/newsfirstlive-kannada/media/post_attachments/wp-content/uploads/2024/09/jani-master-1.jpg)
ಬಹುಭಾಷಾ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ. 21 ವರ್ಷದ ಡ್ಯಾನ್ಸರ್ ಜಾನಿ ಮಾಸ್ಟರ್ ವಿರುದ್ಧ ಕೇಸ್ ನೀಡಿದ್ದಾರೆ. ಹಿಂದಿ, ತೆಲುಗು, ಕನ್ನಡ, ತಮಿಳು ಸಿನಿಮಾಗಳಿಗೆ ಮಾತ್ರವಲ್ಲದೆ ಸ್ಟಾರ್ ನಟರಿಗೆ ಕೊರಿಯೋಗ್ರಫಿ ಮಾಡಿದ ಕೊರಿಯೋಗ್ರಫಿರ್ಗೂ ಈಗ ಅತ್ಯಾಚಾರ ಆರೋಪ ಅಂಟಿರುವ ಸಂಗತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸದ್ಯ ಸುದ್ದಿಯಲ್ಲಿರುವ ಈ ಜಾನಿ ಮಾಸ್ಟರ್ ಎಲ್ಲಿಯವರು? ಅವರ ಹಿನ್ನೆಲೆ ಬಗ್ಗೆ ಅನೇಕರು ಹುಡುಕಾಡುತ್ತಿದ್ದಾರೆ.
ಜಾನಿ ಮಾಸ್ಟರ್ ಪೂರ್ಣ ಹೆಸರು ಶೇಕ್ ಜಾನಿ ಬಾಷಾ. ಇವರು ನೃತ್ಯ ಸಂಯೋಜಕರಾಗಿದ್ದು, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಅಕಿರಾ, ರಾಜರಥ, ರಾಜಕುಮಾರ, ನಟಸಾರ್ವಭೌಮ, ಯುವರತ್ನ, ವಿಕ್ರಾಂತ್ ರೋಣ, ಕಬ್ಜಾ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ ರಿಯಾಲಿಟಿ ಶೋದಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತಿದ್ದಾರೆ.
2009ರಲ್ಲಿ ತೆಲುಗಿನಲ್ಲಿ ಮೂಡಿ ಬಂದ ದ್ರೋಣ ಸಿನಿಮಾಗೆ ನೃತ್ಯ ಸಂಯೋಜನೆ ಮಾಡುವ ಮೂಲಕ ಗುರುತಿಸಿಕೊಂಡರು. ಆ ಬಳಿಕ ಸ್ಟಾರ್ ನಟರಿಗೆ ಕೊರಿಯೋಗ್ರಫಿ ಮಾಡುತ್ತಾ ಬಂದಿದ್ದಾರೆ. ಅವರಲ್ಲಿ ಸಲ್ಮಾನ್ ಖಾನ್, ರಾಮ್ ಚರಣ್ ತೇಜ, ಪವನ್ ಕಲ್ಯಾಣ್, ಜ್ಯೂನಿಯರ್ ಎನ್ಟಿಆರ್, ಧನುಶ್, ಕಿಚ್ಚಾ ಸುದೀಪ್, ಉಪೇಂದ್ರ, ಅಲ್ಲು ಅರ್ಜುನ್ ಹೀಗೆ ಅನೇಕರು ಸೇರಿದ್ದಾರೆ. ಹೀಗಿರುವಾಗ ಇವರ ಮೇಲೆ ಅತ್ಯಾಚಾರದ ದೂರು ಕೇಳಿಬಂದಿದೆ. 21ರ ಹರೆಯದ ಯುವತಿ ದೂರು ನೀಡಿದ್ದಾಳೆ.
ಜಾನಿ ಮಾಸ್ಟರ್ ತನ್ನ ನೃತ್ಯ ಸಂಯೋಜನೆ ಮೂಲಕ ರಾಷ್ಟ್ರೀಯ ಮತ್ತು ಮೂರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜೊತೆಗೆ 3 ಸೈಮಾ ಪ್ರಶಸ್ತಿಯನ್ನು ಪಡೆದಿದ್ದಾರೆ.
ಮೂಲತಃ ಆಂಧ್ರಪ್ರದೇಶದ ನೆಲ್ಲೂರಿನ ಜಾನಿ ಮಾಸ್ಟರ್ ಜುಲೈ 2 ರಂದು 1982ರಲ್ಲಿ ಜನಿಸಿದರು. ಪ್ರಾರಂಭದಲ್ಲಿ ETV ವಾಹಿತಿಯಲ್ಲಿ ಮೂಡಿ ಬರುತ್ತಿದ್ದ ‘ಧೀ’ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಗಮನ ಸೆಳೆದರು. ಬಳಿಕ ದ್ರೋಣ ಸಿನಿಮಾಗೆ ಕೊರಿಯೋಗ್ರಫಿ ಮಾಡುವ ಮೂಲಕ ಸಿನಿಮಾದತ್ತ ಬಂದರು. ಇವರು 120ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ.
ಇದಲ್ಲದೆ ರಾಜಕೀಯದಲ್ಲೂ ಆಸಕ್ತಿ ಹೊಂದಿರುವ ಜಾನಿ ಮಾಸ್ಟರ್ ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿಗೆ ಬೆಂಬಲ ನೀಡುವ ಮೂಲಕ ಅವರ ಪಕ್ಷ ಸೇರಿದ್ದಾರೆ.
ವೈಯ್ಯಕ್ತಿಕ ಜೀವನ
ಜಾನಿ ಮಾಸ್ಟರ್ ಶಾಸ್ತ್ರೀಯ ನೃತ್ಯಗಾರ್ತಿಯಾದ ಆಯೇಷಾಳನ್ನು ವಿವಾಹವಾಗಿರ್ಧಧೂ, ಈ ಜೋಡಿಗೆ ಈಗಾಗಲೇ ಒಬ್ಬ ಮಗ ಮತ್ತು ಮಗಳು ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ