/newsfirstlive-kannada/media/post_attachments/wp-content/uploads/2023/12/bigg-boss-2023-12-20T175133.507.jpg)
ಬಿಗ್ಬಾಸ್ ಸೀಸನ್ 10ರಲ್ಲಿ ವಿನ್ನರ್ ಯಾರು ಅನ್ನೋ ಲೆಕ್ಕಾಚಾರ ಶುರುವಾಗಿದೆ. ಮೊದಲ ದಿನದಿಂದ ಕಿಚ್ಚ ಸುದೀಪ್ ಅವರ ಲೆಫ್ಟ್ ರೈಟ್ ಸುತ್ತುತ್ತಿರೋ ಹೆಸರು ಆ ಇಬ್ಬರೂ ಸ್ಪರ್ಧಿಗಳದ್ದು. ಬಿಗ್ಬಾಸ್ ಮನೆಯಿಂದ ಹೊರಗಡೆ ಬಂದಿರೋ ಸ್ಪರ್ಧಿಗಳು ಅದೇ ಮಾತನ್ನ ಹೇಳುತ್ತಿದ್ದಾರೆ.
ಹೌದು, ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಹೊರಗಡೆ ಒಳಗಡೆ ಎರಡೂ ಕಡೆ ವಿನಯ್ ಹಾಗೂ ಕಾರ್ತಿಕ್, ಸಂಗೀತಾ ಹಾಗೂ ಪ್ರತಾಪ್ ಅವರ ಹೆಸರುಗಳು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿವೆ. ಇವರು ಪಕ್ಕಾ ಟಾಪ್ ಲಿಸ್ಟ್ನಲ್ಲಿ ಇದ್ದೇ ಇರ್ತಾರೆ ಅನ್ನೋದು ಜೋರಾಗಿದೆ. ಆದ್ರೆ ಕಿಚ್ಚ ಸುದೀಪ್ ಅವರ ಎಡ ಬಲಕ್ಕೆ ನಿಲ್ಲೋದು ಪಕ್ಕಾ ವಿನಯ್ ಹಾಗೂ ಕಾರ್ತಿಕ್ ಅನ್ನೋ ಕೂಗು ಕೇಳಿ ಬರುತ್ತಿದೆ. ಈ ಇಬ್ಬರೂ ಕೂಡ ಸಖತ್ ಟಫ್ ಸ್ಪರ್ಧಿಗಳೇ. ಆಟದಲ್ಲಿ ಟಕ್ಕರ್ ಕೊಡೋ ಸಾಮರ್ಥ್ಯ ಹೊಂದಿರೋರು. ಈಗಾಗಲೇ ಅದನ್ನ ಪ್ರೂವ್ ಕೂಡ ಮಾಡಿದ್ದಾರೆ. ಆದ್ರೇ ಇಲ್ಲೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಬಿಗ್ ಬಾಸ್ ಟ್ರೋಫಿ ಯಾರ ಕೈಲಿ ಇರುತ್ತೆ ಅನ್ನೋ ವಿಚಾರ ಬಂದಾಗ ಕಾರ್ತಿಕ್ ಹೆಸರು ಕೇಳಿ ಬರ್ತಿದೆ.
ಇದನ್ನು ಓದಿ: BIGG BOSS: ಈ ವಾರ ನಾಮಿನೇಷನ್ ಲಿಸ್ಟ್ನಲ್ಲಿ ಇವರೇ ಮುಂದು; ಆಚೆ ಹೋಗುವ ಸ್ಪರ್ಧಿ ಯಾರು?
ವಿನಯ್ ಜೊತೆಗೆ ಒಡನಾಟ ಹೊಂದಿದ್ದ ಸ್ನೇಹಿತ್ ಹಾಗೂ ಪವಿ ಅವರು ಕೂಡ ಈ ಮಾತನ್ನ ಒಪ್ಪಿಕೊಳ್ತಿದ್ದಾರೆ. ನಮಗೆ ವಿನಯ್ ಗೆಲ್ಲಬೇಕು ಅಂತಾ ಇದೆ. ಆದ್ರೆ ಗೆಲ್ಲುವ ಮಾತ್ರ ಕಾರ್ತಿಕ್ದೇ ಅಂತಿದ್ದಾರೆ. ಪವಿ ಪ್ರಕಾರ ವಿನಯ್ ಗೆಲ್ಲಬೇಕು ಅಂತಾ ಆಸೆ ಇದೆ. ಆದ್ರೆ ಕಾರ್ತಿಕ್ ಗೆಲ್ತಾರೆ ಅನ್ಸುತ್ತೆ ಅಂತಾರೆ. ಇನ್ನು, ಸ್ನೇಹಿತ್ ಕೂಡ ವಿನಯ್ ಗೆದ್ದರೆ ನನಗೆ ತುಂಬಾ ಖುಷಿ ಆಗುತ್ತೆ. ನಮ್ರತಾ ಗೆಲ್ಲೋ ಚಾನ್ಸ್ ತುಂಬಾ ಕಮ್ಮಿ ಇದೆ. ಏಕೆಂದರೆ ಈಗ ನಮಗೊಂದು ಲೆಕ್ಕಾಚಾರ ಗೊತ್ತಾಗಿರುತ್ತೆ. ಆ ಬೇಸ್ ಮೇಲೆ ಹೇಳ್ತಿದ್ದೀನಿ ಅಂದಿದ್ದಾರೆ. ಇನ್ನೂ, ಶೋ ಮುಕ್ತಾಯ ಆಗಲು ಇಪ್ಪತ್ತು, ಇಪ್ಪತೈದು ದಿನಗಳು ಇದೆ. ಯಾವಾಗಬೇಕಾದರೂ ಈ ಚೇಂಜ್ ಹೇಳೋಕಾಗಲ್ಲ. ಪ್ರತಾಪ್ ಸಂಗೀತಾ ಆಟದ ವೈಖರಿ ಬದಲಿಸಿಕೊಂಡರೇ ಇವರೂ ಕೂಡ ಟಕ್ಕರ್ ಕೊಡಬಹುದು. ಅಸಲಿ ಆಟದಲ್ಲಿ ಗೆಲವಿನ ಓಟ ಜೋರಾಗಿದೆ ಗೆಲುವು ಅವರದ್ದಾ ಇಲ್ಲ ಇವರದ್ದಾ ಎಂದು ಕಾದು ನೋಡಬೇಕಿದೆ.
ಇನ್ನು, ಬಿಗ್ಬಾಸ್ ಸೀಸನ್ 1 ರಿಂದ 9ರವರೆಗೆ ವಿನ್ ಆಗಿದ್ದವರ ಲಿಸ್ಟ್ ಕೂಡ ಸಖತ್ ವೈರಲ್ ಆಗುತ್ತಿದೆ. ಬಿಗ್ಬಾಸ್ ಸೀಸನ್ 1 ವಿನ್ ಆಗಿದ್ದ ಸ್ಪರ್ಧಿ ಸ್ಯಾಂಡಲ್ವುಡ್ ನಟ ವಿಜಯ ರಾಘವೇಂದ್ರ, ಸೀಸನ್ 2 ನಿರೂಪಕ ಕಮ್ ನಟ ಅಕುಲ್ ಬಾಲಾಜಿ. ಸೀಸನ್ 3 ನಟಿ ಶೃತಿ. ಸೀಸನ್ 4 ನಟ ಪ್ರಥಮ್. ಸೀಸನ್ 5 ಱಪರ್ ಚಂದನ್ ಶೆಟ್ಟಿ, ಸೀಸನ್ 6 ನಟ ಶಶಿ ಕುಮಾರ್. ಸೀಸನ್ 7 ಕಿರುತೆರೆ ನಟ ಶೈನ್ ಶೆಟ್ಟಿ, ಸೀಸನ್ 8 ಮಜಾ ಭಾರತ ಖ್ಯಾತಿಯ ಮಂಜು ಪಾವಗಡ. ಸೀನಸ್ 9 ರೂಪೇಶ್ ಶೆಟ್ಟಿ. ಈಗ ಸೀನಸ್ 10 ಯಾವ ಸ್ಪರ್ಧಿ ವಿನ್ ಆಗುತ್ತಾರೆ ಎಂದು ವೀಕ್ಷಕರಲ್ಲಿ ಕುತೂಹಲ ದುಪ್ಪಟ್ಟಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ