/newsfirstlive-kannada/media/post_attachments/wp-content/uploads/2024/12/Snake-And-Mongoose2.jpg)
ಯಾರಾದರೂ ಜಗಳ ಆಡುತ್ತಿದ್ದರೆ ಏನಿದು ಹಾವು ಮುಂಗುಸಿಯಂತೆ ಜಗಳ ಆಡ್ತಿದ್ದೀರಾ ಅನ್ನೋ ಮಾತುಗಳು ಸಾಮಾನ್ಯವಾಗಿ ಬರುತ್ತದೆ. ನನಗೆ ಅವನಿಗೆ ಒಂಥರಾ ಹಾವು ಮುಂಗುಸಿ ಇದ್ದಂಗೆ ಅನ್ನೋ ಮಾತುಗಳು ಕೂಡ ನೀವು ಕೇಳಿರುತ್ತೀರಾ. ನೂರಾರು ವರ್ಷಗಳಿಂದ, ಈ ಜೀವಗಳು ಭೂಮಿಯ ಮೇಲೆ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದೊನ್ನು ಕಂಡರೆ ಒಂದು ಆಗದಂತೆ ಕಾದಾಟಕ್ಕೆ ಬೀಳುತ್ತವೇ. ದ್ವೇಷದ ಪರಮಾವಧಿ ಯಾವ ಮಟ್ಟದ್ದು ಇರಬಹುದು ಎಂಬುದಕ್ಕೆ ಈ ಎರಡು ಜೀವುಗಳು ಜೀವಂತ ಸಾಕ್ಷಿಯಾಗಿ ನಿಂತಿವೆ. ಯಾವುದೇ ಸಮಯದಲ್ಲಿ ಈ ಎರಡು ಜೀವಿಗಳು ಎದುರುಬದರು ಬಂದರೂ ಸಾಕು ಅಲ್ಲೊಂದು ರಕ್ತಸಿಕ್ತ ಯುದ್ಧ ಈ ಎರಡು ಪ್ರಾಣಿಗಳ ನಡುವೆ ನಡೆದು ಹೋಗುತ್ತದೆ.
ಆದ್ರೆ ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ. ಈ ಎರಡು ಪ್ರಾಣಿಗಳ ಇಷ್ಟೊಂದು ಭಯಾನಕವಾದ ವೈರಿಗಳು ಯಾಕೆ ಅಂತ. ಅದಕ್ಕೆ ಉತ್ತರ ತಮ್ಮನ್ನು ತಾವು ಕಾಪಾಡಿಕೊಳ್ಳುವುದು ತಮ್ಮ ಬದುಕಿನ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಹಾಗೂ ಆ ವಿಷದಯದಲ್ಲಿ ಎರಡೂ ಪೈಪೋಟಿಗೆ ಬೀಳುವುದು. ಇದು ಈ ಎರಡು ಪ್ರಾಣಿಗಳಿಗೆ ಜನ್ಮಜಾತವಾಗಿ ಹಾಗೂ ನೈಸರ್ಗಿಕವಾಗಿ ಬಂದಿರುವ ಸ್ವಭಾವ.
/newsfirstlive-kannada/media/post_attachments/wp-content/uploads/2024/12/SNAKE-AND-MUNGOOSE.jpg)
ಪೈಪೋಟಿ ಅಂದಾಕ್ಷಣ ಈ ಎರಡು ಜೀವಿಗಳಲ್ಲಿ ಅದ್ಯಾವ ಪೈಪೋಟಿ ಎಂಬ ಪ್ರಶ್ನೆ ನಮ್ಮನ್ನು ಕಾಡಬಹುದು. ಅದಕ್ಕೆ ಉತ್ತರ ಅವು ಬದುಕುಳಿಯುವ ಪ್ರವೃತ್ತಿಯಲ್ಲಿಯೇ ಇವೆ.ಹಾವು ಮತ್ತು ಮುಂಗುಸಿ ಎರಡು ಕೂಡ ಪರಭಕ್ಷಕ ಪ್ರಾಣಿಗಳು ಇನ್ನೊಂದು ಪ್ರಾಣಿಯನ್ನು ಕೊಂದು ತಿನ್ನುವುದು ಇವುಗಳ ನೈಸರ್ಗಿಕ ಸ್ವಭಾವ. ಆ ವಿಚಾರದಲ್ಲಿ ತುಂಬಾ ಈರ್ಷ್ಯೆ ಮತ್ತು ರಕ್ಷಣಾತ್ಮಕ ಸ್ವಭಾವನ್ನು ಕೂಡ ಹೊಂದಿವೆ. ಯಾವಾಗ ಎರಡು ಪ್ರಾಣಿಗಳು ಮುಖಾಮುಖಿ ಆಗುತ್ತವೆಯೋ ಆವಗ ಅವುಗಳಿಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಉದ್ದೇಶ ಆಚೆ ಬರುತ್ತದೆ. ಹೀಗಾಗಿ ಒಂದೊಕ್ಕೊಂದು ನಾಶ ಮಾಡುವುದಕ್ಕೆ ಕದನಕ್ಕೆ ಬೀಳುತ್ತವೆ.
ಇದನ್ನೂ ಓದಿ: BREAKING: ಮುಂಬೈ ಗೇಟ್ ವೇ ಬಳಿ ಘೋರ ದುರಂತ; 110 ಪ್ರಯಾಣಿಕರಿದ್ದ ಬೋಟ್ ಮುಳುಗಡೆ
ಯಾವಾಗ ಹಾವು ಮುಂಗುಸಿಯೆದುರು ಬರುತ್ತದೆಯೋ ಅದರ ಮೊದಲ ಯೋಜನೆಯೇ ಅದನ್ನು ತನ್ನ ವಿಷಕಾರಿ ಹಲ್ಲಿನಿಂದ ಕಚ್ಚಿ ಕೊಂದು ಹಾಕುವುದು. ಯಾವಾಗ ಹಾವು ಕದನಕ್ಕೆ ಬೀಳುತ್ತದೆಯೋ ಮುಂಗುಸಿಯೂ ಕೂಡ ತನ್ನ ರಕ್ಷಣೆಗೆ ತನ್ನ ಬಲವನ್ನು ಹಾಗೂ ಚಾಕಚಕ್ಯತೆಯನ್ನು ಬಳಸಿ ಅದನ್ನು ನಾಶ ಮಾಡಲು ನಿಲ್ಲುತ್ತದೆ. ಇದು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಯುದ್ಧ
ಮುಂಗುಸಿ ತನ್ನ ಸುತ್ತಮುತ್ತಲೂ ಅನೇಕ ಸಂತತಿಗಳನ್ನು ಹೊಂದಿರುತ್ತವೆ. ಪುಟ್ಟ ಪುಟ್ಟ ಮರಿಗಳು ಹಾವಿನ ಗುರಿಗೆ ಸರಿಯಾಗಿ ಸಿಗುತ್ತವೆ. ಯಾವಾಗ ಚಿಕ್ಕ ಮರಿಗಳನ್ನು ತಿನ್ನಲು ಹಾವು ಹೋಗುತ್ತದೆಯೋ ಆಗ ಮುಂಗುಸಿಗಳು ಉಗ್ರಗೊಳ್ಳುತ್ತವೆ
ಇದನ್ನೂ ಓದಿ:ದಕ್ಷಿಣ ಭಾರತದವರು ಅರ್ಹರಲ್ಲ, ಕೆಲಸ ಕೊಡಲ್ಲ ಎಂದ ಕನ್ಸಲ್ಟಿಂಗ್ ಕಂಪನಿ..! ಯಾಕಿಷ್ಟು ಧಿಮಾಕು..?
ಹಾವಿನ ಬಳಿ ದೊಡ್ಡ ಅಸ್ತ್ರವೆಂದರೇ ಅದರ ವಿಷ. ಅದರ ಮೂಲಕ ಯಾವ ಜೀವಿಯನ್ನು ಕೂಡ ನಿಮಿಷದಲ್ಲಿ ಕೊಲ್ಲುವ ಶಕ್ತಿ ಅದು ಹೊಂದಿದೆ. ಅದರ ಜೊತೆಗೆ ಯಾವುದೇ ಪುಟ್ಟ ಜೀವಿಯನ್ನು ಅದು ತನ್ನ ಮೈಯಿಂದ ಸುತ್ತಿ ಕೊಲ್ಲಬಲ್ಲದು.
ಇತ್ತ ಮುಂಗುಸಿಯೂ ಕೂಡ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಅನೇಕ ಜೈವಿಕ ಅನುಕೂಲಗಳನ್ನು ಹೊಂದಿದೆ. ಪ್ರಮುಖವಾಗಿ ಮುಂಗುಸಿಯಲ್ಲಿರುವ ಚುರುಕುತನ, ಅದು ಅತಿಬೇಗನೇ ಹಾವಿನ ದಾಳಿಯಿಂದ ಅತಿವೇಗವಾಗಿ ತಪ್ಪಿಸಿಕೊಳ್ಳುವ ತಾಕತ್ತು ಇದೆ. ಅದು ಮಾತ್ರವಲ್ಲ ಹಾವಿನ ವಿಷದ ಪರಿಣಾಮವನ್ನು ತಡೆಯುವ ವಿಷ ನಿರೋಧಕ ಶಕ್ತಿಯು ಮುಂಗುಸಿಯಲ್ಲಿ ನೈಸರ್ಗಿಕವಾಗಿಯೇ ಇದೆ. ಹೀಗಾಗಿ ಅದರ ಚುರುಕುತನದಿಂದ ಅದು ಪ್ರಮುಖವಾಗಿ ಹಾವಿನ ಪ್ರಮುಖವಾದ ಬಲಹೀನ ಭಾಗದ ಮೇಲೆ ದಾಳಿ ಮಾಡಿ ಹಾವನ್ನು ಅಡ್ಡಡ್ಡ ಮಲಗಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us