/newsfirstlive-kannada/media/post_attachments/wp-content/uploads/2025/01/BURJ-KHALIFA.jpg)
ಎಲ್ಲಿಯೇ ದುಬೈ ಬಗ್ಗೆ ಮಾತುಗಳು ಬರಲಿ ಮೊಟ್ಟ ಮೊದಲ ಬಾರಿಗೆ ನಮ್ಮ ತಲೆಗೆ ಬರೋದು ಬುರ್ಜ್ ಖಲೀಫಾ ಬಗ್ಗೆಯೇ. 828 ಮೀಟರ್ನಷ್ಟು ಎತ್ತರವಿರುವ ಈ ಬಿಲ್ಡಿಂಗ್ ತನ್ನ ವಿನ್ಯಾಸದಿಂದಲೇ ಜಗತ್ತಿ ನ ಕೋಟ್ಯಾಂತರ ಜನರನ್ನು ಸೆಳೆದಿದೆ. 163 ಅಂತಸ್ತಿನದ ಈ ಕಟ್ಟಡ ಜಗತ್ತಿನ ಅತ್ಯಂತ ಜನಪ್ರಿಯ ಕಟ್ಟಗಳಲ್ಲಿ ಒಂದು. 2004ರಲ್ಲಿ ಈ ಒಂದು ಕಟ್ಟಡವನ್ನು ಕಟ್ಟಲು ಶುರು ಮಾಡಿದ್ದು.2010ರಲ್ಲಿ ಇದರ ಕಾಮಗಾರಿ ಸಂಪೂರ್ಣವಾಗಿ ಮುಗಿಯಿತು. ಈ ಒಂದು ಅದ್ಭುತ ಕಟ್ಟಡದ ಮಾಲೀಕರು ಯಾರು ಎಂದು ತಿಳಿದಾಗ ನಿಮಗೆ ನಿಜಕ್ಕೂ ಆಶ್ಚರ್ಯವಾಗಬಹುದು. ವಿಶ್ವದ ಅತ್ಯಂತ ಎತ್ತರದ ಕಟ್ಟಡದ ಮಾಲೀಕರು ದುಬೈ ಕಿಂಗ್ ಇಲ್ಲವೇ ಅರಬ್ ರಾಜನಿರಬಹುದು ಎಂದೇ ಅನೇಕರು ಭಾವಿಸಿದ್ದಾರೆ. ಆದ್ರೆ ಅದು ಅಲ್ಲ.
ಇದನ್ನೂ ಓದಿ:ಕೆನಡಾದಲ್ಲಿ ಡಿಂಡಿಮಿಸಲಿದೆಯಾ ಕನ್ನಡದ ಸೊಗಡು; ಪ್ರಧಾನಿ ಸ್ಥಾನದ ರೇಸ್ನಲ್ಲಿ ನಾಡಿನ ಕುವರ
ಬುರ್ಜ್ ಖಲೀಫಾದ ಅಸಲಿ ಮಾಲೀಕರು ಇಮಾರ್ ಎಂಬ ಜನಪ್ರಿಯೂ ಎಸ್ಟೇಟ್ ಡವಲೆಪ್ಮೆಂಟ್ ಕಂಪನಿಯದು. ಮೂಲತಃ ಅರಬ್ನ ಮೂಲದ ಕಂಪನಿ ಇದಾಗಿದ್ದು ಈ ಇಮಾರ್ ಪ್ರಾಪರ್ಟಿಯ ಚೇರ್ಮೆನ್ ಮೊಹಮ್ಮದ್ ಅಲಬ್ಬರ್ ಅಂತ. ವಿಪರೀತ ದೂರದೃಷ್ಟಿ ನಾಯಕರಾಗಿರುವ ಇವರು ಈ ಬುರ್ಜ್ ಖಲೀಫಾ ನಿರ್ಮಾಣಕ್ಕೆ ಮೊದಲ ಅಡಿಗಲ್ಲು ಇಟ್ಟವರು.
ಇದನ್ನೂ ಓದಿ:ಲಾಸ್ ಎಂಜೆಲ್ಸ್ ಬೆಂಕಿಗೆ ಸೆಲೆಬ್ರೆಟಿಗಳ ಭವ್ಯ ಬಂಗಲೆಗಳು ಭಸ್ಮ; ಐಷಾರಾಮಿ ಮನೆಗಳು ಸುಟ್ಟು ಕರಕಲು
ಹಾಗಂತ ಬುರ್ಜ್ ಖಲೀಫಾ ಇವರಿಂದ ಮಾತ್ರ ನಿರ್ಮಾಣವಾಗಲಿಲ್ಲ. ಇಲ್ಲಿ ಅನೇಕರು ಕೈ ಜೋಡಿಸಿ ಈ ಒಂದು ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ಆ ಕಂಪನಿಗಳು ಯಾವುವು ಎಂಬುದನ್ನು ನೋಡಿದರೆ.
ಸ್ಯಾಮ್ಸಂಗ್ ಸಿ ಅಂಡ್ ಟಿ; ದಕ್ಷಿಣ ಕೊರಿಯಾದ ಸುಪ್ರಸಿದ್ಧ ಕಟ್ಟಡ ಕಾಮಗಾರಿ ಕಂಪನಿ ಇದು. ಈ ಕಂಪನಿಯೂ ಕೂಡ ಬುರ್ಜ್ ಖಲೀಫಾ ಕಟ್ಟಡ ನಿರ್ಮಾಣದಲ್ಲಿ ಟೆಕ್ನಿಕಲ್ ಸ್ಕಿಲ್ಸ್ ಹಾಗೂ ಹಲವು ಸೌಕರ್ಯಗಳನ್ನು ಕೊಡುಗೆ ನೀಡಿದೆ.
ಬೆಸಿಕ್ಸ್ (ಬೆಜ್ಲಿಯಂ): ಬುರ್ಜ್ ಖಲೀಫಾ ಕಟ್ಟಡ ನಿರ್ಮಾಣದಲ್ಲಿ ಬೆಜ್ಲಿಯಂನ ಈ ಬೆಸಿಕ್ಸ್ ಕಂಪನಿಯೂ ಕೂಡ ಕೈಜೋಡಿಸಿದೆ. ಹಲವು ರೀತಿಯ ತಾಂತ್ರಿಕ ಹಾಗೂ ಸೌಕರ್ಯಗಳನ್ನು ಕೊಡುಗೆಯಾಗಿ ನೀಡಿದೆ.
ಅರಬಟೆಕ್: ಇದು ಯುಎಇ ಮೂಲದ ಕಂಪನಿ. ಕಟ್ಟಡ ನಿರ್ಮಾಣದ ಪ್ರಕ್ರಿಯೆಯಲ್ಲಿ ಇದು ತನ್ನನ್ನು ತಾನು ತೊಡಗಿಸಿಕೊಂಡಿದೆ. ಅರಬ್ ದೇಶದಲ್ಲಿಯೇ ಅತಿಹೆಚ್ಚು ಪ್ರಸಿದ್ಧಿ ಪಡೆದಿರುವ ಕಟ್ಟಡ ನಿರ್ಮಾಣ ಕಂಪನಿಯಿದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ