/newsfirstlive-kannada/media/post_attachments/wp-content/uploads/2025/01/SKY-FORCE.jpg)
ಅಕ್ಷಯ್ ಕುಮಾರ್ ನಟನೆಯ ಹೊಸ ಸಿನಿಮಾ ಸ್ಕೈ ಫೋರ್ಸ್​ ಈಗ ಕರ್ನಾಟಕದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಕೊಡವ ಸಮುದಾಯ ಈ ಸಿನಿಮಾ ವಿರುದ್ಧ ಸಿಡಿದೆದ್ದು ನಿಂತಿದೆ. 1965ರ ಭಾರತ ಪಾಕಿಸ್ತಾನದ ಯುದ್ಧದಲ್ಲಿ ಮೊದಲ ಏರ್​ಸ್ಟ್ರೈಕ್ ನಡೆಸಿದ ಘಟನೆ ಆಧಾರದ ಮೇಲೆ ಈ ಸಿನಿಮಾವನ್ನು ಮಾಡಲಾಗಿದೆ. ಕರ್ನಾಟಕದಲ್ಲಿ ಈ ಸಿನಿಮಾ ವಿರುದ್ಧ ಈಗ ಕೊಡವ ಸಮುದಾಯ ಸಿಡಿದೆದ್ದು ನಿಂತಿದೆ. ಅದಕ್ಕೆ ಕಾರಣ ಕೊಡಗಿನ ವೀರ ಅಜ್ಜಮಾಡಾ ಬೊಪಯ್ಯ ದೇವಯ್ಯ ಅವರನ್ನು ಚಿತ್ರದಲ್ಲಿ ತೋರಿಸಿದ ರೀತಿಗೆ.
ಇದನ್ನೂ ಓದಿ:76ನೇ ಗಣರಾಜ್ಯೋತ್ಸವ ಸಂಭ್ರಮ.. ಕೆಲವೇ ಕ್ಷಣಗಳಲ್ಲಿ ಧ್ವಜಾರೋಹಣ ನೆರವೇರಿಸಲಿರುವ ರಾಷ್ಟ್ರಪತಿ
ಸ್ಕ್ವಾಡನ್ ಲೀಡರ್ ದೇವಯ್ಯ ಅವರನ್ನು ತಮಿಳುನಾಡಿನ ಯೋಧನನ್ನಾಗಿ ತೋರಿಸಿದ ಕಾರಣ ಇಡೀ ಕೊಡವ ಸಮುದಾಯ ಈಗ ಚಿತ್ರದ ವಿರುದ್ಧ ಸಿಡಿದೆದ್ದಿದೆ. ಅನೇಕ ಕೊಡವ ಸಮುದಾಯದ ಯುವ ಜನರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ದೇವಯ್ಯ ಎಂಬ ವೀರ ಸ್ಕ್ವಾಡನ್ ಲೀಡರ್​ ಕರ್ನಾಟಕದ ಹೆಮ್ಮೆ ಅದು ಮಾತ್ರವಲ್ಲ ಅವರು ಕೊಡಗಿನ ಗರ್ವ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ವಿಡಿಯೋಗಳನ್ನು ಮಾಡಿ ಸಿನಿಮಾ ತಂಡದ ವಿರುದ್ಧ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.
Dear @MaddockFilms & @akshaykumar ji
She is spot on, it would have been a wonderful gesture to the Kodavas had you kept it real.#ApplauseForSkyforcepic.twitter.com/GlEOMT9uj0
— P K T 🇮🇳 (@pramodthimmaiah)
Dear @MaddockFilms & @akshaykumar ji
She is spot on, it would have been a wonderful gesture to the Kodavas had you kept it real.#ApplauseForSkyforcepic.twitter.com/GlEOMT9uj0— P K T 🇮🇳 (@pramodthimmaiah) January 24, 2025
">January 24, 2025
ಕೊಡವ ಸಮುದಾಯದ ಲಾಯರ್ ತಾನಿಯಾ ಎಂಬುವವರು ಒಂದು ವಿಡಿಯೋ ಮಾಡಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಕ್ವಾಡನ್ ಲೀಡರ್ ದೇವಯ್ಯ ಅವರ ಸಮುದಾಯವನ್ನು ತಪ್ಪಾಗಿ ತೋರಿಸುವ ಹಿಂದಿರುವ ಉದ್ದೇವೇನು ಎಂದು ಪ್ರಶ್ನಿಸಿದ್ದಾರೆ. ಅದರಲ್ಲೂ ಒಂದು ಸಿನಿಮಾ ಕೋಟ್ಯಾಂತರ ಜನರಿಗೆ ಪ್ರೇರಣೆಯಾಗುತ್ತದೆ. ಇಂತಹ ಮಾಧ್ಯಮದ ಮೂಲಕ ಸುಳ್ಳನ್ನು ಏಕೆ ಬಿತ್ತುತ್ತಿದ್ದೀರಿ ಎಂದು ಗುಡುಗಿದ್ದಾರೆ.
/newsfirstlive-kannada/media/post_attachments/wp-content/uploads/2025/01/SKY-FORCE-1.jpg)
ಹೌದು, ಇದು ಸತ್ಯ ಘಟನೆ ಆಧಾರಿತ ಸಿನಿಮಾ ನೀವು ಇದರಲ್ಲಿ ಸ್ಕ್ವಾಡರ್ನ್ ಲೀಡರ್ ದೇವಯ್ಯ ಅವರನ್ನ ಕೊಡವರನ್ನಾಗಿ ತೋರಿಸುವ ಬದಲು ತಮಿಳಿಗನನ್ನಾಗಿ ತೋರಿಸಿದ್ದೀರಿ ಈ ಮೂಲಕ ಒಂದು ಜನಾಂಗವನ್ನು ಒಂದು ವಂಶಾವಳಿಯನ್ನು ನೀವು ಅಪಮಾನ ಮಾಡಿದ್ದೀರಿ ಎಂದು ಮತ್ತೊಬ್ಬ ಎಕ್ಸ್ ಖಾತೆಯ ಬಳಕೆದಾರ ಆಕ್ರೋಶ ಹೊರಹಾಕಿದ್ದಾರೆ.
ಸ್ಕ್ವಾರ್ಡನ್ ಲೀಡರ್ ದೇವಯ್ಯ ಮಹಾವೀರ ಚಕ್ರ ಪ್ರಶಸ್ತಿ ಪಡೆದ ಏಕೈಕ ವಾಯುಸೇನೆಯ ಅಧಿಕಾರಿ. 1965ರಲ್ಲಿ ಅವರು ತೋರಿದ ಶೌರ್ಯ ಭಾರತೀಯ ಇತಿಹಾಸ ಎಂದು ಮರೆಯಲು ಸಾಧ್ಯವಿಲ್ಲ. ಅಂತಹ ವೀರ ಯೋಧನ ಜೀವನ ಕುರಿತು ಮಾಡುತ್ತಿರುವ ಚಿತ್ರದಲ್ಲಿ ದೊಡ್ಡ ಪ್ರಮಾದ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನು ನಟ ಗುಲ್ಷನ್ ದೇವಯ್ಯ ಕೂಡ ಇದೇ ಕೊಡವ ಸಮುದಾಯಕ್ಕೆ ಸೇರುತ್ತಾರೆ. ಇವರು ಕೂಡ ಸ್ಕ್ವಾರ್ಡನ್ ಲೀಡರ್ ದೇವಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆಳಕು ಚೆಲ್ಲಿದ್ದಾರೆ.
/newsfirstlive-kannada/media/post_attachments/wp-content/uploads/2025/01/SKY-FORCE-2.jpg)
ಸ್ಕೈ ಫೋರ್ಸ್​ ಸಿನಿಮಾ ಟೇಕನ್ ಆಫ್ ಆದಾಗಿನಿಂದ ನಾನು ಒಂದು ವಿಚಾರವನ್ನ ಈ ರಣಕಲಿಯ ಬಗ್ಗೆ ನಿಮ್ಮ ಗಮನಕ್ಕೆ ತರಬೇಕು. ನಾವಿಬ್ಬರು ಒಂದೇ ಸರ್ ನೇಮ್ ಹೊಂದಿದ್ದೇವೆ ಆದ್ರೆ ನಾವು ಸಂಬಂಧಿಕರಲ್ಲ. ಆದ್ರೆ ಎಬಿ ದೇವಯ್ಯ ಅವರು 1988ರಲ್ಲಿ ಎರಡನೇ ಅತ್ಯುನ್ನತ ಸೇನಾ ಗೌರವವಾದ ಮಹಾವೀರ ಚಕ್ರ ಪ್ರಶಸ್ತಿ ಪಡೆದ ಯೋಧ. ಸುಮಾರು 23 ವರ್ಷ ಅವರು ನಾಪತ್ತೆಯಾದ ಯೋಧರ ಲಿಸ್ಟ್​ನಲ್ಲಿದ್ದರು. 1965ರಲ್ಲಿ ನಡೆದ ಏರ್​ಸ್ಟ್ರೈಕ್ ಆಪರೇಷನ್​ ವೇಳೆ ಅವರು ಶತ್ರುಗಳ ಪ್ರದೇಶದಲ್ಲಿ ಜೀವ ಬಿಟ್ಟಿದ್ದರು ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ರಾಜ್ಯ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿ ನಿರಾಕರಿಸಿದ ಕಿಚ್ಚ ಸುದೀಪ್; ಕಾರಣವೇನು?
ಇದೇ ಜನವರಿ 24 ರಂದು ಸ್ಕೈ ಫೋರ್ಸ್ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿದೆ ಸರ್​ಗೊಢ ಏರ್​​ಬೇಸ್​ನಲ್ಲಿ 1965ರಲ್ಲಿ ನಡೆದ ಭಾರತದ ಮೊದಲ ಏರ್​ಸ್ಟ್ರೈಕ್​ ಕುರಿತಾದ ಸತ್ಯ ಘಟನೆಯಾಧಾರಿತ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್, ವೀರ ಪಹರಿಯಾ, ಸಾರಾ ಅಲಿಖಾನ್ ಮತ್ತು ನಿಮೃತ ಕೌರ್ ನಟನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us