/newsfirstlive-kannada/media/post_attachments/wp-content/uploads/2025/04/CURRENCY-COINS.jpg)
ಭಾರತ ಸರ್ಕಾರ ಪ್ರತಿವರ್ಷ ಕರೆನ್ಸಿ ನೋಟುಗಳೊಂದಿಗೆ ನಾಣ್ಯಗಳನ್ನು ಕೂಡ ಬಿಡಗಡೆಗೊಳಿಸುತ್ತದೆ. ವರ್ಷಕ್ಕೆ ಸರ್ಕಾರ ಎಷ್ಟು ನೋಟುಗಳು ಹಾಗೂ ನಾಣ್ಯಗಳನ್ನು ಬಿಡುಗಡೆಗೊಳಿಸುತ್ತೆ ಎನ್ನುವುದಕ್ಕೆ ಸ್ಪಷ್ಟ ದಾಖಲೆಗಳಿಲ್ಲ. ಸದ್ಯ ಮಾರುಕಟ್ಟೆಯಲ್ಲಿ 1 ರೂಪಾಯಿ, 2 ರೂಪಾಯಿ, 5 ರೂಪಾಯಿ, 10 ರೂಪಾಯಿ ಹಾಗೂ 20 ರೂಪಾಯಿಯ ನಾಣ್ಯಗಳು ಹರಿದಾಡುತ್ತಿವೆ.
ದೇಶದಲ್ಲಿ ಭಾರತ ಸರ್ಕಾರದ ಅಧೀನದಲ್ಲಿ ಈ ನೋಟುಗಳು ಹಾಗೂ ನಾಣ್ಯಗಳು ತಯಾರಾಗುತ್ತದೆ. ಭಾರತದಲ್ಲಿ ಒಟ್ಟು ನಾಲ್ಕು ಕಡೆ ನಾಣ್ಯಗಳನ್ನು ಟಂಕಿಸಲಾಗುತ್ತದೆ. ಮುಂಬೈ,ಕೊಲ್ಕತ್ತಾ, ಹೈದ್ರಾಬಾದ್​ ಮತ್ತು ನೊಯ್ಡಾದಲ್ಲಿನ ಟಂಕಸಾಲೆಯಲ್ಲಿ ನಾಣ್ಯಗಳ ಟಂಕಿಸುವ ಕಾರ್ಯ ನಡೆಯುತ್ತದೆ. ನೀವು ಸರಿಯಾಗಿ ಗಮನಿಸಿದ ನೋಡಿದಾಗ ನಾಣ್ಯಗಳಲ್ಲಿ ವಿಶೇಷವಾದ ಗುರುತುಗಳು ಇರುತ್ತವೆ. ಈ ಗುರುತುಗಳನ್ನು ಮುದ್ರಿಸಲು ಅಸಲಿ ಕಾರಣವೇ ಈ ಟಂಕಿಸುವ ಕಾರ್ಯ ನಡೆಯುವ ಸ್ಥಳಗಳು.
ಪ್ರತಿ ನಾಣ್ಯಗಳ ಮೌಲ್ಯ ಹಾಗೂ ಗಾತ್ರದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಅವುಗಳ ಮೌಲ್ಯ, ಖರೀದಿಸುವ ಶಕ್ತಿ, ಭಾರ, ಮುಖ ಇವೆಲ್ಲವೂ ಸದಾಕಾಲಕ್ಕೂ ಒಂದೇ ರೀತಿಯಲ್ಲಿ ಇರುತ್ತವೆ. ಆದ್ರೆ ಈಗಾಗಲೇ ಹೇಳಿದಂತೆ ನೀವು ಸರಿಯಾಗಿ ಗಮನಿಸಿ ನೋಡಿದಲ್ಲಿ ಪ್ರತಿಯೊಂದು ನಾಣ್ಯದಲ್ಲೂ ಒಂದು ವಿಶೇಷ ಗುರುತುಗಳು ಇರುತ್ತವೆ. ಅದಕ್ಕೆ ಕಾರಣ ಅದು ಯಾವ ಮುದ್ರಣ ಕೇಂದ್ರದಲ್ಲಿ ಟಂಕಿಸಲಾಗಿದೆ ಎಂಬ ಸುಳಿವು ನೀಡುತ್ತದೆ.
ಇದನ್ನೂ ಓದಿ:ಅಣ್ಣಾಮಲೈಗೆ ಬಿಗ್ ಶಾಕ್! ತಮಿಳುನಾಡು BJP ಅಧ್ಯಕ್ಷ ಸ್ಥಾನದಿಂದ ದಿಢೀರ್ ಕೊಕ್? ಕಾರಣ ಯಾರು?
ಉದಾಹರಣೆಗೆ ಒಂದು ನಾಣ್ಯದಲ್ಲಿ ವಜ್ರದ ಗುರುತು ಇದ್ದರೆ ಅದು ಮುಂಬೈನ ಕೇಂದ್ರದಲ್ಲಿ ಟಂಕಿಸಲಾದ ನಾಣ್ಯ ಎಂದು ಅರ್ಥ. ಒಂದು ವೇಳೆ ಯಾವುದೇ ರೀತಿಯ ಗುರುತು ಇಲ್ಲದಿದ್ದಲ್ಲಿ ಅದು ಕೊಲ್ಕತ್ತಾದ ಕೇಂದ್ರದಲ್ಲಿ ಟಂಕಿಸಿರುವ ನಾಣ್ಯ ಎಂದು ಅರ್ಥ. ನಾಣ್ಯದಲ್ಲಿ ನಕ್ಷತ್ರ ಅಂದ್ರೆ ಸ್ಟಾರ್ ಮಾರ್ಕ್ ಇದ್ದಲ್ಲಿ ಅದು ಹೈದ್ರಾಬಾದ್​ನ ಟಂಕಸಾಲೆಯಲ್ಲಿ ಟಂಕಿಸಲಾದ ನಾಣ್ಯವೆಂಬುದರ ಗುರುತು.
ಇದನ್ನೂ ಓದಿ:140 ಕಿ.ಮೀ ಪಾದಯಾತ್ರೆ ಆರಂಭಿಸಿದ ಅನಂತ್ ಅಂಬಾನಿ.. ಪ್ರತಿದಿನ ರಾತ್ರಿ ಹೊತ್ತಲ್ಲೇ ನಡಿಗೆ! ಕಾರಣವೇನು?
ಮುಂಬೈನ ಟಂಕಸಾಲೆಯಲ್ಲಿ ಟಂಕಿಸಲಾಗಿರುವ ನಾಣ್ಯಗಳಲ್ಲಿ ಕಟ್ ಡೈಮಂಡ್​ನ ಗುರುತು ಇರುತ್ತದೆ. ಇಲ್ಲವೇ ಬಿ ಅಥವಾ ಎಂ ಎಂಬ ಅಕ್ಷರವನ್ನು ಕೆತ್ತಲಾಗಿರುತ್ತದೆ. ಇನ್ನು ಡಾಟ್​ ಗುರುತು ಏನಾದರೂ ನಾಣ್ಯದಲ್ಲಿ ಕಂಡು ಬಂದರೆ ನೀವು ತಿಳಿದುಕೊಂಡು ಬಿಡಿ ಇದು ನೋಯ್ಡಾದ ಟಂಕಸಾಲೆಯಲ್ಲಿ ಸಿದ್ಧಗೊಂಡ ನಾಣ್ಯವೆಂದು. ಯಾವುದೇ ಗುರುತುಗಳು ನಾಣ್ಯದಲ್ಲಿ ಕಾಣದೇ ಇದ್ದಲ್ಲಿ ಅದು ಕೊಲ್ಕತ್ತಾ ಟಂಕಸಾಲೆಯಲ್ಲಿ ರೆಡಿಯಾದ ನಾಣ್ಯ ಎಂದು ಅರ್ಥ. ಇನ್ನು ನಕ್ಷತ್ರದ ಗುರುತಿದ್ದಲ್ಲಿ ಅದು ಹೈದ್ರಾಬಾದ್ ಟಂಕಸಾಲೆಯದ್ದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ