/newsfirstlive-kannada/media/post_attachments/wp-content/uploads/2024/12/PLAN.jpg)
ದಕ್ಷಿಣ ಕೋರಿಯಾದಲ್ಲಿ ನಿನ್ನೆ ಸಂಭವಿಸಿದ ವಿಮಾನ ದುರಂತದಲ್ಲಿ 179 ಮಂದಿ ಜೀವ ಬಿಟ್ಟಿದ್ದಾರೆ. 181 ಪ್ರಯಾಣಿಕರಲ್ಲಿ ಬದುಕುಳಿದಿದ್ದು ಕೇವಲ ಇಬ್ಬರು ಮಾತ್ರ. ಅವರೂ ಕೂಡ ಗಂಭೀರ ಸ್ವರೂಪದ ಗಾಯಕ್ಕೆ ತುತ್ತಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಖುಷಿ ವಿಚಾರ ಏನೆಂದರೆ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೂ ಕೂಡ ಪ್ರಜ್ಞೆ ಬಂದಿದೆ. ಆದರೆ ದುರ್ಘಟನೆ ಬಗ್ಗೆ ನೆನಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಘಟನೆ ಬಗ್ಗೆ ಕೇಳಿ ಆಘಾತಕ್ಕೆ ಒಳಗಾಗಿದ್ದಾರೆ. ಅಲ್ಲದೇ ನಡೆದಿರುವ ಘಟನೆ ವಿಚಾರದಲ್ಲಿ ಗೊಂದಲದಲ್ಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಸುದೀಪ್ ಬಳಿ ವಿಶೇಷ ಮನವಿ ಮಾಡಿದ ಐಶ್ವರ್ಯ.. ‘ಡನ್’ ಎಂದ ಕಿಚ್ಚ..!
Jeju Air ವಿಮಾನ ಸ್ಕಿಡ್ ಆಗಿ ಅಪಘಾತಕ್ಕೆ ಒಳಗಾಗುತ್ತಿದ್ದಂತೆಯೇ ತುರ್ತು ರಕ್ಷಣಾ ಪಡೆ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದೆ. ಬದುಕುಳಿದವರಲ್ಲಿ ಇಬ್ಬರು ಕೂಡ ವಿಮಾನ ಸಿಬ್ಬಂದಿ ಆಗಿದ್ದಾರೆ. ಅವರಲ್ಲಿ ಓರ್ವನ ಹೆಸರು ಲೀ (Lee) ಎಂದಾಗಿದೆ. 32 ವರ್ಷದ ಲೀ ವಿಮಾನ ದುರಂತದಲ್ಲಿ ಬದುಕುಳಿದಿದ್ದಾರೆ. ಇನ್ನು ಇವರಿಗೆ ಪ್ರಜ್ಞೆ ಬರ್ತಿದ್ದಂತೆಯೇ ಏನಾಯ್ತು? ನಾನ್ಯಾಕೆ ಇಲ್ಲಿದ್ದೇನೆ ಎಂದು ವೈದ್ಯರ ಬಳಿ ಕೇಳಿದ್ದಾರೆ ಅಂತಾ ವರದಿಯಾಗಿದೆ.
ಇವರ ಮಾತನ್ನು ಕೇಳಿಸಿಕೊಂಡ ವೈದ್ಯರ ತಂಡ ಆಘಾತಕ್ಕೆ ಒಳಗಾಗಿದೆ. ಗಾಯಗೊಂಡಿರುವ ವ್ಯಕ್ತಿ ತುಂಬಾ ಪ್ಯಾನಿಕ್ ಆದಂತೆ ಕಾಣುತ್ತಿದೆ. ಅಲ್ಲದೇ ಅವರು ವಿಮಾನದಲ್ಲಿದ್ದ ಪ್ರಯಾಣಿಕರ ಸುರಕ್ಷತೆ ಬಗ್ಗೆ ಹೆಚ್ಚು ಚಿಂತಿಸಿದಂತೆ ಕಾಣ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಲೀ ಅವರು ಪ್ರಯಾಣಿಕರ ಸಹಾಯಕ್ಕೆ ನಿಯೋಜನೆಗೊಂಡಿದ್ದರು. ಅವರಿಗೆ ತುಂಬಾ ಗಂಭೀರವಾಗಿ ಗಾಯವಾಗಿದೆ. ಎಡ ಭುಜ, ತಲೆಗೆ ಪೆಟ್ಟು ಬಿದ್ದಿದೆ. ಸದ್ಯ ಅವರ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ. ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ:ಬಾಹ್ಯಾಕಾಶದಲ್ಲಿ ಹೊಸ ಭಾಷ್ಯ ಬರೆಯಲು ಸಜ್ಜಾದ ಇಸ್ರೋ; ನಭಕ್ಕೆ ನೆಗೆಯಲಿದೆ ಉಪಗ್ರಹ
ಅದೇ ರೀತಿ 25 ವರ್ಷದ ಕ್ವಾನ್ ಅನ್ನೋರು ಕೂಡ ಬದುಕುಳಿದಿದ್ದಾರೆ. ಇವರ ನೆತ್ತಿ ಸೀಳಿದೆ, ಪಾದಕ್ಕೆ ಗಾಯವಾಗಿದೆ. ಕಿಬ್ಬೊಟ್ಟೆಗೂ ಬಲವಾದ ಪೆಟ್ಟು ಬಿದ್ದಿದೆ. ಇವರು ತಲೆ ಹಾಗೂ ಕಾಲು ಮತ್ತು ಹೊಟ್ಟೆ ನೋವು ಎಂದು ಕಿರುಚಾಡುತ್ತಿದ್ದಾರೆ. ಲೀ ಅವರಂತೆ ಇವರಿಗೂ ಕೂಡ ಘಟನೆ ಬಗ್ಗೆ ಜ್ಞಾಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ನಿನ್ನೆ ಬೆಳಗ್ಗೆ Jeju Air- 7C2216 ಎಬ ವಿಮಾನವು ಬ್ಯಾಂಕಾಕ್ನಿಂದ ದಕ್ಷಿಣ ಕೋರಿಯಾಗೆ ವಾಪಸ್ ಆಗುತ್ತಿತ್ತು. ಬೆಳಗ್ಗೆ 9 ಗಂಟೆ 7 ನಿಮಿಷಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದ ಪರಿಣಾಮ ವಿಮಾನ ಗೇರ್ನಲ್ಲಿ ಸಮಸ್ಯೆ ಆಗಿದೆ. ಕೂಡಲೇ ಪೈಲೆಟ್ ವಿಮಾನವನ್ನು ತುರ್ತು ಭೂಸ್ಪರ್ಷ ಮಾಡಲು ಪ್ರಯತ್ನಿಸಿದ್ದಾರೆ. ಸ್ಕಿಡ್ ಆದ ವಿಮಾನ, ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.
ಇದನ್ನೂ ಓದಿ:2025ರಲ್ಲಿ ಸಂಭವಿಸಲಿವೆ ಒಟ್ಟು 4 ಗ್ರಹಣ; ಭಾರತದಲ್ಲಿ ಎಷ್ಟು ಗೋಚರ? ಯಾವಾಗ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ