/newsfirstlive-kannada/media/post_attachments/wp-content/uploads/2024/08/Kannada-Film-Industry-homa-Actress-Jyothi.jpg)
ಬೆಂಗಳೂರು: ಕಲಾವಿದರ ಸಂಘದಲ್ಲಿ ಇಂದು ಕನ್ನಡ ಚಿತ್ರರಂಗದ ಒಳಿತಿಗಾಗಿ ಹೋಮ-ಹವನ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನ ಅಭಿವೃದ್ಧಿ, ಶಾಂತಿ, ನೆಮ್ಮದಿಗಾಗಿ ಗಣ ಹೋಮ, ಆಶ್ಲೇಷಾ ಬಲಿ, ಮೃತ್ಯುಂಜಯ ಹೋಮ, ಸರ್ಪಶಾಂತಿ, ನಾಗದೇವರ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ.
ಇದನ್ನೂ ಓದಿ: ನನ್ನ ಕೋಪಕ್ಕೆ ಬಲಿ ಆಗ್ಬೇಡಿ.. ಕಲಾವಿದರ ಸಂಘದಲ್ಲಿ ದೈವ ನಾಗದರ್ಶನದ ಪ್ರಶ್ನೆ; ಅಸಲಿಗೆ ಆಗಿದ್ದೇನು?
ಈ ನಾಗದರ್ಶನದ ವೇಳೆ ಹಿರಿಯ ನಟಿ ಜ್ಯೋತಿ ಅವರ ಮೈ ಮೇಲೆ ದೇವರು ಬಂದ ಘಟನೆಯೂ ನಡೆದಿದೆ. ಕೂಡಲೇ ಇತರೆ ಕಲಾವಿದರು ನಟಿ ಜ್ಯೋತಿ ಅವರನ್ನು ಹಿಡಿದುಕೊಂಡಿದ್ದರು. ಹಾಗಾದ್ರೆ ಈ ಹಿರಿಯ ನಟಿ ಜ್ಯೋತಿ ಯಾರು. ಅವರ ಕಿರುಪರಿಚಯ ಇಲ್ಲಿದೆ.
ಇದನ್ನೂ ಓದಿ: ನಾಗದೇವರ ದರ್ಶನ.. ನೋಡ ನೋಡ್ತಿದ್ದಂಗೆ ಹಿರಿಯ ನಟಿ ಮೈ ಮೇಲೆ ಬಂದ ದೇವರು; ಏನಿದರ ವಿಶೇಷ?
ಹಿರಿಯ ನಟಿ ಜ್ಯೋತಿಯವರ ಸಿನಿಪಯಣ
ಜ್ಯೋತಿಯವರು ಮೂಲತಃ ದಕ್ಷಿಣ ಕನ್ನಡದವರು ತಾಯಿ ಕಾರ್ಕಳ, ತಂದೆ ಬಂಟ್ವಾಳ
ತಂದೆ ದಾವಣಗೆರೆಯಲ್ಲಿ ಎಲ್ಐಸಿಯಲ್ಲಿ ಕೆಲಸ ಮಾಡುತ್ತಿದ್ದರು
ಎರಡು ವರ್ಷವಿದ್ದಾಗಲೇ ತಂದೆಯನ್ನು ಕಳೆದುಕೊಂಡ ನಟಿ ಜ್ಯೋತಿ
ಕೊನೆಗೆ ಪುತ್ತೂರಿಗೆ ಶಿಫ್ಟ್ ಆದ ನಟಿ ಜ್ಯೋತಿಯವರ ಕುಟುಂಬ
ಬೀಡಿ ಬಂಡಲ್ ಪ್ಯಾಕ್ ಮಾಡುವ ಕೆಲಸ ಮಾಡಿ ಏಳು ಮಕ್ಕಳನ್ನು ಸಾಕಿದ ತಾಯಿ
ಜ್ಯೋತಿಯವರು ಕನ್ನಡ ಚಿತ್ರರಂಗದ ನಟಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ
ಹಲವು ಧಾರಾವಾಹಿಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ
ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಯುಗಪುರುಷ, ಗೋಪಿಕೃಷ್ಣ, ಯಾರೇ ನೀನು ಚೆಲುವೆ ಚಿತ್ರದಲ್ಲಿ ನಟನೆ
ಜ್ಯೋತಿಯವರ ಮೊಟ್ಟ ಮೊದಲ ಸಿನಿಮಾ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಅಮೃತಗಳಿಗೆ
ಒಟ್ಟು ಮುನ್ನೂರು ಸಿನಿಮಾಗಳು ಹಾಗೂ ಹಲವಾರು ಧಾರಾವಾಹಿಗಳಲ್ಲಿ ಜ್ಯೋತಿ ನಟನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ