ಆ 9 ಸ್ಥಳಗಳೇ ಯಾಕೆ ಟಾರ್ಗೆಟ್​..? ರಕ್ತ ಕಣ್ಣೀರಿನ ಚರಿತ್ರೆಗಳ ಸೃಷ್ಟಿಯ ಮೂಲವೇ ಇಲ್ಲಿ..

author-image
Ganesh
Updated On
ಆ 9 ಸ್ಥಳಗಳೇ ಯಾಕೆ ಟಾರ್ಗೆಟ್​..? ರಕ್ತ ಕಣ್ಣೀರಿನ ಚರಿತ್ರೆಗಳ ಸೃಷ್ಟಿಯ ಮೂಲವೇ ಇಲ್ಲಿ..
Advertisment
  • ರಕ್ತದ ಕಲೆಗಳ ಹಿಂದೆ ನಡೆಯುತ್ತಿದ್ದ ಕುಂತ್ರದ ಮೂಲ ಇಲ್ಲಿಂದಲೇ
  • ಒಟ್ಟು 21 ಉಗ್ರರ ಕ್ಯಾಂಪ್ ಗುರಿಯಾಗಿಸಿಕೊಂಡು ದಾಳಿ
  • 21 ರಲ್ಲಿ 9 ಅಡುಗು ತಾಣಗಳೇ ಪ್ರಮುಖ ಟಾರ್ಗೆಟ್ ಆಗಿದ್ದವು

‘ಆಪರೇಷನ್ ಸಿಂಧೂರ್’ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಭಾರತೀಯ ಸೇನೆ ಸಂಪೂರ್ಣ ಮಾಹಿತಿ ನೀಡಿದೆ. ಸೇನೆ ನೀಡಿದ ಮಾಹಿತಿ ಪ್ರಕಾರ ಉಗ್ರರ 9 ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಈ 9 ಸ್ಥಳಗಳು ಯಾಕೆ ಟಾರ್ಗೆಟ್ ಮಾಡಿತ್ತು. ಅಲ್ಲಿ ಏನು ನಡೆಯುತ್ತಿತ್ತು ಅನ್ನೋದ್ರ ವಿವರ ಇಲ್ಲಿದೆ.

ಅಂದ್ಹಾಗೆ ಸೇನೆ ಗುರಿಯಾಗಿಸಿದ್ದು 21 ಉಗ್ರರ ಕ್ಯಾಪ್​​ಗಳು. ಅದರಲ್ಲಿ 9 ತಾಣಗಳು ಪ್ರಮುಖವಾಗಿವೆ. ಈ ತಾಣಗಳಲ್ಲಿ ಕಳೆದ 3 ದಶಕದಿಂದ ಉಗ್ರರ ನೇಮಕಾತಿ, ಲಾಂಚ್ ಪ್ಯಾಡ್‌, ಟ್ರೈನಿಂಗ್‌ ಸೆಂಟರ್​ ಆಗಿ ಪರಿವರ್ತನೆ ಆಗಿದ್ದವು. ಹೀಗಾಗಿ ಇಂಟೆಲಿಜೆನ್ಸ್‌ ನೀಡಿದ ಮಾಹಿತಿ ಆಧಾರದ ಮೇಲೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ: ಪಾಕ್​ಗೆ ಮತ್ತೊಂದು ರೀತಿಯಲ್ಲಿ ಕೌಂಟರ್​.. ಆಪರೇಷನ್ ಸಿಂಧೂರ ಬಗ್ಗೆ ತಿಳಿಸಲು ಬಂದ ಈ ಅಧಿಕಾರಿಗಳು ಯಾರು?

publive-image

ಸಾವಾಯ್‌ ನಾಲಾ ಕ್ಯಾಂಒ್, ಮುಜಫರಾಬಾದ್‌

ಇದು ಎಲ್​ಓಸಿಯಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿದೆ. ಲಷ್ಕರ್‌ ತೊಯ್ಬಾದ ಟ್ರೈನಿಂಗ್ ಸೆಂಟರ್​​ ಆಗಿ ಕಾರ್ಯ ನಿರ್ವಹಿಸುತ್ತಿತ್ತು. 2024ರಲ್ಲಿ ಅಕ್ಟೋಬರ್‌ 20 ರಂದು ಸೋನ್​ಮಾರ್ಗ್‌ ನಡೆದ ಉಗ್ರರ ದಾಳಿ, ಅಕ್ಟೋಬರ್ 24 ರಂದು ಗುಲ್‌ಮಾರ್ಗ್​​ನಲ್ಲಿ ನಡೆದ ದಾಳಿ ಹಾಗೂ 2025, ಏಪ್ರಿಲ್ 22 ಪಹಲ್ಗಾಮ್​​ ದಾಳಿಯ ಉಗ್ರರು ಇಲ್ಲೇ ಟ್ರೈನಿಂಗ್ ಪಡೆದಿದ್ದರು.

ಸೈಯದ್ನಾ ಬಿಲಾಲ್‌ ಕ್ಯಾಂಪ್‌, ಮುಜಫರಾಬಾದ್‌

  • ಜೈಶ್‌ ಎ ಮೊಹಮ್ಮದ್ ಟ್ರೈನಿಂಗ್‌ ಏರಿಯಾ ಆಗಿದೆ
  •  ಆಯುಧ, ವಿಸ್ಫೋಟಕ, ಜಂಗಲ್‌ ಸರ್ವೈವಲ್‌ ಟ್ರೈನಿಂಗ್‌ ಕೇಂದ್ರವಾಗಿ ಕೆಲಸ ಮಾಡುತ್ತಿತ್ತು

ಗುರ್‌ಪುರ್ ಕ್ಯಾಂಪ್‌ ಕೋಟ್ಲಿ

  • ಎಲ್‌ಓಸಿಯಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿದೆ
  •  ಲಷ್ಕರ್‌ ತೊಯ್ಬಾ ನೆಲೆಯಾಗಿ ಇದು ಗುರುತಿಸಿಕೊಂಡಿತ್ತು
  •  ರಜೌರಿ ಮತ್ತು ಪೂಂಚ್‌ನಲ್ಲಿ ನಡೆಯುವ ದಾಳಿಗೆ ಕಾರಣವಾಗ್ತಿತ್ತು
  •  2023 ಏಪ್ರಿಲ್ 20, 2024 ಜೂನ್‌ನಲ್ಲಿ ತೀರ್ಥಯಾತ್ರೆಯ ಬಸ್‌ನ ದಾಳಿಯಾಗಿತ್ತು. ಇಲ್ಲಿಂದಲೇ ಟ್ರೈನಿಂಗ್ ಪಡೆದು ದಾಳಿ ಮಾಡಿದ್ದರು

ಬರ್ನಲಾ ಕ್ಯಾಂಪ್, ಬಿಂಬರ್‌

  • ಎಲ್‌ಓಸಿಯಿಂದ ಸುಮಾರು 9 ಕಿಲೋ ಮೀಟರ್ ದೂರದಲ್ಲಿತ್ತು
  •  ಶಸ್ತ್ರಾಸ್ತ್ರ, ಹ್ಯಾಂಡ್ಲಿಂಗ್‌, ಐಇಡಿ ಜಂಗಲ್‌ ಸರ್ವೈವಲ್‌ ಟ್ರೈನಿಂಗ್‌ ನೀಡುತ್ತಿತ್ತು

ಅಬ್ಬಾಸ್ ಕ್ಯಾಂಪ್‌, ಕೋಟ್ಲಿ

  • ಎಲ್‌ಓಸಿಯಿಂದ 13 ಕಿಲೋ ಮೀಟರ್ ದೂರದಲ್ಲಿತ್ತು
  •  ಲಷ್ಕರ್‌ ತೊಯ್ಬಾದ ಫಿದಾಯಿನ್ ಇಲ್ಲಿ ತಯಾರಿ
  •  15 ಟೆರರಿಸ್ಟ್‌ಗಳನ್ನ ಟ್ರೈನ್ ಮಾಡೋ ಕೆಲಸ ಮಾಡುತ್ತಿತ್ತು

ಪಾಕಿಸ್ತಾನದ ಒಳಗಿನ ಟಾರ್ಗೆಟ್‌

ಸರ್ಜಲ್ ಕ್ಯಾಂಪ್ ಸಿಯಾಲ್‌ಕೋಟ್‌

  • ಇಂಟರ್‌ನ್ಯಾಷನಲ್ ಬಾರ್ಡರ್‌ನಿಂದ 6 ಕಿಲೋ ಮೀಟರ್ ದೂರ
  •  ಮಾರ್ಚ್‌ 2025ರಲ್ಲಿ ಜಮ್ಮುಕಾಶ್ಮೀರ ಪೊಲೀಸರ 4 ಸಿಬ್ಬಂದಿ ಹತ್ಯೆಯಲ್ಲಿ ಪಾತ್ರ
  •  ಭಯೋತ್ಪಾದಕರ ಟ್ರೈನಿಂಗ್ ಕೂಡ ಇದೇ ಜಾಗದಲ್ಲಿ ಆಗ್ತಿತ್ತು

ಮೆಹಮೂನಾ ಜೋಯಾ ಕ್ಯಾಂಪ್‌, ಸಿಯಾಲ್‌ ಕೋಟ್‌

  • ಇಂಟರ್‌ನ್ಯಾಷನಲ್‌ ಬಾರ್ಡರ್‌ನಿಂದ ಸುಮಾರು 12 ಕಿಲೋ ಮೀಟರ್ ದೂರದಲ್ಲಿದೆ
  •  ಹಿಜ್ಬುಲ್ ಮುಜಾಹಿದ್ದೀನ್​ನ ಅತಿದೊಡ್ಡ ಕ್ಯಾಂಪ್ ಇದಾಗಿದೆ
  •  ಜಮ್ಮು ಭಾಗದಲ್ಲಿ ಭಯೋತ್ಪಾದಕತೆಯನ್ನ ಹರಡ್ತಿದ್ದ ಕೇಂದ್ರ
  •  ಪಠಾಣ್ ಕೋಟ್‌ ದಾಳಿಗೆ ಇಲ್ಲಿಂದಲೇ ಪ್ಲಾನ್ ಆಗಿತ್ತು

ಮರ್ಕಸ್ ತಯ್ಬಾ, ಮುರೀದ್ಕೆ

  • ಐಬಿಯಿಂದ ಸುಮಾರು 18 ರಿಂದ 25 ಕಿಲೋ ಮೀಟರ್ ದೂರದಲ್ಲಿದೆ
  •  2008ರ ಮುಂಬೈ ದಾಳಿಯ ಉಗ್ರರಿಗೆ ಟ್ರೈನಿಂಗ್ ಆಗಿದ್ದು ಇಲ್ಲೇ
  •  ಅಜ್ಮಲ್ ಕಸಬ್‌, ಡೇವಿಡ್‌ ಹೇಡ್ಲಿ ಟ್ರೈನಿಂಗ್ ಆಗಿದ್ದು ಕೂಡ ಇಲ್ಲೇ

ಮರ್ಕಸ್‌ ಸುಭಾನಲ್ಲಾ, ಭವಲ್‌ಪುರ್‌

  • ಐಬಿಯಿಂದ 100 ಕಿಲೋ ಮೀಟರ್ ದೂರದಲ್ಲಿದೆ
  •  ಜೈಶ್‌ ಎ ಮೊಹಮ್ಮದ್‌ ಹೆಡ್ ಆಫೀಸ್‌ ಇದೇ
  •  ಟ್ರೈನಿಂಗ್‌ ಕೇಂದ್ರ, ಉಗ್ರರ ನೇಮಕಾತಿ ಇಲ್ಲಿಂದಲೇ ಆಗ್ತಿತ್ತು

ಇಂದು ಭಾರತ ಏರ್ ಸ್ಟ್ರೈಕ್ ನಡೆಸಿದ 21 ಉಗ್ರರ ಕ್ಯಾಂಪ್ ಗಳ ವಿವರ

  1. ಸವಾಯಿ ನಾಲಾ
  2.  ಸಯ್ಯದ್ ನಾ ಬಿಲಾಲ್
  3.  ಮಸ್ಕರ್ ಇ ಅಕ್ಸಾ
  4.  ಚೀನಾಬಂಧಿ
  5.  ಅಬ್ದುಲ್ಲಾ ಬಿನ್ ಮಸೂದ್
  6.  ದುಲಾಯಿ
  7.  ಗರ್ಹಿ ಹಬೀಬುಲ್ಲಾ
  8.  ಬಟ್ಟಾರ್ಸಿ
  9.  ಬಾಲಾಕೋಟ್
  10.  ಒಗ್ಗಿ
  11.  ಬೋಯಿ
  12.  ಸೆನ್ಸಾ
  13.  ಗುಲಪುರ
  14.  ಕೋಟ್ಲಿ
  15.  ಬರಾಲಿ
  16.  ದುಂಗಿ
  17.  ಬರ್ನಾಲಾ
  18.  ಮೆಹಮೂನಾ ಜೋಯಾ
  19.  ಸರ್ಜಾಲಾ
  20.  ಮುರ್ದಿಕೆ
  21.  ಭವಾಲಪುರ

ಇದನ್ನೂ ಓದಿ: ಉಗ್ರ ಮಸೂದ್ ಅಜರ್ ಈಗ ಏಕಾಂಗಿ.. ಕುಟುಂಬದ 14 ಸದಸ್ಯರು ಸರ್ವನಾಶ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment