/newsfirstlive-kannada/media/post_attachments/wp-content/uploads/2025/04/Vaibhav_Suryavanshi_Yashasvi-1.jpg)
ವೈಭವ್ ಸೂರ್ಯವಂಶಿ, ಸದ್ಯ ಕ್ರಿಕೆಟ್ ಲೋಕದ ಸೆನ್ಸೇಷನ್. 14 ವರ್ಷದ ಈ ಪೋರ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಐಪಿಎಲ್ನ ಅತ್ಯಂತ ಕಿರಿಯ ಆಟಗಾರ, ಸೂರ್ಯವಂಶಿ ನಿನ್ನೆ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಬಾಲ್ನಲ್ಲಿ ಶತಕ ಬಾರಿಸಿದ್ದಾರೆ.
ಗುಜರಾತ್ ಟೈಟನ್ಸ್ ನೀಡಿದ್ದ 210 ರನ್ಗಳ ಟಾರ್ಗೆಟ್ ಬೆನ್ನು ಹತ್ತಲು ಆರಂಭಿಕ ಆಟಗಾರನಾಗಿ ರಾಜಸ್ಥಾನ್ ಪರ ಬಂದಿದ್ದ ವೈಭವ್, ಕೇವಲ 17 ಬಾಲ್ನಲ್ಲಿ ಅರ್ಧಶತಕ ಬಾರಿಸಿದರು. ಈ ಬಾರಿಯ ಐಪಿಎಲ್‌ನಲ್ಲಿ ದಾಖಲಾದ ಅತ್ಯಂತ ವೇಗದ ಅರ್ಧಶತಕ ಇದಾಗಿದೆ. ಸ್ಫೋಟಕ ಅರ್ಧಶತಕದೊಂದಿಗೆ ಆಟ ಮುಂದುವರಿಸಿದ ಅವರು, 35 ಬಾಲ್ನಲ್ಲಿ ಶತಕವನ್ನೂ ಪೂರೈಸಿದರು. ವೈಭವ್ 265.75 ಸ್ಟ್ರೈಕ್ರೇಟ್ನಲ್ಲಿ ಆಡಿದರು. 38 ಬಾಲ್ ಎದುರಿಸಿದ ವೈಭವ್ 11 ಸಿಕ್ಸರ್, 7 ಬೌಂಡರಿ ಬಾರಿಸಿ ಮಿಂಚಿದರು.
ಇದನ್ನೂ ಓದಿ: 11 ಸಿಕ್ಸರ್ಗಳು.. ಅತಿ ವೇಗದ ಸೆಂಚುರಿ ಬಾರಿಸಿದ 14 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ
ಐಪಿಎಲ್‌ನಲ್ಲಿ ದುಪ್ಪಟ್ಟು ಬೆಲೆಗೆ ಸೇಲ್!
ಈ ಬಾರಿ ನಡೆದ ಮೆಗಾ ಹರಾಜಿನಲ್ಲಿ ವೈಭವ್ ದುಪ್ಪಟ್ಟು ಬೆಲೆಗೆ ಮಾರಾಟವಾಗಿದ್ದಾರೆ. ಅಲ್ಲದೇ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹರಾಜು ಸಂದರ್ಭದಲ್ಲಿ ವೈಭವ್ಗೆ 13 ವರ್ಷ ತುಂಬಿತ್ತು. ವೈಭವ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಜಿದ್ದಿಗೆ ಬಿದ್ದಿದ್ದವು. ಕೊನೆಯಲ್ಲಿ ಆರ್ಆರ್ ಬಿಡ್ಡಿಂಗ್ ಗೆದ್ದುಕೊಂಡಿತ್ತು. ದೆಹಲಿ ತಂಡ ಕೊನೆಯದಾಗಿ 1 ಕೋಟಿ ರೂಪಾಯಿ ಬಿಡ್ ಮಾಡ್ತಿರೋದಾಗಿ ಹೇಳಿತು. ಆದರೆ ರಾಜಸ್ಥಾನ 1.10 ಕೋಟಿ ನೀಡಿ ಖರೀದಿ ಮಾಡಿತ್ತು. ಸೂರ್ಯವಂಶಿ ಪ್ರತಿಭೆಯನ್ನು ಗುರುತಿಸಿದ್ದ ಹೆಡ್ಕೋಚ್ ರಾಹುಲ್ ದ್ರಾವಿಡ್, ಕೊನೆಗೂ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ದ್ರಾವಿಡ್ ನಂಬಿಕೆಗೆ ವೈಭವ್, ಇಂದು ನ್ಯಾಯ ಒದಗಿಸಿದ್ದಾರೆ.
ಇದನ್ನೂ ಓದಿ: ಒಂದೇ ಓವರ್, 28 ರನ್ ಸಿಡಿಸಿದ ವೈಭವ್ ಸೂರ್ಯವಂಶಿ.. ಅತಿ ವೇಗದ ಅರ್ಧಶತಕ ಬಾರಿಸಿದ 14 ವರ್ಷದ ಬಾಲಕ
ಟೀಂ ಇಂಡಿಯಾ ಪರ ಶತಕ
ವೈಭವ್ ಮೂಲತಃ ಬಿಹಾರದ ಸಮಸ್ತಿಪುರದವರು. 12ನೇ ವಯಸ್ಸಿನಲ್ಲಿ ಅಂದರೆ 2023ರಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಅಂಡರ್-19 ಕ್ರಿಕೆಟ್ ಪಂದ್ಯಾವಳಿಗಳಲ್ಲಿ ವೈಭವ್ ಸ್ಫೋಟಕ ಪ್ರದರ್ಶನ ನೀಡಿದ್ದಾರೆ. ಅಂಡರ್-19 ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಆಕರ್ಷಕ ಶತಕ ಬಾರಿಸಿದ್ದರು. ಕೇವಲ 62 ಬಾಲ್ನಲ್ಲಿ 104 ರನ್ಗಳಿಸಿ ಗಮನ ಸೆಳೆದಿದ್ದಾರೆ. 2005ರಲ್ಲಿ ಇಂಗ್ಲೆಂಡ್ ಆಟಗಾರ ಮೊಯಿನ್ ಅಲಿ 58 ಬಾಲ್ನಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು. ಅವರನ್ನು ಬಿಟ್ಟರೆ, ಇದೀಗ ವೈಭವ್ ಆ ಸಾಧನೆ ಮಾಡಿದ್ದಾರೆ.
ವೈಭವ್ ಶತಕದ ವೈಭವದಲ್ಲಿ 14 ಬೌಂಡರಿ, 4 ಸಿಕ್ಸರ್ಗಳಿದ್ದವು. ಸೂರ್ಯವಂಶಿ ಕುಚ್ ಬಿಹಾರ್ ಟ್ರೋಫಿಯಲ್ಲೂ ಪ್ರಮುಖ ಸಾಧನೆ ಮಾಡಿದ್ದಾರೆ. ಜಾರ್ಖಂಡ್ ವಿರುದ್ಧ ನಡೆದ ಪಂದ್ಯದಲ್ಲಿ 128 ಬಾಲ್ನಲ್ಲಿ 158 ರನ್ಗಳಿಸಿದ್ದರು. ಈ ವೇಳೆ 22 ಬೌಂಡರಿ, ಮೂರು ಸಿಕ್ಸರ್ಗಳನ್ನು ಬಾರಿಸಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿ 76 ರನ್ಗಳಿಸಿದ್ದರು. ಅಂಡರ್-19ನ Quadrangular ಸೀರಿಸ್ನಲ್ಲೂ ಅದ್ಭುತ ಪ್ರದರ್ಶನ ನೀಡಿರುವ ಪ್ರತಿಭೆ ಇದಾಗಿದೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಸೆಂಚುರಿ.. ಜೈಸ್ವಾಲ್ ಅರ್ಧಶತಕ; ಗುಜರಾತ್ಗೆ ಭಾರೀ ಅವಮಾನ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್