/newsfirstlive-kannada/media/post_attachments/wp-content/uploads/2024/10/Ratan-Tata-1-2.jpg)
ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ಹಾಗೂ ಪರೋಪಕಾರಕ್ಕೆ ಮತ್ತೊಂದು ಹೆಸರಾಗಿದ್ದ ರತನ್ ಟಾಟಾ ಅವರು ದೇಶದ ಜನರನ್ನು ಅಗಲಿ ಹಲವಾರು ತಿಂಗಳುಗಳೇ ಕಳೆದಿವೆ. ರತನ್ ಟಾಟಾ ಅವರು ಸಾವಿಗೂ ಮುನ್ನ ಉಯಿಲು ಬರೆದಿದ್ದರು. ಯಾವ ಯಾವ ಸಂಪತ್ತು ಯಾರಿಗೆ ಸೇರಬೇಕು ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದರು. ಆದ್ರೆ ರತನ್ ಟಾಟಾ ಅವರ ವೈಯಕ್ತಿಕ ಸಂಪತ್ತು ಎನ್ಡೌಮೆಂಟ್ ಫೌಂಡೇಷನ್ನಲ್ಲಿರುವ ಹಾಗೂ ಟ್ರಸ್ಟ್ನ 15 ಸಾವಿರ ಕೋಟಿ ರೂಪಾಯಿಯ ಸಂಪತ್ತು ಯಾರು ನಿರ್ವಹಣೆ ಮಾಡಬೇಕೆಂದು ಉಯಿಲಿನಲ್ಲಿ ಸ್ಪಷ್ಟನೆ ಇಲ್ಲ ಹೀಗಾಗಿ ಇದೊಂದು ದೊಡ್ಡ ಗೊಂದಲದ ಗೂಡಾಗಿ ಪರಿಣಮಿಸಿದೆ.
ಇದನ್ನೂ ಓದಿ: Pushpalatha: ಕಳಚಿದ ಮತ್ತೊಂದು ಹಿರಿಯ ಕೊಂಡಿ.. ಖ್ಯಾತ ನಟಿ ಪುಷ್ಪಲತಾ ನಿಧನ
ಸದ್ಯ ಈ ಒಂದು ಸಂಪತ್ತಿನ ನಿರ್ಹಹಣೆ ಯಾರು ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿಯೇ, ಗೊಂದಲದ ನಿವಾರಣೆಗೆ ಸುಪ್ರೀಂಕೋರ್ಟ್ ನಿವೃತ್ತ ಸಿಜೆಐ ನೇತೃತ್ವದಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಕ್ಲಾಸ್ ರೂಮ್ನಲ್ಲೇ ವಿದ್ಯಾರ್ಥಿ ಜೊತೆ ಮದುವೆ.. ಲೇಡಿ ಪ್ರೊಫೆಸರ್ಗೆ ಬಿಗ್ ಶಾಕ್! ಏನಾಯ್ತು?
ರತನ್ ಟಾಟಾ ಎನ್ಡೌಮೆಂಟ್ ಫೌಂಡೇಷನ್, ರತನ್ ಟಾಟಾ ಎನ್ಡೌಮೆಂಟ್, ಟ್ರಸ್ಟ್ನ್ನು ರತನ್ ಟಾಟಾ ಅವರು ಸ್ಥಾಪಿಸಿದ್ದರು. ಚಾರಿಟಿ, ಸಮಾಜ ಸೇವೆ ಚಟುವಟಿಕೆಗಳಿಗೆ ಹಣ ನೀಡಲು ಈ ಫೌಂಡೇಷನ್ ಹಾಗೂ ಟ್ರಸ್ಟ್ ಸ್ಥಾಪಿಸಲಾಗಿತ್ತು. ಇವೆರೆಡು ಸಂಸ್ಥೆಗಳು ಟಾಟಾ ಸನ್ಸ್ನಿಂದ ಸಂಪೂರ್ಣ ಸ್ವತಂತ್ರಗೊಂಡಿದ್ದಂತವುಗಳು. ಹೀಗಾಗಿ ಈ ಫೌಂಡೇಷನ್ ಹಾಗೂ ಟ್ರಸ್ಟಟ್ಗೆ ನಿರ್ದೇಶಕರನ್ನು ನೇಮಿಸಬೇಕು. ಹೊಸ ನಿರ್ದೇಶಕರು ಈ ಎರಡನ್ನು ನಿರ್ವಹಿಸಿಕೊಂಡು ಹೋಗಬೇಕು ಆ ನಿಟ್ಟಿನಲ್ಲಿ ಒಂದು ಕೆಲಸವಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ