ಕೈಗೆಟುಕುವ ದರದಲ್ಲಿ MBBS ಸೀಟ್.. ಆದರೂ ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗೋದು ಯಾಕೆ..?

author-image
Ganesh
Updated On
ಕೈಗೆಟುಕುವ ದರದಲ್ಲಿ MBBS ಸೀಟ್.. ಆದರೂ ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗೋದು ಯಾಕೆ..?
Advertisment
  • ದೇಶದ ಅತಿ ದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್
  • ಜೂನ್​​ 15 ರಂದು ನಡೆಯಲಿರುವ ನೀಟ್ ಪರೀಕ್ಷೆ
  • ದೇಶದಲ್ಲಿ ಸದ್ಯ 118190 ಎಂಬಿಬಿಎಸ್ ಸೀಟುಗಳಿವೆ

ದೇಶದ ಅತಿ ದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಮುಂದಿನ ತಿಂಗಳು ಅಂದ್ರೆ ಜೂನ್​​ 15ನೇ ತಾರೀಕಿನಂದು ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆಸಿಕೊಂಡಿದೆ. ನೀಟ್​​ ಪರೀಕ್ಷೆ ಬರೆದವರು ಱಂಕ್​ ಪಡೆದು MBBS, ಡೆಂಟಲ್, B.Sc ನರ್ಸಿಂಗ್, BAMS, BHMS, BUMS ಮತ್ತು BSMS ಕೋರ್ಸ್​ಗೆ ಪ್ರವೇಶ ಪಡೆಯಬಹುದು.

ಡಾಕ್ಟರ್​ ಆಗಬೇಕು ಎಂಬುದು ಎಷ್ಟೋ ಅಭ್ಯರ್ಥಿಗಳ ಕನಸು. ಇವರ ಮೊದಲ ಆದ್ಯತೆ ಸರ್ಕಾರಿ ವೈದ್ಯಕೀಯ ಕಾಲೇಜು. ಕಾರಣ ಸರ್ಕಾರಿ ಮೆಡಿಕಲ್​ ಕಾಲೇಜಲ್ಲಿ ಎಂಬಿಬಿಎಸ್‌ ಫೀಸ್​ ಬಹಳ ಕಡಿಮೆ. ಕೇವಲ 1.25 ಲಕ್ಷಕ್ಕಿಂತ ಕಡಿಮೆ ಹಣದಲ್ಲೇ ಇಲ್ಲಿ ಎಂಬಿಬಿಎಸ್​ ಸೀಟ್​ ಪಡೆಯಬಹುದು.

ಇದನ್ನೂ ಓದಿ: ಯಾರಿಗೆ ಎಜುಕೇಷನ್​ ಲೋನ್​ ಸಿಗುತ್ತೆ..? ವಿದ್ಯಾರ್ಥಿಗಳು ಓದಲೇಬೇಕಾದ ಸ್ಟೋರಿ..!

ದೇಶದಲ್ಲಿ ಸದ್ಯ 118190 ಎಂಬಿಬಿಎಸ್ ಸೀಟುಗಳಿವೆ. ಈ ಪೈಕಿ 60124 ಸೀಟುಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೇ ಇವೆ. ಅದರಲ್ಲೂ 50 ಸಾವಿರ ಸೀಟುಗಳಿಗೆ ಮಾತ್ರ ಕಡಿಮೆ ಫೀಸ್​ ಇದ್ದು, ವಾರ್ಷಿಕ ಶುಲ್ಕ 1 ಲಕ್ಷ ರೂ ಇದೆ. ಉಳಿದ 10,000 ಸೀಟುಗಳನ್ನು ಮ್ಯಾನೇಜ್ಮೆಂಟ್​​ ಮತ್ತು ಎನ್‌ಆರ್‌ಐ ಕೋಟಾಗಳ ಮೂಲಕ ಭರ್ತಿ ಮಾಡಲಾಗುತ್ತದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮ್ಯಾನೇಜ್ಮೆಂಟ್​ ಸೀಟುಗಳ ಫೀಸ್​​ ವರ್ಷಕ್ಕೆ 10 ಲಕ್ಷದಿಂದ 25 ಲಕ್ಷ ರೂ. ಇರಲಿದೆ. ಖಾಸಗಿ ಕಾಲೇಜುಗಳಲ್ಲಿ ಮೆಡಿಕಲ್​ ಸೀಟ್​​​ ಫೀಸ್ 30 ಲಕ್ಷದಿಂದ 1.25 ಕೋಟಿ ರೂವರೆಗೆ ಇರುತ್ತದೆ.

ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ವೈದ್ಯಕೀಯ ಕಾಲೇಜು ತೆರೆಯುತ್ತದೆ. ವ್ಯಾಸಂಗಕ್ಕಾಗಿ ಪ್ರತಿ ವರ್ಷ ನೂರಾರು ಕೋಟಿ ಬಜೆಟ್ ಬಿಡುಗಡೆ ಮಾಡಬೇಕು. ವೈದ್ಯಾಧಿಕಾರಿಯನ್ನು ಎಂಬಿಬಿಎಸ್ ಪದವೀಧರರನ್ನಾಗಿ ಮಾಡಲು ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡಬೇಕಾಗಿದೆ. ಅದಕ್ಕಾಗಿ ಕಾಲೇಜುಗಳ ಸಂಖ್ಯೆ ಹೆಚ್ಚಿಸುವ ಜೊತೆಗೆ ವೆಚ್ಚವನ್ನು ಸರ್ಕಾರಿ ಮ್ಯಾನೇಜ್‌ಮೆಂಟ್ ಮತ್ತು ಎನ್‌ಆರ್‌ಐ ಕೋಟಾದ ಸೀಟುಗಳಿಂದ ವಸೂಲಿ ಮಾಡುವುದು ಸರ್ಕಾರದ ಪ್ಲಾನ್​ ಆಗಿದೆ.

ಇದನ್ನೂ ಓದಿ: ಮೊಮ್ಮಗನಿಗೆ ವಿಶ್ ಮಾಡಿದ ರಜನಿಕಾಂತ್​.. ಡಿವೋರ್ಸ್​ ಪಡೆದರೂ ಮಗನಿಗಾಗಿ ಒಂದಾದ ಧನುಷ್​, ಐಶ್ವರ್ಯ!

ಇಷ್ಟೇ ಅಲ್ಲ, ನೀಟ್ ಯುಜಿಯಲ್ಲೂ ತೀವ್ರ ಪೈಪೋಟಿ ಇದೆ. ಪ್ರತಿ ವರ್ಷ 25ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಯುಜಿಗೆ ನೋಂದಣಿ ಮಾಡಿಕೊಳ್ಳುತ್ತಾರೆ. ಪರೀಕ್ಷೆ ಮೂಲಕ 19ಕ್ಕೂ ಹೆಚ್ಚು ಅಭ್ಯರ್ಥಿಗಳು ಒಂದು ಸೀಟಿಗೆ ಪೈಪೋಟಿ ನಡೆಸಬೇಕಿದೆ. ಱಂಕ್​ ಬಂದ ವಿದ್ಯಾರ್ಥಿಗಳಿಗೆ ಮಾತ್ರ ಕೈಗೆಟುಕುವ ದರದಲ್ಲಿ MBBS ಸೀಟ್​ ಸಿಗಲಿದೆ.

ಕರ್ನಾಟಕದ ಎಂಬಿಬಿಎಸ್ ಸೀಟುಗಳು

ಕರ್ನಾಟಕದಲ್ಲಿ ಗರಿಷ್ಠ 12,545 ಸೀಟುಗಳು ಇವೆ. ರಾಜ್ಯದಲ್ಲಿ ಒಟ್ಟಾರೆ 73 ವೈದ್ಯಕೀಯ ಕಾಲೇಜುಗಳಿವೆ. ಇಡೀ ದೇಶದಲ್ಲೇ ಸೀಟುಗಳ ಸಂಖ್ಯೆಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಸರ್ಕಾರಿ ಎಂಬಿಬಿಎಸ್​ ಸೀಟು ಭಾರೀ ಪೈಪೋಟಿ ಇದ್ದು, ಮ್ಯಾನೇಜ್​ಮೆಂಟ್​ ಸೀಟು 1 ಕೋಟಿ 25 ಲಕ್ಷದವರೆಗೂ ಇದೆ. ಹಾಗಾಗಿ ಭಾರತೀಯ ವಿದ್ಯಾರ್ಥಿಗಳು ಎಂಬಿಬಿಎಸ್​​ ಮಾಡಲು ವಿದೇಶಕ್ಕೆ ಹೋಗುತ್ತಿದ್ದಾರೆ. ಅದರಲ್ಲೂ ರಷ್ಯಾದಲ್ಲೇ ಎಂಬಿಬಿಎಸ್​​ ಮಾಡುತ್ತಾರೆ.

ಕಡಿಮೆ ವೆಚ್ಚದಲ್ಲಿ ರಷ್ಯಾದಲ್ಲಿ ಎಂಬಿಬಿಎಸ್ ಅಧ್ಯಯನ

ನೀಟ್ ಯುಜಿ ಸ್ಪರ್ಧೆ ಮತ್ತು ಹಲವು ಕಾರಣದಿಂದಾಗಿ ಪೋಷಕರು ತಮ್ಮ ಮಕ್ಕಳಿಗೆ ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಬಯಸುತ್ತಾರೆ. ಅವರು ಪೋಲೆಂಡ್, ಜೆಕ್ ರಿಪಬ್ಲಿಕ್, ಹಂಗೇರಿ, ಆಸ್ಟ್ರಿಯಾ, ಸ್ಲೋವಾಕಿಯಾ ಮತ್ತು ಜಾರ್ಜಿಯಾದಂತಹ ದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಇವರ ಮೊದಲ ಆದ್ಯತೆ ರಷ್ಯಾ. ಕಾರಣ ರಷ್ಯಾ ಕೆಲವು ವರ್ಷಗಳಿಂದ ಕೈಗೆಟುಕುವ ದರದಲ್ಲಿ ವೈದ್ಯಕೀಯ ಶಿಕ್ಷಣ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳ ಜೀವನ ವೆಚ್ಚವೂ ಇಲ್ಲಿ ಕಡಿಮೆ ಇದೆ. ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾದಂತಹ ದೇಶಗಳಿಗೆ ಹೋಲಿಸಿದರೆ ಈ ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಅರ್ಧದಷ್ಟು ವೆಚ್ಚದಲ್ಲಿ ಪಡೆಯಬಹುದು.

ಇದನ್ನೂ ಓದಿ: ISRO 300ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಕೊನೆ ದಿನಾಂಕ ಯಾವುದು?

ಅಮೆರಿಕ, ಯುಕೆ ಮತ್ತು ಆಸ್ಟ್ರೇಲಿಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸರಾಸರಿ ವಾರ್ಷಿಕ ಬೋಧನಾ ಶುಲ್ಕ ಸುಮಾರು 45,000 ರಿಂದ 60,000 ಡಾಲರ್‌ಗಳು ಇವೆ. ಆದರೆ ರಷ್ಯಾದಲ್ಲಿ ಮಾತ್ರ ವೈದ್ಯಕೀಯ ಶಿಕ್ಷಣವನ್ನು ವಾರ್ಷಿಕ ಭಾರತದ ಕರೆನ್ಸಿಯಲ್ಲಿ ಅಂದ್ರೆ ಕೇವಲ 15 ಲಕ್ಷ ವೆಚ್ಚದಲ್ಲಿ ಪಡೆಯಬಹುದು. ಇದಲ್ಲದೆ, ವಸತಿ ಮತ್ತು ಆಹಾರದ ವೆಚ್ಚಗಳು ಪ್ರತ್ಯೇಕವಾಗಿವೆ. ಭಾರತೀಯ ವಿದ್ಯಾರ್ಥಿಗಳು ಎಂಬಿಬಿಎಸ್​ ಮಾಡಲು ವಿದೇಶಕ್ಕೆ ದುಬಾರಿ ಫೀಸ್​ ಮತ್ತು ನೀಟ್ ಯುಜಿ ಸ್ಪರ್ಧೆ ಪ್ರಮುಖ ಕಾರಣವಾಗಿದೆ.

ವಿಶೇಷ ಸೂಚನೆ: ನ್ಯೂಸ್​​ಫಸ್ಟ್ ಎಜುಕೇಷನ್ ​​​SUBSCRIBE ಮಾಡಲು ಇಲ್ಲಿ ಕ್ಲಿಕ್​ ಮಾಡಿ..!

Advertisment