್ಲ’- ಪರಪ್ಪನ ಅಗ್ರಹಾರದಲ್ಲಿ ಹಠ ಹಿಡಿದು ಕೂತ ದರ್ಶನ್!
Advertisment
  • ಜೈಲು ಸೇರಿದ ನಾಗನ ಬೇಕು ಬೇಡಗಳನ್ನ ನಿರ್ಧರಿಸುತ್ತಾನೆ ಆ ವ್ಯಕ್ತಿ!
  • ವಿಲ್ಸನ್ ಗಾರ್ಡನ್ ನಾಗ ಮತ್ತು ದರ್ಶನ್​ ಸಪ್ಲೈ ಮಾಡೋದು ಈತನೇ
  • ತನ್ನ ಬೇಕು ಬೇಡಗಳಿಗಾಗಿ ರೌಡಿಶೀಟರ್​ಗಳ ಸಂಗ ಸೇರಿದ್ರಾ ನಟ ದರ್ಶನ್

ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಒಟ್ಟು 17 ಆರೋಪಿಗಳು ಜೈಲಿನಲ್ಲಿದ್ದಾರೆ. ಆದರೆ ಕಳೆದ ಮೂರು ತಿಂಗಳಿನಿಂದ ದರ್ಶನ್​​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದರೆ ನಿನ್ನೆ ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ದೃಶ್ಯ ಸಮೇತ ಮುನ್ನಲೆಗೆ ಬಂದಿವೆ.

ಇದನ್ನೂ ಓದಿ: ಚೆನ್ನಾಗಿದ್ದೀರಾ ಬಾಸ್.. ಹೂ ಚಿನ್ನ; ದರ್ಶನ್ ಬಿಂದಾಸ್ ಲೈಫ್‌ಗೆ ಹೊಸ ಟ್ವಿಸ್ಟ್‌; ವಿಡಿಯೋ ಕಾಲ್ ಮಾಡಿದ್ಯಾರು?

publive-image

ಚೇರ್​ ಮೇಲೆ ಕುಳಿತುಕೊಂಡು ದರ್ಶನ್​ ಕೈಯಲ್ಲಿ ಟೀ ಕಪ್​ ಮತ್ತು ಸಿಗರೇಟು ಸೇದುತ್ತಾ ರೌಡಿಗಳೊಂದಿಗೆ ಮಾತನಾಡುವ ಫೋಟೋ ವೈರಲ್​ ಆಗಿದ್ದವು. ವಿಲ್ಸನ್​ ಗಾರ್ಡನ್​​ ​ ನಾಗ, ಕುಳ್ಳ ಸೀನ ಮತ್ತು ಮ್ಯಾನೇಜರ್​ ನಾಗರಾಜ್ ಜೊತೆಗೆ ಹರಟೆ ಹೊಡೆಯುತ್ತಿರುವ ಫೋಟೋ ವೈರಲ್​ ಆಗಿತ್ತು.

ಆದರೆ ಇದರ ಮಧ್ಯೆ ದರ್ಶನ್​ಗೆ ಸಿಗುವ ವಸ್ತುಗಳು, ಸಿಗರೇಟು, ಬಟ್ಟೆಗಳನ್ನು ಸಪ್ಲೈ ಮಾಡೋದು ಯಾರು ಎಂಬುವುದರ ಬಗ್ಗೆ ತಿಳಿದು ಬಂದಿದೆ. ದರ್ಶನ್​ಗೆ ಸರಿಯಾದ ಸಮಯಕ್ಕೆ ಎಲ್ಲವೂ ಸಿಗುತ್ತಿರುವುದಕ್ಕೆ ಕಾರಣ ವಿಲ್ಸನ್ ಗಾರ್ಡನ್ ನಾಗ.

ಹೌದು, ವಿಲ್ಸನ್ ಗಾರ್ಡನ್ ನಾಗನ ಬ್ಯಾರಕ್​ನಿಂದ ಜೈಲಿನಲ್ಲಿರೋ ನಟ ದರ್ಶನ್​ಗೆ ಊಟ ಸಪ್ಲೈ ಆಗುತ್ತೆ. ಈ ಹಿಂದೆ ಇದೇ ವಿಚಾರವನ್ನ ನ್ಯೂಸ್ ಫಸ್ಟ್ ಪ್ರಸಾರ ಮಾಡಿತ್ತು. ಆದರೆ ಅದೆಲ್ಲಾ ಊಟ ಸಪ್ಲೈ ಆಗ್ತಿರುವುದೇ ವಿಲ್ಸನ್ ಗಾರ್ಡನ್ ನಾಗನ ಆತ್ಮೀಯ ವ್ಯಕ್ತಿಯಿಂದ.

ನಾಗ ಜೈಲು ಸೇರಿದ್ರೆ ಆತನ ಬೇಕು ಬೇಡಗಳನ್ನ ನೋಡ್ಕೋಳೊಕೆ ಎಂದೇ ಬೊಮ್ಮನಹಳ್ಳಿ ಕಾರ್ತಿಕ್ ಎಂಬಾತ  ನೇಮಕವಾಗಿದ್ದಾನೆ. ಜೈಲಿಗೆ ಚಿಕನ್ ಸಪ್ಲೈ ಆಗ್ತಿರುವುದು ಬೊಮ್ಮನಹಳ್ಳಿಯಿಂದ ಎಂದು ತಿಳಿದು ಬಂದಿದೆ. ದರ್ಶನ್ ಹಾಕಿರುವ ಬಟ್ಟೆಯ ವ್ಯವಸ್ಥೆ ಕೂಡ ಆತನದ್ದೇ ಅಂತೆ. ಬೊಮ್ಮನಹಳ್ಳಿ ಕಾರ್ತಿಕ್ ಎಂಬಾತನೇ ದರ್ಶನ್ ಬೇಕಿರುವ ವಸ್ತುಗಳನ್ನ ಸಪ್ಲೈ ಮಾಡುತ್ತಿದ್ದಾನೆ.

ವಿಲ್ಸನ್ ಗಾರ್ಡನ್ ನಾಗನ ಅನತಿಯ ಮೇರೆಗೆ ದರ್ಶನ್​ಗೆ ಬೇಕಿರುವ ವಸ್ತುಗಳಾದ ಸಿಗರೇಟ್, ನಾನ್ ವೆಜ್ ಬಟ್ಟೆಗಳು ಕೂಡ ಸಪ್ಲೈ ಮಾಡುತ್ತಾರಂತೆ. ವಿಲ್ಸನ್ ಗಾರ್ಡನ್ ನಾಗ ಆತನ ಸಹಚರ ಸಿದ್ದಾಪುರ ಸುನೀಲ್ ಅನುಮತಿಯ ಮೇರೆಗೆ ಬೊಮ್ಮನಹಳ್ಳಿ ಕಾರ್ತಿಕ್ ಕೆಲಸ ಮಾಡುತ್ತಾನಂತೆ. ಈ ಹಿಂದೆ ಸಿದ್ದಾಪುರ ಸುನೀಲ್ ಬರ್ತ್ ಡೇಯಲ್ಲಿ ದರ್ಶನ್ ಭಾಗಿಯಾಗಿದ್ದರು. ಸದ್ಯ ನಟ ದರ್ಶನ್ ತನ್ನ ಬೇಕು ಬೇಡಗಳಿಗಾಗಿ ರೌಡಿಶೀಟರ್​ಗಳ ಸಂಗ ಸೇರಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment