newsfirstkannada.com

Missing Titanic sub: ಕೊನೆಗೂ ಮಿಸ್ಸಿಂಗ್ ಜಲಂತರ್ಗಾಮಿ ಏನಾಗಿದೆ ಎಂದು ತಿಳಿದುಕೊಂಡ ಅಮೆರಿಕ ಸೇನೆ

Share :

23-06-2023

    ಸಮುದ್ರದಲ್ಲಿ ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ಐವರು

    ಸಬ್ ಮರ್ಸಿಬಲ್ ಸ್ಫೋಟ ಆಗಿರುವುದು ಸ್ಪಷ್ಟಪಡಿಸಿದ ಅಮೆರಿಕದ ಸೇನೆ

    ಅದರಲ್ಲಿ ಪ್ರಯಾಣಿಸಿದ್ದ ಐವರು ಏನಾಗಿದ್ದಾರೆ ಎಂದು ತಿಳಿಸಿದ ಸೇನೆ

ಅಟ್ಲಾಂಟಿಕ್ ಸಮುದ್ರದ ಆಳದಲ್ಲಿನ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಣೆ ಮಾಡಲು ತೆರಳಿದ್ದ ಟೈಟಾನಿಕ್ ಸಬ್ ಮರ್ಸಿಬಲ್ ಸ್ಫೋಟಗೊಂಡಿದೆ ಎಂದು ಅಮೆರಿಕ ರಕ್ಷಣಾಪಡೆ ತಿಳಿಸಿದೆ. ಸಬ್ ಮರ್ಸಿಬಲ್ ಸ್ಫೋಟಗೊಂಡಿರುವುದನ್ನು ಯುಎಸ್​ ನೌಕಾಪಡೆಯ ಮೈಕ್ರೋಫೋನ್‌ಗಳು ಪತ್ತೆ ಹಚ್ಚಿವೆ ಎಂದು ಹೇಳಲಾಗಿದ್ದು, ಇದರಲ್ಲಿ ಪ್ರಯಾಣಿಸಿದ್ದ ಐವರು ದುರಂತ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 

ಸಬ್ ಮರ್ಸಿಬಲ್​ನಲ್ಲಿ ಪ್ರಯಾಣಿಸಿದ್ದ ಬ್ರಿಟಿಷ್ ಬಿಲಿಯನೇರ್ ಹಮೀಶ್‌ ಹಾರ್ಡಿಂಗ್, ಓಷಿಯನ್ ಗೇಟ್ ಎಕ್ಸ್‌ಪಿಡಿಯೇಷನ್ ಸ್ಥಾಪಕ ಸಿಇಓ ಸ್ಟಾಕಟನ್ ರುಶ್ ಪತ್ನಿ, ಪಾಕಿಸ್ತಾನದ ಬ್ಯುಸಿನೆಸ್ ಮೆನ್ ಶಾಹಜಾದ್ ದಾವೂದ್, 19 ವರ್ಷದ ಸುಲೇಮಾನ್ ದಾವೂದ್, ಫ್ರೆಂಚ್ ಡ್ರೈವರ್ ಪೌಲ್ ಹೆನ್ರಿ ನಾರ್ಗೋಲೆಟ್ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಸಬ್ ಮರ್ಸಿಬಲ್ ಅಟ್ಲಾಂಟಿಕ್ ಸಮುದ್ರದಲ್ಲಿ ಕಾಣೆಯಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಯುಎಸ್​ ನೇವಿ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ನೌಕಾಪಡೆಯ ಮೈಕ್ರೋಫೋನ್‌ಗಳನ್ನು ಕಾರ್ಯಾಚರಣೆಗಾಗಿ ಬಳಸಲಾಗಿತ್ತು. ಇದರಲ್ಲಿ ಸಬ್ ಮರ್ಸಿಬಲ್ ಸ್ಫೋಟ ಆಗಿದೆ ಎಂದು ಪತ್ತೆ ಹಚ್ಚಿವೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಅಧಿಕಾರಿಯೊಬ್ಬರು ವಾಲ್​ ಸ್ಟ್ರೀಟ್​ಗೆ ಮಾಹಿತಿ ನೀಡಿದ್ದಾರೆ ಅಂತಾ ವರದಿಯಾಗಿದೆ.

ಇದನ್ನು ಓದಿ: ಟೈಟಾನ್ ಸಬ್ ಮರ್ಸಿಬಲ್‌ನಲ್ಲಿ ಹೋದವರು ಯಾರು? ಮುಂದುವರಿದ ಶೋಧ; ಆ್ಯಕ್ಸಿಜನ್ ಲೆವೆಲ್ ಇನ್ನು 7 ಗಂಟೆಯಷ್ಟೇ ಬಾಕಿ

ಇದೇ ವೇಳೆ ಮೃತಪಟ್ಟ ಕುಟಂಬಸ್ಥರನ್ನು ಮಾತನಾಡಿಸಲಾಗಿದೆ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ಮರ್ಸಿಬಲ್​ನಲ್ಲಿ ಹೋಗಲು ಸಿಇಓ ಸ್ಟಾಕಟನ್ ರುಶ್ ಪತ್ನಿ ಹಾಗೂ ಸುಲೇಮಾನ್ ದಾವೂದ್​ಗೆ ಹೋಗಲು ಇಷ್ಟವಿರಲಿಲ್ಲ. ಅವರು ಭಯಗೊಂಡಿದ್ದರು. ಆದರೂ ಅದರಲ್ಲಿ ಪ್ರಯಾಣಿಸಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Missing Titanic sub: ಕೊನೆಗೂ ಮಿಸ್ಸಿಂಗ್ ಜಲಂತರ್ಗಾಮಿ ಏನಾಗಿದೆ ಎಂದು ತಿಳಿದುಕೊಂಡ ಅಮೆರಿಕ ಸೇನೆ

https://newsfirstlive.com/wp-content/uploads/2023/06/US_Submersible.jpg

Load More