newsfirstkannada.com

ತಾರಕಕ್ಕೇರಿದ ಮಂಡ್ಯ ರಾಜಕೀಯ.. ಸುಮಲತಾ ವಿರುದ್ಧ ಹೆಚ್​​ಡಿಕೇನಾ..? ನಿಖಿಲ್ಲಾ..?

Share :

Published January 13, 2024 at 6:02am

Update January 13, 2024 at 6:03am

    ಕಷ್ಟದ ಕಾಲದಲ್ಲಿ ನಿಂತ ಕುಮಾರಣ್ಣ ಎಂದು ಕಾಲಿಗೆ ನಮಸ್ಕಾರ

    ಮೈಸೂರು-ಕೊಡಗು ಕ್ಷೇತ್ರ ಟಿಕೆಟ್​​ ಸಮರಕ್ಕೆ ಸಿಂಹ ಚೆಕ್ ​ಮೇಟ್​​!

    ಮಂಡ್ಯ ಅಖಾಡದಿಂದ ಸುಮಲತಾ ಮತ್ತೆ ಕಣಕ್ಕಿಳಿಯೋದು ಪಕ್ಕಾ

ಮಂಡ್ಯ: ಲೋಕಸಭಾ ಸಮರದ ಸೇನಾನಿಗಳ ಅಯ್ಕೆಗೆ ಕಸರತ್ತು ಜೋರಾಗಿದೆ. ಮಾಜಿ ಸಿಎಂ ಹೆಚ್​​ಡಿಕೆ ಅವರ ಬಿಡದಿ ಫಾರ್ಮ್​​ ಹೌಸ್​​, ರಾಜಕೀಯ ಚಟುವಟಿಕೆಯ ಪ್ರವಾಸಿ ಕ್ಷೇತ್ರವಾಗಿದೆ. ಬಿಜೆಪಿಯ ಸರಣಿ ನಾಯಕರು ಹೆಚ್​​ಡಿಕೆ ಬಳಿ ಮದ್ದು ಪಡೆಯುತ್ತಿದ್ದಾರೆ. ಆದ್ರೆ, ದಳಪತಿಗಳ ಗಟ್ಟಿ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ, ಮಂಡೆ ಬಿಸಿ ಮಾಡ್ತಿದೆ. ಇತ್ತ, ಬಿಜೆಪಿಗೆ ರೆಡ್ಡಿ, ಸಂಕಟ ಹೆಚ್ಚಿಸಿದ್ದಾರೆ.

ಸಿಲಿಕಾನ್​ ಸಿಟಿ ಬೆಂಗಳೂರು ರಾಜ್ಯ ರಾಜಕೀಯದ ವಠಾರ. ಆದ್ರೆ, ಬಿಡದಿಯ ಫಾರ್ಮ್​​ ಹೌಸ್​​ ಈಗ ಪವರ್​​ ಸ್ಟೇಷನ್​​ ಆಗಿ ಬದಲಾಗಿದೆ. ಬಿಜೆಪಿ, ಜೆಡಿಎಸ್​​ನ ರಾಜಕೀಯ ನಿರ್ಣಾಯಕ ನಿರ್ಧಾರ ಕೈಗೊಳ್ಳುವ ಶಕ್ತಿ ಕೇಂದ್ರವಾಗಿದೆ. ಜೆಡಿಎಸ್​​ ನಾಯಕರ ಪಾಲಿನ ತವರು ಮನೆ ಆದ ಈ ಬಿಡದಿ ಫಾರ್ಮ್​ ಹೌಸ್​ಗೆ ಬಿಜೆಪಿ ನಾಯಕರಿಗೂ ಈ ಮದ್ದಿನ ಅರಮನೆ, ಟ್ರಬಲ್​​ ಶೂಟರ್​​ ರೀತಿ ಕಾಣಿಸ್ತಿದೆ. ಲೋಕಸಭೆ ಎಲೆಕ್ಷನ್​​​ ಹೊತ್ತಲ್ಲೇ ಬಿಜೆಪಿಯ ಸಾಲು ಸಾಲು ನಾಯಕರು, ದಳಪತಿ ಭೇಟಿಗೆ ಸಾಲುಗಟ್ಟುತ್ತಿದ್ದಾರೆ.

ಕಷ್ಟದ ಕಾಲದಲ್ಲಿ ನಿಂತ ಕುಮಾರಣ್ಣ ಎಂದು ಕಾಲಿಗೆ ನಮಸ್ಕಾರ!

ಬಿಡದಿಯ ಫಾರ್ಮ್​ ಹೌಸ್​​ನಲ್ಲಿ ಸಂಸದ ಪ್ರತಾಪ್​​ ಸಿಂಹ ಪ್ರತ್ಯಕ್ಷರಾಗಿದ್ದಾರೆ. ಮಾಜಿ ಸಿಎಂ ಹೆಚ್​​ಡಿಕೆಯನ್ನ ಭೇಟಿ ಆಗಿರೋದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣ ಆಗಿದೆ. ಕುಮಾರಸ್ವಾಮಿಗೆ ಹೂಗುಚ್ಛ ನೀಡಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಅಚ್ಚರಿ ಮೂಡಿಸಿದ್ದಾರೆ. ಕಷ್ಟ ಕಾಲದಲ್ಲಿ ಸತ್ಯ ಸಂಗತಿಯನ್ನು ಜನರ ಮುಂದಿಟ್ಟು ಬೆನ್ನಿಗೆ ನಿಂತ ಕುಮಾರಣ್ಣನಿಗೆ ಧನ್ಯವಾದ ತಿಳಿಸಿದೆ ಅಂತ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಆರು ದಿನಗಳ ಹಿಂದಷ್ಟೇ ಮಾಜಿ ಸಚಿವ ಸಿ.ಟಿ ರವಿ ಸಹ ಹೆಚ್​​ಡಿಕೆ ಭೇಟಿ ಆಗಿದ್ದರು. ದಳಪತಿ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜೆಡಿಎಸ್ ಸದ್ಯ ಎನ್‌ಡಿಎ ಭಾಗ. ಈ ಭೇಟಿ ಸೌಹಾರ್ದಯುತ. ಯಾರೂ ಕದ್ದುಮುಚ್ಚಿ ಭೇಟಿ ಆಗ್ತಿಲ್ಲ ಅಂತ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ಗ್ರಾ. ಕ್ಷೇತ್ರದಿಂದ ಹಿಂದೆ ಸರಿದ್ರಾ ಯೋಗೇಶ್ವರ್​​?

ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದತ್ತವೇ ಹೆಚ್ಚು ಚಿತ್ತ ನೆಟ್ಟಿದೆ. ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ನಾಯಕರು ಹಿಂದೇಟು ಹಾಕ್ತಿದ್ದಾರೆ. ಇದಕ್ಕೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸಹ ಸೇರ್ಪಡೆ ಆಗಿದ್ದಾರೆ. ಅಲ್ಲದೆ, ಈ ಕ್ಷೇತ್ರದಿಂದ ಮಾಜಿ ಸಿಎಂ ಹೆಚ್​​​ಡಿಕೆ ಬೇಕಿದ್ರೆ ಸ್ಪರ್ಧಿಸಲಿ ಅಂತ ಸಲಹೆ ಕೊಟ್ಟು ನುಣುಚಿಕೊಂಡಿದ್ದಾರೆ.

ಮಂಡ್ಯ ಅಖಾಡದಿಂದ ಸುಮಲತಾ ಮತ್ತೆ ಕಣಕ್ಕಿಳಿಯೋದು ಪಕ್ಕಾ!

ಇನ್ನು, ಮಂಡ್ಯ ಟಿಕೆಟ್​ ವಿಚಾರಕ್ಕೆ ಕಗ್ಗಂಟು ಮುಂದುವರಿದಿದೆ. ಈ ಸಲ ಸುಮಲತಾ ಸ್ಪರ್ಧೆ ಖಚಿತ ಎಂದು ಗೊತ್ತಾಗಿದೆ. ಹೀಗಾಗಿ ಜೆಡಿಎಸ್‌ಗೆ ಟೆನ್ಷನ್‌ ಡಬಲ್​​​ ಆಗಿದ್ದು, ನಿನ್ನೆ ಮಧ್ಯರಾತ್ರಿವರೆಗೂ ಜೆಡಿಎಸ್‌ನಲ್ಲಿ ಚರ್ಚೆ ನಡೆದಿದೆ. ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಆಗಿದ್ದು, ಸೋತ ಕಣದಲ್ಲೇ ಗೆಲ್ಲಲು ಕುಮಾರಸ್ವಾಮಿ ಅಗತ್ಯತೆಯ ಅಭಿಪ್ರಾಯ ವ್ಯಕ್ತವಾಗಿದೆ. ಆದ್ರೆ, ಕಳೆದ ಬಾರಿ ಸುಮಲತಾ ಪರವಿದ್ದ ಅನುಕಂಪ, ನಿಖಿಲ್​​ ಪರ ತಿರುಗಿದೆ ಅನ್ನೋ ಅಭಿಪ್ರಾಯ ಕ್ಷೇತ್ರದಲ್ಲಿ ಕಾಣಿಸ್ತಿದ್ದು, ನಿಖಿಲ್‌ಗೆ ಮತ್ತೆ ಕಣಕ್ಕಿಳಿಸಲು ಹೆಚ್‌ಡಿಕೆ ಪ್ಲಾನ್‌ ರೂಪಿಸಿದ್ದಾರೆ.

ರಾಮುಲು ಜೊತೆಗಿನ ಸಂಬಂಧ ಮುಗಿದ ಅಧ್ಯಾಯ!

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮರ್ಮಾಘಾತ ನೀಡಿದ ಗಣಿಧಣಿ ಪಾರ್ಟಿ, ಈಗ ಲೋಕಸಭೆಗೂ ಮತ್ತೆ ಸನ್ನದ್ಧವಾಗಿದೆ. ಬಾಗಲಕೋಟೆ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ ಕ್ಷೇತ್ರದಲ್ಲಿ ಕೆಆರ್​ಪಿಪಿ ಕಣಕ್ಕಿಳಿಯಲಿದೆ ಅಂತ ಸಾರಿದ್ದಾರೆ. ಇನ್ನು, ಬಿಜೆಪಿ ಮತ್ತು ರಾಮುಲು ಸ್ನೇಹದ ಬಗ್ಗೆ ಮಾತ್ನಾಡಿದ ರೆಡ್ಡಿ, ಅವೆಲ್ಲವೂ ಈ ಮುಗಿದು ಹೋದ ಅಧ್ಯಾಯ ಅಂತ ಫುಲ್​​ಸ್ಟಾಪ್​​ ಇಟ್ಟಿದ್ದಾರೆ.

ಒಟ್ಟಾರೆ, ಲೋಕಸಭೆ ಚುನಾವಣೆ​​ಗೆ ದಿನಗಳು ಸಮೀಪಿಸ್ತಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದ್ಕಡೆ ಬಿಡದಿಯ ಫಾರ್ಮ್​​ಹೌಸ್​​ ಮತ್ತು ಕೊಪ್ಪಳದ ಗಂಗಾವತಿ ಶಕ್ತಿ ಕೇಂದ್ರಗಳಾಗಿ ಕಾಣಸಿಗ್ತಿವೆ. ಒಂದ್ಕಡೆ ಬಿಜೆಪಿಗೆ ಉಸಿರು ತುಂಬುವ ಜಾಗೆ ಆದ್ರೆ, ಇನ್ನೊಂದ್ಕಡೆ ಬಿಜೆಪಿಯ ಅಂತ್ಯಕ್ಕೆ ಮುಹೂರ್ತ ಇಡ್ತಿರುವ ಕ್ಷೇತ್ರವಾಗಿ ಕಾಣಸಿಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾರಕಕ್ಕೇರಿದ ಮಂಡ್ಯ ರಾಜಕೀಯ.. ಸುಮಲತಾ ವಿರುದ್ಧ ಹೆಚ್​​ಡಿಕೇನಾ..? ನಿಖಿಲ್ಲಾ..?

https://newsfirstlive.com/wp-content/uploads/2024/01/HDK_Sumalatha.jpg

Load More