ಆರ್​​ಸಿಬಿ ಕ್ಯಾಪ್ಟನ್ಸಿಗಾಗಿ ರಾಹುಲ್​​, ಸೂರ್ಯ ಮಧ್ಯೆ ಪೈಪೋಟಿ.. ಮುಂದಿನ ಕ್ಯಾಪ್ಟನ್​ ಯಾರು?

author-image
Ganesh Nachikethu
Updated On
IPL 2025: ಭಾರತದ T20 ಕ್ಯಾಪ್ಟನ್​ ಸೂರ್ಯಕುಮಾರ್​​ ಯಾದವ್​ಗೆ ಆರ್​​ಸಿಬಿಯಿಂದ ಬಿಗ್​ ಆಫರ್​​​​
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಭರ್ಜರಿ ತಯಾರಿ
  • ಮುಂದಿನ ಸೀಸನ್ ಕಪ್​​​ ಗೆಲ್ಲಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪಣ..!
  • ಆರ್​​ಸಿಬಿ ಕ್ಯಾಪ್ಟನ್ಸಿಗಾಗಿ ಸೂರ್ಯಕುಮಾರ್​​, ಕೆ.ಎಲ್​ ರಾಹುಲ್​ ಮಧ್ಯೆ ಪೈಪೋಟಿ

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ ಆರ್​​ಸಿಬಿ ತಂಡದ ಮೆಂಟರ್​ ಮತ್ತು ಬ್ಯಾಟಿಂಗ್​ ಕೋಚ್​ ಆಗಿ ದಿನೇಶ್​ ಕಾರ್ತಿಕ್​ ಅವರನ್ನು ನೇಮಿಸಿದೆ. ಈ ಮಧ್ಯೆ ಮತ್ತೋರ್ವ ಸ್ಫೋಟಕ ಬ್ಯಾಟರ್​ ಆರ್​​ಸಿಬಿಗೆ ಎಂಟ್ರಿ ಆಗೋ ಸೂಚನೆ ಸಿಕ್ಕಿದೆ.

ವರ್ಷದ ಕೊನೆ ಡಿಸೆಂಬರ್​ನಲ್ಲಿ 2025ರ ಐಪಿಎಲ್​​​​ ಮೆಗಾ ಆಕ್ಷನ್​ ನಡೆಯಲಿದೆ. ಮೆಗಾ ಆಕ್ಷನ್​ನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲು ಆರ್​​ಸಿಬಿ ಮುಂದಾಗಿದೆ. ಕ್ವಾಲಿಟಿ ಆಟಾಗರರ ಖರೀದಿ ಮಾಡಿ ಬಲಿಷ್ಠ ತಂಡ ಕಟ್ಟು ಪ್ಲಾನ್​ ಆರ್​​ಸಿಬಿಯದ್ದು. ಹಾಗಾಗಿ ಕೆ.ಎಲ್​ ರಾಹುಲ್​ ಅವರ ಮೇಲೆ ಆರ್​​ಸಿಬಿ ಕಣ್ಣಿಟ್ಟಿದೆ.

ಇನ್ನು, ಕೆ.ಎಲ್​ ರಾಹುಲ್​ ಅವರೊಂದಿಗೆ ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್​​ ಯಾದವ್​ ಅಥವಾ ಇಶಾನ್​ ಕಿಶನ್​​ ಅವರನ್ನು ಖರೀದಿ ಮಾಡಬೇಕು ಎಂಬುದು ಆರ್​​ಸಿಬಿ ಪ್ಲಾನ್​​. ಮುಂದಿನ ಸೀಸನ್​ ವೇಳೆಗೆ ಮುಂಬೈ ತಂಡವನ್ನು ಸೂರ್ಯಕುಮಾರ್​ ಯಾದವ್​​ ಬಿಡೋದು ಪಕ್ಕಾ ಆಗಿದೆ. ಹಾಗಾಗಿ ಸೂರ್ಯ ಅವರನ್ನು ಆರ್​​ಸಿಬಿ ಖರೀದಿ ಮಾಡೋ ಸಾಧ್ಯತೆ ಇದೆ.

ಕ್ಯಾಪ್ಟನ್ಸಿಗಾಗಿ ರಾಹುಲ್​​, ಸೂರ್ಯ ಮಧ್ಯೆ ಪೈಪೋಟಿ!

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​. ಇವರು ಇದೇ ತಿಂಗಳು 13ನೇ ತಾರೀಕು 40 ವರ್ಷಕ್ಕೆ ಕಾಲಿಟ್ಟರು. ಹಾಗಾಗಿ ಫಾಫ್​​ಗೆ ಕೊಕ್​ ಕೊಟ್ಟು, ರಾಹುಲ್​ ಅವರನ್ನು ಕ್ಯಾಪ್ಟನ್​ ಮಾಡಲು ಆರ್​​ಸಿಬಿ ಪ್ಲಾನ್​ ಮಾಡಿಕೊಂಡಿದೆ. ಸದ್ಯ ಸೂರ್ಯಕುಮಾರ್​​ ಯಾದವ್​ ಭಾರತ ಟಿ20 ಕ್ರಿಕೆಟ್​ ತಂಡದ ಕ್ಯಾಪ್ಟನ್​ ಆಗಿದ್ದು, ಇವರು ಆರ್​​ಸಿಬಿ ತಂಡದ ನಾಯಕರಾಗಬಹುದು.

ಆರ್​​ಸಿಬಿ ಬ್ಯಾಕ್​ ಎಂಡ್​ ಪ್ಲಾನ್​ ಏನು..?

ಒಂದು ವೇಳೆ ಕೆ.ಎಲ್​ ರಾಹುಲ್​ ಅವರನ್ನು ಖರೀದಿ ಮಾಡಲು ಆಗದೆ ಹೋದಲ್ಲಿ ಸೂರ್ಯಗೆ ಮಣೆ ಹಾಕುವುದು. ಕೆ.ಎಲ್​​ ರಾಹುಲ್​ ಕ್ಯಾಪ್ಟನ್​​ ಆಗದೆ ಹೋದ್ರೆ ಸೂರ್ಯಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟುವುದು.

ಇದನ್ನೂ ಓದಿ: ಆರ್​​​ಸಿಬಿ ತಂಡಕ್ಕೆ ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್​ ಎಂಟ್ರಿ.. ಬೆಂಗಳೂರಿಗೆ ಬಂತು ಆನೆಬಲ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment