/newsfirstlive-kannada/media/post_attachments/wp-content/uploads/2025/04/Philip_Salt-1-1.jpg)
ಐಪಿಎಲ್ ಮರು ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಇವತ್ತಿನಿಂದ ಐಪಿಎಲ್ ಮಹಾ ಯುದ್ಧ ಮತ್ತಷ್ಟು ರೋಚಕವಾಗಲಿದೆ. ಮರು ಆರಂಭದ ಐಪಿಎಲ್ನಲ್ಲಿ ಶುಭಾರಂಭದ ಕನಸು ಕಾಣ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇವತ್ತೇ ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡೋ ತವಕದಲ್ಲಿದೆ. ಆದ್ರೆ, ಅತ್ತ ಸೇಡಿನ ಸಮರಕ್ಕೆ ಕಾದು ಕುಳಿತಿದೆ. ಈ ಇಬ್ಬರ ಕನಸು ಭಗ್ನಗೊಳಿಸಲು ಮತ್ತೊಂದೆಡೆ ಮಳೆರಾಯನು ಹೊಂಚು ಹಾಕಿದ್ದಾನೆ.
8 ದಿನಗಳ ಬಳಿಕ ಐಪಿಎಲ್ ಮಹಾ ಸಂಗ್ರಾಮದ ಮರು ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಮರು ಆರಂಭದ ಮೊದಲ ಪಂದ್ಯದಲ್ಲಿ ಮತ್ತದೇ ಕೊಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲ್ ಎಸೆಯುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಬ್ಯಾಟಲ್ನಲ್ಲಿ ಆರ್ಸಿಬಿ ಎದುರಿನ ಸೇಡಿಗೆ ಕೊಲ್ಕತ್ತಾ ಸನ್ನದ್ಧವಾಗಿದ್ರೆ, ಇತ್ತ ಗೆಲುವಿನ ನಾಗಲೋಟದ ಕನಸು ಕಾಣ್ತಿರುವ ಆರ್ಸಿಬಿ, ಇವತ್ತೇ ಪ್ಲೇ ಆಫ್ ನೀಡಲು ಹಾತೊರೆಯುತ್ತಿದೆ.
ಇಂದು ಕಿಂಗ್ ಕೊಹ್ಲಿಯ ಜೊತೆಗಾರ ಯಾರು..?
ಇವತ್ತು ಕೊಹ್ಲಿ ಜೊತೆ ಇನ್ನಿಂಗ್ಸ್ ಯಾರು ಆರಂಭಿಸ್ತಾರೆ ಅನ್ನೋದೆ ಯಕ್ಷಪ್ರಶ್ನೆ. ಯಾಕಂದ್ರೆ, ಐಪಿಎಲ್ ಮುಂದೂಡಿಕೆಗೂ ಮುನ್ನ ಫಿಲ್ ಸಾಲ್ಟ್ ಅಲಭ್ಯತೆಯಲ್ಲಿ ಆಡಿದ್ದ ಬೆಥಲ್ ಸಿಕ್ಕ ಅವಕಾಶದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಆದ್ರೀಗ ಪವರ್ ಹಿಟ್ಟರ್ ಫಿಲ್ ಸಾಲ್ಟ್ ಕೂಡ ಫಿಟ್ ಆಗಿದ್ದಾರೆ. ಹೀಗಾಗಿ ಮ್ಯಾನೇಜ್ಮೆಂಟ್ ಬೆಥೆಲ್ನ ಮುಂದುವರೆಸುತ್ತಾ.? ಸಾಲ್ಟ್ಗೆ ಚಾನ್ಸ್ ನೀಡುತ್ತಾ.? ಅನ್ನೋ ಪ್ರಶ್ನೆ ಸಹಜವಾಗೇ ಕಾಡ್ತಿದೆ. ಆದ್ರೆ, ಇವರಿಬ್ಬರಲ್ಲಿ ಯಾರೇ ಇನ್ನಿಂಗ್ಸ್ ಓಪನ್ ಮಾಡಿದ್ರೂ, ಸಾಲಿಡ್ ಓಪನಿಂಗ್ ಸಿಗೋದು ಫಿಕ್ಸ್. ಸೋ ನೋ ಟೆನ್ಶನ್..
ರಜತ್ ಪಟಿದಾರ್ ಫಿಟ್.. 3ನೇ ಕ್ರಮಾಂಕಕ್ಕೆ ಯಾರು..?
ಇಂಜರಿಯಿಂದ ಬಳಲಿದ್ದ ಕ್ಯಾಪ್ಟನ್ ರಜತ್ ಪಟಿದಾರ್ ಫಿಟ್ ಆಗಿದ್ದಾರೆ. ಆದ್ರೆ, ಮಹತ್ವದ ಪಂದ್ಯಗಳ ದೃಷ್ಟಿಯಿಂದ ರೆಸ್ಟ್ ನೀಡಿದರು ಅಚ್ಚರಿ ಇಲ್ಲ. ಅಕಸ್ಮಾತ್ ರಜತ್ ಹೊರಗುಳಿಯುವುದಾದ್ರೆ, ಜಿತೇಶ್ ಶರ್ಮಾ ತಂಡವನ್ನ ಮುನ್ನಡೆಸಲಿದ್ದಾರೆ. ಆದ್ರೆ, ಕನ್ನಡಿಗ ಪಡಿಕ್ಕಲ್ರಿಂದ ತೆರವದ 3ನೇ ಕ್ರಮಾಂಕ್ಕೆ ಭಾರೀ ಕಾಂಪಿಟೇಷನ್ ನಡೀತಿದೆ. ಒಂದ್ಕಡೆ ಮಯಾಂಕ್ ಸ್ಥಾನ ತುಂಬುವ ಭರವಸೆಯಲ್ಲಿದ್ದರೆ. ಮತ್ತೊಂದೆಡೆ ಸ್ವಸ್ಥಿಕ್ ಚಿಕಾರ ಮುಂಚೂಣಿ ರೇಸ್ನಲ್ಲಿದ್ದಾರೆ. ಹೀಗಾಗಿ 3ನೇ ಕ್ರಮಾಂಕದಲ್ಲಿ ಆಡೋದು ಯಾರು ಎಂಬ ಪ್ರಶ್ನೆ ಫ್ಯಾನ್ಸ್ ಕ್ಯೂರಿಯಾಸಿಟಿ ಹೆಚ್ಚಿಸಿದೆ.
ಟಿಮ್ ಡೇವಿಡ್, ಶೆಫರ್ಡ್ ಸೆಂಟರ್ ಆಫ್ ಅಟ್ರಾಕ್ಷನ್!
ಡೇಂಜರಸ್ ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್. ಇವತ್ತಿನ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್ ಆಗೋದ್ರಲ್ಲಿ ಡೌಟೇ ಇಲ್ಲ. ಡೆತ್ ಓವರ್ಗಳಲ್ಲಿ ಎದುರಾಳಿ ಬೌಲರ್ನ ಚಿಂದಿ ಉಡಾಯಿಸಲಿರುವ ಈ ಡೆಡ್ಲಿ ಬ್ಯಾಟರ್ಸ್, ಇವತ್ತು ಸಿಕ್ಸರ್ಗಳ ಸುನಾಮಿ ಸೃಷ್ಟಿಸಿದ್ರೆ. ಕೊಲ್ಜತ್ತಾ ಕಂಗಾಲ್ ಆಗೋಗೋದು ಪಕ್ಕಾ.
ಇದನ್ನೂ ಓದಿ:IPL ಟೀಮ್ ಓನರ್ ಇಂದ ತಿಮ್ಮಪ್ಪನಿಗೆ ಭಾರೀ ಮೌಲ್ಯದ ಚಿನ್ನ, ವಜ್ರ ಖಚಿತ ಆಭರಣಗಳು ದಾನ
ಜೋಶ್ ಅಲಭ್ಯತೆಯಲ್ಲಿ ಬೌಲಿಂಗ್ ವಿಭಾಗಕ್ಕೆ ಅಗ್ನಿಪರೀಕ್ಷೆ!
ಇವತ್ತಿ ಪಂದ್ಯಕ್ಕೆ ವಿಕೆಟ್ ಟೇಕರ್ ಜೋಶ್ ಹೇಜಲ್ವುಡ್ ಅಲಭ್ಯತೆ ಕಾಡಲಿದೆ. ಹೀಗಾಗಿ ಸೌತ್ ಆಫ್ರಿಕಾ ಮಿಸೈಲ್ ಲುಂಗಿ ಎನ್ಗಿಡಿ, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಸಂಘಟಿತ ದಾಳಿ ನಡೆಬೇಕಾದ ಸವಾಲು ಇದೆ. ಈ ತ್ರಿವಳಿ ವೇಗಿಗಳ ಜೊತೆಗೆ ಕೃನಾಲ್ ಪಾಂಡ್ಯ, ಸುಯಾಶ್ ಮ್ಯಾಜಿಕ್ ಸ್ಪೆಲ್ ಮಾಡಿದ್ರೆ. ಕೊಲ್ಕತ್ತಾ ಖಲ್ಲಾಸ್ ಆಗೋದು ಗ್ಯಾರಂಟಿ. ಆದ್ರೆ, ಆ ತಂಡವನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳವಂತಿಲ್ಲ. ಯಾಕಂದ್ರೆ, ದೈತ್ಯ ಆಟಗಾರರ ಪಡೆಯೇ ಕೊಲ್ಕತ್ತಾ ತಂಡದಲ್ಲಿದೆ.
ಚಿನ್ನಸ್ವಾಮಿಯಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿಗೆ ಅಪಾಯ..!
ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ಎದುರು ಗೆದ್ದು ಬೀಗಿದ್ದ ಆರ್ಸಿಬಿ, ಚಿನ್ನಸ್ವಾಮಿಯಲ್ಲಿ ಸುಲಭಕ್ಕೆ ಸದೆಬಡೆಯೋ ಲೆಕ್ಕಾಚಾರದಲ್ಲಿದೆ. ಆದ್ರೆ, ಇದು ಅಷ್ಟು ಸುಲಭದಲ್ಲ. ಯಾಕಂದ್ರೆ, ಚಿನ್ನಸ್ವಾಮಿಯಲ್ಲಿ ಕೋಲ್ಕತ್ತಾ ಆಡಿರುವ ಕಳೆದ 5 ಪಂದ್ಯಗಳಲ್ಲಿ ಸೋಲನ್ನೇ ನೋಡಿಲ್ಲ. 2015ರಲ್ಲಿ ಕೊನೆ ಬಾರಿಗೆ ಆರ್ಸಿಬಿ ಎದುರು ಸೋತಿದ್ದ ಕೊಲ್ಕತ್ತಾ, ಆ ನಂತರದ 5 ಚಿನ್ನಸ್ವಾಮಿ ಪಂದ್ಯಗಳಲ್ಲೂ ಗೆದ್ದಿದೆ. ಇನ್ಫ್ಯಾಕ್ಟ್_ ಚಿನ್ನಸ್ವಾಮಿಯಲ್ಲಿ 18 ಪಂದ್ಯಗಳ ಪೈಕಿ ಕೇವಲ 6ರನ್ನಷ್ಟೇ ಸೋತಿರುವ ಕೆಕೆಆರ್, ಆರ್‌ಸಿಬಿಗೆ ಮುಳ್ಳಾದರು ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ