IPLಗೆ ಮರಳುವ ವಿದೇಶಿ ಆಟಗಾರರು ಯಾಱರು..? ಯಾರೆಲ್ಲ ಬರಲ್ಲ..?

author-image
Ganesh
IPLಗೆ ಮರಳುವ ವಿದೇಶಿ ಆಟಗಾರರು ಯಾಱರು..? ಯಾರೆಲ್ಲ ಬರಲ್ಲ..?
Advertisment
  • ಮೇ 17 ರಿಂದ ಐಪಿಎಲ್ ಮತ್ತೆ ಆರಂಭವಾಗ್ತಿದೆ
  • ದಕ್ಷಿಣ ಆಫ್ರಿಕಾ ಆಟಗಾರರು ಕೈಕೊಡೋದು ಪಕ್ಕಾ
  • ಆರ್​ಸಿಬಿ ಸೇರಿ ಹಲವು ತಂಡಗಳಿಗೆ ಕಾದಿದೆ ಶಾಕ್

ಮೇ 17 ರಿಂದ ಐಪಿಎಲ್ ಮತ್ತೆ ಆರಂಭವಾಗ್ತಿದೆ. ಈ ಟೂರ್ನಿಗಾಗಿ ಅನೇಕ ವಿದೇಶಿ ಆಟಗಾರರು ಹಿಂತಿರುಗುತ್ತಿದ್ದಾರೆ, ಹಲವರು ಕೈಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತನ್ನ ಆಟಗಾರರಿಗೆ ಮೇ 26 ರೊಳಗೆ ಮರಳುವಂತೆ ಆದೇಶಿಸಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ತಂಡದ ಭಾಗವಾಗಿರುವ ಆಟಗಾರರು ಐಪಿಎಲ್​ಗೆ ಹಿಂತಿರುಗಲು ಸಾಧ್ಯವಾಗದಿರಬಹುದು. ದಕ್ಷಿಣ ಆಫ್ರಿಕಾದ ಆಟಗಾರರಲ್ಲಿ ಕಗಿಸೊ ರಬಾಡ ಮತ್ತು ಜೆರಾಲ್ಡ್ ಕೋಟ್ಜೀ GT ತಂಡದ ಭಾಗವಾಗಿದ್ದಾರೆ. ಮಾರ್ಕೊ ಜಾನ್ಸೆನ್ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರೆ, ಲುಂಗಿ ಎನ್‌ಗಿಡಿ ಆರ್​ಸಿಬಿ ಪರ ಆಡ್ತಿದ್ದಾರೆ. ರಯಾನ್ ರಿಕ್ಲೆಟನ್ ಮತ್ತು ಕಾರ್ಬಿನ್ ಬಾಷ್ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ರೆ, ಟ್ರಿಸ್ಟಾನ್ ಸ್ಟಬ್ಸ್ ಡೆಲ್ಲಿ ಕ್ಯಾಪಿಟಲ್ಸ್ ಭಾಗವಾಗಿದ್ದಾರೆ. ಈ ಆಟಗಾರರು ಹಿಂತಿರುಗಿದರೂ ಮೇ 26ಕ್ಕೂ ಮೊದಲು ವಾಪಸ್ ಹೋಗಲಿದ್ದಾರೆ.

ಇದನ್ನೂ ಓದಿ: ಭಾರತದ ಬಳಿ ಮತ್ತೆ ಭಿಕ್ಷೆ ಬೇಡಿದ ಪಾಕಿಸ್ತಾನ.. ಇದೀಗ ಪತ್ರ ಬರೆದು ಬೇಡಿಕೊಂಡಿದ್ದೇನು..?

publive-image

ಆಸ್ಟ್ರೇಲಿಯಾ ಕತೆ ಏನು..?

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​, ಆಟಗಾರರ ನಿರ್ಧಾರ ಬೆಂಬಲಿಸೋದಾಗಿ ಹೇಳಿದೆ. ಪ್ಯಾಟ್ ಕಮ್ಮಿನ್ಸ್ ಮತ್ತು ಟ್ರಾವಿಸ್ ಹೆಡ್ SRH ತಂಡವನ್ನು ಸೇರಲಿದ್ದಾರೆ. ಮಿಚೆಲ್ ಸ್ಟಾರ್ಕ್ ದೆಹಲಿ ತಂಡ ಸೇರುವ ಸಾಧ್ಯತೆ ಕಡಿಮೆಯಾದರೂ, ಜ್ಯಾಕ್ ಫ್ರೇಸರ್ ಮೆಕ್‌ಗರ್ಕ್ ಮತ್ತೆ ತಂಡಕ್ಕೆ ಮರಳುತ್ತಿಲ್ಲ. ಪಂಜಾಬ್ ಕಿಂಗ್ಸ್​ನ ಮಾರ್ಕಸ್ ಸ್ಟೊಯಿನಿಸ್ ಮತ್ತು ಜೋಶ್ ಇಂಗ್ಲಿಸ್ ಮರಳುವ ಸಾಧ್ಯತೆ ಕಡಿಮೆ ಇದೆ.

ರಶೀದ್ ಖಾನ್, ಶೆರ್ಫೇನ್ ರುದರ್ಫೋರ್ಡ್ ಮತ್ತು ಕರೀಮ್ ಜನತ್ ಭಾರತಕ್ಕೆ ಬರಲು ಸಿದ್ಧರಾಗಿದ್ದಾರೆ. ಸುನಿಲ್ ನರೈನ್, ಆಂಡ್ರೆ ರಸೆಲ್, ರೋವ್ಮನ್ ಪೊವೆಲ್ ಮತ್ತು ಅನ್ರಿಕ್ ನಾರ್ಖಿಯಾ ಕೂಡ ತಮ್ಮ ತಂಡಗಳನ್ನು ಸೇರಿಕೊಳ್ಳಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನ ರಾಚಿನ್ ರವೀಂದ್ರ ಮತ್ತೆ ತಂಡಕ್ಕೆ ಮರಳೋದು ಡೌಟ್.

ಇದನ್ನೂ ಓದಿ: ಕೊಹ್ಲಿ ನಿವೃತ್ತಿಯಾದರೂ ಅಭಿಮಾನಿಗಳಿಗೆ ಕಾಡ್ತಿದೆ 2021ರ ಅದೊಂದು ಘಟನೆ..!

ಹೆನ್ರಿಕ್ ಕ್ಲಾಸೆನ್, ಇಶಾನ್ ಮಾಲಿಂಗ, ಕಾಮಿಂಡು ಮೆಂಡಿಸ್ ಮತ್ತು ವಿಯಾನ್ ಮುಲ್ಡರ್ ವಾಪಸ್ ಆಗುವ ಬಗ್ಗೆ ಮಾಹಿತಿ ಇಲ್ಲ. ಕ್ಸೇವಿಯರ್ ಬಾರ್ಟ್ಲೆಟ್, ಅಜ್ಮತುಲ್ಲಾ ಒಮರ್ಜೈ ಮತ್ತು ಮಿಚೆಲ್ ಓವೆನ್ಸ್ ಕೂಡ ಆಟಕ್ಕೆ ಮರಳುತ್ತಿದ್ದಾರೆ. ಇಂಗ್ಲೆಂಡ್ ಆಟಗಾರರಾದ ಬಟ್ಲರ್, ಜಾಕೋಬ್ ಬೆಥೆಲ್, ವಿಲ್ ಜ್ಯಾಕ್ಸ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಮೇ 30 ರೊಳಗೆ ಏಕದಿನ ಸರಣಿ ಆಡಲು ಮರಳಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment