Advertisment

ಟೆಸ್ಟ್​ ಕ್ರಿಕೆಟ್​ಗೆ ರೋಹಿತ್​ ನಿವೃತ್ತಿ? ಟೀಮ್​​ ಇಂಡಿಯಾ ಮುಂದಿನ ಕ್ಯಾಪ್ಟನ್​ ಯಾರು?

author-image
Ganesh Nachikethu
Updated On
ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​​; ರೋಹಿತ್​ನಿಂದ ಮಹತ್ವದ ಅಪ್ಡೇಟ್​!
Advertisment
  • ಟೀಮ್​​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ?
  • ರೋಹಿತ್​ ಶರ್ಮಾ ನಿವೃತ್ತಿ ಟೀಮ್​ ಇಂಡಿಯಾ ಕ್ಯಾಪ್ಟನ್​ ಯಾರು?
  • ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್ ಅಲನ್ ಬಾರ್ಡರ್ ಹೊಸ ಭವಿಷ್ಯ

ಟೀಮ್​​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ರೋಹಿತ್ ಶರ್ಮಾ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲವಾದ್ರೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸದ್ಯ ರೋಹಿತ್​ ಶರ್ಮಾ ಕಳಪೆ ಫಾರ್ಮ್​ ಸಮಸ್ಯೆ ಎದುರಿಸುತ್ತಿದ್ದು, ಇವರ ನಂತರ ಟೀಮ್​ ಇಂಡಿಯಾ ಕ್ಯಾಪ್ಟನ್​ ಯಾರು? ಅನ್ನೋ ಬಗ್ಗೆ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್ ಅಲನ್ ಬಾರ್ಡರ್ ಮಾತಾಡಿದ್ದಾರೆ.

Advertisment

ಬಾರ್ಡರ್​ ಏನಂದ್ರು?

ಇನ್ನು, ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಬಾರ್ಡರ್, ಜಸ್ಪ್ರೀತ್ ಬುಮ್ರಾ ಅದ್ಭುತವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕರಾಗಿ ತಮ್ಮ ಸಾಮರ್ಥ್ಯ ಕೂಡ ತೋರಿಸಿದ್ದರು. ಇವರು ಟೀಮ್​ ಇಂಡಿಯಾ ಮುಂದಿನ ಕ್ಯಾಪ್ಟನ್​ ಆಗಬಹುದು ಎಂದರು.

publive-image

ಜಸ್ಪ್ರೀತ್ ಬುಮ್ರಾ ಎಲ್ಲರಿಗಿಂತಲೂ ಭಿನ್ನ. ಹೆಚ್ಚು ಪರಿಣಾಮಕಾರಿ ಬೌಲಿಂಗ್​ ಮಾಡಬಲ್ಲ ಆಟಗಾರ. ಇವರ ವಿಶಿಷ್ಟ ಬೌಲಿಂಗ್ ಆಕ್ಷನ್​​ ಯಾರಿಗೂ ಅರ್ಥ ಆಗಲ್ಲ. ಬುಮ್ರಾ ಬೌಲಿಂಗ್​ಗೆ ಆಡಲು ಎಲ್ಲಾ ಬ್ಯಾಟರ್​ಗಳಿಗೂ ಕಷ್ಟ ಎಂದು ಬಾರ್ಡರ್​ ಹಾಡಿಹೊಗಳಿದ್ರು.

ಮ್ಯಾಚ್​ ವಿನ್ನರ್​ ಬುಮ್ರಾ

ಪರ್ತ್ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ತಮ್ಮ ನಾಯಕತ್ವದ ಕೌಶಲ್ಯದಿಂದ ಎಲ್ಲರ ಗಮನ ಸೆಳೆದಿದ್ರು. ಟೀಮ್​ ಇಂಡಿಯಾ ಬರೋಬ್ಬರಿ 295 ರನ್‌ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಬುಮ್ರಾ 8 ವಿಕೆಟ್‌ ತೆಗೆದು ಮ್ಯಾಚ್​ ವಿನ್ನರ್​ ಆಗಿದ್ರು.

Advertisment

ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಬುಮ್ರಾ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 3 ಟೆಸ್ಟ್ ಪಂದ್ಯಗಳಲ್ಲಿ ಇವರು 21 ವಿಕೆಟ್‌ ಪಡೆದಿದ್ದಾರೆ. ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ 6 ವಿಕೆಟ್‌ ಕಬಳಿಸಿದ್ದರು. ಈ ಮೂಲಕ ಬ್ರಿಸ್ಬೇನ್‌ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಲು ಭಾರತಕ್ಕೆ ನೆರವಾಗಿದ್ದರು.

ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್​: ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಕೆ.ಎಲ್​ ರಾಹುಲ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment