ಚೊಚ್ಚಲ ಪಂದ್ಯದಲ್ಲೇ ಮಿಂಚಿನ ಆಟ.. 15 ಎಸೆತದಲ್ಲಿ 39 ರನ್​ ಚಚ್ಚಿದ ವಿಪ್ರಜ್ ನಿಗಮ್ ಯಾರು?

author-image
Ganesh
Updated On
ಚೊಚ್ಚಲ ಪಂದ್ಯದಲ್ಲೇ ಮಿಂಚಿನ ಆಟ.. 15 ಎಸೆತದಲ್ಲಿ 39 ರನ್​ ಚಚ್ಚಿದ ವಿಪ್ರಜ್ ನಿಗಮ್ ಯಾರು?
Advertisment
  • ಡೆಲ್ಲಿ ಕ್ಯಾಪಿಟಲ್ಸ್​ ಗೆಲ್ಲುವಲ್ಲಿ ಇವರ ಪಾತ್ರ ಪ್ರಮುಖ
  • 15 ಎಸೆತದಲ್ಲಿ 39 ರನ್​ ಬಾರಿಸಿದ ವಿಪ್ರಜ್ ನಿಗಮ್
  • ಎಲ್​ಎಸ್​ಜಿ ವಿರುದ್ಧ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್

ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು 1 ವಿಕೆಟ್‌ನಿಂದ ಸೋಲಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ (DC) 18ನೇ ಸೀಸನ್‌ನ ಅಭಿಯಾನ ಆರಂಭಿಸಿದೆ. ಲಕ್ನೋ ನೀಡಿದ್ದ 210 ರನ್‌ಗಳ ಗುರಿಯನ್ನು ಡೆಲ್ಲಿ 19.3 ಓವರ್‌ಗಳಲ್ಲಿ ಮುಟ್ಟಿತು.

210 ರನ್‌ಗಳ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಆರಂಭದಲ್ಲೇ ಆಘಾತ ಉಂಟಾಯಿತು. ಕೇವಲ 65 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿತ್ತು. ಅಶುತೋಷ್ ಶರ್ಮಾ (Ashutosh Sharma) ಆರನೇ ವಿಕೆಟ್‌ಗೆ ಟ್ರಿಸ್ಟಾನ್ ಸ್ಟಬ್ಸ್ (34) ಜೊತೆಗೂಡಿ 48 ರನ್‌ಗಳ ಪಾರ್ಟ್ನರ್​ಶಿಪ್ ಕಲೆ ಹಾಕಿದರು. 7ನೇ ವಿಕೆಟ್​ಗೆ ವಿಪ್ರಜ್ ನಿಗಮ್ (Vipraj Nigam) ಜೊತೆ 55 ರನ್‌ಗಳ ಪಾರ್ಟ್ನರ್​ಶಿಪ್ ಕಲೆ ಹಾಕಿದರು.
ವಿಶೇಷ ಅಂದ್ರೆ ವಿಪ್ರಜ್ ನಿಗಮ್​ಗೆ ಇದು ಚೊಚ್ಚಲ ಐಪಿಎಲ್ ಪಂದ್ಯವಾಗಿತ್ತು. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದರು. ದೆಹಲಿಗೆ 1 ವಿಕೆಟ್ ರೋಚಕ ಗೆಲುವು ಸಾಧಿಸುವಲ್ಲಿ ವಿಪ್ರಜ್ ಕೊಡುಗೆ ದೊಡ್ಡದಿದೆ. ವಿಪ್ರಜ್ 15 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿ 39 ರನ್ ಗಳಿಸಿದರು.

ಇದನ್ನೂ ಓದಿ: 6, 6, 6, 6, 6! ಅಶುತೋಷ್ ಸೂಪರ್ ಬ್ಯಾಟಿಂಗ್; ಗೆದ್ದೇ ಬಿಟ್ವಿ ಅನ್ಕೊಂಡಿದ್ದ LSGಗೆ ಶಾಕ್..!

publive-image

ವಿಕೆಟ್ ಬೇಟೆ..!

ವಿಪ್ರಜ್ ತಮ್ಮ ಚೊಚ್ಚಲ ಓವರ್‌ನಲ್ಲೇ ವಿಕೆಟ್ ಬೇಟೆಯಾಡಿದರು. ದಕ್ಷಿಣ ಆಫ್ರಿಕಾದ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಐಡೆನ್ ಮಾರ್ಕ್ರಾಮ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಎರಡನೇ ಓವರ್​ನಲ್ಲಿ ಮಿಚೆಲ್ ಮಾರ್ಷ್​, ವಿಪ್ರರಾಜ್​ಗೆ 25 ರನ್​ ಚಚ್ಚಿ ಬೌಲಿಂಗ್​ನಲ್ಲಿ ದುಬಾರಿ ಎನಿಸಿಕೊಂಡರು. ತಾವು ಎಸೆದ ಎರಡು ಓವರ್​​ನಲ್ಲಿ 35 ರನ್ ಬಿಟ್ಟುಕೊಟ್ಟರು.

ಯಾರು ವಿಪ್ರಜ್ ನಿಗಮ್..?

ವಿಪ್ರಜ್ ನಿಗಮ್ ಉತ್ತರ ಪ್ರದೇಶ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ. ಕಳೆದ ವರ್ಷವಷ್ಟೇ ಯುಪಿ ಪರ ಪದಾರ್ಪಣೆ ಮಾಡಿದ್ದಾರೆ. ವಿಪ್ರಜ್ ಯುಪಿ ಪ್ರೀಮಿಯರ್ ಲೀಗ್‌ನಲ್ಲೂ ಸಂಚಲನ ಮೂಡಿಸಿದ್ದರು. ಪರಿಣಾಮ ಐಪಿಎಲ್ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 50 ಲಕ್ಷ ರೂಪಾಯಿಗೆ ಖರೀದಿಸಿತ್ತು. ವಿಪ್ರಜ್ ಯುಪಿ ಪರ 3 ಪ್ರಥಮ ದರ್ಜೆ, 5 ಲಿಸ್ಟ್ ಎ ಮತ್ತು 7 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಒಟ್ಟು 25 ವಿಕೆಟ್‌ಗಳನ್ನು ಕಿತ್ತಿದ್ದಾರೆ.

ಇದನ್ನೂ ಓದಿ: ವಿನಯ್ ಗೌಡ, ರಜತ್​ ರಿಲೀಸ್​ ಕೇಸ್​ಗೆ ಟ್ವಿಸ್ಟ್​; ಏನಿದು ಪೊಲೀಸರ ವರಸೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment