ದೆಹಲಿ ಸಿಎಂ ರೇಸ್​ನಲ್ಲಿ ಐವರು.. ಯಾರಿಗೆ ಒಲಿಯಲಿದೆ ಇಂದ್ರಪ್ರಸ್ಥದ ಸಿಂಹಾಸನ!

author-image
Bheemappa
Updated On
ದೆಹಲಿ ಸಿಎಂ ರೇಸ್​ನಲ್ಲಿ ಐವರು.. ಯಾರಿಗೆ ಒಲಿಯಲಿದೆ ಇಂದ್ರಪ್ರಸ್ಥದ ಸಿಂಹಾಸನ!
Advertisment
  • ದೆಹಲಿ ಸೇರಿ ದೇಶದ 15 ರಾಜ್ಯದಲ್ಲಿ ಬಿಜೆಪಿ ನೇರ ಅಧಿಕಾರ!
  • ಭೋಜ್​ಪುರಿ ಸಿನಿರಂಗದ ಸೂಪರ್​​ ಸ್ಟಾರ್​ಗೆ ಸಿಎಂ ಸ್ಥಾನ?
  • ದೆಹಲಿಯಲ್ಲಿ ಜನರಿಂದ ‘ಆಪ್​’ರೇಷನ್​​, ಕಮಲಕ್ಕೆ ಸಿಂಹಾಸನ

70 ಕ್ಷೇತ್ರದಲ್ಲಿ 48 ಸ್ಥಾನದಲ್ಲಿ ಪ್ರಚಂಡ ಗೆಲುವು. 22 ಸ್ಥಾನಕ್ಕೆ ಕುಸಿದು ಬಿದ್ದ ಪೊರಕೆ ಪಾರ್ಟಿ, ಮೂಲೆ ಸೇರಿದೆ. ಕಾಂಗ್ರೆಸ್​ದ್ದಂತು ಅದ್ಭುತ ಸೊನ್ನೆ ಸಾಧನೆ. ಅದು ಹ್ಯಾಟ್ರಿಕ್​ ಬೇರೆ. ಇತ್ತ ಗೆದ್ದ ಸಂಭ್ರಮದಲ್ಲಿರುವ ಬಿಜೆಪಿ ಡೆಲ್ಲಿ ಗದ್ದುಗೆಯಲ್ಲಿ ಯಾರನ್ನ ಕೂರಿಸಲಿದೆ ಅನ್ನೋದೇ ಕುತೂಹಲ.

ದಿಲ್ಲಿಯಲ್ಲಿ ಆಪ್​ ಕಾ ಆಪರೇಷನ್​ ಆಗಿದೆ.. ಮಫ್ಲರ್​ ಮ್ಯಾನ್​​ ಕಟ್ಟಿದ್ದ ಜಾಡೂ ಈ ಬಾರಿ ಮೂಲೆ ಸೇರಿದೆ. ಡೆಲ್ಲಿಯಲ್ಲಿ ಕಾಂಗ್ರೆಸ್​​ ಹ್ಯಾಟ್ರಿಕ್​​ ಸೊನ್ನೆ ಸುತ್ತಿ, ಮಾನ ಮೂರು ಕಾಸಿಗೆ ಹರಾಜಾಗಿದೆ. 27 ವರ್ಷಗಳ ವನವಾಸ ಮುಗಿಸಿ ದಿಲ್ಲಿ ಜನರ ದಿಲ್​ ಗೆದ್ದ ಬಿಜೆಪಿ, ಭಾರೀ ಬಹುಮತದೊಂದಿಗೆ ಇಂದ್ರಪ್ರಸ್ಥದ ಸಿಂಹಾಸನ ಏರಿದೆ. ಕೇಜ್ರಿ ಕಟ್ಟಿದ್ದ ಕ್ರೇಜಿ, ವಾಲ್​​​​ ಧೂಳೀಪಟವಾಗಿದ್ದು, ಕಮಲ ಅರಳಿ ನಿಂತಿದೆ.

publive-image

‘ಆಪ್​’ ಕಾ ಅದಾಲತ್​ನಲ್ಲಿ ಜನರಿಂದ ‘ಜಾಡೂ’ ಸಾಫ್​​​!

ದೇಶದ ರಾಜಧಾನಿ ಡೆಲ್ಲಿಯಲ್ಲಿ ಹೊಸ ಚರಿತ್ರೆ ನಿರ್ಮಾಣ ಆಗಿದೆ. ಭಾರೀ ಮೆಜಾರಿಟಿ ಪಡೆದ ಬಿಜೆಪಿಯಲ್ಲಿ ಸಿಎಂ ರೇಸ್​​ ಶುರುವಾಗಿದೆ. ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ಗರಿಗೆದರಿದೆ. ಅರ್ಧ ಡಜನ್​​​ಗೂ ಹೆಚ್ಚು ನಾಯಕರು ಸಿಎಂ ಹುದ್ದೆಯ ರೇಸ್​​ನಲ್ಲಿದ್ದು, ಹೈಕಮಾಂಡ್​ ಮರ್ಜಿ ಮೇಲೆ ಕುರ್ಚಿ ಯಾರಿಗೆ ಅನ್ನೋದು ನಿರ್ಧಾರ ಆಗಲಿದೆ.

ಡೆಲ್ಲಿ ಸಿಂಹಾಸನ ರೇಸ್​​!

  • ಪರ್ವೇಶ್ ವರ್ಮಾ, ನವ ದೆಹಲಿ ಕ್ಷೇತ್ರ
  • ವಿಜೇಂದರ್ ಗುಪ್ತಾ, ರೋಹಿಣಿ ಕ್ಷೇತ್ರ
  • ಮಜೀಂದರ್​ ಸಿಂಗ್​ ಸಿರ್ಸಾ, ರಾಜೌರಿ ಗಾರ್ಡನ್​ ಕ್ಷೇತ್ರ
  • ಗೌತಮ್​ ದುಷ್ಯಂತ್, ಕರೋಲ್​ಬಾಗ್ ಕ್ಷೇತ್ರ
  • ಹರೀಶ್​ ಖುರಾನಾ, ಮೋತಿ ನಗರ

ಇದನ್ನೂ ಓದಿ:KPSC ಇಂದ ಕೃಷಿ ಇಲಾಖೆಯ 273 ಉದ್ಯೋಗಗಳಿಗೆ ಮತ್ತೆ ಅರ್ಜಿ ಆಹ್ವಾನ

publive-image

ಈ ಪಂಚ ನಾಯಕರ ಹೊರತುಪಡಿಸಿ, ಕೇಂದ್ರ ಮಾಜಿ ಸಚಿವೆ ಸ್ಮೃತಿ ಇರಾನಿಯನ್ನ ಡೆಲ್ಲಿ ಗದ್ದುಗೆಗೆ ತಂದು ಕೂರಿಸುವ ಪ್ಲ್ಯಾನ್​ ಹಿಂದಿನಿಂದಲೂ ಇದೆ. ಸತೀಶ್ ಉಪಾಧ್ಯಾಯ, ಆಶೀಷ್ ಸೂದ್, ಜಿತೇಂದ್ರ ಮಹಾಜನ್ ಇವರು ಕೂಡ ಸಿಎಂ ರೇಸ್​ನಲ್ಲಿ ಇದ್ದಾರೆ. ಲಾಂಗ್​​ ಪಾಲಿಟಿಕ್ಸ್​ ದೃಷ್ಟಿಯಿಂದ ಸುಷ್ಮಾ ಸ್ವರಾಜ್​ ಪುತ್ರಿ ಸಂಸದೆ ಬನ್ಸುರಿಗೂ ಲಕ್​​ ಇದೆ. ಇನ್ನು ಕಳೆದ ಬಾರಿ ಬಿಜೆಪಿಯ ಸಿಎಂ ಫೇಸ್​ ನಟ ಕಂ ಸಂಸದ ಮನೋಜ್​ ತಿವಾರಿ ಸಹ ರೇಸ್​ನಲ್ಲಿದ್ದಾರೆ. ಭೋಜ್​ಪುರಿ ಸಿನಿರಂಗದ ಸೂಪರ್​​ ಸ್ಟಾರ್​​ ಮನೋಜ್​​ ತಿವಾರಿ ಆಯ್ಕೆ ಆದಲ್ಲಿ ಬಿಹಾರ್​ನಲ್ಲಿ ಬಿಜೆಪಿಗೆ ಲಾಭ ತರಬಹುದು ಅನ್ನೋ ಲೆಕ್ಕಾಚಾರವೂ ಇದೆ.

ದೇಶದ 21 ರಾಜ್ಯಗಳಲ್ಲಿ ಡಬಲ್‌ ಇಂಜಿನ್‌ ಸರ್ಕಾರ!

ಇನ್ನು, ಆಮ್​ಆದ್ಮಿ ಭದ್ರಕೋಟೆ ಭೇದಿಸಿದ ಬಿಜೆಪಿ, ರಾಷ್ಟ್ರ ರಾಜಕಾರಣದ ಭೂಪಟದಲ್ಲಿ ಇನ್ನೊಂದು ರಾಜ್ಯ ತನ್ನ ಮಡಿಲಿಗೆ ಹಾಕಿಕೊಂಡಿದೆ. ಬಿಜೆಪಿ ಆಡಳಿತ ರಾಜ್ಯಗಳ ಸಂಖ್ಯೆ 15ಕ್ಕೆ ಏರಿಕೆ ಆಗಿದ್ರೆ, 6 ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ಇದೆ. ಕರ್ನಾಟಕ, ಹಿಮಾಚಲ, ತೆಲಂಗಾಣದಲ್ಲಿ ಕಾಂಗ್ರೆಸ್ ಇದ್ರೆ, ಕೇರಳ, ಪಂಜಾಬ್‌, ಜಮ್ಮು ಕಾಶ್ಮೀರ, ಜಾರ್ಖಂಡ್‌, ಬಂಗಾಳ, ತಮಿಳುನಾಡು, ಮಿಜೋರಂನಲ್ಲಿ ಬೇರೆ ಪಕ್ಷಗಳು ಅಧಿಕಾರದಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment