Advertisment

ಮೊಹಮ್ಮದ್ ಸಿರಾಜ್ ಕೈಬಿಟ್ಟು ಪ್ರಮಾದ ಮಾಡೀತಾ ಟೀಮ್ ಮ್ಯಾನೇಜ್ಮೆಂಟ್​; ಇದರ ಪರಿಣಾಮ ಏನಾಗಲಿದೆ?

author-image
Gopal Kulkarni
Updated On
ಮೊಹಮ್ಮದ್ ಸಿರಾಜ್ ಕೈಬಿಟ್ಟು ಪ್ರಮಾದ ಮಾಡೀತಾ ಟೀಮ್ ಮ್ಯಾನೇಜ್ಮೆಂಟ್​; ಇದರ ಪರಿಣಾಮ ಏನಾಗಲಿದೆ?
Advertisment
  • ಟೀಮ್​ ಇಂಡಿಯಾದ ಬೌಲಿಂಗ್​ನಲ್ಲಿ ‘ಬಲ’ ಇದ್ಯಾ.?
  • ವೇಗಿ ಮೊಹಮ್ಮದ್​ ಶಮಿ ಫುಲ್​ ಫಿಟ್​ ಆಗಿದ್ದಾರಾ.?
  • ಬೆನ್ನುನೋವುನಿಂದ ಚೇತರಿಸಿಕೊಂಡ್ರಾ ಬೂಮ್ರಾ.?

ಮಹತ್ವದ ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಮತ್ತೊಂದು ಐಸಿಸಿ ಟ್ರೊಫಿ ಗೆಲುವನ್ನ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಆದ್ರೆ, ಅನೌನ್ಸ್​ ಆಗಿರೋ ತಂಡಕ್ಕೆ ಕಪ್​ ಗೆಲ್ಲೋ ಸಾಮರ್ಥ್ಯ ಇದ್ಯಾ.? ಮುಖ್ಯವಾಗಿ ಟೀಮ್​ ಇಂಡಿಯಾದ ಬೌಲಿಂಗ್​ ಬಲ ಇದ್ಯಾ.? ಈ ಚರ್ಚೆಗಳು ನಡೀತಿವೆ. ಯಾಕಂದ್ರೆ, ಅಳೆದು ತೂಗಿ ಲೆಕ್ಕಾಚಾರ ಹಾಕೋ ಭರದಲ್ಲಿ ಟೀಮ್​ ಮ್ಯಾನೇಜ್​ಮೆಂಟ್​ ಮೊಹಮ್ಮದ್​ ಸಿರಾಜ್​​ಗೆ ಮಹಾಮೋಸ ಮಾಡಿದೆ. ಈ ನಿರ್ಧಾರ ತಂಡಕ್ಕೆ ಬ್ಯಾಕ್​ಫೈರ್​ ಆಗೋ ಸಾಧ್ಯತೆಯಿದೆ.

Advertisment

ಇದನ್ನೂ ಓದಿ:Champions Trophy; ಪ್ಲೇಯರ್ಸ್ ಆಯ್ಕೆಯಲ್ಲಿ ಕೋಚ್​ಗೆ ಡಿಚ್ಚಿ ಕೊಟ್ಟ ರೋಹಿತ್, ಏನೇನು ಆಯಿತು?​

ಮಹತ್ವದ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ಟೀಮ್​ ಇಂಡಿಯಾ ಪ್ರಕಟವಾಗಿದ್ದಾಗಿದೆ. ಅಳೆದು ತೂಗಿ ಲೆಕ್ಕಚಾರ ಹಾಕಿ ಬಲಿಷ್ಟ ತಂಡವನ್ನ ಸೆಲೆಕ್ಷನ್​ ಕಮಿಟಿ ಆಯ್ಕೆ ಮಾಡಿದೆ. ಬಲಿಷ್ಠ ಬ್ಯಾಟಿಂಗ್​, ಸಾಲಿಡ್​ ಬೌಲರ್ಸ್​, ದಿ ಬೆಸ್ಟ್​ ಆಲ್​​ರೌಂಡರ್​ಗಳ ದಂಡು ತಂಡದಲ್ಲಿದೆ. ಆನ್​ಪೇಪರ್​ ಟೀಮ್​ ಇಂಡಿಯಾ ಸಖತ್​ ಸ್ಟ್ರಾಂಗ್​ ಆಗಿ ಕಾಣ್ತಿದೆ. ಆದ್ರೆ, ಆನ್​ಫೀಲ್ಡ್​ನಲ್ಲಿ ಅಷ್ಟೇ ಸ್ಟ್ರಾಂಗ್​ ಪರ್ಫಾಮೆನ್ಸ್​ ಬರುತ್ತಾ ಅನ್ನೋದು ಪ್ರಶ್ನೆಯಾಗಿದೆ. ಬ್ಯಾಟಿಂಗ್​ನಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಬಿಡಿ.. ಆದ್ರೆ, ಬೌಲಿಂಗ್​ನದ್ದೇ ದೊಡ್ಡ ಪ್ರಶ್ನೆಯಾಗಿದೆ.

ಟೀಮ್​ ಇಂಡಿಯಾದ ಬೌಲಿಂಗ್​ನಲ್ಲಿ ‘ಬಲ’ ಇದ್ಯಾ.?
ಯುವ ಎಡಗೈ ವೇಗಿ ಆರ್ಷ್​ದೀಪ್​ ಸಿಂಗ್​​ ಜೊತೆಗೆ ಅನುಭವಿಗಳು, ವಿಶ್ವ ಶ್ರೇಷ್ಟ ಬೌಲರ್​ಗಳಾದ ಮೊಹಮ್ಮದ್​ ಶಮಿ, ಜಸ್​​ಪ್ರೀತ್​ ಬೂಮ್ರಾ ಟೀಮ್​ ಇಂಡಿಯಾದಲ್ಲಿರೋ ವೇಗಿಗಳಾಗಿದ್ದಾರೆ. ಇವ್ರ ಸಾಮರ್ಥ್ಯದ ಬಗ್ಗೆ ಸಣ್ಣ ಪ್ರಶ್ನೆಯೂ ಇಲ್ಲ. ಆದ್ರೆ, ಫಿಟ್​ನೆಸ್​ ಬಗ್ಗೆ ಹಲವು ಅನುಮಾನಗಳಿವೆ.

Advertisment

ಮೊಹಮ್ಮದ್​ ಶಮಿ ಫುಲ್​ ಫಿಟ್​ ಆಗಿದ್ದಾರಾ.?
2023ರ ಏಕದಿನ ವಿಶ್ವಕಪ್​ ಬಳಿಕ ಸರ್ಜರಿಗೆ ಒಳಗಾಗಿದ್ದ ಮೊಹ್ಮದ್​ ಶಮಿ ಇದುವರೆಗೂ ಒಂದೇ ಒಂದು ಇಂಟರ್​ನ್ಯಾಷನಲ್​ ಪಂದ್ಯವನ್ನಾಡಿಲ್ಲ. ದೇಶಿ ಟೂರ್ನಿಗೆ ಕಮ್​ಬ್ಯಾಕ್​ ಮಾಡಿದ್ರೂ ಮಧ್ಯದಲ್ಲಿ ಇಂಜುರಿ ಸಮಸ್ಯೆ ಎದುರಾಗಿ ಮತ್ತೆ ಎನ್​ಸಿಎ ಸೇರಿದ್ರು. ಸದ್ಯ ಎನ್​ಸಿಎನಲ್ಲಿ ಫಿಟ್​ನೆಸ್​ ಟೆಸ್ಟ್​ ಪಾಸ್​ ಮಾಡಿದ್ರೂ, ಮ್ಯಾಚ್​ ಫಿಟ್​ಸೆನ್​ ಹೇಗಿದೆ ಅನ್ನೋದು ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಇನ್ನಷ್ಟೇ ತಿಳಿಯಬೇಕಿದೆ. ಇಂತಾ ವೇಗಿಯನ್ನ ಮಹತ್ವದ ಚಾಂಪಿಯನ್ಸ್​ ಟ್ರೋಫಿಗೆ ಸೆಲೆಕ್ಟ್​ ಮಾಡಿದ್ದು ಸರೀನಾ.?

publive-image

ಬೆನ್ನುನೋವುನಿಂದ ಚೇತರಿಸಿಕೊಂಡ್ರಾ ಬೂಮ್ರಾ.?
ಆಸ್ಟ್ರೇಲಿಯಾ ಟೆಸ್ಟ್​ ಸರಣಿಯ ಕೊನೆಯ ಟೆಸ್ಟ್​ ನಡುವೆಯೇ ಸ್ಕ್ಯಾನ್​ ಹೋಗಿ ಬಂದಿದ್ದ ಬೂಮ್ರಾಗೆ ಬೆನ್ನು ನೋವಿನ ಸಮಸ್ಯೆ ಕಾಡ್ತಿದೆ. ಫೆಬ್ರವರಿ 2ಕ್ಕೆ ಮತ್ತೊಮ್ಮೆ ಬೂಮ್ರಾ ಸ್ಕ್ಯಾನ್​ಗೆ ಒಳಗಾಗ್ತಾರೆ ಅನ್ನೋದು ಸದ್ಯದ ರಿಪೋರ್ಟ್​.! ಇನ್ನೂ ಬೆನ್ನು ನೋವಿನಿಂದ ಚೇತರಿಸಿಕೊಳ್ಳದ ಬೂಮ್ರಾನ ಆಯ್ಕೆ ಮಾಡಿದ್ಯಾಕೆ ಅನ್ನೋದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.

publive-image

ವೇಗಿ ಮೊಹಮ್ಮದ್​ ಸಿರಾಜ್​ನ ಕಡೆಗಣಿಸಿದ್ದು ಸರೀನಾ.?
ಬೂಮ್ರಾ, ಶಮಿ ಇಬ್ಬರ ಫಿಟ್ನೆಸ್​ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ. ಹೀಗಿದ್ರೂ ತಂಡದ ಪ್ರೀಮಿಯಂ ವೇಗಿ ಮೊಹ್ಮದ್​ ಸಿರಾಜ್​ನ ಕಡೆಗಣಿಸಿದ್ದು ಸರೀನಾ ಅನ್ನೋದು ಸದ್ಯ ಎದುರಾಗಿರೋ ಪ್ರಶ್ನೆಯಾಗಿದೆ. ಬೂಮ್ರಾಗೆ ಬ್ಯಾಕ್​ ಅಪ್​ ಪ್ಲೇಯರ್​ ಆಗಿ ಅನಾನುಭವಿ ಹರ್ಷಿತ್​ ರಾಣಾನ ಆಯ್ಕೆ ಮಾಡಲಾಗಿದೆ. ಈಗಾಗಲೇ ಏಕದಿನ ಫಾರ್ಮೆಟ್​ನಲ್ಲಿ, ಬಿಗ್​ ಟೂರ್ನಮೆಂಟ್​ಗಳಲ್ಲಿ ಸಾಮರ್ಥ್ಯ ಸಾಬೀತುಪಡಿಸಿರೋ ಮೊಹಮ್ಮದ್​ ಸಿರಾಜ್​ನ ಸೈಡ್​ಲೈನ್​​ ಮಾಡಿ ಅನಾನುಭವಿಗೆ ಮಣೆ ಹಾಕಿರೋದು ಯಾವ ಸೀಮೆ ನ್ಯಾಯ ನೀವೇ ಹೇಳಿ.?

Advertisment

ಟೀಮ್​ ಮ್ಯಾನೇಜ್​ಮೆಂಟ್​ನಿಂದ ಸಿರಾಜ್​ಗೆ ಅನ್ಯಾಯ.!
ಮೊಹಮ್ಮದ್​ ಸಿರಾಜ್​ಗೆ ಮ್ಯಾನೇಜ್​ಮೆಂಟ್​ನಿಂದ ಮೋಸ ಆಗಿದೆ. 2022 ಜನವರಿಯಿಂದ ಈವರೆಗೆ ಏಕದಿನ ಫಾರ್ಮೆಟ್​ನಲ್ಲಿ ಟೀಮ್​ ಇಂಡಿಯಾದ ಸಕ್ಸಸ್​ ಫುಲ್​ ಬಾಲರ್​ ಯಾರು.? ಅಂದ್ರೆ ಅದಕ್ಕೆ ಉತ್ತರ ಮೊಹಮ್ಮದ್​ ಸಿರಾಜ್​.! ಓನ್​ ಡೇ ಗೇಮ್​ನಲ್ಲಿ ಸಿರಾಜ್​ ಅಕ್ಷರಶಃ ಸುಂಟರಗಾಳಿಯಂತಾ ಪರ್ಫಾಮೆನ್ಸ್​ ನೀಡಿದ್ದಾರೆ.

2022ರಿಂದ ಏಕದಿನ ಕ್ರಿಕೆಟ್​​ನಲ್ಲಿ 319.1 ಓವರ್​ ಬೌಲಿಂಗ್​ ಮಾಡಿರೋ ಸಿರಾಜ್​ 71 ವಿಕೆಟ್​ ಉರುಳಿಸಿದ್ದಾರೆ. 5.11ರ ಸರಾಸರಿಯಲ್ಲಿ ರನ್​ ಬಿಟ್ಟು ಕೊಟ್ಟಿದ್ದಾರೆ.

ಕಳೆದ 2 ವರ್ಷಗಳಲ್ಲಿ ಬೆಂಕಿಯುಂಡೆಗಳನ್ನೇ ಉಗುಳಿರೋ ಸಿರಾಜ್​ 71 ವಿಕೆಟ್​ ಉರುಳಿಸಿದ್ದಾರೆ. ಈ ಮೂಲಕ ವಿಕೆಟ್​ಗಳಿಕೆ ಲೆಕ್ಕಾಚಾರದಲ್ಲಿ 2022ರ ಆರಂಭದಿಂದ ಟೀಮ್​ ಇಂಡಿಯಾದ ಸಕ್ಸಸ್​​ಫುಲ್​ ಒಡಿಐ ಬೌಲರ್​​ ಎನಿಸಿಕೊಂಡಿದ್ದಾರೆ.

Advertisment

ಇದನ್ನೂ ಓದಿ:ಡೆಲ್ಲಿ, ಲಕ್ನೋ ಫ್ರಾಂಚೈಸಿಯಿಂದ ಬಿಗ್ ಅಪ್​ಡೇಟ್ಸ್​; ಕನ್ನಡಿಗನ ವಿಚಾರದಲ್ಲಿ DC ತಪ್ಪು ಮಾಡ್ತಿದ್ಯಾ?

2022ರ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಹೆಚ್ಚು ವಿಕೆಟ್​ ಉರುಳಿದ ಭಾರತೀಯ ವೇಗಿಗಳ ಪಟ್ಟಿಯಲ್ಲಿ ಸಿರಾಜ್​ ಅಗ್ರಸ್ಥಾನದಲ್ಲಿದ್ದಾರೆ. ಸಿರಾಜ್​ 71 ವಿಕೆಟ್​ ಉರುಳಿಸಿದ್ರೆ, 47 ವಿಕೆಟ್​ ಉರುಳಿಸಿರೋ ಮೊಹಮ್ಮದ್​ ಶಮಿ 2ನೇ ಸ್ಥಾನದಲ್ಲಿದ್ದಾರೆ. 43 ವಿಕೆಟ್​ ಕಬಳಿಸಿರೋ ಶಾರ್ದೂಲ್​ ಠಾಕೂರ್​ 3ನೇ, 41 ವಿಕೆಟ್​ ಉರುಳಿಸಿರೋ ಜಸ್​ಪ್ರಿತ್​ ಬೂಮ್ರಾ 4ನೇ ಸ್ಥಾನದಲ್ಲಿದ್ದಾರೆ.

ಶಮಿ,ಬೂಮ್ರಾ ವಿಕೆಟ್​ ಕಬಳಿಕೆಯ ಸಾಧನೆಗೂ ಸಿರಾಜ್​ ಸಾಧನೆಗೂ ಎಷ್ಟು ಅಜಗಜಾಂತರ ವ್ಯತ್ಯಾಸವಿದೆ ಅನ್ನೋದನ್ನ.. ಶಮಿ,ಬೂಮ್ರಾಗಿಂತ ಹೆಚ್ಚು ಪಂದ್ಯ ಆಡಿರಬಹುದು ಆದ್ರೆ, ಏಕದಲ್ಲಿ ಕನ್ಸಿಸ್ಟೆನ್ಸಿಯನ್ನ ಮೆಂಟೇನ್​ ಮಾಡಿದ್ದಾರೆ. ಭಾರತೀಯ ವೇಗಿಗಳು ಮಾತ್ರವಲ್ಲ.. ವಿಶ್ವದ ಯಾವೊಬ್ಬ ವೇಗಿ ಕೂಡ ಸಿರಾಜ್​ ಮಾಡಿದ ಸಾಧನೆಯನ್ನ 2022 ಜನವರಿಯಿಂದ ಈವರೆಗೆ ಮಾಡಿಲ್ಲ. ಇದು ಕನ್ಸಿಸ್ಟೆನ್ಸಿಗೆ ಸಾಕ್ಷಿಯಾಗಿದೆ.

Advertisment

ಇದನ್ನೂ ಓದಿ:5ನೇ ಬಾರಿ ವಿಜಯ ಹಜಾರೆ ಟ್ರೋಫಿ ಕರ್ನಾಟಕದ ಮುಡಿಗೆ; ಮಯಾಂಕ್ ಪಡೆಗೆ ಅದ್ಧೂರಿ ಸ್ವಾಗತ

ಇಂತಾ ಸಿರಾಜ್​ನ ಬಾಲ್​ ಹಳೆಯದಾದ ಮೇಲೆ ಏಫೆಕ್ಟೀವ್​ ಇಲ್ಲ ಅಂತಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಡ್ರಾಪ್​ ಮಾಡಿದ್ದಾರೆ. ಮುಖ್ಯ ತಂಡ ಬಿಡಿ ಕೊನೆಯ ಪಕ್ಷ ಬ್ಯಾಕ್​​ ಅಪ್​ ಪ್ಲೇಯರ್​ ಆಗಿಯಾದ್ರೂ ಮೊಹಮ್ಮದ್​ ಸಿರಾಜ್​ಗೆ​​ ಸ್ಥಾನ ನೀಡಲೇಬೇಕಿತ್ತು. ಚಾಂಪಿಯನ್ಸ್​ ಟ್ರೋಫಿ ತಂಡದಿಂದ ಡ್ರಾಪ್​ ಮಾಡಿರೋದು ಮೊಹಮ್ಮದ್​ ಸಿರಾಜ್​ಗೆ ಮಾಡಿರೋ ಮಹಾಮೋಸವೇ ಅಂದ್ರೆ ತಪ್ಪಾಗಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment