/newsfirstlive-kannada/media/post_attachments/wp-content/uploads/2025/02/daali.jpg)
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿತ್ರದುರ್ಗ ಮೂಲದ ಡಾ. ಧನ್ಯತಾ ಕೊರಳಿಗೆ ಗುರು ಹಿರಿಯರ, ಅಭಿಮಾನಿಗಳ ಸಮ್ಮುಖದಲ್ಲಿ ತಾಳಿ ಕಟ್ಟಿದ್ದಾರೆ ಡಾಲಿ.
ಇದನ್ನೂ ಓದಿ: ಧನಂಜಯ-ಧನ್ಯತಾ ಮದುವೆ; ಪ್ರೀತಿಯ ಗೆಳೆಯ ಡಾಲಿಗೆ ವಸಿಷ್ಠ ಸಿಂಹ ಕೊಟ್ಟ ಗಿಫ್ಟ್ ಏನು?
ನಿನ್ನೆ ಆರತಕ್ಷತೆ ಇಂದು ಶುಭಲಗ್ನದಲ್ಲಿ ಮಾಂಗಲ್ಯ ಧಾರಣೆಯ ನೆರವೇರಿದ್ದು, ಆ್ಯಕ್ಟರ್ ಮತ್ತು ಡಾಕ್ಟರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾಲಿ ಮದುವೆಗೆ ಸಾವಿರಾರು ಮಂದಿ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು. ಅಲ್ಲದೇ ಡಾಲಿ ಧನಂಜಯ್ ಮದುವೆಗೆ ಹಲವು ಸ್ಯಾಂಡಲ್‌ವುಡ್ ಕಲಾವಿದರು ಆಗಮಿಸಿ ನವಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ನಟ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಅಮೂಲ್ಯ ಜಗದೀಶ್, ರಮ್ಯಾ, ರಕ್ಷಿತಾ, ಪ್ರೇಮ್ ದಂಪತಿ ಸೇರಿದಂತೆ ಎಲ್ಲರೂ ಮದುವೆಗೆ ಬಂದು ಧನಂಜಯ ಹಾಗೂ ಧನ್ಯತಾ ಅವರಿಗೆ ಶುಭ ಹಾರೈಸಿದ್ದಾರೆ.
ಆದ್ರೆ ಮುಖ್ಯವಾಗಿ ಡಾಲಿ ಮದುವೆಗೆ ಸ್ಯಾಂಡಲ್‌ವುಡ್ 6 ಸ್ಟಾರ್ಗಳು ಬಂದಿಲ್ಲ. ಹೌದು, ಈ ಹಿಂದೆ ಡಾಲಿ ತಮ್ಮ ಮದುವೆ ಆಮಂತ್ರಣವನ್ನು ಸ್ಯಾಂಡಲ್‌ವುಡ್, ರಾಜಕೀಯ ನಾಯಕರಿಗೆ ಕೊಟ್ಟಿದ್ದರು. ಆದ್ರೆ ಡಾಲಿ ಮದುವೆಗೆ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಡಿಂಪಲ್ ಕ್ವೀನ್ ರಚಿತಾ ರಾಮ್ ಅಲ್ಲದೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಂದಿಲ್ಲ.
ಇನ್ನೂ, ಇದಕ್ಕೆ ಕಾರಣ, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ ಅವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಬ್ಯುಸಿಯಾಗಿದ್ದಾರೆ ಹೀಗಾಗಿ ಬಂದಿಲ್ಲ. ಇನ್ನೂ, ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ಅದಕ್ಕಾಗಿ ಮದುವೆಗೆ ಬರೋದಕ್ಕೆ ಆಗಿಲ್ಲ.
ಇನ್ನೂ, ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಏಕೆ ಬಂದಿಲ್ಲ ಅಂತ ಇನ್ನೂ ಗೊತ್ತಾಗಿಲ್ಲ. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಡಾಲಿ ಆಹ್ವಾನ ನೀಡಿದ್ದರು. ಆದ್ರೆ ಸಿಎಂ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಎಂ ಸಿದ್ದರಾಮಯ್ಯ ಎಡಗಾಲು ಮಂಡಿ ನೋವು ಇರುವ ಕಾರಣ ಬರೋದಕ್ಕೆ ಆಗಿಲ್ಲ. ಅಲ್ಲದೇ ಡಿಸಿಎಂ ಡಿಕೆ ಶಿವಕುಮಾರ್ ಡಾಲಿ ಮದುವೆಗೆ ಏಕೆ ಬಂದಿಲ್ಲ ಅಂತ ಕಾರಣ ತಿಳಿದು ಬಂದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ