/newsfirstlive-kannada/media/post_attachments/wp-content/uploads/2025/06/ranjani.jpg)
ಕನ್ನಡಿಗರ ವಿರೋಧ ಕಟ್ಟಿಕೊಂಡು ಕ್ಷಮೆ ಕೇಳದಿರೋ ಕಮಲ್ ಹಾಸನ್ ಅವರಿಗೆ ಮೊನ್ನೆಯಷ್ಟೇ ಹೈ ಕೋರ್ಟ್ ತರಾಟೆ ತೆಗೆದುಕೊಂಡಿತ್ತು. ‘ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂದು ಮಾತನಾಡುವ ಮೂಲಕ ಅವರು ನಮ್ಮ ರಾಜ್ಯದವರ ವಿರೋಧ ಕಟ್ಟಿಕೊಂಡರು.
ಇದನ್ನೂ ಓದಿ:ಯಾರಿಗುಂಟು ಯಾರಿಗಿಲ್ಲ.. ಒಂದೇ ಸೀರಿಯಲ್ನಲ್ಲಿ ತಾಯಿ, ಮಗ, ಮಗಳು ಜಬರ್ದಸ್ತ್ ನಟನೆ
ಹೀಗಾಗಿ ಕರ್ನಾಟಕದಲ್ಲಿ ಕಮಲ್ ಹಾಸನ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ನಟನಿಗೆ ತಾವು ಬರೆದ ಕನ್ನಡದ ಪುಸ್ತಕವನ್ನು ನೀಡಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ತಾವು ಬರೆದಿರುವ `ಸ್ಟೈಲ್ ರೈಟ್’ ಮತ್ತು `ಕಥೆ ಡಬ್ಬಿ’ ಎಂಬ ಪುಸ್ತಕಗಳನ್ನು ನಟನಿಗೆ ನೀಡಿದ್ದರು.
ಇದನ್ನೇ ನೋಡಿದ ಅಭಿಮಾನಿಗಳು ನಟಿ ಅವರಿಗೆ ಕನ್ನಡ ಪುಸ್ತಕ ಕೊಟ್ಟು ಟಾಂಗ್ ಕೊಟ್ಟಿದ್ದಾರೆ, ಈ ಮಧ್ಯೆ ಇದೆಲ್ಲಾ ಯಾಕೆ ಅಂತೆಲ್ಲಾ ಕಾಮೆಂಟ್ಸ್ ಮಾಡುವ ಮೂಲಕ ನಟಿಗೆ ಪ್ರಶ್ನೆ ಕೇಳಿದ್ದರು. ಈ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಖುದ್ದು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡು ತಾನು ಕೊಟ್ಟಿದ್ದು ಏಕೆ ಎಂಬುವುದನ್ನು ವಿವರಿಸಿದ್ದಾರೆ.
View this post on Instagram
ಕಮಲ್ ಸರ್ಗೆ ನಾನು ಕನ್ನಡ ಪುಸ್ತಕ ಕೊಟ್ಟ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದೆ. ಅದರ ಕಾಂಟೆಸ್ಟ್ ಎಷ್ಟೊಂದು ಜನಕ್ಕೆ ಅರ್ಥವಾಗಿದೆ. ಆದ್ರೆ ಸುಮಾರಷ್ಟು ಜನಕ್ಕೆ ಇದು ನನ್ನ ಮನೆ ಮಾತು, ಜಾತಿ ಅಂತೆಲ್ಲಾ ಬೇರೆ ಬೇರೆ ಆಯಾಮವನ್ನು ಪಡೆದುಕೊಂಡಿದೆ ಹೀಗಾಗಿ ನಾನು ಈ ವಿಡಿಯೋ ಮಾಡ್ತಾ ಇದ್ದೀನಿ. ಈಗಿನ ಪರಿಸ್ಥಿತಿಯಲ್ಲಿ ನಾನು ಹೋಗಿ ಕನ್ನಡ ಪುಸ್ತಕ ಕೊಡ್ತೀನಿ ಅಂತ ಅವರು ಒಪ್ಪಿಕೊಳ್ಳೋದಿಲ್ಲ. ಇದು ನಾನು ನಿರ್ದೇಶನ ಮಾಡುತ್ತಿರುವ ಸಿನಿಮಾ ಪ್ರಮೋಷನ್ಗಾಗಿ ತುಂಬಾ ಕಷ್ಟ ಪಟ್ಟು, ನನ್ನ ಸಿನಿಮಾ ತಂಡ ಹೋಗಿ ಕಮಲ್ ಹಾಸನ್ ಸರ್ನ 3-4 ತಿಂಗಳುಗಳ ಹಿಂದೆ ಭೇಟಿಯಾಗಿದ್ದೇವೆ. ನಮ್ಮ ಕಂಟೆಂಟ್ ಬಗ್ಗೆ ಒಳ್ಳೆಯ ಮಾತಾಡಿ, ನಮ್ಮ ಪೋಸ್ಟರ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದರು. ಅದನ್ನು ನಾವು ಬಳಸಿಕೊಂಡು ಟೀಸರ್ ಲಾಂಚ್ ಮಾಡಬೇಕು ಅಂತ ಪ್ಲಾನ್ ಮಾಡಿದ್ವಿ. ಆದ್ರೆ ಈ ಮಧ್ಯೆ ಈ ಘಟನೆ ನಡೆದಿದೆ. ಈ ವಿವಾದದಿಂದ ನಮ್ಮೆಲ್ಲರಿಗೂ ಬೇಸರ ಆಗಿದೆ. ಕನ್ನಡ ವಿರೋಧಿ ಹೇಳಿಕೆ ಕೊಟ್ಟು, ಕ್ಷಮೆ ಕೂಡ ಕೇಳೋದಿಲ್ಲ ಅಂದ್ರೆ ನಾವು ಯಾರು ಒಪ್ಪೋದಿಲ್ಲ. ಹೀಗಾಗಿ ಸಿನಿಮಾ ಪ್ರಮೋಷನ್ನನ್ನೇ ಕ್ಯಾನ್ಸಲ್ ಮಾಡಿದ್ದೇವೆ. ಆದ್ರೆ ನಾನು ಅಲ್ಲಿಗೆ ಹೋದಾಗ ಕೊನೆಯ ಕ್ಷಣದಲ್ಲಿ ನಾನು ಬರೆದಿರೋ ಪುಸ್ತಕ ಕೊಟ್ಟಿದ್ದೇನೆ. ಈ ಮೂಲಕ ನಾನು ಅವರ ವಿರುದ್ಧ ಪ್ರತಿಭಟನೆ ಮಾಡ್ತಾ ಇದ್ದೀನಿ ಅನ್ನೋದು ನನ್ನ ಉದ್ದೇಶ ಆಗಿತ್ತು ಎಂದು ಹೇಳಿದ್ದಾರೆ.
ರಂಜನಿ ರಾಘವನ್ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರವಾಹಿಯಲ್ಲಿ ಕನ್ನಡ ಉಪನ್ಯಾಸಕಿಯ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನದಲ್ಲಿ ಕನ್ನಡದ ಮೇಷ್ಟ್ರಾಗಿ ಅಚ್ಚೆ ಹಾಕಿದ್ದರು. ಈ ಧಾರವಾಹಿಯ ಬಳಿಕ ಅವರು ನಟನೆಯಿಂದ ದೂರ ಉಳಿದು ನಿರ್ದೇಶದತ್ತ ಹೆಜ್ಜೆ ಇಟ್ಟಿದ್ದಾರೆ. `ಡಿ ಡಿ ಡಿಕ್ಕಿ’ ಚಿತ್ರವನ್ನು ನಿರ್ದೇಶಿದ್ದು, ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ