/newsfirstlive-kannada/media/post_attachments/wp-content/uploads/2025/01/vinay-hiremath-5.jpg)
ಎಲ್ಲರಿಗೂ ಹಣ ಮಾಡಬೇಕು. ಶ್ರೀಮಂತರಾಗಬೇಕು ಅನ್ನೋ ಆಸೆ ಸಹಜ. ಆದರೆ ಕೋಟಿಗಟ್ಟಲೇ ಹಣ ಸಿಕ್ಕಿದ ಮೇಲೆ ಏನ್ ಮಾಡಬೇಕು ಅನ್ನೋದೇ ಗೊತ್ತಾಗೋದಿಲ್ಲ. ಭಾರತ ಮೂಲದ ವಿನಯ್ ಹೀರೇಮಠ್ ಸ್ಥಿತಿಯೂ ಹೀಗೆ ಆಗಿದೆ.
ಕೇವಲ 33 ವರ್ಷದ ವಿನಯ್ ಹೀರೇಮಠ್ ಬಳಿ ಬರೋಬ್ಬರಿ 8,352 ಕೋಟಿ ರೂಪಾಯಿ ಹಣ ಇದೆ. ಆದರೆ ಈ ಹಣವನ್ನು ತಾನು ಏನ್ ಮಾಡಬೇಕು. ಮುಂದೆ ಏನ್ ಮಾಡಲಿ ಎಂದು ಗೊತ್ತಾಗದೆ ಒದ್ದಾಡುತ್ತಿದ್ದಾರೆ. ಇದನ್ನು ವಿನಯ್ ಹೀರೇಮಠ್ ನೇರವಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ, ವಿನಯ್ ಹೀರೇಮಠ್ ಯಾರು, ಇವರ ಹಿನ್ನಲೆ ಏನು? ಇವರಿಗೆ 8,352 ಕೋಟಿ ರೂಪಾಯಿ ಹಣ ಹೇಗೆ ಸಿಕ್ತು ಅನ್ನೋ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ವಿನಯ್ ಹೀರೇಮಠ್, ಭಾರತ ಮೂಲದ ಆಮೆರಿಕಾದ ಉದ್ಯಮಿ. 2015ರಲ್ಲಿ ಆಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಶಾಹೀದ್ ಖಾನ್ ಮತ್ತು ಜೋ ಥಾಮಸ್ ಜೊತೆಗೂಡಿ ಲೂಮ್ ಎಂಬ ಕಂಪನಿಯನ್ನು ಆರಂಭಿಸಿದ್ದರು. ಕಂಪನಿಯಲ್ಲಿ ಚೀಫ್ ಟೆಕ್ನಿಕಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಡೆಲಿವರಿ ಬಾಯ್ನಿಂದ ಸಿವಿಲ್ ಜಡ್ಜ್ ಆಗುವ ತನಕ ; ಹೇಗಿತ್ತು 29 ವರ್ಷದ ಯುವಕನ ಸಾಧನೆಯ ಹಾದಿ?
ಲೂಮ್ ಕಂಪನಿಯು ವಿಡಿಯೋ ಶೇರಿಂಗ್ ಫ್ಲಾಟ್ ಫಾರಂ. ಜನರು ವಿಡಿಯೋಗಳನ್ನ ಕ್ರಿಯೇಟ್ ಮಾಡಿ, ಶೇರ್ ಮಾಡುವ ಫ್ಲಾಟ್ ಫಾರಂ. ಈ ಕಂಪನಿಯು ಕೆಲವೇ ವರ್ಷಗಳಲ್ಲಿ ಫೇಮಸ್ಸ್ ಆಯಿತು. ಕಂಪನಿಯ ಆದಾಯವೂ ಭಾರೀ ಪ್ರಮಾಣದಲ್ಲಿ ಹೆಚ್ಚಾಯಿತು.
ಈ ಕಂಪನಿಯನ್ನು ಕಳೆದ ವರ್ಷ ವಿನಯ್ ಹೀರೇಮಠ್ 975 ಮಿಲಿಯನ್ ಡಾಲರ್‌ಗೆ ಆಸ್ಟ್ರೇಲಿಯಾದ ಸಾಫ್ಟವೇರ್ ಕಂಪನಿ ಅಟ್ಲಾಸಿಯನ್‌ಗೆ ಮಾರಾಟ ಮಾಡಿದ್ದಾರೆ. 975 ಮಿಲಿಯನ್ ಡಾಲರ್ ಅನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, ಬರೋಬ್ಬರಿ 8,352 ಕೋಟಿ ರೂಪಾಯಿ.
ಕಂಪನಿ ಮಾರಿದ ಬಳಿಕ ಲೂಮ್ ಕಂಪನಿಯಲ್ಲೇ 60 ಮಿಲಿಯನ್ ಡಾಲರ್ ವೇತನದೊಂದಿಗೆ ಉದ್ಯೋಗ ನೀಡುವುದಾಗಿ ಕಂಪನಿ ಹೇಳಿತ್ತಂತೆ. ಆದರೆ, ತಾನು ಮಾರಿದ ಕಂಪನಿಗೆ ತಾನೇ ಉದ್ಯೋಗಿಯಾಗಿ ಸೇರಲು ವಿನಯ್ ಹೀರೇಮಠ್ ಒಪ್ಪಲಿಲ್ಲ. ಈಗ ಹವಾಯಿಯಲ್ಲಿ ಫೀಸಿಕ್ಸ್ ಓದುತ್ತಿದ್ದಾರೆ.
ಸೋಷಿಯಲ್ ಮೀಡಿಯಾ Xನಲ್ಲಿ ವಿನಯ್ ಹೀರೇಮಠ್, ನಾನು ಶ್ರೀಮಂತ. ಆದರೆ, ನನಗೆ ನನ್ನ ಜೀವನದಲ್ಲಿ ಏನ್ ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಕಳೆದ ವರ್ಷದಿಂದ ಜೀವನಕ್ಕೆ ಮಬ್ಬು ಕವಿದಿದೆ ಎಂದು ಟ್ವೀಟ್ ಮಾಡಿ ಉದ್ದನೆಯ ಪೋಸ್ಟ್ ಒಂದನ್ನ ಮಾಡಿದ್ದಾರೆ.
ನಾನು ನನ್ನ ಕಂಪನಿಯನ್ನು ಮಾರಿದ ಮೇಲೆ, ನಾನು ಜೀವನದಲ್ಲಿ ಮತ್ತೆಂದೂ ಕೆಲಸ ಮಾಡಲು ಅಗತ್ಯವಿಲ್ಲದ ಸ್ಥಿತಿ ತಲುಪಿದ್ದೇನೆ. ನನಗೆ ಹಣ ಮಾಡುವ ಅಥವಾ ಅಂತಸ್ತು, ಸ್ಥಾನಮಾನ ಗಳಿಸುವ ಆಸೆ ಇಲ್ಲ. ನನಗೆ ಅಪರಿಮಿತಿ ಸ್ವಾತಂತ್ರ್ಯ ಇದೆ. ಆದರೆ, ಈ ಸ್ವಾತಂತ್ರ್ಯದಲ್ಲಿ ನಾನು ಏನ್ ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ ಜೀವನದ ಬಗ್ಗೆ ನನಗೆ ಆಶಾಭಾವನೆಯೇ ಇಲ್ಲ ಎಂದಿದ್ದಾರೆ. ಅನುಕಂಪ ಗಳಿಸಿಕೊಳ್ಳಲು ಈ ಪೋಸ್ಟ್ ಮಾಡುತ್ತಿಲ್ಲ ಎಂದು ಕೂಡ ವಿನಯ್ ಹೀರೇಮಠ್ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್‌ನ ಉದ್ದೇಶವೇನೆಂದು ಕೂಡ ನನಗೆ ಗೊತ್ತಾಗುತ್ತಿಲ್ಲ. ಆದರೇ, ಜೀವನದಲ್ಲಿ ನನಗೆ ಯಾವ ಉದ್ದೇಶವೂ ಇಲ್ಲ ಎಂದಿದ್ದಾರೆ. ಹೀಗಾಗಿ ನಾನು ನನ್ನ ಈಗಿನ ಸ್ಥಿತಿಯನ್ನು ವಿವರಿಸುತ್ತೇನೆ.
ಕಳೆದ ಮಾರ್ಚ್‌ನಲ್ಲಿ ನನಗೆ ಜೀವನದಲ್ಲಿ ಏನ್ ಮಾಡಬೇಕೆಂದು ಯಾವ ಐಡಿಯಾವೂ ಇರಲಿಲ್ಲ. ನಾನು ಮಾರಿದ ಕಂಪನಿಯಲ್ಲಿ ನಾನು ಇರೋದು ಸೂಕ್ತ ಅಲ್ಲ ಅನ್ನಿಸಿತು. 60 ಮಿಲಿಯನ್ ಡಾಲರ್ ಕೆಲಸ ಬಿಡುವುದು ಬಹಳ ಕಠಿಣ ಅನ್ನಿಸಿತ್ತು. ಆದರೇ, ನಾನು ಈಗಾಗಲೇ ಹೆಚ್ಚಿನ ಹಣ ಸಂಪಾದಿಸಿಬಿಟ್ಟಿದ್ದೇನೆ. ಈ ರೀತಿಯ ನಂಬರ್ ಗಳನ್ನು ಪರಿಗಣಿಸುವುದು ನಿಮಗೆ ಫನ್ನಿ ಅನ್ನಿಸಬಹುದು ಎಂದು ವಿನಯ್ ಹೀರೇಮಠ್ ಪೋಸ್ಟ್ ಮಾಡಿದ್ದಾರೆ.
ಸ್ವಾತಂತ್ರ್ಯ ಇಲ್ಲದಿದ್ದರೇ, ಹಣದಿಂದ ಏನ್ ಪ್ರಯೋಜನ? ನಿಮ್ಮ ಅತ್ಯಂತ ಬೆಲೆಬಾಳುವ ಸಂಪತ್ತು , ಸಮಯ ಅಲ್ಲದೇ ಬೇರೆೇನೂ ಎಂದು ವಿನಯ್ ಹೀರೇಮಠ್ ಪ್ರಶ್ನಿಸಿದ್ದಾರೆ. ನಾನು ಏನಾದರೂ ಮಾಡಬೇಕಾಗಿತ್ತು. ಮತ್ತೆ ಜೀವಂತವಾಗಿರಬೇಕಾಗಿತ್ತು. ಆದರೆ, ನನಗೆ ಯಾವುದೇ ಐಡಿಯಾ ಇಲ್ಲ. ಎಲಾನ್ ಮಸ್ಕ್ ಮಾಡಿದ್ದನ್ನು ನಾನು ಮಾಡುವ ಪ್ರಯತ್ನ ಮಾಡಿದೆ ಎಂದಿದ್ದಾರೆ.
10 ವರ್ಷದ ಜರ್ನಿಯ ಬಳಿಕ ಒಬ್ಬ ಆರೋಗ್ಯವಂತ ವ್ಯಕ್ತಿ ಮಾಡುವಂತೆ ರೋಬೋಟಿಕ್ಸ್ ಕ್ಷೇತ್ರದ 70 ಮಂದಿ ಹೂಡಿಕೆದಾರರನ್ನು ಭೇಟಿಯಾದರಂತೆ. ಅಭದ್ರತೆ ಕಾಡ್ತಿದೆ. ಆದರೇ, ಆರ್ಥಿಕವಾಗಿ ಅಲ್ಲ, ಸ್ವಲ್ಪ ಸಮಯ ಆಮೆರಿಕಾದ ಡಿಪಾರ್ಟ್ ಮೆಂಟ್ ಆಪ್ ಗರ್ವನೆನ್ಸ್‌ನಲ್ಲಿ ಕೆಲಸ ಮಾಡಿದೆ. ಈಗ ನಾನು ಹವಾಯಿಯಲ್ಲಿ ಫೀಜಿಕ್ಸ್ ಓದುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ವಿನಯ್ ಹೀರೇಮಠ್ ತಮ್ಮನ್ನು ತಾವು ಬಂಡವಾಳಶಾಹೀ ವ್ಯವಸ್ಥೆಯ ಅಭಿಮಾನಿ ಎಂದು ಕರೆದುಕೊಳ್ಳುತ್ತಾರೆ. ಹೀಗೆ ದುಡ್ಡು ಇದ್ದರೂ, ಏನ್ ಮಾಡಬೇಕೆಂದು ಗೊತ್ತಾಗದೇ, ಜೀವನದ ಉದ್ದೇಶವೇನೇಂದು ಗೊತ್ತಾಗದೇ, ವಿನಯ ಹೀರೇಮಠ್ ಮಾನಸಿಕವಾಗಿ ತೊಳಲಾಟದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ