/newsfirstlive-kannada/media/post_attachments/wp-content/uploads/2025/04/kiran-raj.jpg)
ಕಿರುತೆರೆಯ ತುಂಬಾ ತುಂಬಾನೇ ಸ್ಪೆಷಲ್ ಪ್ರಾಜೆಕ್ಟ್ ಕರ್ಣ. ಸ್ಟಾರ್ ನಟ, ನಟಿಯರನ್ನ ಹೊಂದಿರೋ ಕರ್ಣನ ಮೇಲೆ ಎಕ್ಸ್ಫೆಕ್ಟೇಶನ್ ಜಾಸ್ತಿನೇ ಇದೆ. ಹೊಸ ಪ್ರತಿಭೆಗಳನ್ನ ಸೆಲೆಕ್ಟ್ ಮಾಡಿದ್ದ ತಂಡ ದಿಢೀರ್ ಅಂತ ಸ್ಟಾರ್ ನಟಿಯರನ್ನು ಮಣೆ ಹಾಕಿದ್ಯಾಕೆ? ಸ್ಟಾರ್ಕಾಸ್ಟ್ ನೋಡ್ತಿದ್ರೇ ಬಜೆಟ್ ಕೂಡ ಹೈ ಇದೆ ಎನ್ನಲಾಗ್ತಿದೆ.
ಕರ್ಣ ಸಾಕಷ್ಟು ವಿಚಾರವಾಗಿ ಸದ್ದು ಮಾಡ್ತಿರೋ ಧಾರಾವಾಹಿ. ಒಂದೇ ಒಂದು ಪ್ರೋಮೋ ರಿಲೀಸ್ ಆಗಿರೋದು ಅಷ್ಟೇ ಅದಾಗಲೇ ವೀಕ್ಷಕರು ಕುತೂಹಲದಿಂದ ಕಾಯುವಂತೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ಗಟ್ಟಲೇ ವೀಕ್ಷಣೆ ಪಡೆದಿರೋ ಪ್ರೋಮೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ.
ಸ್ಟಾರ್ ನಟ-ನಟಿಯರನ್ನು ಕರ್ಣ ಪ್ರಾಜೆಕ್ಟ್ ಆಯ್ಕೆ ಮಾಡಿರೋದು ಅಚ್ಚರಿ ಏನ್ ಅಲ್ಲ. ಅದ್ರೆ ಹೈಯಸ್ಟ್ ಸಂಭಾವನೆ ನೀಡಿ ಆಯ್ಕೆ ಮಾಡಿಕೊಂಡಿರೋದು ವಿಶೇಷ ಅನ್ಸುತ್ತೆ. ನಾವು ಈ ಹಿಂದೆ ಹೇಳಿದ ಹಾಗೇ ಕಿರಣ್ ರಾಜ್ ಅವರಿಗೆ ಹೈಯಸ್ಟ್ ಸಂಭಾವನೆ ಕೊಡಲಾಗ್ತಿದೆ ಅಂತೆ. ಅದು ಅಲ್ಲದೇ ಜನಪ್ರಿಯ ನಟಿಯರಾದ ಭವ್ಯಾಗೌಡ ಹಾಗೂ ನಮ್ರತಾ ಗೌಡ ಸೀರಿಯಲ್ಗೆ ಎಂಟ್ರಿ ಕೊಟ್ಟಿದ್ದಾರೆ. ದೊಡ್ಡ ಮಟ್ಟದಲ್ಲೇ ಸೀರಿಯಲ್ ಲಾಂಚ್ ಮಾಡೊಕೆ ತಯಾರಿ ಮಾಡಿಕೊಳ್ಳುತ್ತಿದೆ ತಂಡ.
ಕಿರಣ್ ರಾಜ್ಗೆ ಜೋಡಿಯಾಗಿ ಮೊದಲು ಹೊಸ ಪ್ರತಿಭೆಗಳು ಆಯ್ಕೆ ಆಗಿದ್ರು. ಸಡನ್ ಆಗಿ ಪಾತ್ರಗಳನ್ನ ಬದಲಾಯಿಸೋಕೆ ಕಾರಣ ಇದೆ. ಕಿರಣ್ ರಾಜ್ ಅವರ ಪ್ರೋಮೋಗೆ ಭರ್ಜರಿ ರೆಸ್ಪಾನ್ಸ್ ಬಂತು. ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಇದನ್ನ ಅರಿತ ತಂಡ ಸ್ಟಾರ್ ನಟಿಯರನ್ನೇ ಯಾಕೆ ಕರ್ಣನಿಗೆ ಕರೆತರಬಾರದು ಅಂತ ಯೋಚಿಸುತ್ತಿತ್ತು. ಈ ನಡುವೆ ಫ್ಯಾನ್ಸ್ ಕೂಡ ಒಂದಿಷ್ಟು ನಟಿಯರನ್ನ ಕರೆತರುವ ಬಗ್ಗೆ ಪ್ರಸ್ತಾಪ ಇಟ್ಟಿದ್ರು. ಅದರಲ್ಲಿ ಮುಖ್ಯವಾಗಿ ಕೇಳಿಬಂದ ಹೆಸರು ಭವ್ಯಾ ಗೌಡ.
ಯಾವುದೇ ಪ್ರಾಜೆಕ್ಟ್ ಆದ್ರೂ ವೀಕ್ಷಕರ ಅಭಿಪ್ರಾಯ, ಪ್ರತಿಕ್ರಿಯೆ ಮೇಲೆ ಸಾಗುತ್ತೆ. ಹೀಗಾಗಿ ಹೊಸ ಪ್ರತಿಭೆಗಳನ್ನ ಕೈ ಬಿಟ್ಟ ತಂಡ ಭವ್ಯಾ ಅವ್ರ ಕರೆತಂದಿದೆ. 4 ವರ್ಷಗಳ ಕಾಲ ಗೀತಾ ಸೀರಿಯಲ್ನಲ್ಲಿ ಕೆಲಸ ಮಾಡಿದ್ದ ಭವ್ಯಾ ಇದೇ ಮೊದಲ ಬಾರಿಗೆ ಜೀ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು, ಅಚ್ಚರಿ ಎಂಬಂತೆ ಅಭಿಮಾನಿಗಳ ಊಹೆಗೂ ಮೀರಿ ನಮ್ರತಾ ಗೌಡ ಅವರನ್ನು ಮತ್ತೋರ್ವ ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ.
ಕಿರಣ್ ರಾಜ್, ಭವ್ಯಾ ಗೌಡ ಆಯ್ಕೆ ಬೆನ್ನಲ್ಲೇ ಮತ್ತೊಂದು ಪ್ರಮುಖ ಪಾತ್ರ ಯಾರು ಮಾಡ್ತಾರೆ ಅನ್ನೋದೇ ಪ್ರಶ್ನೆಯಾಗಿ ಉಳಿದುಕೊಂಡಿತ್ತು. ಟ್ರೆಂಡಿಂಗ್ನಲ್ಲಿ ಸ್ಟಾರ್ ನಟಿಯನ್ನೇ ಪಕ್ಕಾ ತರೋದು ಅನ್ನೋದಂತು ಇತ್ತು. ಅದಕ್ಕೆ ತಕ್ಕಾ ಹಾಗೇ ನಾಗಿಣಿ ಬೆಡಗಿ ನಮ್ರತಾ ಮತ್ತೊಮ್ಮೆ ತವರು ಮನೆಗೆ ಮರಳಿದ್ದಾರೆ. ನಮ್ಮು ಫ್ಯಾನ್ಸ್ಗೆ ಸಿಕ್ಕಾಪಟ್ಟೆ ಖುಷಿ ಕೊಡೋ ವಿಚಾರ ಇದು. ಇನ್ನೂ, ಪೋಷಕ ಪಾತ್ರಗಳಲ್ಲಿಯೂ ಅಷ್ಟೇ, ಸ್ವಾತಿ, ನಾಗಾಭರಣ, ಆಶಾರಾಣಿ, ಸುಂದರಾಜ್ ಸೇರಿದಂತೆ ದೊಡ್ಡ ತಾರಾಬಳಗ ಇದೆ.
ಇದನ್ನೂ ಓದಿ:Newsfirst ಜ್ಞಾನ ಸಂಗಮಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಏನು ಉಪಯೋಗ?
ಒಂದೋಳ್ಳೆ ಧಾರಾವಾಹಿ ಮಾಡ್ಬೇಕು ಅಂತ ಯೋಚಿಸಿದ್ದ ಶ್ರುತಿ ನಾಯ್ಡು ಅವ್ರು ಕರ್ಣನಿಗೆ ವೀಕ್ಷಕರು ನೀಡಿದ ಪ್ರತಿಕ್ರಿಯೇಗೆ ಖುಷಿಯಾಗಿ ಮತ್ತಷ್ಟು ಕಲರ್ಫುಲ್ ಆಗಿ ಕರ್ಣನನ್ನ ಪ್ರೆಜೆಂಟ್ ಮಾಡೋಕೆ ತಯಾರಾದ್ರು. ದೊಡ್ಡ ಮಟ್ಟದ ಬಂಡವಾಳವಾದ್ರೂ ಯೋಚಿಸದೇ ಸಾಹಸಕ್ಕೆ ಕೈ ಹಾಕಿರೋದು. ಸ್ಟಾರ್ ನಟ-ನಟಿ ಇರೋದ್ರಿಂದ ಸೀರಿಯಲ್ ಗೆದ್ದೇ ಗೆಲ್ಲುತ್ತೆ ಅನ್ನೋದೇ ಇದರ ಹಿಂದಿನ ಗುಟ್ಟು. ಒಟ್ಟಾರೆ ಕರ್ಣ ಯಾವಾಗ ಬರ್ತಾನೆ? ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಈ ತಿಂಗಳು ಕೊನೆ ವಾರದಲ್ಲಿ ಇಲ್ಲ ಅಂದರೆ ಮೇ ಮೊದಲ ವಾರದಲ್ಲಿ ಕರ್ಣ ಮನೆ ಮನೆಗೆ ಬರೋ ಚಾನ್ಸ್ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ