Advertisment

ಆರ್​​ಸಿಬಿ ಕ್ಯಾಪ್ಟನ್​​ ಆಗಲು ಇವರು ಸಮರ್ಥ ಆಟಗಾರ; ಸ್ಟಾರ್​ ಪ್ಲೇಯರ್​​ಗೆ ಬಂಪರ್​ ಆಫರ್​​

author-image
Ganesh Nachikethu
Updated On
RCB ಉಳಿಸಿಕೊಳ್ಳೋ ಇನ್ನೂ ಮೂವರು ಆಟಗಾರರು ಇವ್ರೇ! ಲಿಸ್ಟ್​ನಲ್ಲಿ ಅಚ್ಚರಿ ಹೆಸ್ರುಗಳು
Advertisment
  • ಬಹುನಿರೀಕ್ಷಿತ 2025ರ ಮೆಗಾ ಟೂರ್ನಿಗೆ ಭರ್ಜರಿ ತಯಾರಿ!
  • ಆರ್​ಸಿಬಿ ಮುಂದಿನ ಕ್ಯಾಪ್ಟನ್​​? ಯಾರು ಅನ್ನೋ ಚರ್ಚೆ ಶುರು
  • ತಂಡದ ನಾಯಕತ್ವದ ಪಟ್ಟಕ್ಕೇರಲು ಈ ಆಟಗಾರ ಬೆಸ್ಟ್​ ಚಾಯ್ಸ್​​

ಬಹುನಿರೀಕ್ಷಿತ 2025ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಲ್ ಬಲಿಷ್ಠ ತಂಡವನ್ನು ಕಟ್ಟಿದೆ. ಮುಂದಿನ ಸೀಸನ್​ಗೆ ಈಗಾಗಲೇ ತಯಾರಿ ಆರಂಭಿಸಿರುವ ಆರ್​ಸಿಬಿ ಟೀಮ್​ ಮುಂದಿನ ಕ್ಯಾಪ್ಟನ್​​? ಯಾರು ಅನ್ನೋ ಚರ್ಚೆ ಜೋರಾಗಿದೆ. ನಾಯಕತ್ವದ ಪಟ್ಟಕ್ಕೇರಲು ತಂಡದಲ್ಲಿ ಭಾರೀ ಪೈಪೋಟಿ ಇದೆ. ಕ್ಯಾಪ್ಟನ್ಸಿ ರೇಸ್​ನಲ್ಲಿ ಯಾರಿದ್ದಾರೆ? ಅನ್ನೋ ಕುತೂಹಲ ಇದೆ.

Advertisment

ಸದ್ಯ ಆರ್​​ಸಿಬಿ ಕ್ಯಾಪ್ಟನ್ಸಿ ರೇಸ್​ನಲ್ಲಿ ಈ ಮೂವರ ಹೆಸರು ಕೇಳಿ ಬಂದಿದೆ. ವಿರಾಟ್​ ಕೊಹ್ಲಿ ಕ್ಯಾಪ್ಟನ್ಸಿ ಮಾಡಲು ಹಿಂದೇಟು ಹಾಕಿದ್ರೆ ಮ್ಯಾನೇಜ್ಮೆಂಟ್​​ ಒಲವು ರಜತ್ ಪಾಟಿದಾರ್​ ಮೇಲಿದೆ. ಹಾಗಾಗಿ ಮುಂದಿನ ಸೀಸನ್​ಗೆ ಕ್ಯಾಪ್ಟನ್​ ಯಾರು ಆಗಬಹುದು? ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಲೇ ಇದೆ. ರಜತ್​ ಪಾಟಿದಾರ್​ ಬದಲಿಗೆ ಈ ಹಿರಿಯ ಆಟಗಾರನಿಗೆ ಆರ್​​ಸಿಬಿ ಕ್ಯಾಪ್ಟನ್ಸಿ ಪಟ್ಟ ಸಿಗಬಹುದು.

ಭುವಿಗೆ ಆರ್​​ಸಿಬಿ ಕ್ಯಾಪ್ಟನ್ಸಿ

ಸ್ವಿಂಗ್ ಮಾಸ್ಟರ್​ ಭುವನೇಶ್ವರ್ ಕುಮಾರ್. ಇವರು ಕೂಲ್ ಆ್ಯಂಡ್ ಕಾಮ್ ಕ್ಯಾಪ್ಟನ್ ಆಗೋದ್ರಲ್ಲಿ ಡೌಟೇ ಇಲ್ಲ. ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅನುಭವ ಹೊಂದಿರುವ ಈತ, ಟಿ20 ಫಾರ್ಮೆಟ್​ಗೆ ಹೇಳಿ ಮಾಡಿಸಿರುವ ಬೌಲರ್. ಎದುರಾಳಿ ಬ್ಯಾಟರ್​​ಗಳನ್ನು ಅದ್ಭುತವಾಗಿ ರೀಡ್ ಮಾಡಬಲ್ಲರು. ಈಗಾಗಲೇ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಮುನ್ನಡೆಸಿರೋ ಇವರು ಆರ್​​ಸಿಬಿ ಕ್ಯಾಪ್ಟನ್​ ಆಗಬಹುದು.

ಆರ್​ಸಿಬಿ ತಂಡದ ಮೊದಲ ಆಯ್ಕೆ ವಿರಾಟ್​ ಕೊಹ್ಲಿ​​. ಇದಕ್ಕೆ ಕಾರಣ ಇವರು ಆರ್​ಸಿಬಿಯ ಯಶಸ್ವಿ ನಾಯಕ. ಇಷ್ಟು ಮಾತ್ರವಲ್ಲ ಡೇರ್ ಡೆವಿಲ್​​ ಕ್ಯಾಪ್ಟನ್ಸಿ ಗುಣವೂ ಇವರಿಗಿದೆ. ಲೀಡರ್​ಶಿಪ್ ಕ್ವಾಲಿಟಿ ಹೊಂದಿರೋ ಕೊಹ್ಲಿ ಎಲ್ಲರಿಗೂ ರೋಲ್ ಮಾಡೆಲ್. ಹೀಗಾಗಿ ಮತ್ತೆ ವಿರಾಟ್​ ನಾಯಕತ್ವದ ಪಟ್ಟಕ್ಕೇರಿದ್ರೆ, ಪ್ರತಿ ಆಟಗಾರ ಕಪ್ ಗೆಲ್ಲಬೇಕೆಂಬ ಎಫರ್ಟ್ ಹಾಕೋದ್ರಲ್ಲಿ ಡೌಟೇ ಇಲ್ಲ. ಒಂದು ವೇಳೆ ಕೊಹ್ಲಿ ಕ್ಯಾಪ್ಟನ್​ ಆಗಲಿಲ್ಲ ಎನ್ನುವುದಾದರೆ ಆಗ ಭುವಿ ಆರ್​​ಸಿಬಿ ಬೆಸ್ಟ್​ ಅಂಡ್​ ಫಸ್ಟ್​ ಚಾಯ್ಸ್​ ಆಗಬಹುದು.

Advertisment

ಇದನ್ನೂ ಓದಿ: RCB ಕ್ಯಾಪ್ಟನ್ಸಿ ಬಗ್ಗೆ ಬಿಗ್​ ಅಪ್ಡೇಟ್​​; ನಾಯಕತ್ವಕ್ಕೆ ಈ ಮೂವರ ಮಧ್ಯೆ ಭಾರೀ ಪೈಪೋಟಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment