ಬೌಲಿಂಗ್ ಕೋಚ್ ಆಗಿ ಮಾರ್ನೆ ಮಾರ್ಕೆಲ್ ಎಂಟ್ರಿ
ಮಾರ್ಕೆಲ್ ಆಯ್ಕೆಯ ಹಿಂದೆ ಹಲವು ಲೆಕ್ಕಾಚಾರಗಳಿವೆ
ಮಾರ್ಕೆಲ್ ಕೋಚಿಂಗ್ ಅನುಭವ ಹೇಳ್ತಿದೆ ದೊಡ್ಡ ಕತೆ
ಟೀಮ್ ಇಂಡಿಯಾಗೆ ಬೌಲಿಂಗ್ ಕೋಚ್ ಆಗಿ ಸೌತ್ ಆಫ್ರಿಕಾ ಸ್ಪೀಡ್ ಸ್ಟರ್ ಮಾರ್ನೆ ಮಾರ್ಕೆಲ್ ಎಂಟ್ರಿ ಕೊಟ್ಟಿದ್ದಾರೆ. ಆರ್. ವಿನಯ್ ಕುಮಾರ್, ಲಕ್ಮೀಪತಿ ಬಾಲಾಜಿಯಂತಹ ಟೀಮ್ ಇಂಡಿಯಾದ ಮಾಜಿ ವೇಗಿಗಳು ಕೂಡ ಈ ಬೌಲಿಂಗ್ ಕೋಚ್ ರೇಸ್ಗಿಳಿದ್ದರೂ ಅವರನ್ನೆಲ್ಲ ಹಿಂದಿಕ್ಕಿ ಮಾರ್ನೆ ಮಾರ್ಕೆಲ್ಗೆ ಜವಾಬ್ದಾರಿ ಸಿಕ್ಕಿದೆ. ಮಾರ್ನೆ ಮಾರ್ಕೆಲ್ ಆಯ್ಕೆಗೆ ಹೆಡ್ ಕೋಚ್ ಗಂಭೀರ್ ಲಾಬಿ ಇದೆ ಅನ್ನೋದು ಓಪನ್ ಸೀಕ್ರೆಟ್. ಅದ್ರ ಹೊರತಾಗಿ ಮಾರ್ಕೆಲ್ ಆಯ್ಕೆಯ ಹಿಂದೆ ಹಲವು ಲೆಕ್ಕಾಚಾರಗಳಿವೆ.
ಆಯ್ಕೆಗೆ ಕಾರಣ ಏನು..?
ಎಲ್ಲರಿಗಿಂತ ಡಿಫ್ರೆಂಟ್: ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಹೆಚ್ಚು ಸಕ್ಸಸ್ ಕಂಡಿದ್ದಾರೆ. 86 ಟೆಸ್ಟ್, 117 ಏಕದಿನ, 44 ಟಿ20 ಆಡಿದ್ದಾರೆ. ಈ ಹಿಂದಿದ್ದ ಯಾವೊಬ್ಬ ಬೌಲಿಂಗ್ ಕೋಚ್ಗೂ ಇಷ್ಟು ಇಂಟರ್ನ್ಯಾಷನಲ್ ಪಂದ್ಯಗಳನ್ನ ಆಡಿದ ಅನುಭವವೇ ಇರಲಿಲ್ಲ.
ಇದನ್ನೂ ಓದಿ:ಗಗನಚುಂಬಿ ಸಿಕ್ಸರ್ ಬಾರಿಸಿದ ದ್ರಾವಿಡ್ ಪುತ್ರ; ಅದ್ಭುತ ಸಿಕ್ಸರ್ನ ವಿಡಿಯೋ ಇಲ್ಲಿದೆ..!
ಕೋಚಿಂಗ್ನಲ್ಲೂ ಅಪಾರ ಅನುಭವ: ಫ್ರಾಂಚೈಸಿ ಕ್ರಿಕೆಟ್ ಜೊತೆಗೆ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲೂ ಆಟಗಾರರಿಗೆ ಪಾಠ ಮಾಡಿ ಸಕ್ಸಸ್ ಕಂಡಿದ್ದಾರೆ.
ಮಾರ್ಕೆಲ್ ಕೋಚಿಂಗ್ ಅನುಭವ
3 ಸೀಸನ್ಗಳಲ್ಲಿ IPLನ ಲಕ್ನೋ ತಂಡದ ಬೌಲಿಂಗ್ ಕೋಚ್
2023ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮಾರ್ಗದರ್ಶನ
2022ರ T20 ವಿಶ್ವಕಪ್ ವೇಳೆ ನಮೀಬಿಯಾದ ಸಲಹೆಗಾರ
ಮಹಿಳಾ T20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಪಾಠ
SAT20 ಲೀಗ್ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್ನ ಕೋಚ್
ಅಗ್ರೆಸ್ಸಿವ್ ಆಟವೇ ಬಲ, ರಿಯಲ್ ಫೈಟರ್: ಯುವ ವೇಗಿಗಳ ಪಾಲಿಗೆ ದಿ ಬೆಸ್ಟ್ ಗುರು: ಆರ್ಷ್ದೀಪ್ ಸಿಂಗ್, ಮಯಾಂಕ್ ಯಾದವ್, ಉಮ್ರಾನ್ ಮಲಿಕ್.. ಹೀಗೆ ಹಲವಾರು ಯಂಗ್ಸ್ಟರ್ ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ಸ್ ಎನಿಸಿಕೊಂಡಿದ್ದಾರೆ. ಇವರೆಲ್ಲರನ್ನೂ ಭವಿಷ್ಯದ ಸೂಪರ್ ಸ್ಟಾರ್ಗಳನ್ನಾಗಿ ರೂಪಿಸುವಲ್ಲಿ ಅನುಭವಿ ಮಾರ್ಕೆಲ್ ಪ್ರಮುಖ ಪಾತ್ರ ನಿರ್ವಹಿಸಬಲ್ಲರು.
ಪರ್ಫೆಕ್ಟ್ ಟೀಮ್ಮ್ಯಾನ್: ನೂತನ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಒಬ್ಬ ಪರ್ಫೆಕ್ಟ್ ಟೀಮ್ ಮ್ಯಾನ್ ಕೂಡ ಹೌದು. ತಂಡದ ಒಳಿತಿಗಾಗಿ ಯಾವುದೇ ಕೆಲಸವನ್ನ ಬೇಕಾದ್ರೂ ಸಮರ್ಥವಾಗಿ ನಿಭಾಯಿಸಬಲ್ಲ ಗುಣ ಮಾರ್ಕೆಲ್ಗಿದೆ.
ಇದನ್ನೂ ಓದಿ:IPL 2025ಕ್ಕೂ ಮೊದಲೇ ಪಂಜಾಬ್ ಕಿಂಗ್ಸ್ನಲ್ಲಿ ದೊಡ್ಡ ವಿವಾದ; ಕೋರ್ಟ್ ಮೆಟ್ಟಿಲೇರಿದ ಪ್ರೀತಿ ಜಿಂಟಾ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್