/newsfirstlive-kannada/media/post_attachments/wp-content/uploads/2024/03/JAYA_SHAH.jpg)
ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವರ್ಷದ ಕೊನೆಯಲ್ಲಿ ಬಿಸಿಸಿಐ ಮಂಡಳಿಯಿಂದ ಕೆಳಗಿಳಿಯಲಿದ್ದಾರೆ.
ಜಯ್ ಶಾ ಡಿಸೆಂಬರ್ 1 ರಿಂದ ಈ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಇದರಿಂದ ಬಿಸಿಸಿಐನಲ್ಲಿ ಅವರ ಸ್ಥಾನ ತೆರವಾಗಲಿದೆ. ಈಗ ಜಯ್ ಶಾ ಬದಲಿಗೆ ಯಾರು ಎಂಬ ಪ್ರಶ್ನೆ ಮೂಡಿದೆ. ಕೆಲವು ಮಾಹಿತಿಗಳ ಪ್ರಕಾರ.. ಗುಜರಾತ್‌ನ ಮಾಜಿ ಕ್ರಿಕೆಟಿಗ ಅನಿಲ್ ಪಟೇಲ್‌ಗೆ ಈ ಹುದ್ದೆ ಸಿಗಬಹುದು ಎಂದು ಹೇಳಲಾಗಿದೆ. ಅನಿಲ್ ಪಟೇಲ್ ಗುಜರಾತ್ ಪರ 3 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಗುಜರಾತ್ ಕ್ರಿಕೆಟ್ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದೆ.
ಅನಿಲ್ ಪಟೇಲ್
- ಗುಜರಾತ್ ಮಾಜಿ ಬ್ಯಾಟ್ಸ್‌ಮನ್ ಅನಿಲ್ ಪಟೇಲ್
- ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಜೊತೆಗಿನ ಒಡನಾಟ
- ಅನಿಲ್ ಪಟೇಲ್ ಪ್ರಸ್ತುತ ಜಿಸಿಎ ಕಾರ್ಯದರ್ಶಿಯಾಗಿದ್ದಾರೆ
- ಅನಿಲ್ ಪಟೇಲ್ ಗುಜರಾತ್ ಪರ 3 ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ
- WTC-2023 ಫೈನಲ್‌ನಲ್ಲಿ ಟೀಂ ಇಂಡಿಯಾದ ಮ್ಯಾನೇಜರ್ ಆಗಿದ್ದರು
ಇದನ್ನೂ ಓದಿ:ಇನ್ನೂ ಬುದ್ಧಿ ಕಲಿಯದ IPL ಸ್ಟಾರ್; ಗಾಯಕ್ವಾಡ್ಗೆ ಅವಮಾನ ಮಾಡಿದ ಬೌಲರ್..!
ಅರುಣ್ ಧುಮಾಲ್
- ಕೇಂದ್ರ ಸಚಿವ ಮತ್ತು ಮಾಜಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸಹೋದರ
- ಕಳೆದ ಕೆಲವು ವರ್ಷಗಳಿಂದ ಬಿಸಿಸಿಐ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ
- 2019ರಲ್ಲಿ ಬಿಸಿಸಿಐ ಖಜಾಂಚಿಯಾಗಿ ಕೆಲಸ ಮಾಡಿದ ಅನುಭವ ಇದೆ
- ಎರಡು ವರ್ಷಗಳ ಹಿಂದೆ ಐಪಿಎಲ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು
- ಇವರ ನಾಯಕತ್ವದಲ್ಲಿ ಐಪಿಎಲ್‌ನ ಮೂರು ಸೀಸನ್ ಯಶಸ್ವಿ ಆಗಿದೆ
- ಮಹಿಳಾ ಪ್ರೀಮಿಯರ್ ಲೀಗ್ ಕೂಡ ಯಶಸ್ವಿಯಾಗಿ ಮುಗಿಸಿದ್ದಾರೆ
- ಈ ಹಿಂದೆ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು
ಆಶಿಶ್ ಶೇಲಾರ್
- ಆಶಿಶ್ ಶೆಲಾರ್ ಬಿಸಿಸಿಐನ ಹೊಸ ಖಜಾಂಚಿ ಆಗಿದ್ದಾರೆ
- ಮಹಾರಾಷ್ಟ್ರದ ಬಿಜೆಪಿ ಶಾಸಕ ಆಶಿಶ್ ಶೆಲಾರ್
- ತುಂಬಾ ವರ್ಷಗಳಿಂದ ಬಿಸಿಸಿಐ ಜೊತೆ ನಿಕಟ ಸಂಪರ್ಕ
- 2015 ರಲ್ಲಿ ಮೊದಲ ಬಾರಿಗೆ ಬಿಸಿಸಿಐ ಸದಸ್ಯರಾದರು
- 2017ರಲ್ಲಿ ಅವರು ಎಂಸಿಎ ಅಧ್ಯಕ್ಷರಾಗಿ ಆಯ್ಕೆಯಾದರು
2019ರಲ್ಲಿ ಜಯ್ ಶಾ ಮೊದಲ ಬಾರಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ಜಯ್ ಶಾ ಈ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರ ಅಧಿಕಾರಾವಧಿ ಒಂದು ವರ್ಷ ಮಾತ್ರ ಉಳಿದಿದೆ. ಅದಕ್ಕೂ ಮುನ್ನ ಅವರು ಐಸಿಸಿಯ ಜವಾಬ್ದಾರಿ ವಹಿಸಿಕೊಳ್ಳಲು ನಿರ್ಧರಿಸಿದ್ದರು. ಆಗಸ್ಟ್ 27ರಂದು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಾ ನಾಮಪತ್ರ ಸಲ್ಲಿಸಿದ್ದರು. ಆ ಸ್ಥಾನಕ್ಕೆ ಬೇರೆ ಯಾರೂ ಸ್ಪರ್ಧಿಸದ ಕಾರಣ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ:ಈ ಐದು ಆಟಗಾರರ ಮೇಲೆ RCB ಕಣ್ಣು; ಮೆಗಾ ಹರಾಜಿನಲ್ಲಿ 4 ವಿದೇಶಿ ಆಟಗಾರರ ಖರೀದಿಗೆ ಟಾರ್ಗೆಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ