newsfirstkannada.com

BBK10: ಈ ವಾರ ಬಿಗ್‌ಬಾಸ್‌ ಮನೆಯಿಂದ ಔಟ್ ಆಗಿದ್ದು ಇವರೇ! ಫಿನಾಲೆ ಟಿಕೆಟ್ ಸಿಕ್ಕಿದ್ದು ಯಾರಿಗೆ?

Share :

Published January 20, 2024 at 9:04pm

Update January 20, 2024 at 8:55pm

    ಕೊನೆಯ ವಾರಕ್ಕೆ ಕಾಲಿಟ್ಟ ಬಿಗ್​ಬಾಸ್​​ ಸೀಸನ್​ 10ರ ಕಂಟೆಸ್ಟಂಟ್ಸ್

    ಕೊನೆಗೂ ಬಿಗ್​ಬಾಸ್ ಫಿನಾಲೆ ಟಿಕೆಟ್ ಮಿಸ್ ಮಾಡಿಕೊಂಡ್ರಾ ಈ ಸ್ಪರ್ಧಿ? ​​

    ವರ್ತೂರು ಸಂತೋಷ್, ಕಾರ್ತಿಕ್, ನಮ್ರತಾ ಮಧ್ಯೆ ಟಫ್ ಫೈಟ್‌!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10 ಕೊನೆಯ ವಾರಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್​ಬಾಸ್​​ ಮನೆಯಲ್ಲಿ ಒಟ್ಟು 7 ಸ್ಪರ್ಧಿ ಉಳಿದುಕೊಂಡಿದ್ದಾರೆ. ಮೊನ್ನೆಯ ಸಂಚಿಕೆಯಲ್ಲಿ ರಾತ್ರೋರಾತ್ರಿ ತನಿಷಾ ಕುಪ್ಪಂಡ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದರು. ಇದೀಗ ಈ ವಾರದ ಎಲಿಮಿನೇಷನ್‌ನಲ್ಲಿ ಬಿಗ್‌ಬಾಸ್‌ ಮನೆಯಿಂದ ನಮ್ರತಾ ಗೌಡ ಅವರೇ ಆಚೆ ಬರೋ ಸಾಧ್ಯತೆಗಳಿವೆ.

ಇತ್ತೀಚಿನ ದಿನಗಳಲ್ಲಿ ನಮ್ರತಾ ಆಟ ಪ್ರೇಕ್ಷಕರಿಗೆ ಹಿಡಿಸಿತ್ತು. ಕಿಚ್ಚನ ಚಪ್ಪಾಳೆ, ಉತ್ತಮ ಗಿಟ್ಟಿಸಿಕೊಳ್ಳುವ ಮೂಲಕ ನಮ್ರತಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಿಗ್​ಬಾಸ್​​ ಮನೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ನಮ್ರತಾ ಅಚ್ಚರಿಯ ರೀತಿಯಲ್ಲಿ ಮನೆಯಿಂದ ಆಚೆ ಬರುವ ಲಕ್ಷಣಗಳು ಎದ್ದು ಕಾಣಿಸುತ್ತಿವೆ. ಫೈನಲ್ ರೌಂಡ್‌ನಲ್ಲಿ ವರ್ತೂರು ಸಂತೋಷ್, ನಮ್ರತಾ ಮಧ್ಯೆ ಟಫ್ ಫೈಟ್ ಏರ್ಪಟ್ಟಿದೆ.

ಸದ್ಯ ಮುಂದಿನ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿಯ ಹೆಸರನ್ನು ಕಿಚ್ಚ ಸುದೀಪ್ ಹೇಳಲಿದ್ದಾರೆ ಎಂದು ಕಾದುನೋಡಬೇಕಿದೆ. ಇಂದು ವಾರದ ಕತೆ ಕಿಚ್ಚನ ಜೊತೆಯಲ್ಲಿ ಕಿಚ್ಚ ಸುದೀಪ್​ ಖಡಕ್​​ ಎಂಟ್ರಿ ಆಗಿದೆ. ಬಳಿಕ ಬಿಗ್​ಬಾಸ್​ ಮನೆಗೆ ಅತಿಥಿಗಳಾಗಿ ಬಂದಿದ್ದ ಸ್ಪರ್ಧಿಗಳ ವಿರುದ್ಧ ಕಿಡಿಕಾರಿದ್ದಾರೆ. ನಮ್ರತಾ, ಡ್ರೋನ್ ಪ್ರತಾಪ್‌ ನೋವಾಗಿ ಕಾರಣವಾಗಿದ್ದ ಸ್ನೇಹಿತ್‌, ಇಶಾನಿ ಮೇಲೆಿ ಸುದೀಪ್ ಹೆಬ್ಬುಲಿಯಾಗಿ ಘರ್ಜಿಸಿದ್ದು ಹೈಲೆಟ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಈ ವಾರ ಬಿಗ್‌ಬಾಸ್‌ ಮನೆಯಿಂದ ಔಟ್ ಆಗಿದ್ದು ಇವರೇ! ಫಿನಾಲೆ ಟಿಕೆಟ್ ಸಿಕ್ಕಿದ್ದು ಯಾರಿಗೆ?

https://newsfirstlive.com/wp-content/uploads/2024/01/bigg-boss-2024-01-20T204418.361.jpg

Load More