/newsfirstlive-kannada/media/post_attachments/wp-content/uploads/2024/07/bc-patil4.jpg)
ದಾವಣಗೆರೆ: ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಹೊನ್ನಾಳಿ ಅರಣ್ಯ ಪ್ರದೇಶದ ಸಮೀಪ ನಡೆದಿದೆ. ಪ್ರತಾಪ್ ಕುಮಾರ್ (41) ಆತ್ಮಹತ್ಯೆ ಮಾಡಿಕೊಂಡಿರೋ ಅಳಿಯ. ಆತ್ಮಹತ್ಯೆ ಮಾಡಿಕೊಂಡಿರೋ ಪ್ರತಾಪ್ ಕುಮಾರ್ ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರ ದೊಡ್ಡ ಮಗಳು ಸೌಮ್ಯ ಪಾಟೀಲ್ ಪತಿಯಾಗಿದ್ದಾರೆ.
ಇದನ್ನೂ ಓದಿ:ಅಳಿಯನ ಆತ್ಮಹತ್ಯೆಗೆ ಮುನ್ನ ಪೊಲೀಸ್ರ ಜತೆ ಮಾತಾಡಿದ್ದ ಬಿ.ಸಿ ಪಾಟೀಲ್.. ಅಸಲಿಗೆ ನಡೆದಿದ್ದೇನು?
ಹೊನ್ನಾಳಿ ತಾಲೂಕಿನ ಅರಕೆರೆ ಸಮೀಪದ ಫಾರೆಸ್ಟ್ನಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ವಿಷಸೇವಿಸಿ ಪ್ರತಾಪ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣ ಪ್ರತಾಪ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತಾಪ್ ಮೃತಪಟ್ಟಿದ್ದಾರೆ.
ಇನ್ನು, ಮಾಜಿ ಸಚಿವ ಬಿ ಸಿ ಪಾಟೀಲ್ ಮೊದಲ ಮಗಳು ಸೌಮ್ಯ ಮೇಲೆ ಪ್ರಾಣವನ್ನಿಟ್ಟುಕೊಂಡಿದ್ದರು. ಹೀಗಾಗಿ ಮುದ್ದು ಮಗಳನ್ನು ಸೋದರ ಅಳಿಯ ಪ್ರತಾಪ್ಗೆ ಕೊಟ್ಟು ಮದುವೆ ಮಾಡಿಸಿದ್ದಾರೆ. 2009ರಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸೌಮ್ಯ ಪಾಟೀಲ್ ಹಾಗೂ ಪ್ರತಾಪ್ ಕುಮಾರ್ ಮದುವೆ ಆಗಿತ್ತು. ಹೀಗಾಗಿ ಬಿ ಸಿ ಪಾಟೀಲ್ ಅವರು ಪ್ರತಾಪ್ ಕುಮಾರ್ರನ್ನು ಮನೆ ಅಳಿಯನನ್ನಾಗಿ ಮಾಡಿಕೊಂಡಿದ್ದರು. ಮೃತ ಪ್ರತಾಪ್ ಕುಮಾರ್ ಬಿ ಸಿ ಪಾಟೀಲ್ ಜೊತೆಯಿದ್ದು ರಾಜಕೀಯ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಇದರ ಜೊತೆಗೆ 90ಕ್ಕೂ ಹೆಚ್ಚು ಎಕರೆ ಬಿ ಸಿ ಪಾಟೀಲ್ ಜಮೀನನ್ನು ನೋಡಿಕೊಂಡು ಕೆಲಸ ಮಾಡುತ್ತಿದ್ದರಂತೆ. ಮದುವೆಯಾಗಿ 14 ವರ್ಷಗಳಾದರು ಪ್ರತಾಪ್ ಮತ್ತು ಸೌಮ್ಯಳಿಗೆ ಮಕ್ಕಳು ಆಗಿರಲಿಲ್ಲ. ದಂಪತಿ ಆದರೂ ಮನೆಯಲ್ಲಿ ಖುಷಿಯಾಗಿ ಅರಾಮಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ