ಇಂದು ಮಿಸ್​ ವರ್ಲ್ಡ್​ ಫೈನಲ್​.. ಯಾರ ಮುಡಿಗೇರಲಿದೆ ವಿಶ್ವ ಸುಂದರಿ ಕಿರೀಟ?

author-image
Veena Gangani
Updated On
ಇಂದು ಮಿಸ್​ ವರ್ಲ್ಡ್​ ಫೈನಲ್​.. ಯಾರ ಮುಡಿಗೇರಲಿದೆ ವಿಶ್ವ ಸುಂದರಿ ಕಿರೀಟ?
Advertisment
  • ವಿಶ್ವ ಸುಂದರಿ 2025 ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದೆ ಬೃಹತ್ ವೇದಿಕೆ
  • ಹೈಟೆಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿರೋ ಫೈನಲ್​ ಸ್ಪರ್ಧೆ
  • ಎಲ್ಲರಲ್ಲೂ ಕುತೂಹಲ ಮೂಡಿಸಿದ ವಿಶ್ವ ಸುಂದರಿ 2025 ಪಟ್ಟ

ಬಹು ನಿರೀಕ್ಷಿತ ವಿಶ್ವ ಸುಂದರಿ 2025 ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗಿದೆ. ಇಂದು 72ನೇ ಆವೃತ್ತಿಯ ವಿಶ್ವಸುಂದರಿ ಸ್ಪರ್ಧೆಯ ಫೈನಲ್‌ ಹೈದರಾಬಾದ್‌ನಲ್ಲಿರುವ ಹೈಟೆಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ: ಕನ್ನಡ ಕಿರುತೆರೆ ದಂಪತಿ ಮನೆಯಲ್ಲಿ ಸಂಭ್ರಮ..ನಟಿ ಶಿಲ್ಪಾ ರವಿ ಕ್ಯೂಟ್ ಮಗನಿಗೆ ಇಟ್ಟ ಹೆಸರೇನು?

publive-image

ಈಗಾಗಲೇ ಸುಂದರಿಯ ಅಂತಿಮ ಸುತ್ತಿಗೆ 24 ಮಂದಿ ಆಯ್ಕೆಯಾಗಿದ್ದು, ಭಾರತದಿಂದ ರಾಜಸ್ಥಾನ ಮೂಲದ ನಂದಿನಿ ಗುಪ್ತಾ ಸ್ಪರ್ಧಿಸಿದ್ದಾರೆ. ರಾಜಸ್ಥಾನ ಮೂಲದ, 2023ರ ಸಾಲಿನ ಮಿಸ್‌ ಇಂಡಿಯಾ ನಂದಿನಿ ಗುಪ್ತಾ ಭಾರತದಿಂದ ಸ್ಪರ್ಧೆ ಮಾಡಿದ್ದು, ಅಂತಿಮ 24ರ ಸುತ್ತನ್ನೂ ಯಶಸ್ವಿಯಾಗಿ ತಲುಪಿದ್ದಾರೆ. ಮಿಸ್‌ ವರ್ಲ್ಡ್‌ ಆಗಿ ಅವರು ಆಯ್ಕೆಯಾಗುತ್ತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

publive-image

ಇನ್ನೂ, ಸಂಜೆ 6 ರಿಂದ ರಾತ್ರಿ 9ರವರೆಗೆ ಈ ಸ್ಪರ್ಧೆ ನಡೆಯಲಿದ್ದು, ಸ್ಥಳದಲ್ಲಿ 3,500 ಜನರು ನೇರ ಪ್ರೇಕ್ಷಕರು ಬರುವ ಸಾಧ್ಯತೆ ಇದೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ವಿಶ್ವ ಸುಂದರಿ ಅಧ್ಯಕ್ಷೆ ಜೂಲಿಯಾ ಮಾರ್ಲಿ ಮತ್ತು ನೂತನ ರಾಣಿಗೆ ಕಿರೀಟಧಾರಣೆ ಮಾಡಲಿರುವ ಹಾಲಿ ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಜ್ಕೋವಾ ಅವರು ಭಾಗವಹಿಸಲಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಈ ಬಾರಿಯ ಮಿಸ್​ ವರ್ಲ್ಡ್​ ಪಟ್ಟ ನಂದಿನಿ ಗುಪ್ತಾ ಅವರಿಗೆ ಸೇರಿದೆ ಎಂದು ವೈರಲ್​ ಆಗುತ್ತಿದೆ. ಆದ್ರೆ, ನಂದಿನಿ ಗುಪ್ತಾ ಅವರು ಈ ಹಿಂದೆ 2023ರಲ್ಲಿ ಮಿಸ್‌ ಇಂಡಿಯಾ ಪಟ್ಟ ತಮ್ಮ ಮುಡಿಗೇರಿಸಿಕೊಂಡಿದ್ದರು. ಆದ್ರೆ ಇಂದು ರಾತ್ರಿ 9:15ಕ್ಕೆ ಮಿಸ್​ ವರ್ಲ್ಡ್​ ಯಾರು ಎಂದು ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment