/newsfirstlive-kannada/media/post_attachments/wp-content/uploads/2024/12/ABC-JUICE.jpg)
ನೀವು ಹಲವಾರು ತರಹದ ಜ್ಯೂಸ್​ಗಳ ಬಗ್ಗೆ ಕೇಳಿರುತ್ತೀರಿ, ಕುಡಿದು ಕೂಡ ಇರ್ತೀರಾ, ಆದ್ರೆ ನಾವು ಇಂದು ನಿಮಗೆ ಒಂದು ಬಗೆಯ ಜ್ಯೂಸ್​ ಬಗ್ಗೆ ಹೇಳುತ್ತೇವೆ, ಈ ಜ್ಯೂಸ್ ಕುಡಿಯುವುದರಿಂದ ನಮಗೆ ಹಲವು ರೀತಿಯ ಆರೋಗ್ಯದ ಪ್ರಯೋಜನಗಳಿವೆ. ಆ ಜ್ಯೂಸ್​ನ ಹೆಸರು ABC ಜ್ಯೂಸ್ ಅಂತ. ಅಂದ್ರೆ ಸೇಬು, ಬಿಟ್​ರೂಟ್ ಹಾಗೂ ಕ್ಯಾರಟ್​ಗಳನ್ನು ಕತ್ತರಿಸಿ ಅವುಗಳನ್ನು ಮಿಕ್ಸ್ ಮಾಡಿ ತಯಾರಿಸುವ ಜ್ಯೂಸ್​ ಎಬಿಸಿ ಜ್ಯೂಸ್​. ಎ ಅಂದ್ರೆ ಆ್ಯಪಲ್, ಬಿ ಅಂದ್ರೆ ಬಿಟ್​ರೂಟ್ ಹಾಗೂ ಸಿ ಅಂದ್ರೆ ಕ್ಯಾರೆಟ್​ ಅಂತ ಅರ್ಥ. ಈ ಒಂದು ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹಕ್ಕೆ ಒಂದು ಹೊಸ ಚೈತನ್ಯವೇ ಬರುತ್ತದೆ. ಎನರ್ಜಿ ಲೆವಲ್ ಹೆಚ್ಚಾಗುವುದರ ಜೊತೆ ಅನೇಕ ರೀತಿಯ ಆರೋಗ್ಯದ ಲಾಭಗಳು ಇವೆ.
/newsfirstlive-kannada/media/post_attachments/wp-content/uploads/2023/06/SKIN_CARE.jpg)
ನೈಸರ್ಗಿಕವಾಗಿ ಹೆಚ್ಚುತ್ತದೆ ತ್ವಚೆಯ ಕಾಂತಿ
ಈ ಎ.ಬಿ.ಸಿ ಜ್ಯೂಸ್​ನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಕಳೆಗುಂದಿದ ಚರ್ಮದ ಕಾಂತಿಗೆ ಹೊಸ ಹೊಳಪು ಬರುತ್ತದೆ. ಸೇಬು ಹಣ್ಣಿನಲ್ಲಿ ಹೆಚ್ಚು ಆ್ಯಂಟಿ ಆಕ್ಸಿಡೆಂಟ್​ಗಳು ಇವೆ ವಿಟಮಿನ್ ಸಿ ಯಂತಹ ಅಂಶಗಳು ಇವೆ. ಇವು ಚರ್ಮದ ಮೇಲಾಗುವ ಮೂಲ ಸಮಸ್ಯೆಗಳೊಂದಿಗೆ ಹೋರಾಡುತ್ತವೆ. ಇನ್ನು ಕ್ಯಾರೆಟ್​ನಲ್ಲಿ ಬೆಟಾ ಕ್ಯಾರೊಟಿನ್ ಇವೆ. ಇವು ಸ್ಕಿನ್ ಟಿಶ್ಯುಗಳನ್ನು ಸರಿ ಮಾಡುತ್ತವೆ. ಬೀಟ್​ರೂಟ್​ ದೇಹದಲ್ಲಿ ರಕ್ತಪರಿಚಲನೆಯನ್ನ ಸುಧಾರಿಸುವುದರಿಂದ ಸಹಜವಾಗಿ ನಮ್ಮ ಚರ್ಮದ ಕಾಂತಿ ಹೊಳೆಯುತ್ತೆ. ಈ ಎ.ಬಿ.ಸಿ ಜ್ಯೂಸ್ ನಿಯಮಿತವಾಗಿ ಕುಡಿಯುವುದರಿಂದ ಮೊಡವೆಯಂತಹ ಸಮಸ್ಯೆಗಳು ಕಡಿಮೆಯಾಗಿ ತ್ವಚೆಯ ಆರೋಗ್ಯ ಸುಧಾರಿಸುತ್ತದೆ.
ಎನರ್ಜಿ ಲೆವಲ್​ನಲ್ಲಿ ವೃದ್ಧಿ
ಈ ಮೂರು ಪದಾರ್ಥಗಳಿಂದ ನೀವು ಜ್ಯೂಸ್ ಮಾಡಿಕೊಂಡು ಕುಡಿದರೆ, ನಿಯಮಿತವಾಗಿ ಅದನ್ನು ಪಾಲನೆ ಮಾಡಿದರೆ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚುತ್ತದೆ. ಬಿಟ್​ರೂಟ್​ ದೇಹದಲ್ಲಿ ಆಮ್ಲಜನಕದ ಪರಿಚಲನೆಯನ್ನ ಹೆಚ್ಚು ಮಾಡುತ್ತದೆ. ಇದು ನಮ್ಮ ಮೆದುಳಿನ ಸ್ನಾಯುಗಳಿಗೆ ಬಲ ಕೊಡುತ್ತದೆ. ಇನ್ನು ಸೇಬು ಹಣ್ಣು ಮತ್ತು ಕ್ಯಾರೆಟ್​ನಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶ ಇರುವುದರಿಂದ ಸುಸ್ತು, ಮೈಕೈನೋವಿನಂತಹ ಸಾಮಾನ್ಯ ಸಮಸ್ಯೆಗಳು ನಮ್ಮನ್ನು ಕಾಡುವುದಿಲ್ಲ.
/newsfirstlive-kannada/media/post_attachments/wp-content/uploads/2024/09/weight-Checking.jpg)
ತೂಕ ಇಳಿಕೆಗೂ ಕೂಡ ಇದು ಸಹಾಯ ಮಾಡುತ್ತದೆ
ದೇಹದ ತೂಕದಲ್ಲಿ ಒಂದಿಷ್ಟು ಕಿಲೋ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಲ್ಲಿ ಈ ಜ್ಯೂಸ್ ನಿಮಗಾಗಿ. ಎಬಿಸಿ ಜ್ಯೂಸ್​ನಲ್ಲಿ ಕಡಿಮೆ ಪ್ರಮಾಣದ ಕ್ಯಾಲರಿ ಹಾಗೂ ಹೆಚ್ಚು ಪ್ರಮಾಣದಲ್ಲಿ ಫೈಬರ್ ಇರುತ್ತದೆ. ಇದು ಮಲಬದ್ಧತೆಯಂತಹ ಸಮಸ್ಯೆಗಳಿಂದ ನಮ್ಮನ್ನು ದೂರ ಇಡುತ್ತದೆ. ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತದೆ. ನೀವು ಅನಾರೋಗ್ಯಕರ ಕುರುಕಲು ತಿಂಡಿಯನ್ನು ತಿನ್ನುವುದರಿಂದ ದೂರ ಇಡುತ್ತದೆ. ಇದರಿಂದ ತೂಕ ನಿರ್ವಹಣೆ ಕೂಡ ಸರಳವಾಗಿ ಹೋಗುತ್ತದೆ.
/newsfirstlive-kannada/media/post_attachments/wp-content/uploads/2024/08/HEART-DECEASE.jpg)
ಹೃದಯ ಆರೋಗ್ಯವನ್ನು ಕಾಪಾಡುತ್ತದೆ
ಎಬಿಸಿ ಜ್ಯೂಸ್​ ಕೇವಲ ಕುಡಿಯಲು ಸ್ವಾದಿಷ್ಟವಾಗಿರುವುದು ಮಾತ್ರವಲ್ಲ ಅದರ ಜೊತೆ ಅನೇಕ ಆರೋಗ್ಯಕರ ಉಪಯೋಗಗಳನ್ನು ನಮಗೆ ನೀಡುತ್ತದೆ. 2022ರಲ್ಲಿ ನಡೆದ ಒಂದು ಅಧ್ಯಯನ ಹೇಳುವ ಪ್ರಕಾರ. ಆ್ಯಪಲ್ ಜ್ಯೂಸ್​ನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯರಕ್ತನಾಳಗಳ ಆರೋಗ್ಯ ಸುಧಾರಿಸುತ್ತದೆ. ಇನ್ನು ಬಿಟ್​ರೂಟ್​ನಲ್ಲಿ ನಮ್ಮ ದೇಹದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವ ಗುಣವಿದೆ ಮತ್ತು ಈಗಾಗಲೇ ಹೇಳಿದಂತೆ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಕ್ಯಾರೆಟ್​ನಲ್ಲಿ ಪೊಟ್ಯಾಶಿಯಂ ಅಂಶ ಇದ್ದು ಇದು ಕೊಲೆಸ್ಟ್ರಾಲ್​ ಹೆಚ್ಚಾಗುವುದನ್ನು ತಡೆಯುತ್ತದೆ. ಹೀಗಾಗಿ ಈ ಎಬಿಸಿ ಜ್ಯೂಸ್ ಹೃದಯ ಆರೋಗ್ಯವನ್ನು ಕೂಡ ಚೆನ್ನಾಗಿ ಇಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us