ಅಮೆರಿಕದ ನೂತನ ಉಪಾಧ್ಯಕ್ಷ ಭಾರತದ ಅಳಿಯ! ತೆಲುಗು ಕುವರಿ ಉಷಾ ವ್ಯಾನ್ಸ್​ ಬಗ್ಗೆ ನಿಮಗೆ ತಿಳಿದಿದೆಯೇ..?

author-image
Ganesh
Updated On
ಅಮೆರಿಕದ ನೂತನ ಉಪಾಧ್ಯಕ್ಷ ಭಾರತದ ಅಳಿಯ! ತೆಲುಗು ಕುವರಿ ಉಷಾ ವ್ಯಾನ್ಸ್​ ಬಗ್ಗೆ ನಿಮಗೆ ತಿಳಿದಿದೆಯೇ..?
Advertisment
  • ಅಮೆರಿಕನ್ ಸೆಕೆಂಡ್ ಲೇಡಿ ಆಗುತ್ತಿರುವ ಉಷಾ ವ್ಯಾನ್ಸ್​ ಯಾರು?
  • ಉಷಾ ವ್ಯಾನ್ಸ್​-ಜೆಡಿ ವ್ಯಾನ್ಸ್ ಲವ್ ಸ್ಟೋರಿ ಬಗ್ಗೆ ನಿಮಗೆ ಗೊತ್ತಾ?
  • ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್​​ಗೆ ಭರ್ಜರಿ ಗೆಲುವು

ಅಮೆರಿಕದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ (Donald Trump) ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಲಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ಗೆದ್ದು ಬೀಗಿದ್ದಾರೆ.

ಸರ್ಕಾರ ರಚನೆಗೆ ಮ್ಯಾಜಿಕ್ ಫಿಗರ್ ಸಾಧಿಸಿದ ಬೆನ್ನಲ್ಲೇ ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದರು.  ಚುನಾವಣೆಯಲ್ಲಿ ಟ್ರಂಪ್ 277, ಹ್ಯಾರಿಸ್ 226 ಎಲೆಕ್ಟೋರಲ್ ಮತಗಳನ್ನು ಪಡೆದರು. ಸೆನೆಟ್ ಮತ್ತು ಜನಪ್ರಿಯ ಮತಗಳೆರಡರಲ್ಲೂ ಟ್ರಂಪ್ ಮೇಲುಗೈ ಸಾಧಿಸಿದ್ದಾರೆ. ಇನ್ಮುಂದೆ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಮತ್ತು ಜೆಡಿ ವ್ಯಾನ್ಸ್ (JD Vance) ಉಪಾಧ್ಯಕ್ಷರಾಗಿ ದರ್ಬಾರ್ ನಡೆಸಲಿದ್ದಾರೆ. ಉಪಾಧ್ಯಕ್ಷರಾಗುತ್ತಿರುವ ಜೆಡಿ ವ್ಯಾನ್ಸ್​​ಗೆ ಭಾರತದ ಲಿಂಕ್ ಇದೆ ಅನ್ನೋದು ಇಲ್ಲಿ ಮತ್ತೊಂದು ವಿಶೇಷ!

ಇದನ್ನೂ ಓದಿ:ಡೊನಾಲ್ಡ್ ಟ್ರಂಪ್‌ ಎಷ್ಟು ಮದುವೆ ಆಗಿದ್ದಾರೆ? ಮೆಲಾನಿಯಾ ಎಷ್ಟು ವರ್ಷ ಚಿಕ್ಕವರು ಗೊತ್ತಾ?

publive-image

ಯಾರು ಈ ಜೆಡಿ ವ್ಯಾನ್ಸ್?
ಜೆಡಿ ವ್ಯಾನ್ಸ್ ಭಾರತದ ಅಳಿಯ. ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕೂರಿ ( Usha Chilukuri Vance) ಭಾರತ ಮೂಲದವರು. ಉಷಾ ಚಿಲುಕೂರಿ ತೆಲುಗು ಕುವರಿ. ಜೆಡಿ ವ್ಯಾನ್ಸ್​ ಉಪಾಧ್ಯಕ್ಷ ಸ್ಥಾನ ಅಲಂಕರಿಸ್ತಿದ್ದಂತೆಯೇ ಉಷಾ ಅವರು ‘ಅಮೆರಿಕನ್ ಸೆಕೆಂಡ್ ಲೇಡಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಟ್ರಂಪ್ ಅವರು ಒಹಿಯೋ ಸ್ಟೇಟ್​​ನ (Ohio state) ಸೆನೆಟರ್ ಆಗಿ ಜೆಡಿ ವ್ಯಾನ್ಸ್​​ರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗಿನಿಂದಲೂ ಉಷಾ ಹೆಸರು ಸುದ್ದಿಯಾಗಿತ್ತು. ಚುನಾವಣೆ ಫಲಿತಾಂಶ ಬೆನ್ನಲ್ಲೇ ಉಷಾ ಹೆಸರು ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ವೃತ್ತಿಯಲ್ಲಿ ವಕೀಲೆ ಆಗಿರುವ ಉಷಾ ಚಿಲುಕುರಿ ಅಮೆರಿಕಾದಲ್ಲಿ ಹುಟ್ಟಿ ಬೆಳೆದವರು. ಇವರ ಪೂರ್ವಜರು ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ವಡಲೂರು ಗ್ರಾಮದವರು. ಉಷಾ ಪೋಷಕರಾದ ರಾಧಾಕೃಷ್ಣ ಮತ್ತು ಲಕ್ಷ್ಮಿ 80ರ ದಶಕದಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಈ ದಂಪತಿಯ ಮೂವರು ಮಕ್ಕಳಲ್ಲಿ ಉಷಾ ಕೂಡ ಒಬ್ಬರು. ತಾಯಿ ಲಕ್ಷ್ಮಿ ಜೀವಶಾಸ್ತ್ರ ಮತ್ತು ಜೀವರಸಾಯನ ಶಾಸ್ತ್ರದಲ್ಲಿ ಪರಿಣಿತಿ ಪಡೆದುಕೊಂಡಿದ್ದರು. ಪ್ರಸ್ತುತ ಇವರು, ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ರಾಧಾಕೃಷ್ಣ ಕ್ರಿಶ್ ಚಿಲುಕುರಿ ಎಂದೇ ಪರಿಚಿತರು. ಇವರು ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ.

publive-image

ಹಿಂದೂ ಸಂಪ್ರದಾಯದಂತೆ ಮದುವೆ

ಇನ್ನು ಉಷಾ ಚಿಲ್ಕುರಿ, ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ (San Diego) ಹುಟ್ಟಿ ಬೆಳೆದವರು. ಯೇಲ್ ವಿಶ್ವವಿದ್ಯಾಲಯ (Yale University)ದಲ್ಲಿ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಕಾನೂನು ಇಲಾಖೆಗಳಲ್ಲಿ ದೀರ್ಘಕಾಲ ಕೆಲಸ ಮಾಡಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳಾದ ಜಸ್ಟಿಸ್ ಜಾನ್ ರಾಬರ್ಟ್ಸ್ ಮತ್ತು ಜಸ್ಟಿಸ್ ಬ್ರೆಟ್ ಕೆವನ್ನಾ ಅವರ ಅಡಿಯಲ್ಲಿ ಸೇವೆ ಸಲ್ಲಿಸಿದರು. ಕಾನೂನು ಮತ್ತು ಟೆಕ್ ಜರ್ನಲ್‌ನ ವ್ಯವಸ್ಥಾಪಕ ಸಂಪಾದಕರಾಗಿ ಮತ್ತು ಯೇಲ್ ವಿಶ್ವವಿದ್ಯಾಲಯದಲ್ಲಿ ಯೇಲ್ ಲಾ ಜರ್ನಲ್‌ನ ಕಾರ್ಯನಿರ್ವಾಹಕ ಅಭಿವೃದ್ಧಿ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:ಟ್ರಂಪ್​ ಗೆಲುವಿಗೆ ಎಲಾನ್​ ಮಸ್ಕ್ ಪ್ರಮುಖ ಪಾತ್ರವಹಿಸಿದ್ದು ಹೇಗೆ? ಯುಎಸ್​​ ಅಧ್ಯಕ್ಷನ ಬಗ್ಗೆ ಟೆಸ್ಲಾ ಸಂಸ್ಥಾಪಕ ಅಂದು ಹೇಳಿದ್ದೇನು?

ಉಷಾ ಮತ್ತು ಜೆಡಿ ವ್ಯಾನ್ಸ್ 2013ರಲ್ಲಿ ಯೇಲ್​​ ಲಾ ಸ್ಕೂಲ್​​ನಲ್ಲಿ ಮೊದಲ ಬಾರಿಗೆ ಭೇಟಿಯಾದರು. ಬೆನ್ನಲ್ಲೇ ಪರಸ್ಪರ ಇಷ್ಟಪಟ್ಟರು. 2014 ರಲ್ಲಿ ಹಿರಿಯರನ್ನು ಮನವೊಲಿಸಿ, ಕೆಂಟುಕಿಯಲ್ಲಿ ಮದುವೆಯಾದರು. ಇವರ ಮದುವೆ ಹಿಂದೂ ಸಂಪ್ರದಾಯದಲ್ಲಿ ನಡೆದಿದೆ. ಇವರಿಗೆ ಮೂವರು ಮಕ್ಕಳಿದ್ದಾರೆ. ಮಗಳಿಗೆ ಮೀರಾಬೆಲ್, ಪುತ್ರರಿಗೆ ಇವಾನ್ ಮತ್ತು ವಿವೇಕ್ ಎಂದು ಹೆಸರಿಟ್ಟಿದ್ದಾರೆ.

ಪತಿಯ ಯಶಸ್ಸಿನಲ್ಲಿ ಉಷಾ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜಕೀಯವಾಗಿ ಅನೇಕ ವಿಚಾರಗಳಲ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಓಹಿಯೋ ಸೆನೆಟರ್ ಆಗಿ ಸ್ಪರ್ಧಿಸುವ ಸಂದರ್ಭದಲ್ಲಿ ಪ್ರಚಾರದಲ್ಲಿ ಪ್ರಮುಖ ಜವಾಬ್ದಾರಿ ನಿಭಾಯಿಸಿದ್ದಾರೆ. ರಿಪಬ್ಲಿಕನ್ನರ ಪರವಾಗಿ ಎರಡನೇ ಮಹಿಳೆಯಾಗಿ ಕಾರ್ಯನಿರ್ವಹಿಸಲಿರುವ ಉಷಾ ವಾನ್ಸ್, 2014ರಲ್ಲಿ ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತೆಯಾಗಿ ನೋಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ:Trump: ಡೊನಾಲ್ಡ್‌ ಟ್ರಂಪ್‌ ಗೆಲುವಿಗೆ ಕಾರಣವೇನು? ಮೊದಲ ವಿಕ್ಟರಿ ಭಾಷಣದಲ್ಲಿ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment