/newsfirstlive-kannada/media/post_attachments/wp-content/uploads/2025/03/SIKANDAR-MOVIE.jpg)
2025ರಲ್ಲಿ ಭಾರೀ ನೀರಿಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಕೂಡ ಒಂದು. ಇದೇ ತಿಂಗಳು 30ನೇ ತಾರೀಖಿನಿಂದ ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಸಲ್ಲು ಭಾಯ್ ಅಭಿಮಾನಿಗಳೂ ಕೂಡ ಮಾರ್ಚ್ 30 ಯಾವಾಗ ಆಗುತ್ತೋ ಶಿವನೇ ಅನ್ನೋ ಮಟ್ಟದಲ್ಲಿ ಸಿನಿಮಾಗಾಗಿ ಕಾಯುತ್ತಿದ್ದಾರೆ. ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ತೆರೆಗೆ ಬರಲು ಸಜ್ಜಾಗಿರುವ ಸಿಕಂದರ್ ಸಿನಿಮಾಗೆ ಎ.ಆರ್ ಮುರಗದಾಸ್ ನಿರ್ದೇಶನವಿದೆ.
ಸಲ್ಲಾನ್ ಖಾನ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದ ವಿಲನ್ ಬಗ್ಗೆ ಒಂದು ಸಸ್ಪೆನ್ಸ್ನ್ನು ಸಿನಿಮಾ ತಂಡ ಕಾಯ್ದುಕೊಂಡಿದೆ.ಈ ಬಗ್ಗೆ ಅನೇಕ ಊಹೆಗಳು ಕೂಡ ಸಿನಿಪ್ರಿಯರಲ್ಲಿ ನಡೆದಿವೆ. ಇವರು ಇರಬಹುದು ಎಂಬ ಚರ್ಚೆಯೂ ಕೂಡ ನಡೆದಿದೆ. ಇದು ಆ ನಟ, ಈ ನಟ ಎಂಬ ಬಗ್ಗೆ ಇಂದಿಗೂ ಕೂಡ ಚರ್ಚೆ ಜಾರಿಯಲ್ಲಿವೆ. ಕಾರಣ ಸಿನಿಮಾದ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಒಂದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:Yash ಫ್ಯಾನ್ಸ್ಗೆ ಮತ್ತೊಂದು ಗುಡ್ನ್ಯೂಸ್; ಸಿಂಗರ್ ಹನಿಸಿಂಗ್ಗೆ ರಾಕಿಂಗ್ ಸ್ಟಾರ್ ಹೇಳಿದ್ದೇನು?
ಸದ್ಯ ಸಿಕಂದರ್ ಸಿನಿಮಾದ ವಿಲನ್ ಯಾರು ಎಂಬುದು ಕೊನೆಗೂ ರಿವೀಲ್ ಆಗಿದೆ. ಆರಂಭದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಎಸ್ ಜೆ ಸೂರ್ಯ ಸಿಕಂದರ್ ಸಿನಿಮಾಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ರೂಮರ್ಸ್ಗಳು ಹರಿದಾಡಿದವು.ಹಲವು ಮಾಧ್ಯಮಗಳಲ್ಲಿ ಹೆಡ್ಲೈನ್ ಕೂಡ ಬಿತ್ತರವಾದವು ಆದರೆ ಚಿತ್ರತಂಡದಿಂದ ಈ ಬಗ್ಗೆ ಯಾವುದೇ ರೀತಿ ಸ್ಪಷ್ಟನೆ ಬಂದಿರಲಿಲ್ಲ. ಇದೊಂದು ರೂಮರ್ಸ್ ಎಂದು ಎಲ್ಲರೂ ಸುಮ್ಮನಾಗಿದ್ದರು.
ಇದನ್ನೂ ಓದಿ:ನಟ ಸುಶಾಂತ್ ಸಿಂಗ್ ಸಾವಿಗೆ ಕಾರಣ ಹೇಳಿದ ಸಿಬಿಐ! ಕಾಣದ ಕೈಗಳ ಕೈವಾಡಕ್ಕೆ ಸಾಕ್ಷಿಯಿಲ್ಲ ಎಂದ ತನಿಖಾ ಸಂಸ್ಥೆ!
ಆದ್ರೆ ಈಗ ಎಸ್.ಜೆ.ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಸಿಕಂದರ್ ಸಿನಿಮಾದ ಟೀಸರ್ ಗ್ಲಿಂಪ್ಸ್ ಪೋಸ್ಟ್ ಮಾಡುವ ಮೂಲಕ, ಸಿಕಂದರ್ನಲ್ಲಿ ವಿಲನ್ ಪಾತ್ರದಲ್ಲಿ ನಾನೇ ನಟನೆ ಮಾಡುತ್ತಿರುವುದು ಎಂಬುದನ್ನು ಖಚಿತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ