ಅಮೆರಿಕ ಉಪಾಧ್ಯಕ್ಷನಿಗೂ ಭಾರತದ ನಂಟು.. ವ್ಯಾನ್ಸ್ ಪತ್ನಿ ಉಷಾ ಚಿಲುಕುರಿ ಯಾರು? ಹಿನ್ನೆಲೆ ಏನು?

author-image
admin
Updated On
ಅಮೆರಿಕ ಉಪಾಧ್ಯಕ್ಷನಿಗೂ ಭಾರತದ ನಂಟು.. ವ್ಯಾನ್ಸ್ ಪತ್ನಿ ಉಷಾ ಚಿಲುಕುರಿ ಯಾರು? ಹಿನ್ನೆಲೆ ಏನು?
Advertisment
  • ಕಮಲ ಹ್ಯಾರಿಸ್, ರಿಷಿ ಸುನಕ್ ಬಳಿಕ ಜೆ.ಡಿ ವಾನ್ಸ್‌ಗೆ ಉನ್ನತ ಹುದ್ದೆ
  • ಭಾರತೀಯ ಮೂಲದವರು ಬೇರೆ ದೇಶದ ರಾಜಕೀಯದಲ್ಲಿ ಪ್ರಭಾವಿ
  • ಜೆ.ಡಿ ವಾನ್ಸ್ ಪತ್ನಿ ಉಷಾ ಚಿಲುಕುರಿ ಯಾರು? ಪರಿಚಯ ಹೇಗಾಯ್ತು?

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಗರಿಗೆದರಿದೆ. ಗುಂಡಿನ ದಾಳಿಯಿಂದ ಬಚಾವ್​ ಆಗಿ ಸಾವಿನ ದವಡೆಯಿಂದ ಪಾರಾದ ಡೊನಾಲ್ಡ್​​ ಟ್ರಂಪ್​ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ರಿಪಬ್ಲಿಕನ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜೆ.ಡಿ. ವ್ಯಾನ್ಸ್ ಆಯ್ಕೆಯಾಗಿದ್ದು, ಭಾರತೀಯರಲ್ಲಿ ಸಂತಸ ಹೆಚ್ಚಿಸಿದೆ. ಕಾರಣ ಅವರಿಗೂ ಭಾರತದ ಲಿಂಕ್‌ ಇದೆ.

ಇದನ್ನೂ ಓದಿ: Watch: ಟ್ರಂಪ್ ಕಿವಿಗೆ ಬಡಿದ ಬುಲೆಟ್; ಮಾಜಿ ಅಧ್ಯಕ್ಷರು ಆ ಕ್ಷಣದಲ್ಲಿ ಮಾಡಿದ್ದೇನು.. ಭಯಾನಕ ದಾಳಿಯ ವಿಡಿಯೋ 

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​​ ಹತ್ಯೆಗೆ ಯತ್ನಿಸಿದ ಘಟನೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಈ ಗುಂಡಿನ ದಾಳಿಯಿಂದ ಅಧ್ಯಕ್ಷೀಯ ಚುನಾವಣೆ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಇದರ ನಡುವೆ ಟ್ರಂಪ್ ಅವರ ಉಪಾಧ್ಯಕ್ಷ ಆಯ್ಕೆ ಭಾರತೀಯರಲ್ಲಿ ಸಂತಸ ಹೆಚ್ಚಿಸಿದೆ.

publive-image

ಅಮೆರಿಕಾದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ವಾನ್ಸ್​​ ಆಯ್ಕೆ
ಜೆ.ಡಿ.ವ್ಯಾನ್ಸ್​​ಗೂ ಭಾರತಕ್ಕೂ ಇದೇ ವಿಶೇಷ ನಂಟು
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್​​ ಟ್ರಂಪ್​, ರಿಪಬ್ಲಿಕ್​​ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಜೆ.ಡಿ ವಾನ್ಸ್​​ ಅವರ ಹೆಸರನ್ನ ಘೋಷಿಸಿದ್ದಾರೆ. ಓಹಾಯೋ ರಾಜ್ಯದ ಸೆನೆಟರ್​ ಆಗಿರುವ ಜೆಡಿ ವಾನ್ಸ್​​​ಗೂ ಭಾರತದ ಸಂಪರ್ಕ ಇದ್ದೂ ಅವರ ಪತ್ನಿ ಭಾರತೀಯರು ಅನ್ನೋದೇ ವಿಶೇಷ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ.. ಬೆಚ್ಚಿ ಬೀಳಿಸಿದ 20 ವರ್ಷದ ಯುವಕನ ಅಟ್ಯಾಕ್‌; ಅಸಲಿ ಕಾರಣವೇನು? 

ಕೆಲ ವರ್ಷಗಳಿಂದ ಭಾರತೀಯ ಮೂಲದ ಜನರು ಬೇರೆ ದೇಶದ ರಾಜಕೀಯದಲ್ಲಿ ಕೇಂದ್ರ ಬಿಂದುವಾಗಿ ಹೊರ ಹೊಮ್ಮುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅಮೆರಿಕಾದ ಉಪಾಧ್ಯಕ್ಷೆ ಕಮಲ ಹ್ಯಾರಿಸ್, ಬ್ರಿಟನ್​​ನ ಮಾಜಿ ಪ್ರಧಾನಿ ರಿಷಿ ಸುನಕ್​​ ಹೀಗೆ ಹಲವರು ಇದ್ದಾರೆ. ಈ ಲಿಸ್ಟ್​ಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಜೆ.ಡಿ ವಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ಭಾರತದ ಮೂಲದವರಾಗಿದ್ದು, ತಮ್ಮ ಪತಿಯ ರಾಜಕೀಯ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ.

publive-image

ಉಷಾ ಚಿಲುಕುರಿ ಯಾರು?
ಆಂಧ್ರಪ್ರದೇಶದ ಮೂಲದ ಉಷಾ ಚಿಲುಕುರಿ
ಯೇಲ್ ಯೂನಿರ್ವಸಿಟಿಯಲ್ಲಿ ಇತಿಹಾಸ ವಿಷಯದಲ್ಲಿ ಡಿಗ್ರಿ
ಕೇಂಬ್ರಿಡ್ಜ್ ಯೂನಿರ್ವಸಿಟಿಯಲ್ಲಿ ಎಂ.ಫಿಲ್ ಪದವೀಧರೆ
ಅಮೆರಿಕಾದಲ್ಲಿದ್ದರೂ ಹಿಂದೂ ಸಂಸ್ಕೃತಿ ಪಾಲಿಸುವ ಉಷಾ
ಯೇಲ್ ಲಾ ಸ್ಕೂಲ್​​ನಲ್ಲಿ ಉಷಾ-ವ್ಯಾನ್ಸ್ ಪರಸ್ಪರ ಪರಿಚಯ
2014ರಲ್ಲಿ ಕೆಂಟುಕಿಯಲ್ಲಿ ಹಿಂದೂ ಸಂಪ್ರದಾಯಂದಂತೆ ವಿವಾಹ​​
ಜೆ.ಡಿ.ವ್ಯಾನ್ಸ್-ಉಷಾ ಚಿಲುಕುರಿ ದಂಪತಿಗೆ ಮೂವರು ಮಕ್ಕಳು

ಉಷಾ ಚಿಲುಕುರಿ ಅವರು ತಮ್ಮ ಪತಿಯ ರಾಜಕೀಯ ಓಟಕ್ಕೆ ಬೆಂಬಲವಾಗಿ ನಿಂತಿದ್ದು, ರಾಜಕೀಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾರೆ. ಇಷ್ಟು ಮಾತ್ರವಲ್ಲದೇ ಪತಿಗೆ ಸಲಹೆ ಸೂಚನೆಗಳನ್ನ ನೀಡಿ ಜೆಡಿ ವ್ಯಾನ್ಸ್ ಅವರ ರಾಜಕೀಯ ಬೆಳವಣಿಗೆಗೆ ಸಾಕಷ್ಟು ಸಹಕರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment