/newsfirstlive-kannada/media/post_attachments/wp-content/uploads/2025/03/BEER-BOTTLE-COLOUR-1.jpg)
ಸಾಮಾನ್ಯವಾಗಿ ನಾವು ನೀವು ನೋಡಿರುವ ಹಾಗೆ ಬಿಯರ್ ಬಾಟಲ್ಗಳ ಬಣ್ಣ ಹಸಿರು ಹಾಗೂ ಕಂದು ಬಣ್ಣದಿಂದ ಕೂಡಿರುತ್ತವೆ. ಬೇರೆ ಬಣ್ಣಗಳಲ್ಲಿ ಬಿಯರ್ ಬಾಟಲ್ ಯಾಕೆ ಇರುವುದಿಲ್ಲ? ಇದಕ್ಕೆ ಕಾರಣವೇನು? ಎಂದು ಹುಡುಕಿದರೆ ಅಲ್ಲೊಂದು ವೈಜ್ಞಾನಿಕ ಕಾರಣವಿದೆ. ಬಿಯರ್ ಬಾಟಲ್ಗಳನ್ನು ಈ ಬಣ್ಣಗಳನ್ನು ಹೊರತುಪಡಿಸಿ ಬೇರೆ ಬಾಟಲ್ಗಳಲ್ಲಿ ಸೇರಿಸಿದರೆ ಅನೇಕ ಅನಾಹುತಗಳು ಸಂಭವಿಸುತ್ತವೆ. ಅನೇಕ ಅಪಾಯಗಳು ಕೂಡ ಇವೆ.
ಇದನ್ನೂ ಓದಿ: ವಿಪರೀತ ಸೂರ್ಯನ ಶಾಖ; ಬಿರು ಬೇಸಿಗೆಯಲ್ಲಿ ICE ನೀರು ಕುಡಿಯೋ ಮುನ್ನ ಎಚ್ಚರ..!
ಇದನ್ನು ಪತ್ತೆ ಮಾಡಲು ಮಿಸ್ರ ದೇಶದಲ್ಲಿ ಮೊದಲ ಬಾರಿ ಬಿಯರ್ ಉತ್ಪಾದನಾ ಕಂಪನಿಗಳು ಶ್ರಮಿಸಿದ್ದವು. ಹಲವು ಸಂಶೋಧನಗಳನ್ನು ಕೈಗೊಂಡ ಬಳಿಕ ಕೆಲವು ವಿಚಾರಗಳು ಬೆಳಕಿಗೆ ಬಂದವು. ಅದರಲ್ಲಿ ಮೊದಲನೇಯದು ಪಾರದರ್ಶಕ ಅಥವಾ ಟ್ರಾನ್ಸ್ಫರಂಟ್ ಬಾಟಲ್ಗಳಲ್ಲಿ ಬಿಯರ್ ಸೇರಿಸುವುದರಿಂದ ಬಾಟಲ್ಗಳ ಮೇಲೆ ಬೀಳುವ ಸೂರ್ಯನ ಕಿರಣಗಳು ಬಿಯರ್ನ್ನು ಹಲವು ರೀತಿಯಲ್ಲಿ ನಷ್ಟ ಉಂಟು ಮಾಡುತ್ತವೆ.
ಪಾರದರ್ಶಕ ಗಾಜಿನ ಬಾಟಲ್ನಲ್ಲಿ ಬಿಯರ್ ಸೇರಿಸಿದರೆ ಸೂರ್ಯ ಕಿರಣಗಳು ಅದರ ಮೇಲೆ ಬೀಳುವುದರಿಂದ ಬಿಯರ್ ಬೇರೆ ರೀತಿಯಲ್ಲಿ ರಿಯಾಕ್ಟ್ ಆಗುವ ಸಂಭವವಿರುತ್ತದೆ. ಹೀಗೆ ಸೂರ್ಯನ ಕಿರಣಗಳು ಬಿಯರ್ ಬಾಟಲ್ ಮೇಲೆ ಬೀಳುವುದರಿಂದ ಅದರ ಸ್ವಾದದಲ್ಲಿ ಬದಲಾವಣೆ ಆಗುತ್ತದೆ ಹಾಗೂ ಅದರಿಂದ ಕೆಟ್ಟ ವಾಸನೆ ಹೊರಹೊಮ್ಮುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ.
ಹೀಗಾಗಿ ಬಿಯರ್ ತಯಾರಿಕಾ ಕಂಪನಿಗಳು ಕಂದು ಬಣ್ಣದ ಮತ್ತು ಹಸಿರು ಬಣ್ಣದ ಬಾಟಲ್ನಲ್ಲಿ ಬಿಯರ್ ತುಂಬಿ ಪ್ರಯೋಗ ಮಾಡಿ ನೋಡಿದರು. ಆಗ ಬಿಯರ್ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ಈ ಬಣ್ಣದ ಬಾಟಲ್ಗಳಲ್ಲಿ ಸೇರಿಸಲಾದ ಬಿಯರ್ ಕೆಟ್ಟು ಹೋಗಲಿಲ್ಲ. ಸ್ವಾದ ಕಳೆದುಕೊಳ್ಳಲಿಲ್ಲ ಹಾಗೂ ದುರ್ನಾತವು ಕೂಡ ಬರಲಿಲ್ಲ.
ಇದನ್ನೂ ಓದಿ:ಭಾರತದ ಯಾವ ರಾಜ್ಯದಲ್ಲಿ ಅತಿ ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ? ಅದು ಕರ್ನಾಟಕದ ಪಕ್ಕದಲ್ಲೇ ಇದೆ!
ಈ ಪ್ರಯೋಗ ಯಶಸ್ವಿಯಾದಾಗಿನಿಂದ ಬಿಯರ್ ತಯಾರಿಕಾ ಕಂಪನಿಗಳು ಬಿಯರ್ ತುಂಬಲು ಕೇವಲ ಹಸಿರು ಹಾಗೂ ಕಂದು ಬಣ್ಣದ ಬಾಟಲಿಗಳನ್ನು ಉಪಯೋಗಿಸತೊಡಗಿದರು. ಅಂದಿನಿಂದ ಇಂದಿನವರೆಗೂ ಬಿಯರ್ ಬಾಟಲ್ಗಳು ಈ ಎರಡು ಬಣ್ಣಗಳಲ್ಲಿ ಮಾತ್ರ ನಮಗೆ ಲಭ್ಯವಾಗುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ