/newsfirstlive-kannada/media/post_attachments/wp-content/uploads/2024/10/C295-AIRCRAFT.jpg)
ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಪೇನ್​ನ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್​ ಜೊತೆಗೂಡಿ ಸೋಮವಾರ ವಡೋದರಾದಲ್ಲಿ ಭಾರತದ ಮೊದಲ ಖಾಸಗಿ ಮಿಲಟರಿ ಟ್ರಾನ್ಸ್​ಫೋರ್ಟ್​ ಏರ್​ಕ್ರಾಪ್ಟ್​ ಉತ್ಪಾದನಾ ಘಟಕವನ್ನು ಉದ್ಘಾಟನೆ ಮಾಡಿದರು. ಈ ಒಂದು ಘಟಕ ಭಾರತದ ಮೊಟ್ಟ ಮೊದಲ ಖಾಸಗಿ ವಿಮಾನ ಉತ್ಪಾದನ ಉದ್ಯಮವಾಗಿ ಗುರುತಿಸಿಕೋಂಡಿದೆ. ಟಾಟಾ ಅಡ್ವಾನ್ಸ್ಡ್​ ಸಿಸಿಸ್ಟಮ್ ಲಿಮಿಟೆಡ್​ (TASL) ಕ್ಯಾಂಪಸ್​ನಲ್ಲಿ ಇನ್ನು ಮುಂದೆ ಈ ಉದ್ಯಮ ಭಾರತದ ಸೇನಾಪಡೆಗೆ ಬೇಕಾಗುವ ಸಿ295 ಯುದ್ಧವಿಮಾನವನ್ನು ತಯಾರಿಸಲಿದೆ. ಈ ಒಂದು ಹೆಜ್ಜೆ ಭಾರತದ ಅಂತರರಿಕ್ಷಯಾನದ ಉದ್ಯಮದಲ್ಲಿಯೇ ಒಂದು ಪ್ರಮುಖ ಮೈಲುಗಲ್ಲಾಗಿ ಗುರುತಿಸಿಕೊಂಡಿದೆ.
ಯುದ್ರ್ಧ ವಿಮಾನ ತಯಾರಿಕಾ ಘಟಕವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಮೇಕ್​ ಇನ್ ಇಂಡಿಯಾ ಯೋಜನೆಯು ಭಾರತದಲ್ಲಿ ಹಲವು ರೀತಿಯ ಬದಲಾವಣೆಗಳನ್ನು ತಂದಿದೆ. ಹಲವು ಗೇಮ್​ ಚೇಂಜರ್​ ಹಾದಿಗಳನ್ನು ನಿರ್ಮಿಸಿದೆ ಹೇಳಿದ್ದಾರೆ. ಹಾಗಿದ್ರೆ ಈ ಒಂದು ಯುದ್ಧ ವಿಮಾನ ಭಾರತಕ್ಕೆ ಹೇಗೆ ಗೇಮ್ ಚೇಂಜರ್ ಆಗಿ ಗುರುತಿಸಿಕೊಳ್ಳಲಿದೆ ಅನ್ನೋದು ನೋಡುವುದಾದ್ರೆ.
/newsfirstlive-kannada/media/post_attachments/wp-content/uploads/2024/10/C295-AIRCRAFT-1.jpg)
1. ಸಿ 295 ಯುದ್ಧವಿಮಾನ ಭಾರತದ ರಕ್ಷಣಾ ಪಡೆಯ ಶಕ್ತಿಯನ್ನು ಹೆಚ್ಚಿಸಲಿದೆ.
ಈ ಒಂದು ಸಿ 295 ಯುದ್ಧ ವಿಮಾನವನ್ನು ಏರ್​ಬಸ್​ ಡಿಫೆನ್ಸ್ ಮತ್ತು ಸ್ಪೇಸ್​ ತಯಾರಿಸಲಿದೆ ಈ ಒಂದು ಯುದ್ಧ ವಿಮಾನ ಅನೇಕ ರೀತಿಯಲ್ಲಿ ಭಾರತೀಯ ವಾಯುಪಡೆಗೆ ಶಕ್ತಿ ತುಂಬಲಿದೆ. ಸೇನಾಪಡೆಯ ರವಾನೆ. ಕಾರ್ಗೊಏರ್​ಲಿಫ್ಟ್, ವೈದ್ಯಕೀಯ ಸೇವೆಗಳನ್ನು ತಲುಪಿಸುವುದು ಹಾಗೂ ಸೇನಾಪಡೆಯ ಹಲವು ಆಪರೇಷನ್​ಗಳಿಗೆ ಇದು ಸಹಾಯಕವಾಗಲಿದೆ. ಈ ಒಂದು ಸಿ 295 ವಿಮಾನವು ಸೋವಿಯತ್​ ಆ್ಯಂಟೋನೊವಾ ಎಎನ್​ 32 ಮತ್ತು ಹೆಚ್​ಎಎಲ್​ನ ಆವ್ರೊ 748 ವಿಮಾನಗಳನ್ನು ರಿಪ್ಲೇಸ್ ಮಾಡಲಿದೆ. ಇದು ಏಕಕಾಲಕ್ಕೆ ಒಂಬತ್ತು ಟನ್ ಯುದ್ಧ ಸಾಮಗ್ರಿಗಳನ್ನು ಸಾಗಿಸಬಲ್ಲ, 71 ಯೋಧರು ಇಲ್ಲವೇ 48 ಪಾರಾಟ್ರೂಪ್ಸ್​ಗಳನ್ನು ರವಾನೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅದು ಮಾತ್ರವಲ್ಲ ಗಂಟೆಗೆ 482 ಕಿಲೋ ಮೀಟರ್ ವೇಗದಲ್ಲಿ ಹಾರಾಡುವ ಸಾಮರ್ಥ್ಯ ಈ ವಿಮಾನದ್ದು.
2. ಮೇಕ್​ ಇನ್ ಇಂಡಿಯಾಗೆ ಮತ್ತಷ್ಟು ಬಲ
ಸಿ 295 ವಿಮಾನ ತಯಾರಿಕಾ ಯೋಜನೆಯೂ ಸದ್ಯ ಭಾರತದಲ್ಲಿ ಮೇಕ್​ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ್​ ಯೋಜನೆಗೆ ದೊಡ್ಡ ಬಲ ತುಂಬಲಿದೆ. ಇದರಿಂದಾಗಿ ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ಅನಿವಾರ್ಯತೆ ಹಾಗೂ ಅವಲಂಬನೆಯನ್ನು ಕಡಿಮೆ ಮಾಡಲಿದೆ. ಜೊತೆಗೆ ಸ್ಥಳೀಯ ಉತ್ಪಾದನೆಯಗೆ ಹೆಚ್ಚು ಬಲ ನೀಡಲಿದೆ.
ಈ ಒಂದು ಯೋಜನೆಯ ಅಡಿಯಲ್ಲಿ ಸುಮಾರು 56 ಸಿ 295 ವಿಮಾನಗಳನ್ನು ನಿರ್ಮಿಸಲು ಪ್ಲಾನ್​ ಇದ್ದು, ಏರ್​ಬಸ್​ ಹಾಗೂ ಸ್ಪೇನ್​ನ ಫೈನಲ್ ಅಸೆಂಬ್ಲಿ ಲೈನ್ ಸೇರಿ ಮೊದಲು 16 ಸಿ295 ಯುದ್ಧ ವಿಮಾನಗಳನ್ನು ನಿರ್ಮಿಸಲಿವೆ. ಉಳಿದ 40 ಯುದ್ಧ ವಿಮಾನಗಳು ಟಿಎಎಸ್​ಎಲ್​ ಜೊತೆಗೆ ಸಿದ್ಧಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಮೇಡ್​ ಇನ್ ಇಂಡಿಯಾದ ಮೊದಲ ಸಿ0295 ಸೆಪ್ಟಂಬರ್ 2026 ಕ್ಕೆ ಸಿದ್ಧಗೊಳ್ಳುವ ನಿರೀಕ್ಷೆ ಇದ್ದು ಉಳಿದ ವಿಮಾನಗಳು ಆಗಸ್ಟ್ 2031ಕ್ಕೆ ವಾಯುಪಡೆಗೆ ಹಸ್ತಾಂತರವಾಗಲಿವೆ ಎಂದು ಹೇಳಲಾಗಿದೆ.
/newsfirstlive-kannada/media/post_attachments/wp-content/uploads/2024/10/C295-AIRCRAFT-2.jpg)
3. ಉದ್ಯೋಗವಕಾಶ ಮತ್ತು ಆರ್ಥಿಕ ವ್ಯವಸ್ಥೆಗೆ ಸಹಾಯ
ಟಾಟಾ ಏರ್​ಬಸ್​ ಸಿ 295 ಯೋಜನೆ ಉದ್ಯೋಗವಕಾಶ ಹಾಗೂ ಸ್ಥಳೀಯ ಆರ್ಥಿಕತೆಯ ಮೇಲೆ ತುಂಬಾ ಧನಾತ್ಮಕ ಪರಿಣಾಮ ಬೀರಲಿವೆ ಎಂದು ಹೇಳಲಾಗುತ್ತಿದೆ. ವಡೋದರಾದಲ್ಲಿ ಸಿದ್ಧಗೊಂಡಿರುವ ಈ ಸಿ295 ಉತ್ಪಾದನಾ ಘಟಕ ಭಾರತೀಯ ಅಂತರಿಕ್ಷ ಉದ್ಯಮದಲ್ಲಿ ವೈವಿದ್ಯತೆಯನ್ನು ತಂದಿಡಲಿದೆ ಎಂದು ಹೇಳಲಾಗುತ್ತಿದೆ. ಇದು ಸುಮಾರು 3 ಸಾವಿರ ನೇರ ಉದ್ಯೋಗವನ್ನು ಸೃಷ್ಟಿಸಲಿದ್ದು. ಸುಮಾರು 15 ಸಾವಿರ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ. ಈ ಒಂದು ವಿಮಾನ ಸಿದ್ಧಪಡಿಸಲು ಸಾವಿರಾರು ಉದ್ಯೋಗಿಗಳು ಸುಮಾರು 10 ಲಕ್ಷ ಗಂಟೆ ಕೆಲಸ ಮಾಡಬೇಕು ಎಂದು ಅಂದಾಜಿಸಲಾಗಿದೆ. ಈ ಒಂದು ಉದ್ಯೋಗದ ಜೊತೆಗೆ ಇದಕ್ಕೆ ಬೇಕಾದ ಬಿಡಭಾಗಗಳ ಮಾರಾಟ ಮಾಡುವ ಸಂಸ್ಥೆಗಳೂ ಸಹ ಹಲವು ಲಾಭಗಳನ್ನು ಪಡೆಯಲಿವೆ.
4.ಭಾರತೀಯ ಏರೋಸ್ಪೇಷ್​ ಮೂಲಸೌಕರ್ಯಗಳನ್ನು ವೃದ್ಧಿಸಲಿದೆ.
ಸದ್ಯ ಭಾರತದಲ್ಲಿ ತಯಾರಾಗುತ್ತಿರುವ ಈ ಒಂದು ವಿಮಾನ ಹಲವು ಅವಕಾಶಗಳನ್ನು ಹುಟ್ಟು ಹಾಕಲಿದೆ. ಈ ವಿಮಾನ ಹಾರಾಟದ ತರಬೇತಿ ಮತ್ತು ನಿರ್ವಹಣೆಗೆ ಮೂಲಸೌಕರ್ಯ ನೀಡಲಿದೆ. ಈ ತರಬೇತಿ ವ್ಯವಸ್ಥೆಗಳು ನಮ್ಮ ವಾಯುಪಡೆಯ ಯೋಧರಿಗೆ ಅದರ ನಿರ್ವಹಣೆ ಹಾಗೂ ಚಾಲನೆಯ ಬಗ್ಗೆ ಪರಿಣಾಮಕಾರಿಯಗಿ ತಿಳುವಳಿಕೆ ನೀಡುತ್ತದೆ.
5. ಹೊರದೇಶಗಳಿಗೆ ರಫ್ತು ಮಾಡುವ ಹೊಸ ಹೆಜ್ಜೆ
ಭಾರತದಲ್ಲಿ ಸಿದ್ಧಗೊಳ್ಳುತ್ತಿರುವ ಈ ವಿಮಾನವು ಭಾರತೀಯ ರಕ್ಷಣಾ ಸಾಮಾಗ್ರಿಗಳ ರಫ್ತಿನಲ್ಲಿ ಹೊಸ ಬದಲಾವಣೆ ತರುತ್ತದೆ. ಭಾರತಕ್ಕಾಗಿ ಸಿದ್ಧಗೊಳ್ಳುತ್ತಿರುವ 56 ಸಿ295 ವಿಮಾನಗಳು ರೆಡಿಯಾದ ಮೇಲೆ ಏರ್​ಬಸ್​ ಡಿಫೆನ್ಸ್​ ಅಂಡ್ ಸ್ಪೇಸ್​ಗೆ ತಾನು ತಯಾರಿಸದ ವಿಮಾನಗಳನ್ನು ರಫ್ತು ಮಾಡಲು ಅವಕಾಶ ನೀಡಲಾಗಿದೆ. ಇದಿರಂದಾಗಿ ಭಾರತೀಯ ವಿಮಾನಯಾನ ಉದ್ಯಮಕ್ಕೆ ಇದು ಹೊಸಬಲವನ್ನು ತುಂಬಲಿದ್ದು. ಹೊರ ದೇಶಗಳಿಗೂ ಮೇಡ್​ ಇನ್ ಇಂಡಿಯಾ ವಿಮಾನಗಳು ರಫ್ತಾಗುವ ದಿನಗಳು ಸದ್ಯದಲ್ಲಿಯೇ ಬರಲಿವೆ ಎಂದು ನಿರೀಕ್ಷಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us