/newsfirstlive-kannada/media/post_attachments/wp-content/uploads/2025/04/RCB_BOWL.jpg)
ಐಪಿಎಲ್​​​​​ ಟೂರ್ನಿಯ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬ್ಯಾಟ್ಸ್​ಮನ್​​ಗಳು ಬೌಂಡರಿ, ಸಿಕ್ಸರ್​ಗಳ ಸುರಿಮಳೆಗೈಯುತ್ತಾ, ಅಭಿಮಾನಿಗಳನ್ನ ರಂಜಿಸುತ್ತಿದ್ದಾರೆ. ಮತ್ತೊಂದೆಡೆ ಬೌಲರ್​ಗಳು T20 ಫಾರ್ಮೆಟ್ ಕೇವಲ ಬ್ಯಾಟ್ಸ್​​ಮನ್ಸ್​​ ಗೇಮ್ ಅಂತ, ಬೇಸರ ಹೋರ ಹಾಕುತ್ತಿದ್ದಾರೆ. ಆದ್ರೆ ಬ್ಯಾಟಿಂಗ್-ಬೌಲಿಂಗ್​​​ ನಡುವೆ ಬ್ಯಾಲೆನ್ಸ್ ಮಾಡಲು, ಐಪಿಎಲ್ ಹೊಸ ಪ್ಲಾನ್ ಮಾಡಿದೆ. ಅದೇನು ಗೊತ್ತಾ?.
ಬೌಂಡರಿ, ಸಿಕ್ಸರ್​​. ರನ್​​ ಮಳೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್​​ ಅಲ್ಲ. ಇಂಪಾಸಿಬಲ್ ಪ್ರೀಮಿಯರ್ ಲೀಗ್. 280+ ರನ್ ಹೊಡೆಯೋದು, 240+ ರನ್ ಚೇಸ್ ಮಾಡೋದು, ಈ ಸೀಸನ್​ನಲ್ಲಿ ಕಾಮನ್ ಆಗಿಬಿಟ್ಟಿದೆ. ಮುಂದಿನ ಪಂದ್ಯಗಳಲ್ಲಿ, ಸ್ಕೋರ್ 300 ರನ್ ದಾಟಿದ್ರೂ, ಅಚ್ಚರಿ ಪಡಬೇಕಿಲ್ಲ. ಐಪಿಎಲ್ ಬ್ಯಾಟ್ಸ್​ಮನ್ಸ್​ ಗೇಮ್ ಆಗ್ಬಿಟ್ಟಿದೆ. ಇಲ್ಲಿ ಬ್ಯಾಟ್ಸ್​ಮನ್​ಗಳದ್ದೇ ದರ್ಬಾರ್. ಬ್ಯಾಟ್ಸ್​ಮನ್​ಗಳೇ ರಿಯಲ್ ಹೀರೋಸ್.
/newsfirstlive-kannada/media/post_attachments/wp-content/uploads/2025/03/KKR-VS-RCB.jpg)
ಬೌಲರ್​ಗಳಿಗೆ ಈ ಲೀಗ್, ಸಿಂಹ ಸ್ವಪ್ನ. ನಿಜ, ಬೌಲರ್​ಗಳು ವಿಕೆಟ್ ತೆಗೆಯೋದು ಇರ್ಲಿ, ಡಾಟ್ ಬಾಲ್ಸ್ ಹಾಕೋಕೆ ಪರದಾಡ್ತಾರೆ. ಯಾಕಂದ್ರೆ ಈ ಲೀಗ್ ಬ್ಯಾಟ್ಸ್​ಮನ್​ಗಳಿಗೆ ಸಿಕ್ಕಾಪಟ್ಟೆ ಫೇವರ್ ಆಗಿದೆ. ಹಾಗಾಗಿ ಬೌಲರ್​ಗಳು, ಪಡೆದ ಪೇಮೆಂಟ್​​ಗೆ ತಕ್ಕಂತೆ ಪರ್ಫಾಮ್ ಮಾಡೋಕೆ ಆಗ್ತಿಲ್ಲ. ಇಲ್ಲಿ ಬೌಲರ್​ಗಳೇ ಫ್ರಾಂಚೈಸಿ ಮಾಲೀಕರ ಪಾಲಿಗೆ, ವಿಲನ್​ಗಳಾಗ್ತಿದ್ದಾರೆ.
ಬೌಲರ್​​ಗಳಿಗೆ ಗುಡ್​ನ್ಯೂಸ್..! ಐಪಿಎಲ್​ನಲ್ಲಿ ಹೊಸ ರೂಲ್ಸ್..!
ಐಪಿಎಲ್​​​ನಲ್ಲಿ ಬ್ಯಾಟ್ಸ್​ಮನ್​ಗಳ ಅಬ್ಬರದ ನಡುವೆ, ಬಿಸಿಸಿಐ ಬೌಲರ್ಸ್​ಗೆ ಗುಡ್​ನ್ಯೂಸ್ ಕೊಟ್ಟಿದೆ. ಹೊಸ ರೂಲ್ಸ್ ಕೂಡ ಜಾರಿ ಮಾಡಿದೆ. ಅದುವೇ ಬ್ಯಾಟ್ ಗೇಜ್. ಬ್ಯಾಟ್ಸ್​​ಮನ್​​ಗಳು ರನ್​​ಗಳಿಸಲು ತಮ್ಮ ಬ್ಯಾಟ್​ ಅನ್ನ, ತಮಗೆ ಬೇಕಾದ ಹಾಗೆ ಆಲ್ಟರ್ ಮಾಡಿಸಿಕೊಂಡಿರುತ್ತಾರೆ. ಅದ್ರಲ್ಲೂ ಬ್ಯಾಟ್​​ನ ಕೆಳ ಬಾಗವನ್ನ ದಪ್ಪವಾಗಿ ರೆಡಿ ಮಾಡಿಸಿಕೊಂಡಿತ್ತಾರೆ. ಅದನ್ನ ಸ್ವೀಟ್ ಸ್ಪಾಟ್ ಅಂತ ಕರೆಯುತ್ತಾರೆ. ಆದ್ರೀಗ ಆ ಸ್ವೀಟ್ ಸ್ಪಾಟ್​​​​​​​​​​​​​ ಮೇಲೆ, ಅಂಪೈರ್ಸ್​ ಹದ್ದಿನ ಕಣ್ಣು ಬಿದ್ದಿದೆ. ಈ ಹೊಸ ರೂಲ್ಸ್​ನಿಂದ ಬೌಲರ್ಸ್​ಗೆ, ಸ್ವಲ್ಪ ರಿಲ್ಯಾಕ್ಸ್ ಅಂತೂ ಆಗಿದೆ.​
ಅಂಪೈರ್ಸ್​ ಯಾವಾಗ, ಎಲ್ಲಿ ಬ್ಯಾಟ್​​ ಚೆಕ್ ಮಾಡ್ತಾರೆ..?
ಪಂದ್ಯಕ್ಕೂ ಮುನ್ನ ಫೋರ್ಥ್ ಅಂಪೈರ್​​​​ ಡ್ರೆಸಿಂಗ್​ ರೂಮ್​ನಲ್ಲಿ ಆಟಗಾರರ ಬ್ಯಾಟ್ ಚೆಕ್ ಮಾಡ್ತಾರೆ. ಅಥವಾ ಬ್ಯಾಟಿಂಗ್​​ಗೆ ಎಂಟ್ರಿ ಕೊಡುವ ಮುನ್ನ, ಬೌಂಡರಿಲೈನ್​ ಬಳಿ ಅಂಪೈರ್​​​ ಬ್ಯಾಟ್ ಗೇಜ್ ಮಾಡ್ತಾರೆ. ಆನ್​ಫೀಲ್ಡ್​ನಲ್ಲೂ ಅಂಪೈರ್ಸ್,​ ಚೆಕಿಂಗ್ ಮಾಡ್ತಾರೆ. ಒಂದು ವೇಳೆ ಆ ಬ್ಯಾಟ್​​​ ಗೇಜ್​​ಗೆ ಫಿಟ್ ಆಗಿಲ್ಲ ಅಂದ್ರೆ, ಬ್ಯಾಟ್ ಬದಲಾವಣೆಗೆ ಸೂಚಿಸುತ್ತಾರೆ. ರೂಲ್ ಎತ್ತಿ ಹಿಡಿಯಲು ಬ್ಯಾಟ್ಸ್​ಮನ್​ಗೆ ಮನವಿ ಮಾಡ್ತಾರೆ.
ಬ್ಯಾಟ್ ಸೈಜ್ ಎಷ್ಟಿರಬೇಕು..? ಯಾವ ಬ್ಯಾಟ್ ರೂಲ್ಸ್​​ಗೆ ವಿರುದ್ಧ..?
ಸದ್ಯ T20 ಕ್ರಿಕೆಟ್​​​​​​​ನಲ್ಲಿ ಬಿಗ್ ರೆವಲ್ಯೂಷನ್ ಆಗ್ತಿದೆ. ಬದಲಾವಣೆಯಿಂದ T20 ಕ್ರಿಕೆಟ್ ಜನಮನ ಗೆಲ್ತಿದೆ. ಆದ್ರೆ ದಿಢೀರ್​ರಂತೆ ಐಪಿಎಲ್​ನಲ್ಲಿ ಹೊಸ ರೂಲ್ಸ್ ಇಂಟ್ರಡ್ಯೂಸ್ ಮಾಡಿರೋದು, ಯೋಚಿಸಬೇಕಿದೆ. ರೂಲ್ ಬುಕ್ ಪ್ರಕಾರ ಬ್ಯಾಟ್​ನ ಬ್ಲೇಡ್​​ ಅಗಲ, 4.25 ಇಂಚಿಗಿಂತ ಹೆಚ್ಚಿರಬಾರದು. ಬ್ಯಾಟ್​ನ ಡೆಪ್ತ್​​ 2.64 ಇಂಚಿಗಿಂತ ಹೆಚ್ಚು ಇರಬಾರದು. ಹಾಗೆ ಬ್ಯಾಟ್​ನ ಎಡ್ಜ್​ 1.56ಗಿಂತ ಜಾಸ್ತಿ ಇರಬಾರದು. ಬ್ಯಾಟ್ ಸಲೀಸಾಗಿ ಗೇಜ್​ ಒಳಗೆ ಪಾಸಾಗಬೇಕು. ಇದೇ ಐಸಿಸಿ ರೂಲ್ ಬುಕ್ ಹೇಳೋದು.
ಯಾವೆಲ್ಲಾ ಬ್ಯಾಟ್ಸ್​ಮನ್​​ ಬ್ಯಾಟ್ ಚೆಕಿಂಗ್​​ನಲ್ಲಿ ಫೇಲ್..?
ಕಳೆದ ಕೆಲ ಪಂದ್ಯಗಳ ಹಿಂದೆ ಅಂಪೈರ್ಸ್​ ಹಾರ್ದಿಕ್ ಪಾಂಡ್ಯ, ಫಿಲ್ ಸಾಲ್ಟ್, ಶಿಮ್ರಾನ್ ಹೆಟ್ಮಾಯರ್, ರಿಯಾನ್ ಪರಾಗ್ ಬ್ಯಾಟ್ ಗೇಜ್​ ಟೆಸ್ಟ್ ಮಾಡಿದ್ರು. ಎಲ್ಲರ ಬ್ಯಾಟ್ ರೂಲ್ಸ್​ಗೆ ತಕ್ಕಂತೆ ಇತ್ತು. ಆದ್ರೆ ಕೊಲ್ಕತ್ತಾ ನೈಟ್​ರೈಡರ್ಸ್​ನ ಸುನಿಲ್ ನರೈನ್, ಌಂಡ್ರೆ ರಸೆಲ್, ಎನ್ರಿಚ್ ನೋಕಿಯಾ ಬ್ಯಾಟ್​​​ ಓವರ್ ಸೈಝ್ ಆಗಿತ್ತು. ಈ ತ್ರಿಮೂರ್ತಿಗಳ ಬ್ಯಾಟ್​,​​​​ ರೂಲ್ಸ್​ಗೆ ವಿರುದ್ಧವಾಗಿತ್ತು. ಬ್ಯಾಟ್​​ನ ಮೇಲ್ಬಾಗ ಲೈಟ್​ ವೇಯ್ಟ್ ಆಗಿದ್ರೆ, ಕೆಳ ಭಾಗ ಅಂದ್ರೆ, ಸ್ವೀಟ್​ ಸ್ಪಾಟ್ ಅಂತ ಏನ್ ಕರೀತಿವಿ ಅದು ತುಂಬಾನೇ ದಪ್ಪವಾಗಿತ್ತು. ಇದ್ರಿಂದ ಪವರ್​​ಫುಲ್​​​​ ಸ್ಟ್ರೋಕ್ಸ್ ಆಡಬಹುದು. ಆದ್ರೆ ಅಂಪೈರ್ಸ್​, ಓವರ್​ ಸೈಝ್ಡ್​​ ಬ್ಯಾಟ್​ನ ರೀಪ್ಲೇಸ್ ಮಾಡಿಸಿದ್ರು.
ಐಪಿಎಲ್​ನಲ್ಲಿ ದಿಢೀರ್ ಬ್ಯಾಟ್​​ ಗೇಜ್​ಗೆ ಕಾರಣವೇನು..?
ಟೂರ್ನಿಯ ಆರಂಭದಲ್ಲಿ ಗುಜರಾತ್ ಟೈಟನ್ಸ್ ತಂಡದ ವೇಗಿ ಕಗಿಸೋ ರಬಾಡ, T20 ಕ್ರಿಕೆಟ್​ ಬ್ಯಾಟ್ಸ್​ಮನ್​ಗಳ ಗೇಮ್ ಆಗ್ತಿದೆ. ಇಲ್ಲಿ ಬ್ಯಾಟರ್ಸ್ ಮತ್ತು ಬೌಲರ್ಸ್​ಗೆ, ಸಮಾನ ಅವಕಾಶ ಇರಬೇಕು. ಇಲ್ದಿದ್ರೆ ಗೇಮ್ ONE SIDED ಆಗುತ್ತೆ ಅಂತ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು. ಸಿಎಸ್​​ಕೆ ಸ್ಪಿನ್ನರ್ ಆರ್​.ಅಶ್ವಿನ್ ಮತ್ತು ಲಕ್ನೋ ಸೂಪರ್​ಜೈಂಟ್ಸ್​ನ ಶಾರ್ದುಲ್ ಠಾಕೂರ್ ಸಹ, ಬೌಲರ್​ಗಳ ಪರ ಧ್ವನಿ ಎತ್ತಿದ್ರು. ಈ ಎಲ್ಲಾ ಬೆಳವಣಿಗೆಗಳ ನಡುವೆ, ಬಿಸಿಸಿಐ ಮತ್ತು ಐಪಿಎಲ್ ಬ್ಯಾಟ್ ಗೇಜ್ ರೂಲ್ಸ್​ ಅಳವಡಿಸಿದೆ.​​
/newsfirstlive-kannada/media/post_attachments/wp-content/uploads/2025/04/BAT-CHECK.jpg)
ಬ್ಯಾಟ್​ ಗೇಜ್​ ಬಗ್ಗೆ ಬಿಸಿಸಿಐ ಹೇಳೋದೇನು..?
ಐಪಿಎಲ್ ಆರಂಭವಾಗಿ 18 ವರ್ಷಗಳಾಯ್ತು. ಆದ್ರೆ ಈ ಹಿಂದೆ ಒಂದೇ ಒಂದು ಬಾರಿಯೂ, ಬ್ಯಾಟ್ ಗೇಜ್ ರೂಲ್ಸ್​ ಜಾರಿ ಮಾಡ್ಲಿಲ್ಲ. ಆದ್ರೆ ಈ ಬಾರಿ ಬಿಸಿಸಿಐ ಮತ್ತು ಐಪಿಎಲ್, ಹೊಸ ರೂಲ್ಸ್​​ ತರಲು ಬಲವಾದ ಕಾರಣವಿದೆ. ಅದೇ 'ಸ್ಪಿರಿಟ್ ಆಫ್ ದ ಗೇಮ್' ಎತ್ತಿ ಹಿಡಿಯೋದು. ಗೇಮ್​​ನಲ್ಲಿ ಯಾರಿಗೂ ಅಡ್ವಾಂಟೇಜ್ ಆಗಬಾರದು. ಅದು ಅಂಪೈರ್​ಗಳ ನಿರ್ಧಾರ ಇರಬಹುದು ಅಥವಾ ಯಾವುದೇ ಘಟನೆಗಳಿಂದ ಪಂದ್ಯದ ಮೇಲೆ ಪರಿಣಾಮ ಬೀರಬಾರದು ಅಂತ ಟೆಕ್ನಾಲಜಿ ಅಳವಡಿಸಲಾಗಿದೆ. ಯಾವುದೇ ಕಾರಣಕ್ಕೂ ಕ್ರೀಡಾ ಸ್ಪೂರ್ತಿಗೆ ಧಕ್ಕೆ ಆಗಬಾರದು ಅಂತ ಬಿಸಿಸಿಐ ಮತ್ತು ಐಪಿಎಲ್ ಹೊಸ ರೂಲ್ಸ್ ಜಾರಿ ಮಾಡಿವೆ.
ಕ್ರಿಕೆಟ್, ಜಂಟಲ್​ಮೆನ್ ಗೇಮ್ ಅಂತಾರೆ. ಈ ಗೇಮ್ ಅನ್ನ ಕ್ರೀಡಾ ಸ್ಪೂರ್ತಿಯಿಂದಲೇ ಆಡಬೇಕು. ಗೇಮ್​ನಲ್ಲಿ ಯಾರಿಗೂ ಅನುಕೂಲ ಅಗಬಾರದು, ಯಾರಿಗೂ ಅನಾನುಕೂಲ ಆಗಬಾರದು. ಎಲ್ಲರಿಗೂ ಸಮಾನ ಅವಕಾಶ ಇರಬೇಕು ಅನ್ನೋ ಕಾರಣದಿಂದ ಬಿಸಿಸಿಐ ಮತ್ತು ಐಪಿಎಲ್ ಇಂತಹ ರೂಲ್ಸ್​ ಅಳವಡಿಸಿವೆ. ಈ ನಿರ್ಧಾರ ಮೆಚ್ಚುವಂತಹದ್ದೇ ಬಿಡಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us