ಟೀಮ್​ ಇಂಡಿಯಾದಲ್ಲಿ ಈಗಲೂ ನಡೆಯೋದು ಕೊಹ್ಲಿ ಮಾತೇ; ವಿರಾಟ್​​ ಕಂಡ್ರೆ ಬಿಸಿಸಿಐಗೆ ಭಯ ಏಕೆ?

author-image
Ganesh Nachikethu
Updated On
ಟೀಮ್​ ಇಂಡಿಯಾದಲ್ಲಿ ಈಗಲೂ ನಡೆಯೋದು ಕೊಹ್ಲಿ ಮಾತೇ; ವಿರಾಟ್​​ ಕಂಡ್ರೆ ಬಿಸಿಸಿಐಗೆ ಭಯ ಏಕೆ?
Advertisment
  • ವಿರಾಟ್ ಕೊಹ್ಲಿ ಕಂಡ್ರೆ ಎಲ್ರಿಗೂ ಭಯನಾ?
  • ಕೊಹ್ಲಿ ಬ್ಯಾಟಿಂಗ್ ಸ್ಲಾಟ್ ಬದಲಾಗೋದಿಲ್ವಾ?
  • ಸ್ಟಾರ್​ ಕ್ರಿಕೆಟರ್​ ಇಲ್ದಿದ್ರೆ ಬಿಸಿಸಿಐ ಖಜಾನೆ ತುಂಬಲ್ವಾ?

ಟೀಮ್ ಇಂಡಿಯಾದಲ್ಲಿ ಹೊಸ ಸುದ್ದಿಯೊಂದು ಕೇಳಿ ಬರ್ತಿದೆ. ಈ ವಿಚಾರ ನಿಜನಾ ಸುಳ್ಳಾ ಗೊತ್ತಿಲ್ಲ. ಆದ್ರೆ ದೇಶ ವಿದೇಶಗಳಲ್ಲಿ ಈ ಮಾತು ಫುಲ್ ವೈರಲ್ ಆಗ್ತಿರೋದಂತೂ ಸುಳ್ಳಲ್ಲ. ವಿರಾಟ್ ಕೊಹ್ಲಿ ಬಗ್ಗೆ ಇಂತಹ ಆರೋಪ ಕೇಳಿ ಬರ್ತಿರೋದು ಯಾಕೆ? ಕೊಹ್ಲಿ ಆನ್​ಫೀಲ್ಡ್ ಅಷ್ಟೇ ಅಲ್ಲ! ಆಫ್ ದ ಫೀಲ್ಡ್​ನಲ್ಲೂ ರಿಯಲ್ ಕಿಂಗಾ? ಅನ್ನೋ ಸ್ಟೋರಿ ಇದು.

ಅಗ್ರೆಸಿವ್.. ಌಂಗ್ರಿ.. ಪರ್ಫೆಕ್ಟ್ ಬಾಡಿ ಲ್ಯಾಂಗ್ವೇಜ್.. ಸ್ಟ್ರಾಂಗ್ ಕ್ಯಾರೆಕ್ಟರ್. ಯೆಸ್! ಈ ಎಲ್ಲಾ ಕ್ವಾಲಿಟೀಸ್ ಇರೋ ಏಕೈಕ ಆಟಗಾರ, ಅದು ವಿರಾಟ್ ಕೊಹ್ಲಿ ಮಾತ್ರ! ಆನ್​ಫೀಲ್ಡ್​​ನಲ್ಲಿ ಕೊಹ್ಲಿ ಗತ್ತು. ಗಮ್ಮತ್ತೇ ಬೇರೆ! ಕೊಹ್ಲಿ ಲುಕ್​ ಕೊಟ್ರೆ, ಎದುರಾಳಿಗಳ ಮುಖದಲ್ಲಿ ಸೆಕೆಂಡ್​​ನಲ್ಲಿ ಬೆವರು ಬರುತ್ತೆ. ಒಂದೇ ಮಾತಲ್ಲಿ ಹೇಳೋದಾದ್ರೆ, ಕೊಹ್ಲಿಯದ್ದು ಪವರ್​ಫುಲ್ ಕ್ಯಾರೆಕ್ಟರ್. ಕೊಹ್ಲಿಗೆ ಕೊಹ್ಲಿನೇ ಸಾಟಿ.! ಆದ್ರೆ ಆ ಪವರ್​​ಫುಲ್ ಕ್ಯಾರೆಕ್ಟರ್ ಬಗ್ಗೇನೇ ಇದೀಗ, ಭಾರೀ ಚರ್ಚೆ ನಡೆಯುತ್ತಿದೆ.

ವಿರಾಟ್ ಕೊಹ್ಲಿ ಕಂಡ್ರೆ ಭಯನಾ..?

ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿನ ಕಂಡ್ರೆ ಭಯ ಪಡೊ ಜನ ಇದ್ದಾರಾ? ಈ ಪ್ರಶ್ನೆಗೆ ಉತ್ತರ ಹೌದು! ಸೆಲೆಕ್ಟರ್ಸ್, ಕೋಚಸ್, ಟೀಮ್ ಮ್ಯಾನೇಜ್ಮೆಂಟ್​​​, ಆಟಗಾರರು ಎಲ್ಲರೂ ಕೊಹ್ಲಿಯನ್ನ ಕಂಡ್ರೆ ಹೆದರುತ್ತಾರಂತೆ. ಕೊಹ್ಲಿ ಮಾತಾಡಿದ್ರೆ, ಎಲ್ರೂ ಸೈಲೆಂಟ್ ಆಗ್ತಾರಂತೆ. ಯಾರೂ ಕೊಹ್ಲಿಗೆ ಎದರುತ್ತರ ಕೊಡೋದಿಲ್ವಂತೆ.

ಕೊಹ್ಲಿ ಫ್ಲಾಪ್ ಆಗ್ತಿದ್ರೂ ಕೇಳೋರಿಲ್ವಾ..?

ಕೊಹ್ಲಿ ಮಾತಿರಲಿ! ಕೊಹ್ಲಿ ಹೇಗೇ ಆಡಿದ್ರೂ, ಯಾರೂ ಕೇಳೋದಿಲ್ವಂತೆ. ಪರ್ತ್​ ಟೆಸ್ಟ್​ನಲ್ಲಿ ಶತಕ ಸಿಡಿಸಿದ್ದ ಕೊಹ್ಲಿ, ನಂತರ ಫ್ಲಾಪ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಕಳೆದೈದು ಇನ್ನಿಂಗ್ಸ್​ಗಳಲ್ಲಿ ಕೊಹ್ಲಿ ಗಳಿಸಿದ್ದು 7, 11, 3, 36 ಮತ್ತು 5 ರನ್. ಆದ್ರೂ ಯಾರೂ ಕೇಳಲ್ವಂತೆ.!

ಕೊಹ್ಲಿ ಬ್ಯಾಟಿಂಗ್ ಸ್ಲಾಟ್ ಬದಲಾಗೋದಿಲ್ವಾ.?

ಕೊಹ್ಲಿ ರನ್​ಗಳಿಸಲಿ ಬಿಡಲಿ..! ವಿರಾಟ್ ಬ್ಯಾಟಿಂಗ್ ಸ್ಲಾಟ್ ಮಾತ್ರ ಫಿಕ್ಸ್ ಆಗಿರುತ್ತೆ. ಕೊಹ್ಲಿ ಬ್ಯಾಟಿಂಗ್ ಕ್ರಮಾಂಕಕ್ಕೆ ಯಾರೂ ಎಂಟ್ರಿ ಕೊಡೋ ಹಾಗಿಲ್ಲ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಆಡಿರೋ 7 ಇನ್ನಿಂಗ್ಸ್​ಗಳಲ್ಲಿ, 6 ಬಾರಿ ಔಟ್ ಸೈಡ್​ ದ ಆಫ್ ಸ್ಟಂಪ್ ಡಿಲಿವರಿಗೆ ಔಟಾಗಿದ್ದಾರೆ. ಇಷ್ಟಾದ್ರೂ ವಿರಾಟ್ ಬ್ಯಾಟಿಂಗ್ ಕ್ರಮಾಂಕವನ್ನ ಬದಲಿಸೋದಿಲ್ಲ. ಬೇರೆ ಸ್ಲಾಟ್​​​ನಲ್ಲಿ ಬ್ಯಾಟಿಂಗ್​​ಗೆ ಇಳಿಯೋದಿಲ್ಲ.

ಕೊಹ್ಲಿ ಮೇಲಿದೆ ಜಯ್ ಶಾ ಕೃಪಾಕಟಾಕ್ಷ..?

ಕೊಹ್ಲಿ ಬ್ಯಾಟಿಂಗ್​ನಲ್ಲಿ ಸೂಪರ್​ ಹಿಟ್ ಪರ್ಫಾಮೆನ್ಸ್ ಕೊಡಲಿ! ಅಥವಾ ಅಟ್ಟರ್ ಫ್ಲಾಪ್ ಶೋ ನೀಡಲಿ. ಕೊಹ್ಲಿ ತಲೆ ಕೆಡಿಸಿಕೊಳ್ಳೋದಿಲ್ವಂತೆ. ಯಾಕಂದ್ರೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಕಿಂಗ್. ಕೊಹ್ಲಿಗೆ ಪವರ್​ಫುಲ್​ ವ್ಯಕ್ತಿಯ ಬೆಂಬಲವಿದಿಯಂತೆ. ಆ ಶಕ್ತಿಶಾಲಿ ವ್ಯಕ್ತಿ ಬೇರೆಯಾರೂ ಅಲ್ಲ.. ಅದು ಬಿಸಿಸಿಐ ಮಾಜಿ ಕಾರ್ಯದರ್ಶಿ, ಜಯ್​ ಶಾ.

ಕೊಹ್ಲಿ ಇಲ್ದಿದ್ರೆ ಬಿಸಿಸಿಐ ಖಜಾನೆ ತುಂಬಲ್ವಾ..?

ವಿರಾಟ್ ಕೊಹ್ಲಿ ಮೇಲೆ ಬಿಸಿಸಿಐಗೆ ಪ್ರೀತಿನೋ.. ವ್ಯಾಮೋಹನೋ.. ಗೊತ್ತಿಲ್ಲ. ಕೊಹ್ಲಿ ಇದ್ರೆ ಮಾತ್ರ ಕ್ರಿಕೆಟ್.. ಕೊಹ್ಲಿ ಇಲ್ದಿದ್ರೆ ಕ್ರಿಕೆಟ್ಟೇ ಇಲ್ಲ ಅನ್ನೋ ಥರ ಮಂಡಳಿ ಭಾವಿಸುತಿದೆಯಂತೆ. ಅದ್ರಲ್ಲೂ ಕೊಹ್ಲಿ ಕ್ರಿಕೆಟ್ ಫೀಲ್ಡ್​ಗೆ ಇಳಿದ್ರೆ ಮಾತ್ರ, ಬಿಸಿಸಿಐ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತೆ ಅನ್ನೋದು, ವಾದವಾಗಿದೆ.

ಅಂದ್ಹಾಗೆ ಟೀಮ್ ಇಂಡಿಯಾದ ಸೂಪರ್ ​ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿರುದ್ಧ ಈ ಗಂಭೀರ ಆರೋಪ ಮಾಡ್ತಿರೋದು, ಪಾಕಿಸ್ತಾನ ತಂಡದ ಮಾಜಿ ಆಟಗಾರ ಬಸಿತ್ ಅಲಿ. ಬದ್ಧವೈರಿಗಳು ನಮ್ಮ ಆಟಗಾರರ ಮೇಲೆ ಆರೋಪ ಮಾಡೋದು, ಹೊಸತಲ್ಲ. ಹಾಗಾಗಿ ಕೊಹ್ಲಿ ಬಗ್ಗೆ ಮಾಡಿರೋ ಆರೋಪವನ್ನೂ, ಗಂಭೀರವಾಗಿ ಪರಿಗಣಿಸೋ ಅವಶ್ಯಕತೆಯೂ ಇಲ್ಲ ಬಿಡಿ.!

ಇದನ್ನೂ ಓದಿ:ನಾಳೆಯ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ; ಕ್ಯಾಪ್ಟನ್ ಸೇರಿ ಮೂವರಿಗೆ ಕೊಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment