/newsfirstlive-kannada/media/post_attachments/wp-content/uploads/2025/01/BARACK-OBAMA.jpg)
ಅಮೆರಿಕಾದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಅನೇಕ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಆದ್ರೆ ಪ್ರಮಾಣ ವಚನ ಕಾರ್ಯಕ್ರಮಕ್ಕಿಂತ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು. ಬರಾಕ್ ಒಬಾಮ ಹಾಗೂ ಅವರ ಪತ್ನಿ ಮಿಚೆಲ್ ಒಬಾಮಾ ಬೇರೆ ಬೇರೆಯಾಗಿದ್ದಾರೆ ಎಂಬ ಗಾಳಿ ಮಾತುಗಳು ಇತ್ತೀಚೆಗೆ ಜೋರಾಗಿ ಕೇಳಿ ಬಂದಿದ್ದವು. ಅದಕ್ಕೆ ಪುಷ್ಠಿ ಕೊಡುವಂತಿತ್ತು ಟ್ರಂಪ್ ಪ್ರಮಾಣ ವಚನಕ್ಕೆ ಬರಾಕ್ ಒಬಾಮಾ ಬಂದ ರೀತಿ.
ಟ್ರಂಪ್ ಪ್ರಮಾಣ ವಚನ ಸ್ವೀಕಾರಕ್ಕೆ ಮಾಜಿ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯೂ ಬುಷ್, ಬಿಲ್ ಕ್ಲಿಂಟನ್, ಜೋ ಬೈಟನದ ಇವರೆಲ್ಲರೂ ಕೂಡ ತಮ್ಮ ಪತ್ನಿಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದ್ರೆ ಬರಾಕ್ ಒಬಾಮಾ ಮಾತ್ರ ಮಿಚೆಲ್ ಒಬಾಮಾ ಇಲ್ಲದೇ ಒಬ್ಬರೇ ಕಾರ್ಯಕ್ರಮಕ್ಕೆ ಆಗಮಿಸಿದ್ದು ಈಗ ದೊಡ್ಡ ಸುದ್ದಿಯಾಗಿದೆ. ಇಂಟರ್ನೆಟ್ನಲ್ಲಿ Where is Michelle Obama ಅಂದ್ರೆ ಮಿಚೆಲ್ ಒಬಾಮಾ ಎಲ್ಲಿ ಎಂಬ ಹ್ಯಾಶ್ಟ್ಯಾಗ್ ಸದ್ಯ ಟ್ರೆಂಡಿಂಗ್ನಲ್ಲಿದೆ.
ಇದನ್ನೂ ಓದಿ:Photo: ಎಸ್ ಜೈಶಂಕರ್ಗೆ ಟ್ರಂಪ್ ವಿಶೇಷ ಗೌರವ.. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎಲ್ಲಿ ಕೂತಿದ್ದರು..?
ಮಿಚೆಲ್ ಹಾಗೂ ಬರಾಕ್ ನಡುವೆ ಏನೋ ಸರಿಯಿಲ್ಲ ಎಂಬ ಊಹಾಪೋಹಗಳು ಈಗ ಜೋರಾಗಿ ಹರಿದಾಡುತ್ತಿವೆ. ಅಮೆರಿಕಾದ ಮಾಜಿ ಪ್ರಥಮ ಮಹಿಳೆ ಟ್ರಂಪ್ ಪದಗ್ರಹಣಕ್ಕೆ ಗೈರಾಗಿದ್ದು ಬರಾಕ್ ಒಬಾಮಾ ಹಾಗೂ ಮಿಚೆಲ್ ಒಬಾಮ ನಡುವೆ ಡಿವೋರ್ಸ್ ಆಗುವ ಸಾಧ್ಯತೆ ಇದೆಯಾ ಎಂಬ ಅನುಮಾನಗಳು ಕೂಡ ಸುಳಿದಾಡುತ್ತಿವೆ. ಇತ್ತೀಚೆಗೆ ಯುಎಸ್ನ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಅಂತಿಮ ಕ್ರಿಯೆಗೂ ಕೂಡ ಮಿಚೆಲ್ ಒಬಾಮಾ ಬಂದಿರಲಿಲ್ಲ. ಅಲ್ಲಿಯೂ ಕೂಡ ಬರಾಕ್ ಒಬಾಮಾ ಒಬ್ಬರೇ ಬಂದಿದ್ದರು.
ಇದನ್ನೂ ಓದಿ: ಮೊದಲ ಭಾಷಣದಲ್ಲೇ ಟ್ರಂಪ್ ದೊಡ್ಡ ಹೇಳಿಕೆ.. ಆತಂಕಕ್ಕೆ ಬಿದ್ದ ಪಾಕಿಸ್ತಾನ, ನಿದ್ರಾ ಭಂಗ..!
ಸದ್ಯ ಗೂಗಲ್ನಲ್ಲಿ 'ವ್ಹೇರ್ ಇಸ್ ಮಿಚೆಲ್ ಒಬಾಮಾ' ಎಂಬುದು ಟ್ರೆಂಡಿಂಗ್ ಸುದ್ದಿಯಾಗಿದೆ. ಅಮೆರಿಕಾದ ಎಲ್ಲಾ ಮಾಜಿ ಅಧ್ಯಕ್ಷರು ತಮ್ಮ ಪತ್ನಿಯರೊಂದಿಗೆ ಬಂದಿದ್ದರು ಒಬಾಮಾ ಮಾತ್ರ ಏಕಾಂಗಿಯಾಗಿ ಬಂದಿದ್ದು. ಈ ಹಿಂದೆ ಜಿಮ್ಮಿ ಕಾರ್ಟರ್ ಅಂತ್ಯಕ್ರಿಯೆಗೂ ಮಿಚೆಲ್ ಗೈರಾಗಿದ್ದು ಇವೆಲ್ಲವೂ ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿವೆ.
ಬರಾಕ್ ಒಬಾಮಾ ಹಾಗೂ ಮಿಚೆಲ್ ಒಬಾಮಾ 1989 ರಿಂದ ಡೇಟಿಂಗ್ನಲ್ಲಿದ್ದು 1992ರಲ್ಲಿ ಮದುವೆಯಾಗಿದ್ದರು. ಅವರ ದಾಂಪತ್ಯದ ಗುರುತಾಗಿ ಇಬ್ಬರು ಮಕ್ಕಳು ಇದ್ದಾರೆ. ಸದ್ಯ ಒಬಾಮಾ ಒಬ್ಬರೇ ಬಂದಿದ್ದು ದೊಡ್ಡ ಸುದ್ದಿಯಾಗುತ್ತಿದೆ. ಆದ್ರೆ ಮಿಚೆಲ್ ಒಬಾಮಾ ಯಾಕೆ ಟ್ರಂಪ್ ಪದಗ್ರಹಣಕ್ಕೆ ಗೈರು ಹಾಜರಾಗಿದ್ದರೂ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಆಚೆ ಬಂದಿಲ್ಲ. ಕೇವಲ ಊಹಾಪೋಹಗಳು, ಅನುಮಾನಗಳು ಹಾಗೂ ಗಾಳಿ ಸುದ್ದಿಗಳೇ ಹರಿದಾಡುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ