Advertisment

ಮದುವೆಗೂ ಮೊದಲು ಲವ್ ಬರ್ಡ್ಸ್​ ಯಾಕೆ ಟ್ರಿಪ್ ಹೋಗಬೇಕು.. ನೀವು ತಿಳಿದುಕೊಳ್ಳಲೇಬೇಕಾದ ವಿಚಾರ ಇದು!

author-image
Veena Gangani
Updated On
ಮದುವೆಗೂ ಮೊದಲು ಲವ್ ಬರ್ಡ್ಸ್​ ಯಾಕೆ ಟ್ರಿಪ್ ಹೋಗಬೇಕು.. ನೀವು ತಿಳಿದುಕೊಳ್ಳಲೇಬೇಕಾದ ವಿಚಾರ ಇದು!
Advertisment
  • ಮದುವೆಗೂ ಮುನ್ನ ಒಟ್ಟಾಗಿ ಓಡಾಡಿದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
  • ಜೋಡಿಗಳು ಒಟ್ಟಾಗಿ ಮಾತಾಡಿಕೊಂಡರೆ ಆತ್ಮವಿಶ್ವಾಸ ಇನ್ನೂ ಹೆಚ್ಚಾಗುತ್ತೆ!
  • ಜೋಡಿಗಳು ತಮ್ಮ ಸಂಬಂಧವನ್ನು ಬಲಪಡಿಸಲು ಏನೆಲ್ಲಾ ಮಾಡಬೇಕು?

ಮದುವೆಗೂ ಮುನ್ನ ಯುವ ಜೋಡಿಗಳು ಒಟ್ಟಾಗಿ ಏಕೆ ಓಡಾಡಬೇಕು? ಮದುವೆಗೂ ಮುನ್ನವೇ ಭಾವಿ ಪತಿ ಅಥವಾ ಭಾವಿ ಪತ್ನಿಯ ಜೊತೆ ಮಾತಾಡುವುದು ಎಷ್ಟರ ಮಟ್ಟಿಗೆ ಒಳ್ಳೆಯದು? ಎಂಬೆಲ್ಲಾ ಪ್ರಶ್ನೆಗಳು ಕೆಲವರಲ್ಲಿ ಮೂಡುತ್ತೆ. ಕೆಲವು ಸಂಸ್ಕೃತಿಗಳಲ್ಲಿ, ಜೋಡಿಗಳು ಮದುವೆಗೆ ಮುನ್ನ ಒಟ್ಟಿಗೆ ಇರುವುದನ್ನು ಅನುಮತಿ ನೀಡುವುದಿಲ್ಲ. ಅಲ್ಲದೇ ಇಬ್ಬರು ಜೊತೆಯಾಗಿ ಓಡಾಡುವುದನ್ನು ನಿಷೇಧಿಸಲಾಗಿದೆ.

Advertisment

ಇದನ್ನೂ ಓದಿ: VIDEO: ಕ್ಯಾಮರಾದಲ್ಲಿ ಸೆರೆಯಾಯ್ತು ಲಂಚಾವತಾರ; ಬಂದ ಹಣ ಹಂಚಿಕೊಂಡು ಸಿಕ್ಕಿಬಿದ್ದ ಪೊಲೀಸ್ರು..!

publive-image

ಹಾಗಾದ್ರೆ ಮದುವೆಗೂ ಮುನ್ನ ಒಟ್ಟಾಗಿ ಓಡಾಡಿದರೆ ಏನೆಲ್ಲಾ ಪ್ರಯೋಜನಗಳು ಆಗುತ್ತೆ ಎಂದು ಈ ಸ್ಟೋರಿಯಲ್ಲಿ ತಿಳಿಸಲಾಗಿದೆ. ಮದುವೆ ಎಂಬುವುದು ಕೇವಲ ಕುಟುಂಬಸ್ಥರು ಒಪ್ಪಿ ಮಾಡುವುದಲ್ಲ. ಬದಲಾಗಿ ಆ ಮದುವೆಯನ್ನು ಹುಡುಗ ಹಾಗೂ ಹುಡುಗಿ ಒಪ್ಪಿಕೊಳ್ಳಬೇಕು. ಮದುವೆಗೆ ಮೊದಲು ಪ್ರಯಾಣ ಮಾಡುವುದು ಹುಡುಗ ಮತ್ತು ಹುಡುಗಿ ಇಬ್ಬರಿಗೂ ವಿಶೇಷ ಅನುಭವವನ್ನು ನೀಡುತ್ತದೆ. ಏಕೆಂದರೆ ಇದು ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಪರಸ್ಪರ ಪರೀಕ್ಷಿಸಲು ಸುಲಭವಾಗುತ್ತದೆ.

publive-image

ಮದುವೆಯು ಎರಡು ಹೃದಯಗಳನ್ನು ಸಂಪರ್ಕಿಸುತ್ತದೆ. ಜೊತೆಗೆ ಹೊಸ ಸಂಬಂಧವು ರೂಪುಗೊಳ್ಳುತ್ತದೆ. ಮದುವೆಗೆ ಮೊದಲು ಪ್ರತಿಯೊಬ್ಬ ಹುಡುಗಿ ಮತ್ತು ಹುಡುಗ ಒಟ್ಟಿಗೆ ಪ್ರಯಾಣಿಸಬೇಕು. ಅವರು ಕೆಲವು ದಿನಗಳ ಕಾಲ ಯಾವುದಾದರೂ ಒಳ್ಳೆಯ ಸ್ಥಳಕ್ಕೆ ಹೋಗಬೇಕು. ಮದುವೆಗೆ ಮೊದಲು ಒಟ್ಟಿಗೆ ಪ್ರಯಾಣಿಸುವುದು ದಂಪತಿಗಳಿಗೆ ಒಳ್ಳೆಯ ಅನುಭವ ನೀಡುತ್ತದೆ. ಇದು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸಂಬಂಧವನ್ನು ಗಟ್ಟಿಯಾಗುತ್ತದೆ.

Advertisment

ಒಂದು ವೇಳೆ ಹುಡುಗ ಮತ್ತು ಹುಡುಗಿ ಮದುವೆಯಾಗಲು ಹೊರಟಿದ್ದರೆ, ಮದುವೆಗೆ ಕೆಲವು ತಿಂಗಳುಗಳ ಮೊದಲು ಇಬ್ಬರೂ ಒಟ್ಟಿಗೆ ಪ್ರವಾಸಕ್ಕೆ ಹೋಗಬೇಕು. ಈ ಮೂಲಕ ಪರಸ್ಪರ ವ್ಯಕ್ತಿತ್ವವನ್ನು ಗುರುತಿಸಿ ಹೊಸ ಸಂಬಂಧವನ್ನು ಕಟ್ಟಿಕೊಳ್ಳ ತೊಡಗುತ್ತಾರೆ. ದಂಪತಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡುವಾಗ, ಯಾವುದೇ ತೊಂದರೆಯಿಲ್ಲದೆ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಜೊತೆಗೆ ಒಟ್ಟಾಗಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾರೆ. ಇದರಿಂದ ಅವರಲ್ಲಿರುವ ಆತ್ಮ ವಿಶ್ವಾಸ ಇನ್ನೂ ಹೆಚ್ಚಾಗುತ್ತದೆ.

ಇದನ್ನೂ ಓದಿ:ಬಿಸ್ಕೆಟ್ ತಿಂದು 80 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು; ಶಾಲೆಯಲ್ಲಿ ಅಸಲಿಗೆ ನಡೆದಿದ್ದೇನು..?

ಪ್ರಯಾಣದ ಸಮಯದಲ್ಲಿ, ಹುಡುಗ ಮತ್ತು ಹುಡುಗಿ ಪರಸ್ಪರ ನಂಬಿಕೆ ಇಟ್ಟುಕೊಂಡಿರುತ್ತಾರೆ. ಇಬ್ಬರೂ ಒಟ್ಟಿಗೆ ತಿನ್ನುತ್ತಾರೆ, ಒಟ್ಟಿಗೆ ಸುತ್ತಾಡುತ್ತಾರೆ. ದಿನದ 24 ಗಂಟೆಗಳ ಕಾಲ ಒಟ್ಟಿಗೆ ಇರುತ್ತಾರೆ. ಈ ಮೂಲಕ ಅವರು ಪರಸ್ಪರರ ನ್ಯೂನತೆಗಳು ಮತ್ತು ಸಾಮರ್ಥ್ಯಗಳನ್ನು ತಿಳಿದುಕೊಳ್ಳುತ್ತಾರೆ. ಹುಡುಗ ಮತ್ತು ಹುಡುಗಿ ಪ್ರಯಾಣದ ಸಮಯದಲ್ಲಿ ತಮ್ಮ ಸಮಸ್ಯೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ ಮತ್ತು ಪರಸ್ಪರರ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಾರೆ.

Advertisment

publive-image

ಮದುವೆಗೆ ಮೊದಲು ಹುಡುಗ ಮತ್ತು ಹುಡುಗಿ ಪ್ರವಾಸಕ್ಕೆ ಹೋದರೆ ಅವರು ಪರಸ್ಪರ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದರೆ ಒಬ್ಬರಿಗೊಬ್ಬರಿಗೆ ಸರಿ ಹೋಗಲಿಲ್ಲ ಅಂದ್ರೆ ಮದುವೆಯಾಗಲು ನಿರಾಕರಿಸಬಹುದು. ಇದರಿಂದಾಗಿ ಮದುವೆಯ ನಂತರ ವಿಚ್ಛೇದನದಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ದಂಪತಿಗಳಿಗೆ ಪ್ರಯಾಣವು ಹೊಸ ಆರಂಭದಂತಿರಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment