ಟೀಮ್ ಇಂಡಿಯಾದ ಓಪನರ್​ ಯಾರಾಗ್ತಾರೆ, ಕನ್ನಡಿಗನಿಗೆ ಸಿಗುತ್ತಾ ಚಾನ್ಸ್​​​​..? ರೇಸ್​ನಲ್ಲಿ ಯಂಗ್ ಬ್ಯಾಟರ್ಸ್!

author-image
Bheemappa
Updated On
ಮೊದಲ ಟೆಸ್ಟ್​ನಲ್ಲಿ ಕೈಕೊಟ್ಟ ಟಾಸ್​​.. ಟೀಮ್ ಇಂಡಿಯಾದ ಪ್ಲೇಯಿಂಗ್​- 11ನಲ್ಲಿ ಯಾರ್​ ಯಾರಿಗೆ ಸ್ಥಾನ?
Advertisment
  • ಆಸ್ಟ್ರೇಲಿಯಾ ಸರಣಿಯಲ್ಲಿ ಸಾಲಿಡ್ ಆಟವಾಡಿದ್ದ ಕೆ.ಎಲ್.ರಾಹುಲ್
  • ಯುವ ಬ್ಯಾಟರ್​ ಜೈಸ್ವಾಲ್ ಜತೆ ಓಪನರ್ ಆಗೋ ಆಟಗಾರ ಯಾರು?
  • ತಂಡದಲ್ಲಿ ಒಂದು ಒಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಬ್ಯಾಟ್ಸ್​ಮನ್ಸ್​

ರೋಹಿತ್​ ಶರ್ಮಾ ಟೆಸ್ಟ್​ ಕ್ರಿಕೆಟ್​ಗೆ ರಿಟೈರ್​ಮೆಂಟ್​ ಹೇಳಿದ್ದಾಗಿದೆ. ಆದ್ರೀಗ ಎಲ್ಲರಿಗೂ ಕಾಡ್ತಿರುವ ಪ್ರಶ್ನೆ. ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಯಾರು ಇನ್ನಿಂಗ್ಸ್​ ಆರಂಭಿಸ್ತಾರೆ?. ಇದಕ್ಕೆ ಮೂರು ಉತ್ತರ ಟೀಮ್ ಮ್ಯಾನೇಜ್​ಮೆಂಟ್​ ಮುಂದಿದ್ರೂ, ಯಾರಿಗೆ ಮಣೆ ಹಾಕ್ತಾರೆ ಅನ್ನೋ ಕುತೂಲಹ ಕಾಡ್ತಾನೇ ಇದೆ.

ಇಂಡೋ- ಇಂಗ್ಲೆಂಡ್ ಟೆಸ್ಟ್​ ಬ್ಯಾಟಲ್​ ಜೂನ್​ 20 ರಿಂದ ಆರಂಭ ಆಗಲಿದೆ. ಲೀಡ್ಸ್​ನ ಹೆಡಿಂಗ್ಲೆಯಲ್ಲಿ ಹೈವೋಲ್ಟೆಜ್​ ಟೆಸ್ಟ್​ ಸರಣಿಯ ಕಿಕ್​ ಸ್ಟಾರ್ಟ್​ ಆಗಲಿದ್ದು, ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾದ ಹೊಸ ಶಕೆ ಆರಂಭವಾಗಲಿದೆ. ಆದ್ರೆ, ಹೊಸ ಯುಗಾಂರಂಭದ ಕನಸಿನಲ್ಲಿರುವ ಟೀಮ್ ಇಂಡಿಯಾಗೆ ಆರಂಭದಲ್ಲೇ ಬಿಗೆಸ್ಟ್ ಚಾಲೆಂಜ್ ಎದುರಾಗ್ತಿದೆ. ಅದೇ ಓಪನರ್.

publive-image

ರೋಹಿತ್ ಶರ್ಮಾರ ನಿವೃತ್ತಿಯಿಂದಾಗಿ ಟೆಸ್ಟ್​ ಆರಂಭಿಕ ಸ್ಥಾನ ತೆರವಾಗಿದೆ. ಈ ಸ್ಥಾನಕ್ಕೆ ಸೂಕ್ತ ಆಟಗಾರನ ಹುಡುಕಾಟದಲ್ಲಿರುವ ಮ್ಯಾನೇಜ್​ಮೆಂಟ್, ಯಶಸ್ವಿ ಜೈಸ್ವಾಲ್​ ಜೊತೆ ಯಾರಿಗೆ ಇನ್ನಿಂಗ್ಸ್​ ಓಪನ್ ಮಾಡೋ ಅವಕಾಶ ನೀಡೋದು ಎಂಬ ಗೊಂದಲಕ್ಕೆ ಸಿಲುಕಿದೆ. ಇದಕ್ಕೆ ಕಾರಣ ಟೀಮ್ ಇಂಡಿಯಾದಲ್ಲಿರುವ ಆರಂಭಿಕರ ಪಟ್ಟಿ.

ಕೆ.ಎಲ್.ರಾಹುಲ್​​​​​ ಫಸ್ಟ್​ ಚಾಯ್ಸ್​ ಓಪನರ್​..!

ಕೆ.ಎಲ್.ರಾಹುಲ್​, ಟೀಮ್ ಇಂಡಿಯಾ ಟೆಸ್ಟ್ ತಂಡದ ಫಸ್ಟ್​ ಚಾಯ್ಸ್​ ಓಪನರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಕಂಡೀಷನ್ಸ್​ಗೆ ಒಗ್ಗಿಕೊಳ್ಳಬಲ್ಲ. ಯಾವುದೇ ಕ್ರಮಾಂಕದಲ್ಲದರೂ ಬ್ಯಾಟ್​ ಬೀಸಬಲ್ಲ ಸೆಲ್ಫ್​ ಲೆಸ್ ಪ್ಲೇಯರ್. ಓಪನಿಂಗ್​ನಿಂದ ಹಿಡಿದು ನಂಬರ್​​-7 ತನಕ ಬ್ಯಾಟ್​ ಬೀಸಬಲ್ಲ. ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಬಲ್ಲ ಕನ್ನಡಿಗ ಕೆ.ಎಲ್.ರಾಹುಲ್, ಇಂಗ್ಲೆಂಡ್​ನಲ್ಲೂ ಯಶಸ್ವಿ ಬ್ಯಾಟರ್ ಆಗಿದ್ದಾರೆ.

ಟೆಸ್ಟ್ ಓಪನರ್ ಆಗಿ ಕೆ.ಎಲ್.ರಾಹುಲ್

ಟೆಸ್ಟ್​ ಕ್ರಿಕೆಟ್​ನಲ್ಲಿ ಆರಂಭಿಕನಾಗಿ 83 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ಕೆ.ಎಲ್.ರಾಹುಲ್, 35.03ರ ಬ್ಯಾಟಿಂಗ್ ಅವರೇಜ್​ನಲ್ಲಿ 2803 ರನ್ ಗಳಿಸಿದ್ದಾರೆ. 7 ಶತಕ, 14 ಅರ್ಧಶತಕ ಸಿಡಿಸಿರುವ ರಾಹುಲ್, ಇಂಗ್ಲೆಂಡ್​ನಲ್ಲಿ 2018, 2021ರ ಅವಧಿಯಲ್ಲಿ ಆಡಿರುವ 18 ಇನ್ನಿಂಗ್ಸ್​ಗಳಿಂದ 597 ರನ್ ಗಳಿಸಿದ್ದಾರೆ. 37.31 ಬ್ಯಾಟಿಂಗ್ ಅವರೇಜ್​ನಲ್ಲಿ ರನ್ ಗಳಿಸಿರುವ ರಾಹುಲ್, 2 ಶತಕ, 1 ಅರ್ಧಶತಕ ಗಳಿಸಿದ್ದಾರೆ.

ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಸಾಲಿಡ್ ಆಟವಾಡಿದ್ದ ಕೆ.ಎಲ್.ರಾಹುಲ್, ಟೆಕ್ನಿಕಲಿ ಮಾತ್ರವಲ್ಲ. ಸೇನಾ ದೇಶಗಳ ಸ್ವಿಂಗಿಂಗ್ ಕಂಡೀಷನ್ಸ್​ಗೆ ಹೇಳಿ ಮಾಡಿಸಿರುವ ಆಟಗಾರ. ತಂಡದಲ್ಲಿರುವ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾ, ಸರಿ ತಪ್ಪುಗಳನ್ನು ತಿದ್ದುವ ಕೆ.ಎಲ್.ರಾಹುಲ್​​​​​​, ಫಸ್ಟ್ ಚಾಯ್ಸ್​ ಓಪನರ್ ಆಗೋದ್ರಲ್ಲಿ ಡೌಟೇ ಇಲ್ಲ.

ಸಾಯಿ ಸುದರ್ಶನ್ ಫಿಕ್ಸ್​.. ಆರಂಭಿಕನಾಗ್ತಾರಾ..?

ಸಾಯಿ ಸುದರ್ಶನ್.. ಇಂಗ್ಲೆಂಡ್​ ಟೂರ್​ನಲ್ಲಿ ಟೆಸ್ಟ್ ತಂಡಕ್ಕೆ ಡೆಬ್ಯು ಮಾಡೋದು ಫಿಕ್ಸ್. ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್ ಆಗಿರುವ ಸಾಯಿ ಸುದರ್ಶನ್, ಕ್ಲಾಸ್​ ಬ್ಯಾಟಿಂಗ್​ಗೆ ಹೇಳಿ ಮಾಡಿಸಿರುವ ಆಟಗಾರ. ರನ್​ ಗಳಿಸಬೇಕೆಂಬ ಹಸಿವು, ಬಿಗ್ ಇನ್ನಿಂಗ್ಸ್​ ಕಟ್ಟುವ ಕಲೆಗಾರಿಕೆ ಹೊಂದಿರುವ ಸಾಯಿ ಸುದರ್ಶನ್, ಫಸ್ಟ್​ ಕ್ಲಾಸ್ ಕ್ರಿಕೆಟ್​ನಲ್ಲಿ 39.93ರ ಬ್ಯಾಟಿಂಗ್ ಅವರೇಜ್​ನಲ್ಲಿ 1957 ರನ್ ಗಳಿಸಿದ್ದಾರೆ. 7 ಶತಕ ಹೊಂದಿರುವ ಸಾಯಿ ಸುದರ್ಶನ್, ಇಂಗ್ಲೆಂಡ್​ನ ಕೌಂಟಿ ಕ್ರಿಕೆಟ್​ನಲ್ಲಿ ಯಶಸ್ಸು ಕಂಡಿದ್ದಾರೆ.

ಇಂಗ್ಲೆಂಡ್​ನ ಕೌಂಟಿಯಲ್ಲಿ ಸಾಯಿ ಸುದರ್ಶನ್

ಇಂಗ್ಲೆಂಡ್​ನ ಕೌಂಟಿಯಲ್ಲಿ 8 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ಸಾಯಿ ಸುದರ್ಶನ್​, 35.12ರ ಬ್ಯಾಟಿಂಗ್ ಆವರೇಜ್​ನಲ್ಲಿ 281 ರನ್ ಗಳಿಸಿದ್ದಾರೆ. ತಲಾ 1 ಶತಕ, 1 ಅರ್ಧಶತಕ ಗಳಿಸಿರುವ ಸಾಯಿ ಸುದರ್ಶನ್, ಓಪನಿಂಗ್ ಸ್ಲಾಟ್​ಗೆ ಡಿಸರ್ವ್ಡ್​ ಪ್ಲೇಯರ್ ಅನ್ನೋದ್ರಲ್ಲಿ ನೋ ಡೌಟ್.

ಟೆಕ್ನಿಕ್​, ಟೆಂಪರ್ಮೆಂಟ್​ ಜೊತೆಗೆ ಕನ್ಸಿಸ್ಟೆನ್ಸಿ ಆಟವಾಡುವ ಸಾಯಿ ಸುದರ್ಶನ್, ಹೈ ಫ್ರಷರ್​ ಮೂಮೆಂಟ್​ನಲ್ಲಿ ಕೂಲ್ ಆ್ಯಂಡ್ ಕಾಮ್ ಆಟವಾಡುವುದರಲ್ಲಿ ಎತ್ತಿದ ಕೈ. ಅಷ್ಟೇ ಅಲ್ಲ, ಬಿಗ್ ಇನ್ನಿಂಗ್ಸ್​ ಕಟ್ಟುವಲ್ಲಿ ನಿಸ್ಸೀಮನಾಗಿರುವ ಸಾಯಿ ಸುದರ್ಶನ್​ಗೆ, ಟೆಸ್ಟ್​ ಪ್ಲೇಯಿಂಗ್​ ಇಲೆವೆನ್​ನಲ್ಲಿ ಪ್ಲೇಸ್ ಫಿಕ್ಸ್. ಆದ್ರೆ, ಆರಂಭಿಕನಾಗಿ ಸಿಗುತ್ತಾ ಎಂಬುವುದೇ ಪ್ರಶ್ನೆ.

ಇದನ್ನೂ ಓದಿ:ತೃತೀಯ ಲಿಂಗಿ ಆಗಿದ್ದ ಮಾಜಿ ಕ್ರಿಕೆಟರ್​ನ ಮಗ.. ಮಹಿಳಾ ತಂಡದಲ್ಲಿ ಚಾನ್ಸ್​ ಕೊಡಿ ಅಂತ ಒತ್ತಾಯ!

[caption id="attachment_86667" align="alignnone" width="800"]publive-image ಅಭಿಮನ್ಯು ಈಶ್ವರನ್[/caption]

ಅಭಿಮನ್ಯು ಈಶ್ವರನ್​ಗೆ ಸಿಗುತ್ತಾ ಬ್ರೇಕ್..?

ಅಭಿಮನ್ಯು ಈಶ್ವರನ್​.. ಆರಂಭಿಕ ಸ್ಥಾನಕ್ಕೆ ಮೋಸ್ಟ್ ಡಿಸರ್ವ್ಡ್​​ ಪ್ಲೇಯರ್. ಕಳೆದೊಂದು ದಶಕದಿಂದ ದೇಶಿ ಕ್ರಿಕೆಟ್​ನಲ್ಲಿ ಕನ್ಸಿಸ್ಟೆನ್ಸಿ ಪ್ರದರ್ಶನ ನೀಡ್ತಿರುವ ಅಭಿಮನ್ಯು ಈಶ್ವರನ್​, ಕಳೆದ 5 ವರ್ಷದಿಂದ ಟೆಸ್ಟ್​ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪ್ಲೇ ಯಿಂಗ್​​ ಇಲೆವೆನ್​ನಲ್ಲಿ ಸ್ಥಾನ ಮಾತ್ರ ಸಿಕ್ಕಿಲ್ಲ. 101 ಫಸ್ಟ್ ಕ್ಲಾಸ್ ಕ್ರಿಕೆಟ್​ ಪಂದ್ಯಗಳನ್ನಾಡಿರುವ ಅಭಿಮನ್ಯು, 7,674 ರನ್ ಗಳಿಸಿದ್ದಾರೆ. 27 ಶತಕ, 29 ಅರ್ಧಶತಕ ದಾಖಲಿಸಿದ್ದಾರೆ. ಸದ್ಯ ಭಾರತ ಎ ತಂಡದ ನಾಯಕನೂ ಆಗಿರುವ ಈಶ್ವರನ್​, ಆರಂಭಿಕ ಸ್ಥಾನಕ್ಕೆ ಸೂಕ್ತ ಆಟಗಾರನ ಆಗಿದ್ದಾರೆ. ಆದ್ರೆ, ಸ್ವಿಂಗಿಂಗ್ ಕಂಡೀಷನ್ಸ್​ನಲ್ಲಿ ಹೇಳಿಕೊಳ್ಳುವ ಆಟವಾಡದ ಈಶ್ವರನ್, ಇಂಗ್ಲೆಂಡ್ ಲಯನ್ಸ್ ಎದುರು ಅಬ್ಬರಿಸಿದ್ರೆ. ಡೋರ್ ಓಪನ್ ಆಗೋ ಚಾನ್ಸ್ ಇದ್ದೇ ಇದೆ.

ಮೂವರಲ್ಲಿ ಯಾರ ಮೇಲೆ ಮ್ಯಾನೇಜ್​ಮೆಂಟ್ ಕೃಪೆ.?

ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರ್.. ಜೈಸ್ವಾಲ್ ಜೊತೆ ಇನ್ನಿಂಗ್ಸ್​ ಆರಂಭಿಸಲು ತುದಿಗಾಲಿನಲ್ಲಿ ನಿಂತಿರುವ ಆಟಗಾರರು. ಆದ್ರೆ, ಈ ಪೈಕಿ ಕೆ.ಎಲ್.ರಾಹುಲ್, ಓಪನಿಂಗ್ ಸ್ಲಾಟ್​​ನ ಸ್ಟ್ರಾಂಗ್ ಕಂಟೇಡರ್. ಇನ್​ಫ್ಯಾಕ್ಟ್​_ ಈ ನವಯುಗದಲ್ಲಿ ಎಕ್ಸ್​ಪಿರಿಯನ್ಸ್​ ಟಾಪ್​ ಆರ್ಡರ್​ಗಳೇ ಫಸ್ಟ್ ಚಾಯ್ಸ್​. ಆದ್ರೆ, ಶಾರ್ಟ್​ ಟರ್ಮ್​ ಸಕ್ಸಸ್​​ಗಾಗಿ ಕೆ.ಎಲ್.ರಾಹುಲ್​ಗೆ ಮಣೆ ಹಾಕ್ತಾರಾ..? ಇಲ್ಲ ಲಾಂಗ್ ಟರ್ಮ್​ ಇನ್ವೆಂಸ್ಟ್​ಮೆಂಟ್​ಗೆ ಸಾಯಿ ಸುದರ್ಶನ್​ಗೆ ಇನ್ನಿಂಗ್ಸ್ ಆರಂಭಿಸುವ ಹೊಣೆಗಾರಿಕೆ ನೀಡ್ತಾರಾ?. ದೇಶಿ ಕ್ರಿಕೆಟ್ ಯಶಸ್ಸಿನ ಆಧಾರದಲ್ಲಿ ಅಭಿಮನ್ಯುಗೆ ಚಾನ್ಸ್ ನೀಡ್ತಾರಾ ಅನ್ನೋದೆ ಪ್ರಶ್ನೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment