/newsfirstlive-kannada/media/post_attachments/wp-content/uploads/2025/03/AURANGAZEB.jpg)
ಮೊಘಲ ದೊರೆ ಔರಂಗಜೇಬ್ನ ಬಗ್ಗೆ ಇತ್ತೀಚೆಗೆ ಚರ್ಚೆಗಳು ಜಾಸ್ತಿಯಾಗಿವೆ. ಅವನು ನಿಜಕ್ಕೂ ಅಷ್ಟೊಂದು ಕ್ರೂರಿಯಿದ್ದನಾ? ಶಿವಾಜಿಯನ್ನು ಸಿಂಹ ಎಂದು ಹೊಗಳುವಷ್ಟು ಉದಾರತೆ ತುಂಬಿದ ದೊರೆಯಾಗಿದ್ದನಾ? ಹಿಂದೂ ಧರ್ಮದ ಮೇಲೆ ನಿಜಕ್ಕೂ ಇಸ್ಲಾಂನ ಹೇರಲು ನಡೆಸಿದ ಅತ್ಯಂತ ಖಟ್ಟರ್ ಇಸ್ಲಾಂ ಅನುಯಾಯಿ ಆಗಿದ್ದನಾ? ಎಂಬ ನೂರಾರು ವೈರುದ್ಯಗಳು ಸದ್ಯ ಅವನ ಸುತ್ತುತ್ತಲೇ ಇವೆ. ಔರಂಗಜೇಬ್, ಮೊಘಲ್ ಸಾಮ್ರಾಜ್ಯ ಕಂಡ ಅತ್ಯಂತ ಕ್ರೂರ ದೊರೆ ಎಂದು ಅವನದೇ ಇತಿಹಾಸಕಾರ ಸಾಖಿ ಮುಸ್ತೈದ್ ಖಾನ್ ಬರೆದ ಔರಂಗಜೇಬ್ನ ಆತ್ಮಕಥೆ ಅಲಂಗಿರಿ ನಾಮಾದಲ್ಲಿ ಸಾಕಷ್ಟು ಉಲ್ಲೇಖಗಳು ಇವೆ ಕೂಡ.
ಇದೆಲ್ಲದರ ಆಚೆ ಔರಂಗ್ಜೇಬ್ ಅತಿಹೆಚ್ಚು ಚರ್ಚೆಗೆ ಬಂದಿದ್ದು ತಾನಾಜಿ ಹಾಗೂ ಛಾವ ಸಿನಿಮಾ ಬಂದ ಬಳಿಕ. ಔರಂಗಜೇಬ್ನ ಸುತ್ತಲೂ ಒಂದಿಷ್ಟು ಚರ್ಚೆಗಳು ಹುಟ್ಟುತ್ತಿವೆ. ಅವನ ಪುತ್ರಿ ಜೈಬುನ್ನಿಸ್ಸಾ ಶಿವಾಜಿಯನ್ನು ಪ್ರೀತಿಸುತ್ತಿದ್ದಳು ಎನ್ನುವುದರಿಂದ ಹಿಡಿದು, ಶಿವಾಜಿ ಕ್ಷಾತ್ರತೆಯ ಬಗ್ಗೆ ಔರಂಗ್ನಲ್ಲಿ ಒಂದು ಸಂವೇದನೆ ಇತ್ತು. ಒಂದು ಗರ್ವ ಇತ್ತು ಎಂದು ಕೂಡ ಬಿಂಬಿಸಲಾಗುತ್ತದೆ. ಆದ್ರೆ ಈಗ ಇನ್ನೊಂದು ವಿಶೇಷತೆ ಅಂದ್ರೆ ಔರಂಗಜೇಬ್ಗೆ ಇದ್ದ ಆ ಒಂದು ಅಭ್ಯಾಸ.
ಇದನ್ನೂ ಓದಿ:ಭಾರತದ ಈ ಒಂದು ಜಾಗದಲ್ಲಿ ನೀವು ಕಾಲಿಟ್ರೆ ಖಲ್ಲಾಸ್! ಇದು ಜಗತ್ತಿನ ಅತ್ಯಂತ ಖತರ್ನಾಕ್ ದ್ವೀಪ!
ನೀವು ಛಾವ ಅಥವಾ ತಾನಾಜಿ ಸಿನಿಮ ನೋಡಿದರೆ ನಿಮಗೆ ಈ ಬಗ್ಗೆ ಗೊತ್ತಿರುತ್ತದೆ. ಔರಂಗಜೇಬ್ ಪಾತ್ರಧಾರಿಗಳು ಸೂಜಿಯಿಂದ ಏನೋ ಒಂದು ಹೆಣೆಕೆಯನ್ನು ಮಾಡುತ್ತಲೇ ಉಳಿದವರೊಂದಿಗೆ ಮಾತನಾಡುತ್ತಿರುತ್ತಾನೆ. ಇದು ಎಲ್ಲಾ ಸಿನಿಮಾಗಳಲ್ಲಿ ಹೀಗೆ ಏಕೆ ತೋರಿಸಲಾಗುತ್ತದೆ ಎಂಬ ವಿಷಯದ ಹಿಂದೆ ಹೋದಾಗ ಔರಂಗಜೇಬ್ನಿಗೆ ಆ ಒಂದು ಅಭ್ಯಾಸವಿತ್ತಂತೆ.
ಔರಂಗಜೇಬ್ನಿಗೆ ಭಿನ್ನ ಭಿನ್ನವಾದ ಟೋಪಿಗಳನ್ನು ಹೊಲಿಯುವ ಒಂದು ಹವ್ಯಾಸವಿತ್ತು ಎಂದು ಇತಿಹಾಸಗಳಲ್ಲಿ ಉಲ್ಲೇಖವಾಗಿದೆ.ಆತನ ಇದೇ ಅಭ್ಯಾಸವನ್ನು ಛಾವ ಹಾಗೂ ತಾನಾಜಿ ಸಿನಿಮಾಗಳಲ್ಲಿ ತೋರಿಸಲಾಗಿದೆ. ಆದರೆ ಈ ಒಂದು ಖಯಾಲಿ ಆತನಿಗೆ ಏಕೆ ಇತ್ತು ಎಂಬ ಕುತೂಹಲ ಈಗ ಎಲ್ಲರಲ್ಲೂ ಮೂಡಿದೆ. ಇತಿಹಾಸಕಾರರು ಹೇಳುವ ಪ್ರಕಾರ ಇಸ್ಲಾಂನಲ್ಲಿ ಟೋಪಿಯನ್ನು ಧರಿಸುವುದು ಪವಿತ್ರ ಕಾರ್ಯ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಛತ್ರಪತಿ ಶಿವಾಜಿಯನ್ನು ಪ್ರೀತಿಸುತ್ತಿದ್ದಳಾ ಔರಂಗಜೇಬ್ನ ಪುತ್ರಿ? ಜೈಬುನ್ನಿಸ್ಸಾ ಬಗ್ಗೆ ಇತಿಹಾಸ ಏನು ಹೇಳುತ್ತದೆ?
ಔರಂಗಜೇಬ್ ಹೇಳಿ ಕೇಳಿ ಖಟ್ಟರ್ ಇಸ್ಲಾಂ ಅನುಯಾಯಿ. ಹೀಗಾಗಿ ಟೋಪಿ ಹೊಲಿಯುವುದು ಅವನಿಗೆ ಅತ್ಯಂತ ಪ್ರೀತಿಯ ಕೆಲಸ. ಅದರಿಂದ ಬರುವ ಆದಾಯದಿಂದ ಅವನು ತನ್ನ ಸಣ್ಣ ಸಣ್ಣ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದನಂತೆ. ಹೀಗೆ ಟೋಪಿ ಹೊಲಿದು ಬಂದ ಆದಾಯದಿಂದಲೇ ಆತ ತನ್ನ ಅಂತಿಮ ಸಂಸ್ಕಾರಕ್ಕೆ ಅಂತಲೇ ಹಣವನ್ನು ಕೂಡಿಸಿಟ್ಟಿದ್ದ ಎಂದು ಕೂಡ ಇತಿಹಾಸಕಾರರು ಅನೇಕ ಕಡೆ ಉಲ್ಲೇಖಿಸಿದ್ದಾರೆ. ಅದು ಅಲ್ಲದೇ ತುಂಬಾ ವೈಭವದ ಜೀವನವನ್ನು ಔರಂಗ್ ಇಷ್ಟಪಡುತ್ತಿರಲಿಲ್ಲವಂತೆ. ಸರಳವಾದ ಜೀವನ ಪದ್ಧತಿ ಹಾಗೂ ಅವನು ತನಗಾಗಿ ಮಾಡುತ್ತಿದ್ದ ಖರ್ಚುಗಳನ್ನು ಕೂಡ ಇತಿಮಿತಿಯಿಂದ ಮಾಡುತ್ತಿದ್ದ ಎಂಬುದರ ಬಗ್ಗೆಯೂ ನಮಗೆ ಇತಿಹಾಸದಲ್ಲಿ ದಾಖಲೆಗಳು ಸಿಗುತ್ತವೆ. ಅದು ಮಾತ್ರವಲ್ಲ ಔರಂಗಜೇಬ್ ತನ್ನ ವೈಯಕ್ತಿಕ ಖರ್ಚುಗಳಿಗಾಗಿ ರಾಜ್ಯದ ಖಜಾನೆಯ ಹಣವನ್ನು ಎಂದಿಗೂ ಮುಟ್ಟುತ್ತಿರಲಿಲ್ಲ ಎಂದು ಕೂಡ ಹೇಳಲಾಗುತ್ತದೆ. ಅವನು ತನ್ನ ಅಂತಿಮ ಕ್ಷಣದಲ್ಲಿ ತನ್ನ ಧಾರ್ಮಿಕ ಗ್ರಂಥವನ್ನು ಓದುತ್ತಲೇ ಕಳೆದ ಎಂದು ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ