newsfirstkannada.com

ರೋಹಿತ್​ಗೂ ಮುನ್ನ ‘ಹಿಟ್​ ಮ್ಯಾನ್’ ಎಂಬ ಬಿರುದು ಸಿಕ್ಕಿದ್ದು ಯಾರಿಗೆ ಗೊತ್ತಾ? ಇದು ಯಾರಿಗೂ ಗೊತ್ತಿರದ ಸ್ಟೋರಿ

Share :

Published January 19, 2024 at 10:35am

    ಇಂದು ಹಿಟ್​ ಮ್ಯಾನ್​ ಅಂದ್ರೆ ರೋಹಿತ್​ ಅಂದು ಯಾರು?

    ಹಿಟ್​ಮ್ಯಾನ್ ಎಂಬ ಟ್ಯಾಗ್​ ಲೈನ್ ಯಾರಿಗೆ ಬಂದಿತ್ತು ಗೊತ್ತಾ?

    ರೋಹಿತ್​ಗೆ ಹಿಟ್​ಮ್ಯಾನ್​ ಎಂಬ ಬಿರುದು ಕೊಟ್ಟಿದ್ದು ಯಾರು?

ರೋಹಿತ್​​ ಶರ್ಮಾ. ವಿಶ್ವ ಕ್ರಿಕೆಟ್​ನ ಹಿಟ್​ಮ್ಯಾನ್ ಅಂತಾನೇ ಫೇಮಸ್​​. ಬಹುತೇಕರು ಇದೇ ಹೆಸರಿನಿಂದ ಕರೀತಾರೆ. ಆದರೆ, ರೋಹಿತ್​ಗೂ ಮೊದಲು ಈ ನಿಕ್​ನೇಮ್ ಮತ್ತೊಬ್ಬ ಟೀಮ್ ಇಂಡಿಯಾ ಆಟಗಾರನಗಿತ್ತು. ಆ ಕುರಿತ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ರೋಹಿತ್ ಶರ್ಮಾ. ಟೀಮ್ ಇಂಡಿಯಾದ ಸಕ್ಸಸ್​ಫುಲ್ ಓಪನರ್. ಗ್ರೇಟೆಸ್ಟ್​ ಬ್ಯಾಟರ್​​ಗಳಲ್ಲಿ ಒಬ್ಬ​​. ಸ್ಫೋಟಕ ಬ್ಯಾಟಿಂಗ್​​ಗೆ ಹೆಸರುವಾಸಿಯಾದ ರೋಹಿತ್, ಹಿಟ್​ಮ್ಯಾನ್ ಅಂತಾನೇ ಫೇಮಸ್. ಇದಕ್ಕೆ ಕಾರಣ ರವಿ ಶಾಸ್ತ್ರಿ.

2013ರಲ್ಲಿ ಇಂಡೋ-ಆಸಿಸ್ ನಡುವಿನ ಏಕದಿನ ಪಂದ್ಯಕ್ಕೆ ಕಾಮೆಂಟೇಟರ್ ಆಗಿದ್ದ ಶಾಸ್ತ್ರಿ, ರೋಹಿತ್​ ಸಿಕ್ಸರ್​ನೊಂದಿಗೆ ದ್ವಿಶತಕ ಪೂರೈಸಿದಾಗ ಹಿಟ್​ಮ್ಯಾನ್​ ಅಂತ ಕರಿತಾರೆ. ಅಲ್ಲಿಂದ ರೋಹಿತ್​ಗೆ ಬಹುಪಾಲು ಫ್ಯಾನ್ಸ್​, ಹಿಟ್​ಮ್ಯಾನ್ ಅಂತಾನೇ ಕರೀತಾರೆ. ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ, ರೋಹಿತ್ ಶರ್ಮಾ ಆಗಮನಕ್ಕೂ ಮುನ್ನವೇ ಟೀಮ್ ಇಂಡಿಯಾದಲ್ಲಿ ಹಿಟ್​​ಮ್ಯಾನ್ ಒಬ್ಬರು ಇದ್ದರು. ಅವ್ರೇ ಮಹೇಂದ್ರ ಸಿಂಗ್ ಧೋನಿ.

ಹೌದು..! 2004ರಲ್ಲಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದ ಧೋನಿ, ಆರಂಭಿಕ ದಿನಗಳಲ್ಲಿ ಸ್ಫೋಟಕ ಬ್ಯಾಟಿಂಗ್​ ಹೆಸರು ವಾಸಿಯಾಗಿದ್ದರು. ಅದರಲ್ಲೂ 2005ರಲ್ಲಿ ಪಾಕ್ ಎದುರಿನ 6 ಪಂದ್ಯಗಳ ಏಕದಿನ ಸಿರೀಸ್​ನಲ್ಲಿ ಸಿಕ್ಸರ್​ಗಳ ಸುರಿಮಳೆ ಸುರಿಸಿದ್ದ ಧೋನಿಗೆ ಟೀಮ್ ಇಂಡಿಯಾದ ಹಿಟ್​ಮ್ಯಾನ್ ಎಂಬ ಟ್ಯಾಗ್​ ಲೈನ್ ಬಂದಿತ್ತು. ಆದ್ರೆ, ಅಂದು ಸೋಶಿಯಲ್ ಮೀಡಿಯಾಗಳು ಪ್ರಭಾವದ ಕಡಿಮೆ ಕಾರಣ, ಹಿಟ್​ಮ್ಯಾನ್ ಧೋನಿ ಎಂಬ ಟ್ರ್ಯಾಗ್​ ಲೈನ್​​ ಹೆಚ್ಚಾಗಿ ಬಳಕೆಗೆ ಬರಲಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್​ಗೂ ಮುನ್ನ ‘ಹಿಟ್​ ಮ್ಯಾನ್’ ಎಂಬ ಬಿರುದು ಸಿಕ್ಕಿದ್ದು ಯಾರಿಗೆ ಗೊತ್ತಾ? ಇದು ಯಾರಿಗೂ ಗೊತ್ತಿರದ ಸ್ಟೋರಿ

https://newsfirstlive.com/wp-content/uploads/2024/01/dhoni.jpg

Load More