/newsfirstlive-kannada/media/post_attachments/wp-content/uploads/2024/03/SMRITI-IRANI-1.jpg)
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನಿಶ್ಚಿತವಾಗಿದೆ. ಈಗಾಗಲೇ 47 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿರುವ ಬಿಜೆಪಿ 10 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿದೆ. ಇದರ ಮಧ್ಯೆಯೇ ಈಗ ಬಿಜೆಪಿಯ ಮುಂದಿನ ಸಿಎಂ ಯಾರು ಎಂಬ ಬಗ್ಗೆ ಚರ್ಚೆ ಜೋರಾಗಿದೆ.
ನವದೆಹಲಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಅವರೇ ದೆಹಲಿಯ ನೂತನ ಸಿಎಂ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದರಂತೆಯೇ ಈಗ ಪರ್ವೇಶ್ ವರ್ಮಾ ಅಮಿತ್ ಶಾ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳಿದ್ದಾರೆ. ಆದ್ರೆ ಪರ್ವೇಶ್ ಬಳಿಕವೂ ದೆಹಲಿಯ ಸಿಎಂ ಗದ್ದುಗೆ ಏರುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.
ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಮೇಶ್ ಬಿಧುರಿ ಕೂಡ ಸಿಎಂ ಆಕಾಂಕ್ಷಿಯಾಗಿದ್ದರು ಆದ್ರೆ ಅವರು ಈಗ ಸರಿಸುಮಾರು ಒಂದು ಸಾವಿರ ಮತಗಳಿಂದ ಅತಿಶಿ ವಿರುದ್ಧ ಸೋತಿದ್ದರಿಂದ ಅವರು ಸಿಎಂ ಆಗುವ ಹಾದಿ ಮುಚ್ಚಿ ಹೋಗಿದೆ. ಹೀಗಾಗಿ ಪರ್ವೇಶ್ ವರ್ಮಾ ಅವರ ಹಾದಿ ಸುಗಮವಾಗಿದೆ ಎಂದು ಹೇಳಲಾಗುತ್ತಿದೆ ಆದ್ರೆ ಸಿಎಂ ರೇಸ್ನಲ್ಲಿ ಇವರ ಹೊರತಾಗಿ ಇನ್ನು ಅನೇಕ ಜನರ ಹೆಸರುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ದೆಹಲಿ ಚುನಾವಣೆಗೆ ಮೆಗಾ ಟ್ವಿಸ್ಟ್.. ಕೇಜ್ರಿವಾಲ್‌ಗೆ ಟಕ್ಕರ್ ಕೊಟ್ಟ ಪರ್ವೇಶ್ ವರ್ಮಾ ಯಾರು? ಸಿಎಂ ಆಗ್ತಾರಾ?
ಸಿಎಂ ರೇಸ್ನಲ್ಲಿ ಕೇಳಿ ಬರುತ್ತಿರುವ ಮತ್ತೊಂದು ಹೆಸರು ಅಂದ್ರೆ ಅದು ಸುಷ್ಮಾ ಸ್ವರಾಜ್ ಅವರ ಮಗಳು ಬನ್ಸುರಿ ಸ್ವರಾಜ್, ನವದೆಹಲಿಯಿಂದ ಮೊದಲ ಬಾರಿಗೆ ಎಂಪಿ ಆಗಿ ಲೋಕಸಭೆ ಪ್ರವೇಶಿಸಿರುವ ಬನ್ಸುರಿ ಸ್ವರಾಜ್ ಪಕ್ಷದೊಂದಿಗೆ ಅತ್ಯಾಪ್ತರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಇವರ ಹೆಸರು ಕೂಡ ಸಿಎಂ ರೇಸ್ನಲ್ಲಿ ಕೇಳಿ ಬರುತ್ತಿದೆ.
ಇನ್ನು ಬನ್ಸುರಿ ಸ್ವರಾಜ್ ಹೆಸರಿನ ಜೊತೆಗೆ ಕೇಳಿ ಬರುತ್ತಿರುವ ಮತ್ತೊಂದು ಅಚ್ಚರಿಯ ಹೆಸರು ಅಂದ್ರೆ ಅದು ಸ್ಮೃತಿ ಇರಾನಿ. 2024ರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಸ್ಮೃತಿ ಇರಾನಿಯವರನ್ನು ದೆಹಲಿ ಗದ್ದುಗೆಗೆ ತಂದು ಕೂರಿಸುವ ಪ್ಲ್ಯಾನ್ ಹಿಂದಿನಿಂದಲೂ ಬಿಜೆಪಿಯಲ್ಲಿ ನಡೆದಿದೆ.
ಇದನ್ನೂ ಓದಿ:BIG BREAKING ಅರವಿಂದ್ ಕೇಜ್ರಿವಾಲ್‌ಗೆ ಹೀನಾಯ ಸೋಲು..!
ಸ್ಮೃತಿ ಇರಾನಿ, ಬನ್ಸುರಿ ಸ್ವರಾಜ್ ಬಳಿಕ ಮತ್ತೊಬ್ಬ ಸಿಎಂ ಆಕಾಂಕ್ಷಿ ಅಂದ್ರೆ ಅದು ದುಶ್ಯಂತ ಗೌತಮ್ ಸದ್ಯ ಕರೋಲ್ಭಾಗ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ವಿಶೇಶ್ ರವಿಯರ ವಿರುದ್ಧ ಸ್ಪರ್ಧಿಸಿದ್ದಾರೆ. ಸದ್ಯದಲ್ಲಿರುವ ಟ್ರೆಂಡ್ನಲ್ಲಿ ಅವರು 8400 ಮತಗಳ ಅಂತರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಆದ್ರೆ ಇನ್ನೂ 5 ಸುತ್ತಿನ ಮತ ಎಣಿಕೆ ಕಾರ್ಯ ಬಾಕಿ ಇರುವುದರಿಂದ ಈಗಲೇ ಅವರ ಸೋಲು ಗೆಲುವಿನ ಬಗ್ಗೆ ಹೇಳಲು ಆಗುವುದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ