/newsfirstlive-kannada/media/post_attachments/wp-content/uploads/2024/08/KL-Rahul_Gambhir_Rohit.jpg)
ಭಾರತ ಕ್ರಿಕೆಟ್ ತಂಡ ವಿಶ್ವದ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ತಂಡಗಳಲ್ಲಿ ಒಂದು. ಈ ಯಶಸ್ಸಿನ ಹಿಂದಿನ ಪ್ರಮುಖ ಕಾರಣ ಸಮರ್ಥ ನಾಯಕತ್ವ. ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ಕ್ಯಾಪ್ಟನ್​ ರೋಹಿತ್​ ಶರ್ಮಾ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಈಗಾಗಲೇ ರೋಹಿತ್​ ಶರ್ಮಾ ಅವರಿಗೆ 37 ವರ್ಷ ಆಗಿದ್ದು, ಸದ್ಯದಲ್ಲೇ ನಿವೃತ್ತಿ ಆಗಬಹುದು. ಹಾಗಾಗಿ ಇವರ ನಂತರ ಭಾರತ ತಂಡವನ್ನು ಲೀಡ್​ ಮಾಡೋದು ಯಾರು ಅನ್ನೋದರ ಬಗ್ಗೆ ಚರ್ಚೆ ಶುರುವಾಗಿದೆ.
ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಬಲ್ಲ ಆಟಗಾರರು
ಕೆ.ಎಲ್. ರಾಹುಲ್
ಭಾರತ ತಂಡದ ಮೊದಲ ಆಯ್ಕೆ ಕೆ.ಎಲ್. ರಾಹುಲ್. ಇವರು ತಮ್ಮ ಬ್ಯಾಟಿಂಗ್​ನಿಂದಲೇ ಹೆಸರು ವಾಸಿಯಾದರು. ತಮ್ಮ ಶಾಂತ ಸ್ವಭಾವದಿಂದಲೂ ಗಮನ ಸೆಳೆದವರು. ಇವರು ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ತಂಡವನ್ನು ಲೀಡ್​ ಮಾಡಿದ್ದಾರೆ. ಇವರು ಟೀಮ್​ ಇಂಡಿಯಾ ಎಲ್ಲಾ ಆಟಗಾರರೊಂದಿಗೆ ಚೆನ್ನಾಗಿ ಇದ್ದು, ಮುಂದಿನ ಕ್ಯಾಪ್ಟನ್​ ಆಗಬಲ್ಲರು.
ರಿಷಬ್​ ಪಂತ್​
ಇನ್ನು, ರಿಷಬ್​ ಪಂತ್ ತಮ್ಮ ಆಕ್ರಮಣಕಾರಿ ಆಟದಿಂದಲೇ ಗಮನ ಸೆಳೆದವರು. ಇವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಲೀಡ್​ ಮಾಡಿದ ಅನುಭವ ಇದೆ. ಈಗ ರಾಹುಲ್​ ನಂತರ ಲಕ್ನೋ ತಂಡದ ಕ್ಯಾಪ್ಟನ್​ ಆಗಲು ಮುಂದಾಗಿದ್ದಾರೆ. ಇವರು ಯುವ ಬ್ಯಾಟರ್​ ಆಗಿದ್ದು, ದೂರದೃಷ್ಟಿಯಿಂದ ಪಂತ್​ ಅವರನ್ನು ನಾಯಕತ್ವಕ್ಕೆ ಪರಿಗಣಿಸಬಹುದು.
/newsfirstlive-kannada/media/post_attachments/wp-content/uploads/2025/01/KL_RAHUL_PANT-1.jpg)
ಶ್ರೇಯಸ್ ಅಯ್ಯರ್
ಮುಂಬೈ ಕ್ರಿಕೆಟ್​​ ವಲಯದಿಂದ ಬಂದ ಸೂಪರ್​ ಸ್ಟಾರ್​ ಬ್ಯಾಟರ್​​ ಶ್ರೇಯಸ್​ ಅಯ್ಯರ್​​. ಇವರು ಕೆಕೆಆರ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಲೀಡ್​ ಮಾಡಿದ ಅನುಭವ ಹೊಂದಿದ್ಧಾರೆ. ಶಾಂತ ಸ್ವಭಾವಕ್ಕೆ ಹೆಸರು ವಾಸಿ ಆಗಿದ್ದಾರೆ. ಇವರು ಕೂಡ ಭಾರತದ ಕ್ಯಾಪ್ಟನ್​ ಆಗಬಹುದು.
ಟೀಮ್​ ಇಂಡಿಯಾ ಕ್ಯಾಪ್ಟನ್​ ಆಯ್ಕೆ ಮಾಡಲು ಕೆಲವು ಪ್ರಮುಖ ಅಂಶಗಳನ್ನು ಪರಿಗಣಿಸಬೇಕು. ಆಟಗಾರನ ಅನುಭವ ಮತ್ತು ತಂಡದೊಂದಿಗೆ ಹೊಂದಾಣಿಕೆ ಹೇಗೆ? ಸರಿಯಾದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇದ್ಯಾ? ಸಂವಹನ ಕೌಶಲ್ಯ ಮತ್ತು ತಂಡದ ಸದಸ್ಯರೊಂದಿಗೆ ಸಂಬಂಧ ಹೇಗಿದೆ? ಒತ್ತಡದ ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಮೇಲೆ ನಿರ್ಧಾರವಾಗಲಿದೆ.
ಇದನ್ನೂ ಓದಿ:ನಿಂಬೆ ಹಣ್ಣಿನ ರಸ ಸೇವನೆಯಿಂದ ದೇಹಕ್ಕಾಗೋ ಲಾಭವೇನು? ನೂರಾರು ಸಮಸ್ಯೆಗಳಿಗೆ ಇದು ಮದ್ದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us