ಚಿನ್ನ ಖರೀದಿಸಲು ಶುಭ ಮುಹೂರ್ತ.. ಬಂದೇ ಬಿಟ್ಟಿದೆ ಅಕ್ಷಯ ತೃತೀಯ..!

author-image
Ganesh
Updated On
ಚಿನ್ನಾಭರಣ ಪ್ರಿಯರಿಗೆ ಒಳ್ಳೆಸುದ್ದಿ; ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ.. ಎಷ್ಟು ರೂಪಾಯಿ?
Advertisment
  • ಅಕ್ಷಯ ತೃತೀಯ ದಿನ ಯಾಕೆ ಚಿನ್ನ ಖರೀದಿ ಮಾಡ್ತಾರೆ?
  • ಈ ಬಾರಿ ಅಕ್ಷಯ ತೃತೀಯ ಯಾವಾಗ ಬಂದಿದೆ..?
  • ಅಕ್ಷಯ ತೃತೀಯ ದಿನದಂದು ಪೂಜೆಗೆ ಮುಹೂರ್ತ ಏನು

ಶಾಸ್ತ್ರಗಳಲ್ಲಿ ಚಿನ್ನ ಖರೀದಿಸೋದು ಮಂಗಳಕರ ಅಂತಾ ನಂಬಲಾಗಿದೆ. ಚಿನ್ನ ಲಕ್ಷ್ಮಿ ದೇವಿಯ ಆಶೀರ್ವಾದ ತರುತ್ತದೆ ಎಂದು ಹೇಳಲಾಗುತ್ತದೆ. ಹಾಗಂತ ಗೋಲ್ಡ್ ಯಾವಾಗ ಬೇಕಿದ್ದರೂ ಖರೀದಿಸಬಹುದು. ಆದರೆ ಪಂಚಾಂಗದ ಪ್ರಕಾರ ಕೆಲವು ವಿಶೇಷ ದಿನಗಳಲ್ಲಿ ಚಿನ್ನ ಖರೀದಿಸಿದ್ರೆ ಮನೆಗೆ ಅದೃಷ್ಟ ಸಿಗುತ್ತದೆ ಎಂದು ನಂಬಲಾಗುತ್ತದೆ. ಸಂತೋಷ, ಸಂಪತ್ತು, ಸಮೃದ್ಧಿ, ಭವ್ಯತೆ ಮತ್ತು ಐಶ್ವರ್ಯ ಪ್ರಾಪ್ತಿ ಆಗುತ್ತದೆ ಅನ್ನೋ ನಂಬಿಕೆ ಇದೆ.

ಏಪ್ರಿಲ್‌ನಲ್ಲಿ ಚಿನ್ನ ಖರೀದಿ..!

ಭವಿಷ್ಯ ಪುರಾಣ, ಸ್ಕಂದ ಪುರಾಣ, ಪದ್ಮ ಪುರಾಣ, ಮತ್ಸ್ಯ ಪುರಾಣಗಳ ಪ್ರಕಾರ, ಚಿನ್ನ ಖರೀದಿಸಲು ಅಕ್ಷಯ ತೃತೀಯ ಅತ್ಯಂತ ಪವಿತ್ರ ದಿನ ಎಂದು ಪರಿಗಣಿಸಲಾಗಿದೆ. ಈ ದಿನ ಚಿನ್ನ ಖರೀದಿಸೋದ್ರಿಂದ ವರ್ಷವಿಡೀ ಜೀವನದಲ್ಲಿ ಸಂತೋಷ ಸಿಗಲಿದೆ. ಚಿನ್ನ ಅತ್ಯುತ್ತಮ ಹೂಡಿಕೆ ಎಂದು ಪರಿಗಣಿಸಲಾಗಿದೆ.

ಯಾವಾಗ ಅಕ್ಷಯ ತೃತೀಯ..?

ಈ ವರ್ಷದ ಅಕ್ಷಯ ತೃತೀಯ ಏಪ್ರಿಲ್ 30 ರಂದು ಬಂದಿದೆ. ವೈಶಾಖ ಶುಕ್ಲ ಪಕ್ಷದ ತೃತೀಯ ತಿಥಿಯು 29 ಏಪ್ರಿಲ್ 2025 ರಂದು ಸಂಜೆ 5:31ಕ್ಕೆ ಪ್ರಾರಂಭವಾಗುತ್ತದೆ. ಏಪ್ರಿಲ್ 30 ಮಧ್ಯಾಹ್ನ 2:12 ಕ್ಕೆ ಕೊನೆಗೊಳ್ಳಲಿದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಏಪ್ರಿಲ್ 10 ರಂದು ಸಂಜೆ 5:41 ರಿಂದ ಮಧ್ಯಾಹ್ನ 2:12 ರವರೆಗೆ ಶುಭ ಸಮಯ. ಪೂಜೆಗೆ ಶುಭ ಸಮಯ 6 ರಿಂದ ಮಧ್ಯಾಹ್ನ 12:18 ಆಗಿದೆ.

ಇದನ್ನೂ ಓದಿ: PUC ಪರೀಕ್ಷೆಯಲ್ಲಿ ಅವಳಿ ಮಕ್ಕಳ ಸಾಧನೆ; ಮಾರ್ಕ್ಸ್​​ನಲ್ಲೂ ಸಹೋದರತೆ ಕಂಡು ಎಲ್ಲರೂ ಶಾಕ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment