/newsfirstlive-kannada/media/post_attachments/wp-content/uploads/2025/01/ROHIT_BUMRHA.jpg)
ಇಂಡಿಯಾ ಕ್ರಿಕೆಟ್ ಟೀಮ್ ಈಗ ಟೆಸ್ಟ್ ಸಿರೀಸ್ನಲ್ಲಿ ಮುನ್ನುಗುವ ಸಮಯ ಬಂದಾಗಿದೆ. ಆದರೇ ಟೆಸ್ಟ್ ನಾಯಕನಾಗಿ ರೋಹಿತ್ ಶರ್ಮಾ ಅವ್ರೇ ಇರ್ತಾರೆ ಅಂದುಕೊಂಡಿದ್ದವರಿಗೆ, ಮೇ 7ರಂದು ರೋಹಿತ್ ಬಿಗ್ ಶಾಕ್ ಕೊಟ್ಟಿದ್ದರು. ಆ ಶಾಕ್ನಿಂದ ಹೊರ ಬರುತ್ತಾ, ಬಿಸಿಸಿಐಗೆ ಮತ್ತೊಂದು ನಿರ್ಧಾರ ಕೈಗೊಳ್ಳೋ ಮುನ್ನವೇ, ಕೊಹ್ಲಿ ಟೆಸ್ಟ್ ನಿವೃತ್ತಿ ಎಂದು ಮತ್ತೊಂದು ಶಾಕ್ ಕೊಟ್ಟಿದ್ದರು. ಈಗ ಈ ಬಿಸಿಸಿಐಗೆ ಟೆಸ್ಟ್ ಲೀಡರ್ಗಾಗಿ ಮತ್ತೊಂದು ಹೆಸರನ್ನ ಸಲಹೆ ಮಾಡಲಾಗಿದೆ. ಅದು ಬೇಱರು ಅಲ್ಲಾ.. ಟೀಮ್ಗೆ ಬಲಗೈ ಬಂಟ ಜಸ್ಪ್ರೀತ್ ಬುಮ್ರಾ.
ಜಸ್ಪ್ರೀತ್ ಬುಮ್ರಾ ಟೆಸ್ಟ್ ಟ್ರ್ಯಾಕ್ ರೆಕಾರ್ಡ್ ಹೇಗಿದೆ ಗೊತ್ತಾ?
ಈ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸಿರೀಸ್ಗೆ ಜಸ್ಪ್ರೀತ್ ಬುಮ್ರಾ ಅವರನ್ನ, ಟೆಸ್ಟ್ ನಾಯಕರನ್ನಾಗಿ ನೇಮಿಸಬೇಕು ಎಂದು ಮಾಜಿ ಕ್ರಿಕೆಟಿಗ ಮದನ್ ಲಾಲ್ ಸಲಹೆ ಕೊಟ್ಟಿದ್ದಾರೆ. ಬುಮ್ರಾ ಅವರ ಟ್ರ್ಯಾಕ್ ರೆಕಾರ್ಡ್ ಆಧಾರದ ಮೇಲೆ ಅವರೇ ಈ ಬಾರಿಯ ಟೆಸ್ಟ್ ಕ್ರಿಕೆಟ್ಗೆ ಲೀಡರ್ ಆಗಿ ಸೂಕ್ತ ಅನ್ನೋ ಅಭಿಪ್ರಾಯವನ್ನ 1983ರ ವಿಶ್ವಕಪ್ ವಿಜೇತ ಭಾರತದ ತಂಡದ ಸದಸ್ಯ, ಮದನ್ ಲಾಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
31 ವರ್ಷದ ಬುಮ್ರಾ.. ಈ ಹಿಂದೆ 2022 ರಲ್ಲಿ ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮರು ನಿಗದಿಯ ಐದನೇ ಟೆಸ್ಟ್‌ನಲ್ಲಿ, ಮತ್ತು 2024-25ರ ಬಾರ್ಡರ್ -ಗವಾಸ್ಕರ್ ಟ್ರೋಫಿಯಲ್ಲಿ ಈ ಎರಡೂ ಮ್ಯಾಚ್ಗಳಲ್ಲಿ ಭಾರತವನ್ನ ಮುನ್ನಡೆಸಿದ್ದರು. ಬುಮ್ರಾ ನಾಯಕತ್ವದಲ್ಲೇ, ಕಳೆದ ನವೆಂಬರ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ, ಭಾರತ ಆಸ್ಟ್ರೇಲಿಯಾ ವಿರುದ್ಧ 295 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು ನೆನಪಿದೆ. ಇದು ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಬ್ಲಾಕ್ಬಸ್ಟರ್ ಗೆಲುವಾಗಿತ್ತು.
ಫಿಟ್ ಇದ್ದರೆ.. ಲಭ್ಯವಿದ್ದರೇ.. ಬುಮ್ರಾ ಈಸ್ ಬೆಸ್ಟ್ ಟೆಸ್ಟ್ ಲೀಡರ್!
ಇಲ್ಲಿವರೆಗೆ ಜಸ್ಪ್ರೀತ್ ಬುಮ್ರಾ ಭಾರತವನ್ನ 3 ಟೆಸ್ಟ್‌ಗಳಲ್ಲಿ ಮುನ್ನಡೆಸಿರೋ ಹಿಸ್ಟರಿ ಇದೆ. ಬುಮ್ರಾ ನಾಯಕನಾಗಿ ಮೂರು ಟೆಸ್ಟ್ ಪಂದ್ಯಗಳಿಂದ 15 ವಿಕೆಟ್‌ಗಳನ್ನ ಕಬಳಿಸಿದ್ದು, ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 18-6-30-5 ಬೆಸ್ಟ್ ಪರ್ಫಾರ್ಮ್ ಕೊಟ್ಟಿದ್ದರು.
ಹಾಗಾಗಿ ಬುಮ್ರಾ ಫಿಟ್ ಆಗಿದ್ದರೆ.. ಲಭ್ಯವಿದ್ದರೇ, ಟೆಸ್ಟ್ ನಾಯಕತ್ವವನ್ನ ವಹಿಸಿಕೊಳ್ಳಬೇಕು. ಭಾರತವನ್ನ ಮುನ್ನಡೆಸಲು, ಜಸ್ಪ್ರೀತ್ ಬುಮ್ರಾ ಸರಿಯಾದ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ ಎಂದು ಮದನ್ ಲಾಲ್ ಹೇಳಿದ್ದಾರೆ.
'ರೋಹಿತ್ ತನ್ನ ನಿರ್ಧಾರದ ಬಗ್ಗೆ ಯೋಚಿಸಿರಬೇಕಿತ್ತು'
ಟೆಸ್ಟ್ ಅನೌನ್ಸ್ಗೂ ಮುನ್ನವೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿ, ಬಿಸಿಸಿಐಗೆ ಶಾಕ್ ಕೊಟ್ಟಿದ್ದ ರೋಹಿತ್ ಶರ್ಮಾ ಬಗ್ಗೆಯೂ ಮದನ್ ಲಾಲ್ ಬೇಸರ ವ್ಯಕ್ತ ಪಡಿಸಿದ್ದಾರೆ. ನಿವೃತ್ತಿಯ ಬಗ್ಗೆ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ವೈಯಕ್ತಿಕ ನಿರ್ಧಾರ. ಆದರೇ ಅಂಥಾ ಅನುಭವಿ ಕ್ರಿಕೆಟಿಗ ನಿವೃತ್ತಿ ಪಡೆಯುವ ಸಾಕಷ್ಟು ಯೋಚಿಸಿರಬೇಕಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಾರತದ ಬಗ್ಗೆ ಪಾಕ್ ಏನೇನು ಸುಳ್ಳು ಹೇಳಿದೆ..? ಸತ್ಯ ಬಿಚ್ಚಿಟ್ಟ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್
ಫಾರ್ಮ್ನಲ್ಲಿದ್ದಾರಾ, ಇಲ್ವಾ ಅನ್ನೋದು ಮುಖ್ಯವಲ್ಲ. ಪರ್ಫಾರ್ಮೆನ್ಸ್ ಇದೆಯಾ ಇಲ್ವಾ ಅನ್ನೋದೇ ಮುಖ್ಯ. ಈ ಹಿಂದೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಹೊಸ ವರ್ಷದ ಟೆಸ್ಟ್‌ನಲ್ಲೂ ಸಹ ಬುಮ್ರಾ ಟೀಮ್ಗೆ ಬಲ ತುಂಬಿದ್ರು. ಆ ದಿನ ಆ ಮ್ಯಾಚ್ನಲ್ಲೂ ರೋಹಿತ್ ಶರ್ಮಾ ಇರಲು ಬಯಸಿರಲಿಲ್ಲ ಎಂದು ಮದನ್ ಲಾಲ್ ಹೇಳಿದ್ದಾರೆ.
ಸದ್ಯಕ್ಕೆ ಭಾರತ ತಂಡವು ಜೂನ್ 20, ಶುಕ್ರವಾರ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಪ್ರಾರಂಭವಾಗುವ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಆ ಸೆಣಸಾಟಕ್ಕೆ ಬುಮ್ರಾ ಲೀಡರ್ ಆಗಿರ್ತಾರಾ ಅನ್ನೋದೇ ಕನ್ಫರ್ಮ್ ಆಗದೇ ಉಳಿದಿರುವ ಸತ್ಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ